ಶಿವನ / ವಿಷ್ಣುವಿನ ದೇವಾಲಯ ಎಲ್ಲಿದೆ ?

0

>ನೀವು ಇದುವರೆಗೆ ಎಲ್ಲಾದ್ರೂ "ಶಿವ" ಅನ್ನೋ ಹೆಸರಿನ ದೇವರ ದೇವಾಲಯವನ್ನು ನೋಡಿದ್ದೀರ/ ಕೇಳಿದ್ದೀರಾ?

>ನೀವು ಇದುವರೆಗೆ ಎಲ್ಲಾದ್ರೂ "ವಿಷ್ಣು" ಅನ್ನೋ ಹೆಸರಿನ ದೇವರ ದೇವಾಲಯವನ್ನು ನೋಡಿದ್ದೀರ/ ಕೇಳಿದ್ದೀರಾ?

> ನೀವು ಇದುವರೆಗೆ ಎಲ್ಲಾದ್ರೂ "ಬ್ರಹ್ಮ" ಅನ್ನೋ ಹೆಸರಿನ ದೇವರ ದೇವಾಲಯವನ್ನು ನೋಡಿದ್ದೀರ/ ಕೇಳಿದ್ದೀರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ನೋಡಿರುವ ಶಿವ ದೇವಾಲಯಗಳಿಗೆಲ್ಲ ( ಹಳೆಯ - ೨೦ ನೇ ಶತಮಾನದ್ದು ಬಿಟ್ಟುಬಿಡಿ) ಬೇರೊಂದು ಅಂಕಿತವಿದ್ದೇ ಇದೆ - ಉದಾ: ನಂಜುಂಡೇಶ್ವರ, ರಾಮೇಶ್ವರ, ಸುಬ್ರಹ್ಮಣ್ಯೇಶ್ವರ, ಹೊಯ್ಸಳೇಶ್ವರ, ನಾಗೇಶ್ವರ, ಮಹಾದೇವ, ವಿರೂಪಾಕ್ಷ , ಅಗಸ್ತ್ಯೇಶ್ವರ, ಲಕ್ಷ್ಮಣೇಶ್ವರ; ಹಾಗೇ ವಿಷ್ಣು ದೇವಾಲಯಗಳೂ ಎಲ್ಲ ಚನ್ನಕೇಶವ, ಸೌಮ್ಯಕೇಶವ, ಲಕ್ಶ್ಮೀಕೇಶವ, ವೆಂಕಟರಮಣ, ಗೋವಿಂದರಾಜ, ಪದ್ಮನಾಭ, ರಂಗನಾಥ ಮೊದಲಾದ ಹೆಸರಿನವೇ. ಇನ್ನು ಬ್ರಹ್ಮ ದೇವಾಲಯಗಳು ಇಲ್ಲವೇ ಇಲ್ಲವಲ್ಲ ( ಒಂದೋ ಎರಡೋ ಬಿಟ್ಟು).

ಈಗ ಅಮೆರಿಕೆಯಲ್ಲಿ ಇರುವ ಹಲವು ದೇವಾಲಯಗಳಿಗೆ ಶಿವ-ವಿಷ್ಣು ದೇವಾಲಯಗಳೆಂದೇ ಹೆಸರು - ಎರಡು ಮುಖ್ಯ ಗರ್ಭಗುಡಿಗಳಿದ್ದು ಒಂದು ಶಿವ ಮತ್ತು ಇನ್ನೊಂದು ವಿಷ್ಣು (ಪದ್ಮನಾಭ, ವೆಂಕಟೇಶ್ವರ ಇತ್ಯಾದಿ)ವಿನದ್ದಾಗಿರುತ್ತೆ. ಇದರ ಜೊತೆ ಬೇರೆ ಬೇರೆ ರಾಜ್ಯಗಳ ಭಕ್ತರನ್ನೂ ಸೆಳೆಯಲು ತಕ್ಕಮಟ್ಟಿಗೆ ಗಣಪತಿ, ದುರ್ಗಿ, ರಾಮ, ಅಯ್ಯಪ್ಪ, ಮುರುಗ ಮೊದಲಾಗಿ ಇತರೆ ದೇವರ ಗುಡಿಗಳೂ ಇರುತ್ತವೆ.

ಈ ರೀತಿಯ ದೇವಾಲಯಗಳು ಲಿವರ್ ಮೋರ್,ಕ್ಯಾಲಿಫೋರ್ನಿಯ (http://www.livermoretemple.org/) , ಮತ್ತು ವಾಷಿಂಗ್ಟನ್ ಡಿ.ಸಿ. ಯ (http://www.ssvt.org/) ಬಳಿ ಇವೆ. ಇನ್ನೂ ಹಲವು ಕಡೆ ಇರಬಹುದು.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಹಂಸಾನಂದಿಯವರೆ
ಈ ಪ್ರಶ್ನೆ ಸ್ವಲ್ಪ ಕೆಲವರಿಗೆ ಸಿಲ್ಲಿಯಾಗಿ ಕಾಣಬಹುದು. ಆದರೂ ವಿವರವಾಗಿ ಪ್ರತಿಕ್ರಿಯಿಸಿದ್ದಕ್ಕೆ ನನ್ನೀ. ನಾನೂ ಸಹ ನೋಡಿರುವ ಶಿವನ ದೇವಾಲಯಗಳ ಹೆಸರುಗಳು ನೀವು ಕೊಟ್ಟಂತಹ "ಶಿವ" ಹೆಸರಿನವಲ್ಲದವೇ!. ಕೆಲವೊಮೆ ಹಳೆಯ ಪುಸ್ತಕಗಳಲ್ಲಿ "ಶಿವಾಲಯ" ಅನ್ನೋ ಹೆಸರು ಬಂದರೂ ಒಳ ಹೊಕ್ಕು ನೋಡಿದರೆ ಅಲ್ಲಿ ಇರುವುದು ಲಿಂಗವೇ ಹೊರತು ಶಿವನಲ್ಲ!

ಹಾಗೆಯೇ ನಾನು ನೋಡಿರುವ ವಿಷ್ಣು ದೇವಾಲಯಗಳು "ವಿಷ್ಣು" ಹೆಸರಿನವಲ್ಲದವೇ!.

ಒಂದು ಬ್ರಹ್ಮ ದೇವಾಲಯ ಉತ್ತರಭಾರತದೆಲ್ಲೋ ಇದೆ ಅಂತ ಕೇಳಿದ್ದೇನೆ. ಅದು "ಬ್ರಹ್ಮ" ಅನ್ನೋ ದೇವರ ದೇವಾಲಯವೋ ಅತ್ವ ಬೇರೆ ಹೆಸರಿನದೋ ತಿಳಿದಿಲ್ಲ.

...

ನನಗೆ ಈ ಸಂದೇಹ ಯಾಕೆ ಮೂಡಿತು ಅಂದ್ರೆ ... ಮೊನ್ನೆ ನನ್ನ ಸ್ನೇಹಿತನ ಜೊತೆ ಸುಮ್ನೆ ಹೀಂಗೆ ದೇವರು ಅನ್ನೋ ಕಲ್ಪನೆ ಹುಟ್ಟಿದ್ದರ ಬಗ್ಗೆ ಮಾತಾಡ್ತಾ ಇದ್ದೆ. ಆಗ ಅವನು ಹೇಳಿದ್ದು ಈ ಬ್ರಹ್ಮ ವಿಷ್ಣು ಶಿವರಿಗೆ ದೇವಾಲಯಗಳಿಲ್ಲ ಅನ್ನೋದೂ. :)

ಇದರ ಬಗ್ಗೆ ನನ್ನ ತರ್ಕ.

ಇದು ಯಾಕೆ ಆಯ್ತು ಅಂದ್ರೆ ನಂತರ ( ಸಾಕಾರದ ಕಲ್ಪನೆ ಬಂದ ನಂತರ/ ಬಂದಾಗ ?!) ಬಂದ ಶಿವನ ಕಲ್ಪನೆಗಳು ಅತ್ವ ರೂಪಗಳು ಕೇವಲ ಮನುಷ್ಯ ಮಾತ್ರರೆ ಆಗಿದ್ದು ತುಂಬ ಎತ್ತರಕ್ಕೆ ಬೆಳೆದು ದೈವತ್ವ (ಶಿವತ್ವ!) ವನ್ನು ಪಡೆದವರು. ಮತ್ತು ಶಿವ ಅನ್ನೋ "ಸರದಲ್ಲಿ" ಜೋಡಿಸಲ್ಪಟ್ಟವು.

ಲಿಂಗ ಪೂಜೆಯೂ ಬೇರೆಯೇ ಸಂಸ್ಕ್ರುತಿಯಾಗೀದ್ದು ನಂತರ ಶಿವನ ಸಂಸ್ಕೃತಿಯೊಂದಿಗೆ ಬೆರೆಯಿತು.

ಹಾಗೆಯೇ "ವಿಷ್ಣು" ಅನ್ನೋ ಸರದಲ್ಲಿ ಅವನ ದಶಾವತಾರಗಳು + ಇನ್ನಿತರ ಅವತಾರಗಳು (೩೪?!) ಸೇರಿಸಲ್ಪಟ್ಟವು.

ಇವುಗಳೆಲ್ಲದರ ಹಿಂದೆ ಇದ್ದ ಉದ್ದೇಶವೂ ಒಳ್ಳೆಯದೇ ಇತ್ತು... ಅದು ಜನರನ್ನು ಒಂದು ಗೂಡಿಸುವುದು.

ಯಾವಾಗ ಶಿವ ವಿಷ್ಣು ಸಂಸ್ಕೃತಿಗಳು ಒಂದೊಕ್ಕೊಂದು ಸೇರಿಸಲಾಗದಷ್ಟು ದೂರ ಬೆಳೆದವೋ ಆಗ "ಪರಂಬ್ರಹ್ಮ" ಅನ್ನೋ ದೈವದ ಕಲ್ಪನೆಯನ್ನು ಮುಂದೆ ಬಿಟ್ಟರು. ಮುಂದೆ ಸಮನ್ವಯದ ಅದೆಷ್ಟೋ ದೇವರು ಬಂದರೂ ಅವುಗಳೂ ಬೇರೆಯದೆಯೇ ಆದ ಸಂಸ್ಕೃತಿಯಾಗಿ ಉಳಿದಿರಬಹುದು.

[quote]ಈಗ ಅಮೆರಿಕೆಯಲ್ಲಿ ಇರುವ ಹಲವು ದೇವಾಲಯಗಳಿಗೆ ಶಿವ-ವಿಷ್ಣು ದೇವಾಲಯಗಳೆಂದೇ ಹೆಸರು [/quote]

ನನ್ನೀ.. ನನಗೆ ಹಳೆಯ ದೇವಸ್ತಾನಗಲ್ಲಿ ಆಸಕ್ತಿ. ಏಕೆಂದರೆ ಅವುಗಳಿಂದ ನಾವು ದೇವರು ಅನ್ನೋ ಕಲ್ಪನೆ ಬೆಳೆದು ಬಂದದ್ದರ ಬಗ್ಗೆ ಸ್ವಲ್ಪ ತಿಳಿದು ಕೊಳ್ಳಬಹುದು. ಇಲ್ಲಿಯೂ HAL ಬಳಿ ಒಂದು ಮಂದಿರ ವಿದೆ. ಅದಕ್ಕೆ "ಶಿವ ಮಂದಿರ" ವೆಂದೆ ಕರೆಯುತ್ತಾರೆ.

ಆದರೆ ಇವುಗಳೆಲ್ಲ ಹಲವು ಸಂಸ್ಕೃತಿಗಳು ಒಂದಕ್ಕೊಂದು ಬೆರೆತು , ಬೇರ್ಪಡಿಸದಂತೆ ಆದ ನಂತರ ಕಟ್ಟಿಸಿದವು.

ಸವಿತೃ

> ಒಂದು ಬ್ರಹ್ಮ ದೇವಾಲಯ ಉತ್ತರಭಾರತದೆಲ್ಲೋ ಇದೆ ಅಂತ ಕೇಳಿದ್ದೇನೆ. ಅದು "ಬ್ರಹ್ಮ" ಅನ್ನೋ ದೇವರ ದೇವಾಲಯವೋ ಅತ್ವ ಬೇರೆ ಹೆಸರಿನದೋ ತಿಳಿದಿಲ್ಲ.

ಈ ಎಳೆ ನೋಡಿರಲಿಲ್ಲ...ಬ್ರಹ್ಮನ ದೇವಾಲಯ ರಾಜಸ್ಥಾನದ ಅಜ್ಮೀರ್ ಬಳಿ ಇರುವ ಪುಷ್ಕರದಲ್ಲಿದೆ.
ದೇವರ ಹೆಸರನ್ನ 'ಬ್ರಹ್ಮ' ಎಂದೇ ಕರೆಯೋದು ಅಲ್ಲಿ...

--ಶ್ರೀ