ಕನ್ನಡದಲ್ಲಿ ನೀವು ಹೇಗೆ ಬರೀತೀರ?

0

ನನ್ನ ಪ್ರಶ್ನೆ ಸರಳವಾದುದು... ಅಂತರ್ಜಾಲದಲ್ಲಿ ಕನ್ನಡದಲ್ಲಿ ಬರೆಯಲು ನೀವು ಯಾವ ತಂತ್ರಾಂಶವನ್ನು ಉಪಯೋಗಿಸಿತ್ತೀರ? ನಿಮ್ಮ ಆಪರೇಟಿಂಗ್ ಸಿಸ್ಟಮ್ ಯಾವುದೆಂದು ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಬರಹ ೭.೦ ದ ಬರಹ ಡೈರೆಕ್ಟ್ (ಕನ್ನಡ- ಯುನಿಕೋಡ್) ಬಳಸುವೆ.

ನನ್ನ ವಿಂಡೋಸ್ ೨೦೦೦ ನಲ್ಲಿ ಮೊದಲು ಕನ್ನಡ ಸರಿಯಾಗಿ ಕಾಣುತ್ತಿರಲಿಲ್ಲ . 'ಸಂಪದ'ದಲ್ಲಿ ಕೊಟ್ಟ ಸಲಹೆ ಅನುಸಾರ ತುಂಗಾ ಫಾಂಟ್ ಅನ್ನು ಹಾಕಿ ಅಲ್ಲಿ ಹೇಳಿದ usp10.dll ಅನ್ನು programfiles ಕೆಳಗಿನ Internet explorer ಫೋಲ್ಡರಿನಲ್ಲಿ ಕಾಪಿ ಮಾಡಿದ ಮೇಲೆ ಅಕ್ಷರಗಳು ಚೆನ್ನಾಗಿವೆ. ಹೊಸ ತುಂಗಾ ಫಾಂಟ್ ಹಾಕಿಕೊಂಡಿಲ್ಲ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನಾನು ಸಂಪದದಲ್ಲಿರುವ [http://sampada.net/converter|Converter]ನ ಒಂದು ಪುಟ ನನ್ನ ಬಳಿ ಇಟ್ಟುಕೊಂಡಿದ್ದೇನೆ. ಆ ಪುಟವನ್ನು ತೆರೆದು, ಅದರಲ್ಲಿ ಟೈಪಿಸಿ, ಅಲ್ಲಿಂದ ಎಲ್ಲಿ ಬೇಕೊ ಅಲ್ಲಿ ವರ್ಗಾಯಿಸುತ್ತೇನೆ.
ಇದು ಸ್ವಲ್ಪ ಸಮಯ ತೆಗೆದು ಕೊಳ್ಳುತ್ತೆ ನಿಜ. ಆದರೆ ಈ ತಂತ್ರವನ್ನು ನೀವು ಎಲ್ಲ ಕಡೆ ಬಳಸಬಹುದು. Browser ಬಿಟ್ಟರೆ ಬೇರೆ ತಂತ್ರಾಂಶ ಬೇಕಿಲ್ಲ, Internet ಬೇಕಿಲ್ಲ.
-----
ಶಶಿಧರ

[:http://ubuntulinux.org|ಉಬುಂಟು] ಮತ್ತು ನೋಟ್ ಬುಕ್ ನಲ್ಲಿ [:http://debian.org|ಡೆಬಿಯನ್].

ಅದರಲ್ಲಿ SCIM-m17nಗೆ ನಾನೇ ಬರೆದುಕೊಂಡ ಕೀಲೆ ಮಣೆ ಸುಮಾರು ಎರಡು ವರುಷಗಳಿಂದ ಬಳಸ್ತಿದ್ದೀನಿ.

ವಿಂಡೋಸ್ ನಲ್ಲಿ ನನ್ನ ನೆಚ್ಚಿನ ಉಪಕರಣ [:http://www.baraha.com/BarahaIME.htm|ಬರಹ ಐ ಎಮ್ ಇ].

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ನಮಸ್ಕಾರಗಳು ಸರ್ ನೀವು ಬರೆದಿದ್ದು ಬಹಳ ಚೆನ್ನಾಗಿದೆ, ಬೇರೆ ಯಾರದೋ ಕೆಟ್ಟ ದೃಷ್ಟಿ ಬೀಳದಿರಲಿ. ಇಂತಿ ನಿಮ್ಮ, ಕಿರು ಕವಿ "ಸಿದ್ದರಾಮ ಎನ್.ಕೋರಪಳ್ಳಿ"

ಲಿನೆಕ್ಷ ಫೆಡೋರ. ಮೋಜಿಲ್ಲ ಫಯರ್ ಫಾಕ್ಷ ನಲ್ಲಿ Pramukh Type Pad ಎ೦ಬ addon ಉಪಯೋಗಿಸಿ ಮೋಜಿಲ್ಲ ಫಯರ್ ಫಾಕ್ಷ ನಲ್ಲೇ ಬರೆಯ ಬಹುದು. ಇದು windows ಆಪರೇಟಿಂಗ್ ಸಿಸ್ಟಮ್ ನಲ್ಲೂ ಕೆಲಸ ಮಾಡುತ್ತದೆ...

ನೀವು ಇಲ್ಲಿ ಸೇರಿ 3 ವರ್ಷಗಳು 28 ವಾರಗಳು ಕಳೆದಿವೆ. ನಿಮಗೆ ಕನ್ನಡದ ಬರವಣಿಗೆಯ ಬಗ್ಗೆ ತಿಳಿದಿಲ್ಲವೆ. ನೋಡಿ ಇದಕ್ಕೆ ಸೂಕ್ತ ಎಂದರೆ ?. ನುಡಿ 4.0 ಮತ್ತು ವಿಂಡೋಸ್ 7 ಉತ್ತಮವಾದದ್ದು.

ವಸಂತ್ ಅವರೇ, [ನೀವು ಇಲ್ಲಿ ಸೇರಿ 3 ವರ್ಷಗಳು 28 ವಾರಗಳು ಕಳೆದಿವೆ. ನಿಮಗೆ ಕನ್ನಡದ ಬರವಣಿಗೆಯ ಬಗ್ಗೆ ತಿಳಿದಿಲ್ಲವೆ. ನೋಡಿ ಇದಕ್ಕೆ ಸೂಕ್ತ ಎಂದರೆ ?. ನುಡಿ 4.0 ಮತ್ತು ವಿಂಡೋಸ್ 7 ಉತ್ತಮವಾದದ್ದು.] ತಮ್ಮ ಈ ಪ್ರತಿಕ್ರಿಯೆ ಶಶಾಂಕ ಅವರಿಗೆ ಅಂದುಕೊಳ್ಳುತ್ತೇನೆ. ತಾವು ಹೀಗೆ ಪ್ರತಿಕ್ರಿಯಿಸುವ ಮುನ್ನ ಅವರು ಈ ಪ್ರಶ್ನೆ (ಕನ್ನಡದಲ್ಲಿ ನೀವು ಹೇಗೆ ಬರೀತೀರ?) ಯನ್ನು ಕೇಳಿದ ದಿನಾಂಕವನ್ನು ಗಮನಿಸಬೇಕಿತ್ತು. ಅಲ್ಲದೇ, ಅವರು ತಮಗೆ ಕನ್ನಡದಲ್ಲಿ ಹೇಗೆ ಬರೆಯುವುದು ಎಂದು ತಿಳಿದಿಲ್ಲವೆಂದು ಹೇಳಿಲ್ಲ. 'ನೀವೆಲ್ಲ ಹೇಗೆ ಬರೆಯುತ್ತೀರಿ?' ಎಂದು ಕೇಳಿದ್ದಾರಷ್ಟೇ?