ಇದೇನಿದೂ ಸ೦ಪದಿಗರೆಲ್ಲಾ ಬರೀ ಇ೦ಗಳೀಷಿನಲ್ಲೇ ಚಿಲಿಪಿಲಿಗುಡುಡ್ತಾ ಇದ್ದಾರಲ್ಲಾ? ಯಾಕೆ ಕನ್ನಡದಲ್ಲಿ ಟ್ವೀಟ್ ಮಾಡಕ್ಕೆ ಬರೊಲ್ವಾ?

3.333335

ಇದೇನಿದೂ, ನಾನು ಸುಮಾರು ದಿನಗಳಿ೦ದ ನೋಡ್ತಾನೆ ಇದ್ದೇನೆ, ಸ೦ಪದಿಗರೆಲ್ಲಾ ಬರೀ ಇ೦ಗಳೀಷಿನಲ್ಲೇ ಚಿಲಿಪಿಲಿಗುಡುಡ್ತಾ ಇದ್ದಾರಲ್ಲಾ? ಯಾಕೆ ಕನ್ನಡದಲ್ಲಿ ಟ್ವೀಟ್ ಮಾಡಕ್ಕೆ ಬರೊಲ್ವಾ?  ಲಿಸ್ಟ್ ಕೊಡ್ಲಾ... ಯಾರ್ಯಾರ್ ಇ೦ಗಳೀಷಿನಲ್ಲಿ ಚಿಲಿಪಿಲಿಗುಡುಡ್ತಾ ಇದ್ದಾರೆ ಅ೦ತ?  :P


ನಿಮ್ಮವ


ಡುಹ್_ಸ್ವಾಮಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಹಾ!! ಸಕತ್, ವಾಸ್ ಎಕ್ಸ್ಪೆಕ್ಟಿ೦ಗ್ ದಿಸ್ ಒನ್. ಗೊತ್ತಿತ್ತು, ಯಾರಾದ್ರೂ ಹಿ೦ಗೇ ಕೇಳ್ತೀರಾ ಅ೦ತಾ? ನಾನ್ ಬರೆದಿರೋ ಪರಿಚಯದ ದಾಟಿ ಕನ್ನಡಲ್ಲಿ ಬರೊಲ್ಲಾ ["ಬಿಗ್" ಬರೊಲ್ಲಾ]- ["ಬಿಗ್ ನೋ" ಅ೦ತಾರಲ್ಲ ಹಾಗೆ] :P


ನಿಮ್ಮವ


ಡುಹ್_ಸ್ವಾಮಿ

ನಿಮಗೆ ಕನ್ನಡದಲ್ಲಿ ಬರೆಯಲು ಬರುತ್ತಿಲ್ಲವೋ ಅಥವಾ ಕನ್ನಡದಲ್ಲೇ ಬರೆಯಲು ಸಾಧ್ಯವಿಲ್ಲ ಎಂಬುದು ನಿಮ್ಮ ಅಭಿಪ್ರಾಯವೋ?

ಫುಟ್ ನೋಟ್: ಕನ್ನಡದಲ್ಲಿ ಟ್ವೀಟ್ ಮಾಡೊವರ್ವರು ಯಾರಾದರು ಇದ್ದರೆ, ನನಗೆ ಮಿನ್ಚ೦ಚೆ ಕಳುಹಿಸಿ, ನಿಮ್ಮನ್ನು ಹಿ೦ಬಾಲಿಸುತ್ತೇನೆ ನಿಮ್ಮವ ಡುಹ್_ಸ್ವಾಮಿ

ವ್ಹಾ!! ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಾ ನೀವು ಓದಿದ್ದಾ, ಯಾವ ವರ್ಷದ ನಿಮ್ಮ ಕಲಿಕೆ? ನನ್ನ ಪಿಯುಸಿ ಅಲ್ಲೇ ಆಗಿದ್ದು ೧೯೯೧-೧೯೯೨ರಲ್ಲಿ, ಆದ್ರೆ ಸೈನ್ಸು ನ೦ದು - ಪಿಸಿಎಮೀ -- ಅರಸಿಕೆರೆ ಇ೦ದ ಅಪ್&ಡೌನ್ ದಿನಾಗ್ಲೂ....

೧೯೮೯ರಲ್ಲೇ ಡಿಗ್ರಿ ಮುಗ್ಸಿ ಬೆಂಗ್ಳೂರ್ಗ್ಬಂದ್ಬಿಟ್ಟೆ ನಾನು! ಆ ಫೇಮಸ್ ಕೋಟ್ ಗೊತ್ತಾ ನಿಮ್ಗೆ? " ಕಳ್ಳರ್ಸೀಕೆರೆ, ಸುಳ್ಬಾಣಾವ್ರ, ಪೋಲಿ ತಿಪ್ಟೂರು"!!

೧೯೮೯ರಲ್ಲೇ ಡಿಗ್ರಿ ಮುಗ್ಸಿ ಬೆಂಗ್ಳೂರ್ಗ್ಬಂದ್ಬಿಟ್ಟೆ ನಾನು! ಆ ಫೇಮಸ್ ಕೋಟ್ ಗೊತ್ತಾ ನಿಮ್ಗೆ? " ಕಳ್ಳರ್ಸೀಕೆರೆ, ಸುಳ್ಬಾಣಾವ್ರ, ಪೋಲಿ ತಿಪ್ಟೂರು"!!

>>ಲಿಸ್ಟ್ ಕೊಡ್ಲಾ... ಯಾರ್ಯಾರ್ ಇ೦ಗಳೀಷಿನಲ್ಲಿ ಚಿಲಿಪಿಲಿಗುಡುಡ್ತಾ ಇದ್ದಾರೆ ಅ೦ತ? ಮೊದಲು ಪಟ್ಟಿ ಕೊಡಿ. ಆಮೇಲೆ ನಿಮ್ ಜೊತೆ ಮಾತಾಡ್ತೀನಿ.. -ಅನಿಲ್

ನಾನು ಇಂಗ್ಲೀಷಿನಲ್ಲೇ ೯೦% ಚಿಲಿಪಿಲಿಗುಟ್ಟುವುದು. ಯಾಕೆಂದರೆ, ನಾನು ಚಿಲಿಪಿಲಿ ಮಾಡುವುದೆಲ್ಲಾ ನನ್ನ ಜಂಗಮನಿಂದ. ನನ್ನ ಜಂಗಮನ ಜಗುಲಿಯಾದ ’ಆಂಡ್ರ್ಯಾಯ್ಡ್’ ಇನ್ನೂ ಕನ್ನಡವನ್ನು ಕೊಟ್ಟಿಲ್ಲ. ಅದರಲ್ಲಿ ನನಗೆ ಕನ್ನಡದ ಲಿಪಿಯೆಲ್ಲ ಆಯತಾಕಾರದ ಸಾಲು ಸಾಲಾಗಿ ಕಾಣುತ್ತವೆ. ಓದಲೂ ಆಗುವುದಿಲ್ಲ, ಕೀಲಿ ಕುಟ್ಟಲೂ ಆಗುವುದಿಲ್ಲ. ಹೀಗಾಗಿ ಇಂಗ್ಲೀಷಿನಲ್ಲಿ ಚಿಲಿಪಿಲಿಗುಟ್ಟುತ್ತೇನೆ. ಕರ್ನಾಟಕದಿಂದ ಸಾವಿರಾರು ಜನ ಮೃದುಯಂತ್ರಿಗಳು ಗೂಗಲ್ಲಿಗೆ ಗುಳೇಹೊರಟು ಹೋಗಿದ್ದಾರೆ, ಇನ್ನೂ ಆಂಡ್ರ್ಯಾಯ್ಡಿನಲ್ಲಿ ಕನ್ನಡವನ್ನು ಏಕೆ ತಂದಿಲ್ಲವೋ ಗೊತ್ತಿಲ್ಲ. ಅಂದ ಹಾಗೆ ನನ್ನ ಚಿಲಿಪಿಲಿ: www.twitter.com/kesh...

ಯಾಕೆ ಸಂಪದಿಗರು ಬೇರೆ ಭಾಷೆ ಬಳಸಕೂಡದೆ.... ವಿಷಯಕ್ಕೆ ತಕ್ಕ ಹಾಗೆ ಭಾಷೆಯನ್ನು ಬಳಸುವ ಸಂಪದಿಗರು ಬಹಳ ಟ್ವಿಟ್ಟರಲ್ಲಿ :) ನನ್ನ ಚಿಲಿಪಿಲಿಯನ್ನು ಇಲ್ಲಿ ನೋಡಿ http://twitter.com/s...

ಎಲ್ಲರೂ ಇಂಗ್ಲೀಷಿನಲ್ಲಿ ಚಿಲಿಪಿಲಿಸುತ್ತಿಲ್ಲಾ.. ನಮ್ಮಂತವರೂ ಕೆಲವರು ಇದ್ದಾರೆ.. ಇಂತಿ ನಿಮ್ಮ ಪ್ರೀತಿಯ, ಶಿವಶಂಕರ ವಿಷ್ಣು ಯಳವತ್ತಿ http://shivagadag.bl... http://twitter.com/s...