ದೀಪಕ್ ತಮ್ಮಯ್ಯ ಖ್ಯಾತ ಟಿ.ವಿ. ನಿರೂಪಕ ಇವರ ಹೇಳಿಕೆ.

0

ಆಯಾ ಪ್ರದೇಶದ ಪ್ರಾದೇಶಿಕ ಕನ್ನಡ ಮಾತನಾಡುವವರು ಕೋಟ್ಯಾಂತರ ಮಂದಿ ಇದ್ದಾರೆ. ಆದರೆ ಟಿ.ವಿ. ಮಾಧ್ಯಮದಲ್ಲಿ ಬೆಂಗಳೂರು, ಮೈಸೂರು ಕನ್ನಡವೇ ಸವಾರಿ ಮಾಡುತ್ತದೆ.

ಇದು ಉದಯವಾಣಿಯ ರವಿವಾರ ೭-೧-೨೦೦೮ ರ ಸಂಚಿಕೆಯ ೬ನೇ ಪುಟದಲ್ಲಿ ಓದಿದ ನೆನಪು ಅಂಕಣದಲ್ಲಿ ಪ್ರಕಟವಾದ ಸುದ್ಧಿ.

ಇದರ ಬಗ್ಗೆ ನನ್ನ ಪ್ರತಿಕ್ರಿಯೆ:- ಈಗಾಗಲೇ ಕನ್ನಡ ಟಿ.ವಿ.ಚಾನೆಲ್ ಗಳಲ್ಲಿ ಕನ್ನಡ ಮತ್ತು ಇಂಗ್ಲೀಷ ಬೆರೆಸಿ ಪ್ರಚಾರ ಮಾಡಿ ಕನ್ನಡವನ್ನು ಕಡೆಗಣಿಸಿದಂತೆ ಕಾಣುತ್ತದೆ. ಇನ್ನು ದೀಪಕ್ ಹೇಳಿರುವಂತೆ ಎಲ್ಲಾ ಪ್ರದೇಶದ ಪ್ರಾದೇಶಿಕ ಕನ್ನಡವನ್ನು ಉಪಯೋಗಿಸಬೇಕಾದರೆ ಯಾವ ಕನ್ನಡ ಉಪಯೋಗಿಸುವುದೆಂದು ಸಲಹೆ ಕೊಟ್ಟರೆ ಒಳ್ಳೆಯದಿತ್ತು. ಯಾರಿಗೂ ನೋವಾಗದ ಹಾಗೆ ಆಗಬೇಕಾದರೆ ರಾಜ್ಯದಲ್ಲಿರುವ ಎಲ್ಲಾ ಪ್ರಾದೇಶಿಕ ಕನ್ನಡವನ್ನು ಒಟ್ಟು ಮಾಡಿ ಒಂದು ಚೌ ಚೌ ಕನ್ನಡದಲ್ಲಿ ಟಿ.ವಿ. ಮಾಧ್ಯಮದವರು ಪ್ರಚಾರ ಮಾಡಬೇಕಾದೀತು. ಆಗ ಯಾರಿಗೂ ಅರ್ಥ ಆಗಲಿಕ್ಕಿಲ್ಲಾ. ಈಗ ಉಪಯೋಗಿಸುವ ಕನ್ನಡ ಎಲ್ಲರಿಗೂ ಅರ್ಥ ಆಗುತ್ತದೆ.

ಮೊನ್ನೆ ಯಾರೋ ಹೇಳಿದ ಹಾಗೆ ಆಯಿತು:- ಶಾಂತಸಾಗರಕ್ಕೆ ಕಲ್ಲೆಸೆಯುವುದು.

ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಟಿ.ವಿ. ಮಾಧ್ಯಮದಲ್ಲಿ ಬೆಂಗಳೂರು ಮತ್ತು ಮೈಸೂರು ಕನ್ನಡವೇ ಸವಾರಿ ಮಾಡುತ್ತಿದೆ ಆನುವುದು ಅಷ್ಟೇನೂ ಸರಿಯೆಂದು ಕಾಣುವುದಿಲ್ಲ.
ದೀಪಕ್ ತಿಮ್ಮಯ್ಯ ಹಾಗೆ ಅಂದ ಕೂಡಲೇ ಅದು ಸರಿಯೆಂದೇನೂ ಅಲ್ಲ. ಆ ಮನುಷ್ಯ ಆಡೋ ಭಾಷೆ ಕೇಳಿ ರೋಸಿ ಹೋಗಿದೆ ಸ್ವಾಮೀ.
ತೀರಾ ವಿಭಿನ್ನವಾದ ಅನಗತ್ಯ ನಗು, ಹಾವ ಭಾವ ಮತ್ತು ಅಂಗಚೇಷ್ಟೆ ಅವರದ್ದು.

ಭಾಷೆಯ ಬಗ್ಗೆ ಹೇಳೋದಾದರೆ, ನಮಗಂತೂ ಎಲ್ಲಾ ಕಡೆಯ ಭಾಷೆ ಕೇಳಲಿಕ್ಕೆ ಸಿಗುತ್ತಿದೆ ಟಿವಿಗಳಲ್ಲಿ ಅಂತ ಅನ್ನಿಸುತ್ತದೆ.

ನೀವು ತಾರೀಖಿನ ತಿದ್ದುಪಡಿಯನ್ನು "ಬದಲಾಯಿಸಿ" ಗೆ ಹೋಗಿ ಮಾಡಬಹುದಿತ್ತಲ್ಲವೇ? ಆ ಸೌಲಭ್ಯ ಏಕಿದೆ ಮತ್ತೆ?

-ಆಸುಹೆ

ಅಸು ಹೆಗ್ಡೆಯವರೇ,

ನೀವು ಹೇಳಿದ್ದು ಸರಿ. ಆದರೆ ನಾನು ವಿಷಯ ಸೇರಿಸಿ ಆದ ಮೇಲೆ ಬದಲಾಯಿಸಿ ಎಲ್ಲಿ ಎಂದು ನೋಡಿದರೆ ಸಿಕ್ಕಿಲ್ಲಾ. ಅದಕ್ಕಾಗಿ ಪ್ರತಿಕ್ರಿಯೆಯಲ್ಲಿ ಸರಿಪಡಿಸಿದೆ. ಹಾಗೆ ಕೆಲವು ಸಲ ಪ್ರತಿಕ್ರಿಯೆ ಸೇರಿಸಿ ಆದ ಮೇಲೆ edit ಕೊಂಕಿಸಿ ಸರಿಪಡಿಸಿದರೆ " ಈ ಪುಟ ಸಿಗುತ್ತಿಲ್ಲಾ" ಏನೋ ಬರುತ್ತದೆ. ಆದರೆ ಇವತ್ತು ಅರವಿಂದ್ ರ ಪ್ರತಿಕ್ರಿಯೆಗೆ ಉತ್ತರಿಸಿದಾಗ ರವರೇ ಎಂಬುದನ್ನು ಮತ್ತೆ ಸೇರಿಸಿದ್ದೆ. edit ಕೊಂಕಿಸಿದರೆ ಏನು ಬರುತ್ತದೆ ನೋಡಿ ಇಲ್ಲಿ ತಿಳಿಸುವಾ ಎಂದು ಕೊಂಕಿಸಿ ರವರೇ ಸೇರಿಸಿದೆ. ಸರಿಯಾಯಿತು. " ಈ ಪುಟ ಸಿಗುತ್ತಿಲ್ಲಾ" ಬರಲಿಲ್ಲಾ. ಏನು ಬರುತ್ತದೆ ಎಂಬುದು ಮರೆತುಹೋಗಿದೆ.

ಅಸು ಹೆಗ್ಡೆಯವರೇ<

ನೀವು ಹೇಳಿರುವ "ಬದಲಾಯಿಸಿ" ಎಲ್ಲಿದೆ ಎಂದು ತಿಳಿಸುವಿರಾ. ಪ್ರೊಫೈಲ್ ಕೊಂಕಿಸಿದರೆ ಅಲ್ಲಿ ವೀಕ್ಷಿಸಿ, ಬದಲಾಯಿಸಿ, Track ಸಿಗುತ್ತದೆ. ಆದರೆ ಇಲ್ಲಿಯ ಬದಲಾಯಿಸಿ ಕೊಂಕಿಸಿದರೆ ನಮ್ಮ ಖಾತೆ ವಿವರ ಮಾತ್ರ ಬದಲಾಯಿಸಲಾಗುತ್ತದೆ. ಮೊದಲು ನನ್ನ ಬ್ಲಾಗ್ ನಲ್ಲೂ ಬದಲಾಯಿಸಿ ಇದ್ದ ನೆನಪು. ನೀವು ಹೇಳಿದ ಮೇಲೆ ನೋಡಿದೆ ಎಲ್ಲಿಯೂ ಸಿಗುತ್ತಿಲ್ಲಾ. ತೆಗೆದುಹಾಕಿರಬಹುದೋ ಏನೋ.

ವೆಂಕಟ್ರಾಯರೇ

ಸಂಪದದಲ್ಲಿ ನೀವು ಲಾಗಿನ್ ಆದ ನಂತರ ಬಲ ಮೂಲೆಯಲ್ಲಿ ಪ್ರೊಫ಼್ಯೆಲ್, ನನ್ನ ಬ್ಲಾಗ್, ನನ್ನ ಬರಹಗಳು ಎಂದು ಮೂರು ಕೊಂಡಿಗಳು ಕಾಣಸಿಗುತ್ತವೆ. ಅಲ್ಲಿ ಅಲ್ಲಿ ನನ್ನ ಬರಹಗಳು ಕೊಂಡಿಯನ್ನು ಚುಚ್ಚಿದರೆ ನೀವು ಇದುವರೆಗೂ ಸಂಪದದಲ್ಲಿ ಬರೆದಿರುವ ನಮ್ಮ ಸ್ವರಚಿತ ಬ್ಲಾಗ್ ಕಾಣಸಿಗುತ್ತವೆ. ನಿಮಗೆ ಬದಲಾಯಿಸಬೇಕಾದ ಬ್ಲಾಗ್ ಕೊಂಡಿಯನ್ನು ಚುಚ್ಚಿದರೆ ಅಲ್ಲಿ ವೀಕ್ಷಿಸಿ ಮತ್ತು ಬದಲಾಯಿಸಿ ಎಂಬ ಮತ್ತೆರಡು ಕೊಂಡಿ ಸಿಗುತ್ತದೆ, "ಬದಲಾಯಿಸಿ" ಎಂಬ ಕೊಂಡಿಯನ್ನು ಚುಚ್ಚಿ ನಿಮಗೆ ಬೇಕಾದ ರೀತಿಯಲ್ಲಿ ನಿಮ್ಮ ಬ್ಲಾಗ್ ಬದಲಿಸಬಹುದು.

ನಿಮ್ಮ ಅಭಿಮಾನಿ ಹುಡುಗ
ಅರವಿಂದ್
http://aravindnimmava.wordpress.com
http://abhimanihuduga.blogspot.com

ಅರವಿಂದರಿಗೆ ಧನ್ಯವಾದಗಳು.
ಈರ್ವರೂ ಕ್ಷಮಿಸಿ. ನಾನು ಅರ್ಧಕ್ಕೇ ಕೈಬಿಟ್ಟಂತಾಯ್ತು.
ವೆಂಕಟರಾಯರ ಕೋರಿಕೆ ಯಾಕೋ ನನ್ನ ಕಣ್ತಪ್ಪಿ ಹೋಗಿತ್ತು.
-ಆಸು ಹೆಗ್ಡೆ

ಅರವಿಂದ್ ರವರೇ,
ನೀವು ಹೇಳಿದ ಹಾಗೆ ಸಂಪದ ಹತ್ತಿರ ಮೇಲಿನ ಸಾಲಿನಲ್ಲಿ bvenkatraya |ಸಂಪದದಲ್ಲಿ ಹೊಸತು! | ಪ್ರೊಫೈಲ್ | ನನ್ನ ಬ್ಲಾಗ್ | ನನ್ನ ಬರಹಗಳು | logout ಇದೆ, ನಂತರ ಕೆಳಗಿನ ಸಾಲು ಹೊಸ ಚಿಗುರು ಹಳೆ ಬೇರು ಇದರ ಕೆಳಗೆ;- ಲೇಖನಗಳು, ಬ್ಲಾಗ್ಸ್ ,ಸಂದರ್ಶನ, ಚರ್ಚೆ, ಚಿತ್ರಪುಟಗಳು ,ಪುಸ್ತಕಗಳು, ಆರ್ಕೈವ್ ,ಇವೆ.
ನಂತರ ಕೆಳಗೆ :- ಸಂಪರ್ಕಿಸಿ ಸಂಪದ ಫೌಂಡೇಶನ್ Font Help ಇವೆ. ನೀವು ಹೇಳಿದ ಹಾಗೆ
ನನ್ನ ಬರಹಗಳು ಕೊಂಕಿಸಿದೆ. ನನ್ನ ಎಲ್ಲಾ ಬರಹಗಳು ಬಂದವು. ಅದರ ನಂತರ ದೀಪಕ್ ತಮ್ಮಯ್ಯ ಬರಹ ಕೊಂಕಿಸಿದೆ ಬಂದದ್ದು ನೀವೆಲ್ಲಾ ಪ್ರತಿಕ್ರಿಯಿಸಿರುವ ಪುಟ ಬಂತು. ಅದರಲ್ಲಿ ವೀಕ್ಷಿಸಿ ಮತ್ತು ಬದಲಾಯಿಸಿ ಇಲ್ಲಾ.
ಹರಿಯವರೇನಾದರೂ ನನ್ನ ವೀಕ್ಷಿಸಿ ಮತ್ತು ಬದಲಾಯಿಸಿ ಎಂಬುದನ್ನು ತೆಗೆದು ಹಾಕಿರುವರೇನೋ?

ಹರಿಯವರೇ ಒಂದು ಸಲ ಪರೀಕ್ಷಿಸುವಿರಾ?

ನನ್ನ ಬ್ಲಾಗ್ ಕೊಂಕಿಸಿದೆ. ನನ್ನ ಕೆಲವು ಬರಹಗಳು ಬಂದವು. ಅಲ್ಲಿ ಮುಂದೆ ಓದಿ ಕೊಂಕಿಸಿದರೆ ವೀಕ್ಷಿಸಿ ಮತ್ತು ಬದಲಾಯಿಸಿ ಇದೆ. ಆದರೆ ಅಲ್ಲಿ ಬಂದ ಬರಹಗಳಲ್ಲಿ ನನಗೆ ಬದಲಾಯಿಸಬೇಕಾದ ಬರಹ ಇಲ್ಲಾ. ಅದು ಸಿಗಬೇಕಾದರೆ ಏನು ಮಾಡಬೇಕು ತಿಳಿಸುವಿರಾ.

ವೆಂಕಟ್ರಾಯರೆ,
ಚರ್ಚಾಪುಟವನ್ನು ಬದಲಾಯಿಸುವುದಕ್ಕೆ ಆಗುವುದಿಲ್ಲ...

ಲೇಖನ, ಬ್ಲಾಗ್ ಹಾಗು ಚಿತ್ರ್ಪುಟಗಳ ಪುಟಗಳನ್ನು ಮಾತ್ರ ಬದಲಾಯಿಸಬಹುದು.

-ಅನಿಲ್.

ಹೌದು ಅನಿಲ್

ನಾನು ಇದನ್ನು ಗಮನಿಸಿರಲಿಲ್ಲ, ಇದು ಚರ್ಚಾ ಪುಟ, ವೆಂಕಟರಾಯರೇ ಅನಿಲ್ ಹೇಳಿದ ಹಾಗೆ ಬ್ಲಾಗ್ ಆಗಿದ್ದರೆ ಬದಲಾಯಿಸಬಹುದಿತ್ತು.

ನಿಮ್ಮ ಅಭಿಮಾನಿ ಹುಡುಗ
ಅರವಿಂದ್
http://aravindnimmava.wordpress.com
http://abhimanihuduga.blogspot.com

ನಮಸ್ತೆ ಸಾರ್,

ಬಹುಶ: ಉದಯವಾಣಿಯಲ್ಲಿ ಬಂದದ್ದು ದೀಪಕ್ ತಿಮ್ಮಯ ಅವರು ಅಳ್ವಾಸ್ ನುಡಿಸಿರಿಯ ಭಾಷಣದ ವರದಿ ಇರಬೇಕು. ಅವರು ಹೇಳಿದ್ದು ಮಾಧ್ಯಮಗಳಲ್ಲಿ ಪ್ರಾದೇಶಿಕ ಉಪಭಾಷೆಗಳನ್ನು ಹೇಗೆ ಅವಗಣಿಸಲಾಗುತ್ತದೆ ಎಂಬ ಬಗ್ಗೆ. ಕನ್ನಡ ಎಲ್ಲ ಭಾಷಾ ವೈವಿಧ್ಯಗಳನ್ನು ಬಳಸಿ ಕಾರ್ಯಕ್ರಮಗಳನ್ನು ಮಾಡಬಹುದು. ಸಾಕ್ಷಿಯಾಗಿ ಧಾರವಾಡ ಕನ್ನಡ ಬಳಸಿ ಮಾಡಿದ ಧಾರಾವಾಹಿ ಸೂಪರ್ ಹಿಟ್ ಆಗಿತ್ತು.

ಇತ್ತಿಚಿನ ದಿನಗಳಲ್ಲಿ ಬಳಸುತ್ತಿರುವ ಕನ್ನಡ, ಪ್ರಮಾಣಿತ ಭಾಷೆಯಲ್ಲ. ಬದಲಾಗಿ ಬೆಂಗಳೂರು ಅಡ್ಡೆ ಭಾಷೆಯು ಮಾಧ್ಯಮದಲ್ಲಿ ಸ್ಥಾನಗಿಟ್ಟಿಸುತ್ತಿದೆ. ಇದು ಸಲ್ಲದು ಎಂಬುದು ಅವರ ಮಾತಿನ ಸಾರಾಂಶವಾಗಿತ್ತು. ನಾನು ಅವರ ಇಡಿ ಭಾಷಣವನ್ನು ಎರಡು ಸಲ ಕೇಳಿದ್ದೇನೆ! (ಆಕಾಶವಾಣಿಗಾಗಿ ವರದಿ ತಯಾರಿಸಲು ಒಮ್ಮೆ ಧ್ವನಿಮುದ್ರಿತ ಭಾಷಣವು ಸೇರಿ)

ಒಟ್ಟಾರೆಯಾಗಿ ಎಲ್ಲ ಜನರ ಮನದ ದನಿಯು ಮಾಧ್ಯಮದಲ್ಲಿ ಜಾಗ ಪಡೆದಾಗ ಮಾತ್ರ ಅದು ಜನದನಿಯಾಗಲು ಸಾಧ್ಯ.

ಸಾತ್ವಿಕ್.ಎನ್.ವಿ

ವೆಂಕಟರಾಯರೇ

ಉದಯ ಟಿವಿಯಲ್ಲಿನ ನಿರೂಪಕನ ಹೆಸರು ದೀಪಕ್ ತಮ್ಮಯ್ಯ ಅಲ್ಲ ದೀಪಕ್ ತಿಮ್ಮಯ್ಯ ಅಲ್ವೇ ???????????

ನಿಮ್ಮ ಅಭಿಮಾನಿ ಹುಡುಗ
ಅರವಿಂದ್
http://aravindnimmava.wordpress.com
http://abhimanihuduga.blogspot.com

ನಿಜಕ್ಕೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇದೆ. ನಮ್ಮ ಕರ್ನಾಟಕ ಕೇವಲ, ಬೆಂಗಳೂರು, ಹಾಗೂ ಮೈಸುರು ಹಾಗೂ ಸುತ್ತಮುತ್ತಲ ಪ್ರದೇಶವಲ್ಲ....! ಧಾರವಾಡ, ಗುಲ್ಬರ್ಗ, ರಾಯಚೂರು, ಹೈದರಾಬಾದ್ ಕರ್ನಾಟಕ, ಬೆಳಗಾಂ, ಮಂಗಳೂರಿನ ಪ್ರಾದೇಶಿಕ ಸೊಗಡುಗಳನ್ನು ಕಾಯ್ದಿಟ್ಟುಕೊಂಡು ಅದನ್ನು ಜನರಿಗೆ ಒದಗಿಸುವ ಕಾರ್ಯಮಾಡಬೇಕಾದದ್ದು, ಅಗತ್ಯ.

ಬನ್ನಿ ಸಾರ್. ಚೆನ್ನಾಗಿದೀರಾ ? ಇವೆಲ್ಲಾ ಹೋಗಿ. ಬರ್ರಿ. ಕೂಡ್ರಿ. ಆರಾಮೇನ್ರಿ. ಮನಿಕಡಿ ಬನ್ರಲಾ, ಆತು ಹೋಗ್ ಬನ್ರಿ. ಹಿಂದಗಡೆ ಬರ್ರಿ. ಅವ್ವಾರಿದಾರೇನ್ರಿ. ವೈನಿಯವರ್ನ ಕರೀರಿ. ಮಾತಾಡೊದಿದೆ. ..... ಇತ್ಯಾದಿಗಳು ಸಮಯ, ಕಾಲಮಾನಕ್ಕೆ ಸರಿಯಾಗಿ ಬರಬೇಕು. ಮುಖ್ಯವಾಗಿ ರೀಜನಲ್ ಆಕಾಶವಾಣಿ ಕೇಂದ್ರಗಳು ಇದನ್ನು ಚೆನ್ನಾಗಿ ನಿರ್ವಹಿಸಬಹುದು.

ನಾನು ಬರೆಯುವ, ದೊಗ್ನಾಳ್ ಮುನ್ಯಪ್ಪಾರ್ ಸಂವಾದವೂ, ಇದನ್ನು ಆಧಾರವಾಗಿಟ್ಟುಕೊಂಡ್ ಬರೆದಿದ್ದೇ.....

ಅಬ್ಬ...’.ನರಕಕ್ಕಿಳ್ಸಿ, ನಾಲ್ಗೆ ಒಲ್ಸಿ, ಬಾಯ್ ಒಲ್ಸಾಕಿದ್ದ್ರೂನೂವೆ, ಮೂಗ್ನಲ್ ಕನ್ನಡಪದವಾಡ್ತೀನಿ... ನನ್ ಮನಸ್ ನೀ ಕಾಣೆ ” ಅಂತ ಎಂಡ್ಕುಡ್ಕ್ ರತ್ನನ್ ತಾವ ಏಳ್ಸಿದಾರಲ್ಲ....! ಆ ಮಹಾಕನ್ನಡಪ್ರೇಮಿ, ರಾಜರತ್ನಂರವರ ಕನ್ನಡಭಾಷಾಪ್ರೇಮಕ್ಕೆ, ಕೋಟಿ-ಕೋಟಿ ಪ್ರಣಾಮಗಳು.......!

ಇಂಗೇ ಮಾತಾಡ್ ಮಾತಾಡ್, ನಮ್ಮ ಅಳೇ ವಿಶ್ಯಗೊಳ್ನ ಬಿಟ್ಬಿಡೊದಾ.... ಅದ್ ನನ್ ಕೈಲಿ ಆಗಗಿಂಲ್ಲಪ್ಪೊ. ನೀನೇದ್ರು ಏಳು.....ಚೆನ್ನಾಗಿದೀರಾ...ಚೆನ್ನಾಗಿದೀನಿ. ನೀವು.... ಇದ್ ಬಿಟ್ಟು, ಬ್ಯಾರೆ ಪದಗೊಳ್ ಏನು ಸತ್ತೊಗಿವ್ಯಾ ?

ಕನ್ನಡ ನನ್ನ ತಾಯ್ನುಡಿ; ನನ್ನುಸಿರು.