ಅಕ್ಷರಗಳೆಲ್ಲಾ ಚಲ್ಲಾಪಿಲ್ಲಿ... ದಯವಿಟ್ಟು ಸಹಾಯ ಮಾಡಿ

5

ಐದು ಸುಪರಿಚಿತ ಹಾಡುಗಳ ಮೊದಲ ಸಾಲುಗಳಿವು. ಆದರೆ ಅಕ್ಷರಗಳೆಲ್ಲಾ ಚಲ್ಲಾಪಿಲ್ಲಿ... ದಯವಿಟ್ಟು ಸಹಾಯ ಮಾಡಿ.


೧. ಜ ಗ ದ ನ ಡು ವೆ ಬೇ ವ


೨. ವ ಹ ಮು ರ ನ ಮೋ ಳಿ ಯಾ


೩. ಮುಂ ಗ ಣಿ ಲಿ ದೋ ಸಾ ಹೋ ಗ ಲಿ ದೆ


೪. ಬಂ ಗೆ ನ ದ ವ ರು ಮ ನೆ ಯ ಮಾ ರಾ ರು


೫. ಕಿ ಟ ಗೆ ನ ಟಿ ಯ ಮೇ ಲೆ ತುಂ ತು ರು


 


ಪ್ರಭು ಮೂರ್ತಿ


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೂ ಗೊತ್ತಾಯಿತು ಹಾಡುಗಳು, ಬರೆಯೋಣವೆಂದರೆ, ಬಿ ಆರ್. ಎಸ್ ಎಲ್ಲವನ್ನೂ ಆಗಲೇ ಬರೆದುಬಿಟ್ಟಿದ್ದಾರೆ. ಸುಂದರ ೫- ಹಾಡುಗಳು ! ಚೆನ್ನಾಗಿತ್ತು ಪ್ರಭು ಅವರೆ, ನೀವು ಸಂಪದದಲ್ಲಿ ಇದ್ದಿದ್ದು ನೋಡಿರಲಿಲ್ಲ ಇದುವರೆಗೆ. ನಾನು ಬಂದು ಒಂದು ವರುಷವಾಗಿದ್ದರೂ, ನಾನೊಂದು ಜೋಡಿ ಪದಗಳ ಪದಬಂಧ ಬರೆದಿದ್ದೀನಿ, ನೋಡಿ, (ಜಸ್ಟ್ ಫಾರ್ ದ ಫನ್ ಆಫ್ ಲವಿಂಗ್ ಕನ್ನಡ ವರ್ಡ್ಸ್)! ~ಮೀನಾ

೧,೨,೩, ೫ ನಾನು ಬಿಡಿಸಿದೆನು. ನಾಲ್ಕನೆದ್ದು ಕಠಿಣವಾಗಿತ್ತು . ಐದನೆದ್ದು ತುಂಟತನ! ಚೆನ್ನಾಗಿ ಚಲ್ಲಾಪಿಲ್ಲಿ ಮಾಡಿದ್ದೀರಿ! ಶಹಬ್ಬಾಶ್ !!

ಸತ್ಯನಾರಾಯಣ, ಮೀನಾ ಮತ್ತು ಶ್ರೀಕಾಂತ್ ಅವರುಗಳೇ, ಚಲ್ಲಾಪಿಲ್ಲಿ ಆಡಿದಕ್ಕೆ ಥ್ಯಾಂಕ್ಸ್. ಆಗಾಗ ಮಾಡಿಟ್ಟುಕೊಂಡಿರುವ ಇಂತಹ puzzleಗಳನ್ನು ಕಳಿಸುವ ಹವಣಿಕೆಯಿದೆ. ಸಂಪದದಲ್ಲಿ ಇದಕ್ಕೆ ಪ್ರತ್ಯೇಕವಾದ ಕ್ಯಾಟಗರಿ ಇದೆಯೆ? ನಾನು ’ಅರಳಿ-ಕಟ್ಟೆ’ಗೆ ಇದನ್ನು ಹಾಕ್ದೆ. ಮೀನಾ ಅವರೆ, ನಿಮ್ಮನ್ನು ಇಲ್ಲಿ ಕಂಡು ಸಂತೋಶವಾಯ್ತು! ನಿಮ್ಮ ಪದಬಂಧದ URL ಕಳ್ಸಿ. ನಾನು ಸುಮಾರು ಮೂರು ವರ್ಷದ ಹಿಂದೆ ಆಗಾಗ ಇಲ್ಲಿ ತಲೆಹಾಕಲು ಶುರುಮಾಡಿದ್ದೆ. ಆದರೆ ಕಳೆದ ೧೧/೨ - ೨ ವರ್ಷಗಳಿಂದ ಹಲವಾರು ಕಾರಣಗಳಿಂದ ಭಾಗವಹಿಸಕ್ಕಾಗ್ಲಿಲ್ಲ... ಪ್ರಭು

ಉತ್ತರಗಳೆಲ್ಲ ಮೊದಲೇ ಕೊಟ್ಟಾಗಿದೆ . :( ಈ ಚೆಲ್ಲಾಪಿಲ್ಲಿ ಓದಿದಾಗ ನನಗೆ ನನ್ನ ಒಂದು ಅನುಭವ ನೆನಪಿಗೆ ಬರುತ್ತದೆ . ಮೊದಲು ಉದಯವಾಣಿ ಸಾಪ್ತಾಹಿಕ ಪುರವಣಿಯಲ್ಲಿ "ಜಾಣ ಮರಿ ಶೀರ್ಷಿಕೆ ಬರಿ " ಎಂದು ಒಂದು ಅಕ್ಷರ ಜೋಡಿಸುವ ಅಂಕಣ ಬರುತ್ತಿತ್ತು (ನಾನು ಪ್ರೈಮರಿ ಯಲ್ಲಿ ಇರಬೇಕಾದರೆ ಪ್ರತಿ ವಾರ ತಪ್ಪದೆ ಅದನ್ನು ಪೂರ್ಣ ಮಾಡುತ್ತಿದ್ದೆ ) ಒಂದು ಸಾರಿ " ನ ಟ ರಾ ವಿ ಹಾ ಮಾ " ಎಂದು ಬಂದಿತ್ತು ( ವಿಮಾನ ಹಾರಾಟ ) . ನಾನು ಸೆಲೂನ್ ಗೆ ಹೋದಾಗ ಅಲ್ಲಿನ ಪೇಪರ್ ನಲ್ಲಿ ಯಾರೋ ಅದನ್ನು " ಹಾವಿನ ಮಾರಾಟ " ಎಂದು ಬರೆದಿದ್ದರು . :) ;) ವಿಕಟಕವಿ

ಎಷ್ಟು ಬೇಗ ಪ್ರತಿಕ್ರಿಯೆ? ನಾನು ಟೈಪ್ ಮಾಡೋಷ್ಟರಲ್ಲಿ ಇಷ್ಟೊಂದು ಸ್ನೇಹಿತರು ಕಳ್ಸೆ ಬಿಟ್ಟಿದ್ದಾರಲ್ಲ !!!! ೧.ಗಜವದನಬೇಡುವೆ ೨. ಯಾವ ಮೋಹನ ಮುರಳಿ ೩.ದೋಣಿಸಾಗಲಿ ಮುಂದೆಹೋಗಲಿ ೪.ರಾಯರು ಬಂದರು ಮಾವನ ಮನೆಗೆ ೫.ತುಟಿಯ ಮೇಲೆ ತುಂಟ ನಗೆ ಇನ್ನೇನಾದ್ರು ಚೆಲ್ಲಾಪಿಲ್ಲಿ ಇದ್ರೆ ಕಳಿಸಿ ಪ್ರಭುಗಳೇ .. ಚೈತನ್ಯ

ವಿಕಟಕವಿಗಳೆ, ನಿಮ್ಮ ಅನುಭವ ಓದಿ ನಗು ಬಂತು. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಸುರೇಶ್ ಹೆಗ್ಡೆಯವರು ಹೇಳಿದ ಹಾಗೆ ಎರಡೂ ಉತ್ತರಗಳು ಸರಿಯೇ... ಪ್ರಭು

ಎರಡೂ ಚೆಲ್ಲಾಪಿಲ್ಲಿಗಳೂ ಚೆನ್ನಾಗಿವೆ. ಇತ್ತೀಚೆಗೆ ನಾವಾಡಿದ dumb charades ಆಟದಲ್ಲಿ ಈ ಚಿತ್ರದ ಹೆಸರನ್ನು ಎದುರಾಳಿ ಪಾರ್ಟಿಗೆ ಕೊಟ್ಟಿದ್ದೆ. ಈಗ ನಿಮಗೆ : ಸುಸುಸುಲಾಬ್ಬಲಿಬ್ಬಿಕ್ಕವ್ವ