ಕನ್ನಡ ವ್ಯಾಕರಣ ಪರಮಾರ್ಶಕ ಮತ್ತು ಪದ ಪರಮಾರ್ಶಕ ತಂತ್ರಾಂಶಗಳ ತುರ್ತು ಅವಶ್ಯಕತೆ

0

ಕನ್ನಡಕ್ಕೆ ವ್ಯಾಕರಣ ಪರಮಾರ್ಶಕ ಮತ್ತು ಪದ ಪರಮಾರ್ಶಕ ತಂತ್ರಾಂಶಗಳ ತುರ್ತು ಅವಶ್ಯಕತೆ ಇದೆ. ಇಂದು ಸಂಪದದಂತಹ ಅಂತರ್‍ಜಾಲೀಯ ಸಮುದಾಯ ತಾಣಗಳಲ್ಲಿ ಬರುವ ಪ್ರತಿಕ್ರಿಯೆಯಿಂದ ಪ್ರಸಿದ್ಧ ವಾರ್ತಾಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಕನ್ನಡ-ಲೇಖನಗಳಲ್ಲಿ ಅನೇಕ ವ್ಯಾಕರಣ ಹಾಗು ಪದ ದೋಷಗಳು ಇರುತ್ತವೆ.

ಮಾಹಿತಿ ತಂತ್ರಜ್ಞಾನದ ಅಗ್ರೇಸರರಾಗಿರುವ ಕನ್ನಡಿಗರು ತುರ್ತಾಗಿ ಇತ್ತು ಗಮನಚಿತ್ತರಾಗಬೇಕಿದೆ. ಕನ್ನಡ ತಂತ್ರಾಂಶ ಸೃಜಕರು ಕನ್ನಡಕ್ಕೆ ಉತ್ತಮವಾದ ವ್ಯಾಕರಣ ಮತ್ತು ಪದ ಪರಮಾರ್ಶಕ ತಂತ್ರಾಂಶ ಪರಿಕರಗಳನ್ನು ಒದಗಿಸಬೇಕಿದೆ.

ಸರಕಾರದ ಧನಸಹಾಯ ಲಭ್ಯವಾದರೇ ಈ ಸುಕಾರ್ಯವು ಶೀಘ್ರಪ್ರಾರಂಭ ಮತ್ತು ವೇಗಪೂರ್ಣತೆಯನ್ನು ಕಾಣುವುದೆಂಬ ಆಶಯ.

ಧನ್ಯವಾದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರಮಾರ್ಶಕ ಎಂಬುದು ತಪ್ಪು.

ಪರಾಮರ್ಶಕ ಎಂದು ಇರಬೇಕಿತ್ತು..

ನೋಡಿ.. ಪದ ಪರಾಮರ್ಶಕದ ಅವಶ್ಯಕತೆಗೆ ಒಂದು ಸಾಕ್ಷಿ.

ಧನ್ಯವಾದ
-ಮಹೇಶ

ಹಿಂದೆ ಕನ್ನಡಕ್ಕೊಂದು ಸ್ಪೆಲ್ ಚೆಕರ್ ಅನ್ನ ಎಮ್ಮೆಸ್ ವರ್ಡ್ ಗೆಂದು ಕನ್ನಡಸಾಹಿತ್ಯ.ಕಾಂ ನಲ್ಲಿ ಬಿಡುಗಡೆ ಮಾಡಿದ್ದರು .
ನಾನೂ ಎರಡು ಲಕ್ಷ ಶಬ್ದ ಸೇರಿಸಿದ್ದೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಮಹೇಶರೇ,
ಯಾಕೋ ತುಂಬಾ sarcastic ಆಗಿ ಬರೀ ಸಂಸ್ಕೃತ ಪದಗಳನ್ನೇ ಬಳಸಿ ಲೇಖನಗಳನ್ನು ಬರೀತಾ ಇದ್ದೀರಲ್ಲ...
ಏನಾಯಿತು? ನಾನೇನಾದ್ರೂ miss ಮಾಡಿಕೊಂಡ್ನಾ?

-ಶಶಿಭೂಷಣ

ಮಾನ್ಯ ಶಶಿಭೂಷಣರೇ

ನಿಮ್ಮ ಪರಿಚಯವೆನಗಿಲ್ಲವಲ್ಲ. ಕ್ಷಮಿಸಿರಿ.

ಕನ್ನಡ ವ್ಯಾಕರಣ ಪರಾಮರ್ಶಕ ಮತ್ತು ಪದ ಪರಾಮರ್ಶಕದ ಅಗತ್ಯತೆಯ ಬಗ್ಗೆ ಚರ್ಚೆ ಮಾಡೋಣ. ಕನ್ನಡವನ್ನು ದೋಷರಹಿತವಾಗಿ ಬರೆಯುವುದು ಮುದ್ರಿಸುವುದೂ ಬೃಹತ್ ಸಾಹಾಸವಾಗಿದೆ.

ಧನ್ಯವಾದ
-ಮಹೇಶ

http://kannadasaahithya.com ನಲ್ಲಿ ಒಂದು ಸ್ಪೆಲ್ ಚೆಕರ್ ಇದೆ ; ವರ್ಡ್ ಗಾಗಿ , ನೋಡಿಕೊಳ್ಳಿ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"