ನಿದಾನ, ನಿಧಾನ

0

ನಿದಾನ=ಇದು ಸಂಸ್ಕೃತಪದ. ಯಾಕೆ ಈ ಪದವನ್ನು ಹೇೞುತ್ತಿದ್ದೇನೆಂದರೆ ಜನ ತಪ್ಪಾಗಿ ಇದನ್ನು ’ನಿಧಾನ’ ಎಂದು ಬೞಸುತ್ತಾರೆ
ನಿದಾನ=ವೇಗವಿಲ್ಲದಂತೆ, ಮೆಲ್ಲನೆ.

ನಿಧಾನ=ಇದೂ ಸಂಸ್ಕೃತ ಪದ ಇದಱರ್ಥ ಹುದುಗಿಸಿಟ್ಟ ಸಂಪತ್ತು, ನಿಧಿ.

ಇವೆರಡಱ ಬೞಕೆಯಲ್ಲಿ ಕನ್ನಡಿಗರ ಅಜ್ಞಾನವಿದೆ.

ಮತ್ತೊಮ್ಮೆ
ನಿದಾನ=ಮೆಲ್ಲನೆ, ವೇಗವಿಲ್ಲದೆ
ನಿಧಾನ=ನಿಧಿ ಅಥವಾ ಅಡಗಿಸಿಟ್ಟ ಸಂಪತ್ತು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಪ್ಪು

೬. ನಿದಾನ2 (<ಸಂ. ನಿಧಾನ) (ನಾ) ೧ ಐಶ್ವರ್ಯ, ಸಂಪತ್ತು ೨ ಸಾವಕಾಶ, ತಡ ೩ ಸಂಕಲ್ಪ, ನಿರ್ಣಯ ೪ ತಾಳ್ಮೆ
೭. ನಿಧಾನ (ಸಂ) (ನಾ) ೧ ಹುದುಗಿಟ್ಟ ದ್ರವ್ಯ, ನಿಧಿ ೨ ವಿಳಂಬ, ಸಾವಕಾಶ ೩ ಆಶ್ರಯಸ್ಥಾನ, ನೆಲೆ ೪ ತಾಳ್ಮೆ, ಸಹನೆ ೫ ನಿರ್ಧಾರ, ದೃಢ ಸಂಕಲ್ಪ

ನಿಧಿ = ನಿದಾನ
ನಿಧಾನ = ವಿಳಂಬ

http://baraha.com/kannada/index.php

ನೂನಂ ’ಕನ್ನಡ ಅರ್ಭಕ’ರು ಅಯೋಮಯಗೊಂಡು ಹೀಗೆ ದೋಷವೆಸಗಿದ್ದಾರೆ.. ಪಾಪ!

ಧನ್ಯವಾದ
-ಮಹೇಶ

ಏನೋ ಗೊತ್ತಿಲ್ಲ. ನನ್ನ ವಿಶ್ಲೇಷಣವಿಷ್ಟೇ ನಿದಾನ=ವೇಗವಿಲ್ಲದ, ನಿಧಾನ=ಸಂಪತ್ತು. ನಿಮ್ಮ ವಿಶ್ಲೇಷಣೆಯೂ ಸರಿಯಿರಬಹುದು.

ಇನ್ನು ನಿದಾನಕ್ಕೆ treatment ಅನ್ನುವ ಅರ್ಥವೂ ಇದೆಯಲ್ಲವೆ? ರೋಗನಿದಾನ ಎನ್ನುವ ಬಳಕೆಯಲ್ಲಿ?

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

निदान
(H3) निदान [p= 548,1] [L=108455] mfn. reproached , ridiculed ib.
(H3) नि-° दान [L=108478] n. a band , rope , halter RV. vi , 32 , 6 MBh.
[L=108479] a first or primary cause (cf. नि-बन्धन) RV. x , 114 , 2 Br. ?? Ka1t2h.
[L=108480] original form or essence (°नेन ind. originally , essentially , properly) Br. ??
[L=108481] (with Buddh. ) a cause of existence (12 in number) MWB. 56 ; 103
[L=108482] any cause or motive DivyA7v.
[L=108483] the cause of a disease and enquiry into it , pathology (= निदान-स्थान q.v.) L.
[L=108484] = निदान-सूत्र Cat.
[L=108485] cessation , end L.
[L=108486] purification , correctness L.
[L=108487] claiming the reward of penitential acts L.
(H3) नि-° धान [p= 548,3] [L=108587] n. putting or laying down , depositing , keeping , preserving Ka1tyS3r. MBh. &c
[L=108588] laying aside (cf. दण्ड-न्°)
[L=108589] placing (the sacrificial fire) Ka1tyS3r.
[L=108590] place for depositing anything , receptacle (rarely m. ; ifc. f(ई). ; cf. गर्भ-न्°) RV. &c
[L=108591] a place of cessation or rest W.
[L=108592] anything laid up , a store , hoard , treasure (esp. the treasure or कुबेर) Mn. Mr2icch. Ragh. &c (-ता f. Ja1takam. )
(H3B) नि-° धान [L=108594] mfn. containing anything (gen.) in itself TA