ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್

0

ನಮಗೆಲ್ಲ ತಿಳಿದಿರುವಂತೆ ಹಿಂದೂ ಹುಡುಗಿಯನ್ನು ಮುಸ್ಲಿಂ ಯುವಕನೊಬ್ಬ ಮದುವೆಯಾದರೆ "ಲವ್ ಜಿಹಾದ್" ಎಂಬ ಹಣೆ ಪಟ್ಟಿ ಕಟ್ಟುವುದು ಸಾಮಾನ್ಯ. ಇದು ಎಲ್ಲೆಡೆ ನಡೆಯುತ್ತಿದೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ. ಹಿಂದೂ ಹುಡಗರು ನಾವೂ ಕಡಿಮೆ ಇಲ್ಲ ಅಂತಾ, ಮುಸ್ಲಿಂ ಹುಡಗಿಯರನ್ನ ಮದುವೆಯಾಗುವ ಅಭ್ಯಾಸ ಆರಂಭವಾಗಿಸಿದ್ದಾರೆ. ಹಾಗಾದರೆ ಇದು ಹಿಂದೂ ಜಿಹಾದ್ ಎನ್ನಬಹುದಾ. ಮುಸ್ಲಿಂ ಹುಡಗನನ್ನು ಮದುವೆಯಾಗುವ ಹುಡುಗಿ ತನ್ನ ಹೆಸರಿನ ಜೊತೆ ಧಾರ್ಮಿಕ ಸಂಪ್ರದಾಯಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಹಾಗೇ ಬುರ್ಖಾ ಸಾಮಾನ್ಯ. ಅವನ ಜೊತೆ ಬದುಕಬೇಕೆಂದರೆ ಇದು ಅನಿವಾರ್ಯ ಅನ್ನುವುದು ಅವರ ಸಮಾಜದ ಕಟ್ಟುಪಾಡು.

ಅದೇ ಹಿಂದೂ ಹುಡಗನನ್ನು ಮದುವೆಯಾಗುವ ಮುಸ್ಲಿಂ ಹುಡುಗಿ ಹಿಂದೂ ಸಂಪ್ರದಾಯದ ಕಟ್ಟು ಪಾಡುಗಳಿಗೆ ಬದಲಾಗುತ್ತಿದ್ದಳಾ ಎಂದರೆ ಹಲವಾರು ಪ್ರಕರಣಗಳಲ್ಲಿ ಇದು ಇಲ್ಲ ಎನ್ನುತ್ತದೆ, ಇತ್ತೀಚಿಗಿನ ಇಂತಹ ಹಲವಾರು ಘಟನೆಗಳು ನಮ್ಮ ಕಣ್ಣೆದುರಿಗಿದೆ. ಇತ್ತೀಚೆಗೆ  ಜಿಲ್ಲೆಯೊಂದರ  ಹಿಂದೂ ಯುವಕನೊಬ್ಬ ಮುಸ್ಲಿಂ ಹುಡುಗಿಯನ್ನು ಮದುವೆಯಾಗಿದ್ದಾನೆ. ಆಕೆ ತನ್ನ ಹೆಸರನ್ನು ಬದಲಾಯಿಸಿಕೊಳ್ಳಲು ಇಷ್ಟ ಪಡುತ್ತಿಲ್ಲ. ಹಾಗೇ ತನ್ನ ಸಂಪ್ರದಾಯವನ್ನು ಬಿಡುತ್ತಿಲ್ಲ. ಮದುವೆಯಾದ ನಂತರ ಹಿಂದೂವಾಗಿ ಬದಲಾಗಬೇಕೆಂಬ ಒತ್ತಡ ಹೇರುತ್ತಲೇ ಇದ್ದಾನೆ. ಆಕೆಯು ಈವರೆಗೆ ಬದಲಾಗಿಲ್ಲ ಎನ್ನಲಾಗಿದೆ.

ಇಂತಹ ಘಟನೆಗಳು ಜಾತಿಯ ಸಂಘರ್ಷಕ್ಕೆ ಎಡೆ ಮಾಡಿಕೊಡುವುದು ನಿಶ್ಚಿತ. ಹಾಗೇ ದೊಡ್ಡ ಮಟ್ಟದ ತಿರುವು ಪಡೆದರೂ ಆಶ್ಚರ್ಯ ಪಡಬೇಕಿಲ್ಲ. ಇದು ಏನಾದರೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದರೆ. ಅಲ್ಲಿನ ಸಬ್ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಯಾವ ಜಾತಿ ಅನ್ನುವುದರ ಮೇಲೆ ಕೇಸುಗಳು ದಾಖಲಾಗುತ್ತದೆ. ಇವರಿಬ್ಬರ ಹುಡುಗಾಟದಿಂದ ಸಾರ್ವಜನಿಕ ಆಸ್ತಿ ಪಾಸ್ಥಿ ನಷ್ಟ, ನಗರವೇ ಹತ್ತಿ ಉರಿಯುತ್ತದೆ. ಇಂತುದೆಲ್ಲಾ ಅವಘಡಗಳಿಗೆ ದಾರಿ ಮಾಡಿಕೊಡುತ್ತದೆ.

 

* ಹಾಗಾದರೆ ಮದುವೆಯಾಗುವ ಮುಂಚೆ ಆ ಹುಡುಗ ಹುಡುಗಿಯ ಜೊತೆ ತನ್ನ ಸಮಾಜದ ಕಟ್ಟು ಪಾಡಿನ ವಿಷಯಗಳನ್ನು ತಿಳಿಸಿದ್ದು, ಆ ಸಮಯದಲ್ಲಿ ಆಕೆ ಒಪ್ಪಿರುತ್ತಾಳೆ. ಮದುವೆಯಾದ ನಂತರ ತನ್ನ ಧಾರ್ಮಿಕ ಪದ್ದತಿ ಬಿಡುವುದಿಲ್ಲ ಎಂದಾದರೆ ಆತ ಏನು ಮಾಡಬೇಕು? ಹಾಗೇ ಈ ಮುಂಚೆ ವಿಷಯ ತಿಳಿಸದೇ ಇದ್ದು  ಆಕೆ ಇತರೆ ಸಮಾಜ ಒಂದಕ್ಕೆ ಬಂದ ನಂತರ ಬದಲಾಗಬೇಕೋ ಬೇಡವೋ?

 

* ಪ್ರೇಮ ಕುರುಡು ಎಂದಾದರೆ ಆಕೆ ಯಾಕೆ ಬದಲಾಗುತ್ತಿಲ್ಲ.

 

* ಇದು ಸಣ್ಣ ವಯಸ್ಸಿನಿಂದಲೂ ಅಭ್ಯಾಸ ಮಾಡಿಕೊಂಡ ಧಾರ್ಮಿಕ ಆಚರಣೆ ಎಂದಾದರೆ ಅದನ್ನು ಹಾಗೇ ಬಿಡುವುದು ಒಳ್ಳೆಯದಲ್ಲವೆ. ಅವರ ಮನಸ್ಸಿಗೆ ನೋವು ಮಾಡುವುದು ಎಷ್ಟರ ಮಟ್ಟಿಗೆ ಸರಿ

 

* ಇಷ್ಟೆಲ್ಲಾ ಸಮಸ್ಯೆ ಉದ್ಭವವಾಗುತ್ತದೆ ಎಂದಾದರೆ ಪ್ರಥಮವಾಗಿ ಈ ರೀತಿ ಮದುವೆಯಾಗುವುದೇ ತಪ್ಪಲ್ಲವೆ. ಇದರಿಂದಾಗಿ ಎರಡು ಮನೆಯವರಿಗೂ ವ್ಯಥಾ ನೋವು.  ಹಾಗೇ ಪ್ರೇಮಿಗಳಿಗೂ ನೆಮ್ಮದಿ ಇರುವುದಿಲ್ಲ.

 

* ದೇವರು ಎಲ್ಲರಿಗೂ ಒಂದೇ ಅವರು ಒಬ್ಬ ದೇವರನ್ನು ಪೂಜಿಸುತ್ತಾರೆ, ಆದರೆ ಹಿಂದುಗಳು ಹಲವು ದೇವರುಗಳನ್ನು ಪೂಜಿಸುತ್ತಾರೆ. ಎಲ್ಲರ ದೇವರು ಒಂದೇ ಆಚರಣೆ ಮಾತ್ರ ಬೇರೆ ಎಂದು ಸರಿ ಹೊಂದುವುದು ತಪ್ಪೋ ಸರಿಯೇ. ಆದರೆ ಇದು ಎರಡು ವರ್ಗದವರಿಗೂ ಸರಿ ಎನ್ನಿಸಬೇಕಾಗುತ್ತದೆ, ಹಾಗೇ ಅವರವರ ಧರ್ಮಾಚರಣೆಗಳಿಗೆ ಅಡ್ಡಿ ಮಾಡುವುದು ಸರಿಯೋ ತಪ್ಪೋ.

 

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿಂದೂ ಹುಡುಗರಿಗೆ ಮುಸಲ್ಮಾನ ಹುಡುಗಿಯರನ್ನು ಹಿಂದೂ ಧರ್ಮಕ್ಕೆ ಮತಾಂತರಿಸುವಷ್ಟು 'ಬ್ಯಾಟರಿ' ಇಲ್ಲ. ಮುಸಲ್ಮಾನರು ಇಂತಹ ವಿಷಯಗಳಲ್ಲಿ ಪಳಗಿದವರು. ಸಣ್ಣ ವಯಸ್ಸಿನಿಂದಲೇ ಅವರಿಗೆ ಇಂತಹ ವಿಷಯಗಳಲ್ಲಿ 'ಪರಿಣತಿ' ಕೊಡಲಾಗುತ್ತದೆ. ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಕ್ಲಾಸಿನಲ್ಲಿದ್ದ ೪-೫ ಮುಸಲ್ಮಾನ ಹುಡುಗರು ಕ್ಲಾಸಿನ ಅನಭಿಷಿಕ್ತ ದೊರೆಗಳು. ದೈಹಿಕ ಶಕ್ತಿಯಲ್ಲಿ ಅವರಿಗೆ ಮಿಗಿಲಿಲ್ಲ. ಆಟೋಟಗಳಲ್ಲಿ ಅವರಿಗೆ ಸರಿಸಾಟಿಯಿಲ್ಲ. ಅದರ ಜೊತೆಗೆ ಅದೇ ವಯಸ್ಸಿನಲ್ಲಿ ಇಸ್ಲಾಮಿಕ್ ಜಗತ್ತಿನ ಆಗುಹೋಗುಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರು. ಆಗ ಅಮೆರಿಕ ಇರಾಕ್ ಯುಧ್ಧ ನೋಡಿ... ಅವರುಗಳು ಕ್ಲಾಸಿನಲ್ಲಿ 'ಬುಷ್ ಬೂಸು.. ಹೂಸು..." ಇತ್ಯಾದಿ ಡೈಲಾಗುಗಳನ್ನು ಬಿಡುವುದು ಸಾಮಾನ್ಯವಾಗಿತ್ತು... ನಾವು ಹಿಂದೂ ಹುಡುಗರು ಬುಷ್ ನ ಪರ ಇರ್ಬೇಕು ಅಂತ ಆಗ ತಿಳಿದಿಕೊಂಡಿದ್ದೆವು. ಅಮೆರಿಕನ್ನರು ಕ್ರಿಶ್ಚಿಯನ್ನರು, ನಮಗೂ ಅವರಿಗೂ ಅಂತಹ ಸಂಬಂಧವೇನಿಲ್ಲ ಎಂಬುದಾಗಿ ನಮಗೆಲ್ಲಿ ತಿಳೀಬೇಕು ಆಗ.. ಇನ್ನೂ ಚಿಕ್ಕ ವಯಸ್ಸು... ಇಂತಹ ವಿಷಯಗಳಲ್ಲಿ ನಮ್ಮ ಹುಡುಗರಿಗೆ 'ಶಿಕ್ಷಣ' ದೊರೆಯುವುದಿಲ್ಲ.. ಆದರೆ ಅವರಿಗೆ ಹಾಗಲ್ಲ.. ಸಣ್ಣದಿರುವಾಗಲೇ 'ಕೆಲವು' ವಿಷಯಗಳನ್ನು ಅರುಹಿರುತ್ತಾರೆ... ಭಾರತದಲ್ಲಿ ಈಗಿನ ಪರಿಸ್ಥಿತಿ ಮುಂದುವರೆದರೆ ಈ ಲವ್ ಜಿಹಾದ್ ವಿಷಯಗಳು ನಗಣ್ಯವಾಗುತ್ತವೆ ಯಾಕೆಂದರೆ ಹಿಂದೂಗಳಿಗೆ ಈಗಿನಂತೆ ಚರ್ಚಿಸಲು ಆಸ್ಪದವಿರುವುದಿಲ್ಲ. ಮುಸಲ್ಮಾನರ ಡೆಮಾಗ್ರಫಿ ಪ್ರತಿಶತ ೨೫ ದಾಟಿದ ಕೂಡಲೆ ಹಿಂದೂಗಳನ್ನು ಆಟ ಆಡಿಸಲು ಶುರು ಹಚ್ಚಿಕೊಳ್ಳುತ್ತಾರೆ. ಅದು ಅವರ ತಪ್ಪಲ್ಲ... ಬೆಕ್ಕು ಇಲಿಯ ಜೊತೆ ಆಟ ಆಡುತ್ತಲ್ಲವೇ.. ಹಾಗೆ... ಇದರಲ್ಲಿ ಬೆಕ್ಕಿನ ತಪ್ಪೇನೂ ಇಲ್ಲ... ಅದರ ಗುಣವೇ ಅದು... ಈ ವಿಷಯಗಳನ್ನು ಯೋಚಿಸಿ ಫಲವಿಲ್ಲ... ನಾನಂತೂ ನಿರ್ಧರಿಸಿ ಬಿಟ್ಟಿದ್ದೇನೆ... ಹಿಂದೂ ಆಗಿ ಉಳಿಯುವುದು ಸಾಧ್ಯವಿಲ್ಲ ಎಂದಾದರೆ ನನಗೆ ಉಳಿಯುವುದೇ ಬೇಕಿಲ್ಲ.. ನಾನು ಓವರ್ ರಿಯಾಕ್ಟ್ ಮಾಡುತ್ತಿದ್ದೇನೆ ಅಂತ ನಿಮಗೆ ಅನಿಸಿದರೆ ನಮ್ಮ ಊರಿಗೆ ಒಂದು ಸಲ ಬನ್ನಿ... ಮಂಗಳೂರು/ಕಾಸರಗೋಡು ಕಡೆ.. ನಿಮಗೇ ಗೊತ್ತಾಗುತ್ತದೆ...

ನಿಮ್ಮ ಪ್ರತಿಕ್ರಿಯೆಗೆ ನನ್ನ ಸಂಪೂರ್ಣ ಸಹಮತ ಇದೆ. ನಾನು ನನ್ನ ಪ್ರಾಥಮಿಕ ಶಿಕ್ಷಣ ಕಾಸರಗೋಡಿನ ಸಣ್ಣ ಗ್ರಾಮ ಮಂಜೇಶ್ವರದಲ್ಲಿ ಮುಗಿಸಿದವನು. ನನ್ನ ತರಗತಿಗಳಲ್ಲಿ ನಾಲ್ಕಯಿದು ಹಿಂದೂ ಮಕ್ಕಳಿದ್ದು ಮತ್ತೆಲ್ಲ ಮುಸಲ್ಮಾನ ಮಕ್ಕಳಿದ್ದರು. ಆಗ ಒಂದನೇ ತರಗತಿಯಲ್ಲಿರುವಾಗಲೇ ಕೆಲ ಮುಸಲ್ಮಾನ ಮಕ್ಕಳು ನೀವು ಹಿಂದೂಗಳು.... ನೀವು ಕಾಪಿರ್ಗಳು ಅಂತೆಲ್ಲ ಹೇಳುತಿದ್ದರು. ಇಷ್ಟು ಸಾಲದೆಂಬಂತೆ ಅಷ್ಟು ಚಿಕ್ಕವಯಸಿನಲ್ಲೇ ಹಿಂದೂ ಮುಸ್ಲಿಂ ಜಗಳಗಳು ನಡೆಯುತಿದ್ದವು. ಹೊಡೆದಾಟ ಯಾವ ಮಟ್ಟಕ್ಕೆ ಹೋಗುತಿದ್ದವೆಂದರೆ ಅನೇಕಬಾರಿ ರಕ್ತ ಪಾತವಾದದ್ದು ಇದೆ. ನಾಲ್ಕನೇ ತರಗತಿ ತಲುಪೋಹೊತ್ತಿಗೆ ನನ್ನ ತಂದೆಗೆ, ಇವನು ಇಲ್ಲೇ ಶಿಕ್ಷಣ ಮುಂದುವರೆಸಿದರೆ ದೊಡ್ಡ ರೌಡಿ ಆಗಿಬಿಡುತ್ತಾನೆ ಅಂತ ಮಂಗಳೂರಿನ ಶಾಲೆಗೇ ಸೇರಿಸಿಬಿಟ್ಟರು.

ನಿಮ್ಮದು ಕೇರಳ ಗಡಿ ಭಾಗವಾಗಿರುವುದರಿಂದ ಅಲ್ಲಿ ಮುಸ್ಲಿಂರ ಪ್ರಭಾವ ಹೆಚ್ಚಾಗಿಯೇ ಇರುತ್ತದೆ ಎಂದುಕೊಂಡಿದ್ದೇನೆ. ಆದರೂ ನಿಮ್ಮ ಸಣ್ಣ ವಯಸ್ಸಿನಲ್ಲಿ ಇದ್ದ ಕೆಚ್ಚು ಆಶ್ಚರ್ಯ ಮೂಡಿಸುತ್ತದೆ.

>>ಹಿಂದೂ ಆಗಿ ಉಳಿಯುವುದು ಸಾಧ್ಯವಿಲ್ಲ ಎಂದಾದರೆ ನನಗೆ ಉಳಿಯುವುದೇ ಬೇಕಿಲ್ಲ..<< ಏನ್ರಿ ಮಾತಾಡ್ತೀರಿ..ಹಿಂದೂ ಆಗಿ ಉಳಿಯಲು ಏನು ಮಾಡಬೇಕು ಅಂತ ಯೋಚಿಸುವುದು ಬಿಟ್ಟು ಉಳಿಯುವುದು ಬೇಕಿಲ್ಲ ಎನ್ನುವುದು ನನ್ನ ಪ್ರಕಾರ 'ಹೇಡಿ'ಗಳ ಲಕ್ಷಣ. 'ಇತಿಹಾಸ ಪುನರಾವರ್ತಿಸುತ್ತದೆ' ಎಂಬುದನ್ನು ನಿಮ್ಮಂಥವರ ನೋಡಿಯೇ ಹೇಳಿದ್ದೇನೋ.. ಅವರು ಏನು ,ಯಾವುತರದಲ್ಲಿ ಪಳಗಿದ್ದಾರೆ ಎನ್ನುವುದು ಗೊತ್ತಿದ್ದರೂ ಆ ರೀತಿ ನಮ್ಮನ್ನು ಬಲಪಡಿಸಲು ಆಗದು ಅಂತ ಅಂದುಕೊಲ್ಳೋದರಿಂದಲೇ ಈ ರೀತಿ ಚಟುವಟಿಕೆಗಳು ಸಾಧ್ಯವಾಗುತ್ತಿರುವವು.. ಇತ್ತೀಚಿನ ನಿಮ್ಮ ಕೆಲವು ಮನೋದೌರ್ಬಲ್ಯದ ಪ್ರತಿಕ್ರಿಯೆ ಓದಿ ನಾನು ಭೇಟಿ ಆದ ನೀರ್ಕಜೆ ಇವರೇನಾ ಅಂತ ಅನುಮಾನ ಶುರು ಆಗ್ತಾ ಇದೆ..ಛೆ..

ರೀ ಶ್ರೀಕಾಂತ್ ಅವರೇ, ನೀವು ಬೇರೆ ರೀತಿ ಅರ್ಥ ಮಡ್ಕೊಂಡಿದಿರ ಅಷ್ಟೇ.. ಅ ಥರ ಹೇಳಿಲ್ಲ ನಾನು... ಯಾವುದೇ ಸಂದರ್ಭದಲ್ಲೂ ಸೋತು ಮತಾಂತರ ಅಗಲಾರೆನು ಎಂದು ಮಾತ್ರ ಹೇಳಿದ್ದು ನಾನು..

ಮಹೇಶ್ ಚೆನ್ನಾಗಿ ಪ್ರತಿಕ್ರಿಯಿಸಿದ್ದೀರಾ, ಹಿಂದೂ ಬಗ್ಗೆಗಿನ ನಿಮ್ಮ ಅಭಿಮಾನ ಮೆಚ್ಚತಕ್ಕದ್ದೆ. ಸಾಮಾನ್ಯವಾಗಿ ಹಿಂದೂಗಳ ಬೀದಿಯಲ್ಲಿ ಮುಸ್ಲಿಂ ವಾಸಿಸಿದರೆ ಅಂತಹ ಸಮಸ್ಯೆ ಉದ್ಭವವಾಗುವುದಿಲ್ಲ. ಅದೇ ಅವರ ಕೇರಿಯಲ್ಲಿ ಒಬ್ಬ ಹಿಂದೂವಿನ ಮನೆ ಇತ್ತೆಂದರೆ ಓಡಿಸುವ ತನಕ ಬಿಡುವುದಿಲ್ಲ. ನಮ್ಮಲ್ಲಿ ನೂರಾರು ಜಾತಿಗಳು ಇರುವುದರಿಂದಲೇ ಇಂತಹ ಸಮಸ್ಯೆನಾ ಅನ್ನಿಸುತ್ತದೆ.

<<ಇಷ್ಟೆಲ್ಲಾ ಸಮಸ್ಯೆ ಉದ್ಭವವಾಗುತ್ತದೆ ಎಂದಾದರೆ ಪ್ರಥಮವಾಗಿ ಈ ರೀತಿ ಮದುವೆಯಾಗುವುದೇ ತಪ್ಪಲ್ಲವೆ. ಇದರಿಂದಾಗಿ ಎರಡು ಮನೆಯವರಿಗೂ ವ್ಯಥಾ ನೋವು. ಹಾಗೇ ಪ್ರೇಮಿಗಳಿಗೂ ನೆಮ್ಮದಿ ಇರುವುದಿಲ್ಲ.>> ನಾಡಿಗರೆ, ಇದು ಒಪ್ಪತಕ್ಕ ಮಾತು. ಮುಸ್ಲಿಮರು ಭಾರತದಲ್ಲೇ ಅಲ್ಲ, ಇಡೀ ವಿಶ್ವದಲ್ಲೇ ಎಲ್ಲಿಯೂ ಜನಸ೦ಖ್ಯಾ ನಿಯ೦ತ್ರಣವನ್ನು ಒಪ್ಪಿಕೊ೦ಡಿಲ್ಲ! ಎಷ್ಟೇ ಮಕ್ಕಳಾದರೂ ಅದು ದೇವರ ದಯೆ ಅನ್ನುತ್ತಾರೆಯೇ ಹೊರತು ಮಕ್ಕಳ ಸ೦ಖ್ಯೆಯನ್ನು ನಿಯ೦ತ್ರಿಸಬೇಕು ಅನ್ನುವುದಿಲ್ಲ. ಅಲ್ಲಲ್ಲಿ ವಿದ್ಯಾವ೦ತ ಮುಸ್ಲಿಮರ ಕುಟು೦ಬಗಳಲ್ಲಿ ನಮ್ಮ೦ತೆಯೇ ಎರಡೇ ಮಕ್ಕಳಿರುವುದನ್ನು ಕಾಣಬಹುದು, ಆದರೆ ಅದು ಬಹು ಅಪರೂಪ! ಹೀಗಿರುವಾಗ ನಮ್ಮ ಯುವಕರು ಅದೇಕೆ ಮುಸ್ಲಿ೦ ಹುಡುಗಿಯರ ಹಿ೦ದೆ ಹೋಗಬೇಕು? ಈಗಾಗಲೇ ನಮ್ಮಲ್ಲಿ ಗ೦ಡು ಹೆಣ್ಣಿನ ಅನುಪಾತ ಬಹಳ ಕಡಿಮೆಯಾಗುತ್ತಿದೆ. ಇದನ್ನು ಸರಿಪಡಿಸಬೇಕೆ೦ದರೆ ನಾವೂ ಸಹ ಜನಸ೦ಖ್ಯಾ ನಿಯ೦ತ್ರಣವನ್ನು ಒಪ್ಪಿಕೊಳ್ಳದೇ ಇರುವುದೇ ಒಳ್ಳೆಯದು. ಇಲ್ಲದಿದ್ದಲ್ಲಿ ಮು೦ದೊ೦ದು ದಿನ ಮುಸ್ಲಿಮರು, ಕ್ರಿಶ್ಚಿಯನ್ನರು ಹೆಚ್ಚಾಗಿ ಹಿ೦ದೂಗಳು ಅಲ್ಪ ಸ೦ಖ್ಯಾತರಾಗಿ ದೈನೇಪಿ ಸ್ಥಿತಿಯಲ್ಲಿ ನಿಲ್ಲುವ ಪರಿಸ್ಥಿತಿ ಬರಬಹುದು. ಬರೀ ಗ೦ಡು ಮಕ್ಕಳೇ ಹೆಚ್ಚಾಗಿ ಅವರಿಗೆ ಹೆಣ್ಣು ಸಿಗದೆ ಕೊನೆಗೆ ವಿಧಿಯಿಲ್ಲದೆ ಅವರ ಧರ್ಮಕ್ಕೆ ಮತಾ೦ತರಗೊಳ್ಳುವ ಪರಿಸ್ಥಿತಿಯೂ ಬರಬಹುದು.

ಮಂಜು, ಓಟಿ ಬ್ಯಾಂಕಿಗಾಗಿ ಸಾಯುವ ಸರ್ಕಾರದ ಪ್ರೋತ್ಸಾಹ ಇದೆ. ಹಾಗಾಗಿ ಇವರನ್ನು ಕೇಳುವಂತೆಯೇ ಇಲ್ಲ. ನಮ್ಮಲ್ಲಿ ನಮ್ಮ ಮಕ್ಕಳನ್ನು ಹಾಗೆ ಮಾಡಬೇಕು ಹೀಗೆ ಮಾಡಬೇಕು ಅಂತಾ ಕನಸು ಕಾಣ್ತೀವಿ. ಆದರೆ ಇವರಲ್ಲಿ ಮಗ ಶೇಂಗಾ, ಹಣ್ಣು ಬಸ್ಟಾಂಡಿನಲ್ಲಿ ಮಾರಿಕೊಂಡು ಬಂದರೂ ತಪ್ಪಿಲ್ಲ ಅಂತಾರೆ. ಆಮೇಲೆ ಇವರ ಮಕ್ಕಳು ಅವರ ಜೀವನದ ದುಡಿಮೆಯನ್ನು ಸಣ್ಣ ವಯಸ್ಸಿನಲ್ಲೇ ದುಡಿಯಲು ಆರಂಭಿಸುವುದರಿಂದ ಅವರಿಗೆ ಎಷ್ಟ ಮಕ್ಕಳಾದರೂ ಚಿಂತೆಯಿಲ್ಲ ಎನ್ನುತ್ತಾರೆ. ಇದಲ್ಲದೆ ಅಲ್ಪ ಸಂಖ್ಯಾತರು ಎಂಬ ಕಾರಣಕ್ಕೆ ವಿವಿಧ ಸೌವಲತ್ತು ಬೇರೆ. ಇವತ್ತಿನ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಹಿಂದೂ ಅನ್ನುತ್ತಿತ್ತು. ಇದೀಗ ಬದಲಾಗಿರುವುದನ್ನು ಗಮನಿಸಿದರೆ. ಅಧಿಕಾರ ಅಂತಾ ಬಂದಾಗ ಯಾರೂ ಹೊರತಲ್ಲ ಅನ್ನಿಸುತ್ತದೆ.

ನಾಡಿಗರೆ, ಇದೆಲ್ಲಾ ಆ ಇ೦ದಿರಮ್ಮ ಇಟ್ಟು ಹೋದ ಬತ್ತಿ, ಈಗಲೂ ಉರಿಯುತ್ತಾ ಇಡೀ ದೇಶವನ್ನೇ ಸುಡುತ್ತಿದೆ. ತನ್ನ ಅಧಿಕಾರ ದಾಹಕ್ಕಾಗಿ ಒ೦ದೆಡೆ ಮುಸ್ಲಿಮರನ್ನು ಇನ್ನೊ೦ದೆಡೆ ಪರಿಶಿಷ್ಟಜಾತಿಗಳವರನ್ನು ಮುಖ್ಯವಾಹಿನಿಯಿ೦ದ ಬೇರೆ ಮಾಡಿದ ಕುಖ್ಯಾತಿ ಆಕೆಗೆ ಸೇರುತ್ತದೆ. ಇ೦ದು ತ೦ತ್ರಜ್ಞಾನ ಕ್ರಾ೦ತಿಯಾಗಿ ಎಲ್ಲೆಡೆ ಭಾರತ ಉಚ್ಛ್ರಾಯ ಮಟ್ಟಕ್ಕೇರುವ ಎಲ್ಲಾ ಸಾಧ್ಯತೆಗಳಿರುವಾಗಲೂ ಅದೇ ಓಲೈಕೆ ಮು೦ದುವರೆಸಿದರೆ ಇವರಿಗೆ ಏನನ್ನಬೇಕು? ಕಾ೦ಗ್ರೆಸ್ಸಿಗರನ್ನು ಈ ದೇಶದಿ೦ದ ಹೊರ ಹಾಕುವವರೆಗೂ ಈ ಗೋಳು ತಪ್ಪೋದಿಲ್ಲ ಅನ್ಸುತ್ತೆ.

ಒ೦ದೆಡೆ ಲವ್ ಜಿಹಾದ್,ಮತ್ತೊ೦ದೆಡೆ ಭಯೊತ್ಪಾದನೆ,ಜಮ್ಮುವಿನಲ್ಲಿ ಅಮರನಾಥ ಯತ್ರೆಗೆ ಅಡ್ಡಿ,ಅಲ್ಪಸ೦ಖ್ಯಾತರ ಓಲ್ಲೈಕೆ,ಗೊಹತ್ಯಾ ನಿಷೇಧಕ್ಕೆ ಅಡ್ಡಿ.........,ಇವೆಲ್ಲವನ್ನು ಕೇಳುತ್ತಾ ನೊಡುತ್ತಾ ಇದ್ದರೆ ಮು೦ದೊ೦ದು ದಿನ ಪ್ರತ್ಯೆಕ ದೇಶ,ಇಲ್ಲ ವಾದರೆ ಅವರೆ ಕೈಯಲ್ಲೆ ಆಡಳಿತದ ಚುಕ್ಕಾಣಿ ಕೊಡಲು ನಮ್ಮ ರಾಜಕೀಯ ಪಕ್ಷಗಳು ಸಿದ್ದವಿವೆ.....................

ನಾಡಿಗರೇ, ನೀವು ಸ೦ಪದದಕ್ಕೆ ಬ೦ದ ಮೇಲೆ ಮೊದಲ ಬಾರಿಗೆ ಒಳ್ಳೆಯ ಚರ್ಚೆಯ ವಿಷಯ ಎತ್ತಿದ್ದೀರಾ. ಧನ್ಯವಾದಗಳು.ನಾನೂ ಈ ಬಗ್ಗೆ ಲೇಖನವನ್ನು ಬರೆಯಲು ತಯಾರಿ ನಡೆಸುತ್ತಿದ್ದೆ. ನೀರ್ಕಜೆ ಹಾಗೂ ಮ೦ಜೇಶ್ವರದವರು ಹೇಳಿದ೦ತೆ, ಮ೦ಗಳೂರು ಹಾಗೂ ಕಾಸರಗೋಡು , ಅದರಲ್ಲಿಯೂ ಕಾಸರಗೋಡು ಮು೦ದೊ೦ದು ದಿನ ( ಇದೇ ರೀತಿ ಮುಸ್ಲಿಮರು ಅಲ್ಲಿ ನೆಲೆಸಲು ಮು೦ದುವರೆಸುತ್ತಿದ್ದರೆ) ಭಾರತದಲ್ಲೊ೦ದು “ ಮಿನಿ ಪಾಕಿಸ್ತಾನ“ ಆಗುವುದರಲ್ಲಿ ಯಾವುದೇ ಅಡ್ಡಿಗಳಿಲ್ಲ. ಅಲ್ಲಿಯ ಮುಸ್ಲಿ೦ ಬಾಹುಳ್ಯದ ಬಗ್ಗೆ ನನಗೆ ಅರಿವಿದೆ. ಅಲ್ಲಿ ಹಿ೦ದೂಗಳು ಅಸಹಾಯಕರು. ಏನೂ ಮಾಡಲಿಕ್ಕಾಗದ ಪರಿಸ್ಥಿತಿಯಲ್ಲಿ ಅವರು ಬದುಕುತ್ತಿದ್ದಾರೆ. ನನ್ನ ಮಾವನ ಮನೆ ಕಳತ್ತೂರು ಎ೦ಬಲ್ಲಿ ಮುಸ್ಲಿಮ್ ಬಾಹುಳ್ಯ ಎಷ್ಟಿದೆಯೆ೦ದರೆ ಮುಸ್ಲಿ೦ ರ ೨೦ ಮನೆಗಳಿಗೆ ಹಿ೦ದೂಗಳ ಒ೦ದು ಮನೆಯ ಅನುಪಾತವಿದೆ. ಇದು ಅಲ್ಲಿಯ ಭೀತಿಯ ವಾತಾವರಣವನ್ನು ಸಹ ಉ೦ಟು ಮಾಡುತ್ತಿದೆ ಎ೦ದರೆ ತಪ್ಪಲ್ಲ. ಕೇರಳ ಲವ್ ಜೆಹಾದ್ ಗೆ ಹೆಸರುವಾಸಿ ಎ೦ಬುದು ಈಗಾಗಲೇ ಗೊತ್ತಾಗಿದೆ. ಅದು ನಿಧಾನವಾಗಿ ಮ೦ಗಳೂರು, ತನ್ಮೂಲಕ ನಮ್ಮ ಕರ್ನಾಟಕಕ್ಕೂ ( ಈಗಾಗಲೇ ಕಾಲಿಟ್ಟಿದೆ)ಹಬ್ಬುವ ದಿನ ದೂರವೇನಿಲ್ಲ. ಮ೦ಜುರವರು ಹೇಳಿದ೦ತೆ ಮುಸ್ಲಿ೦ ಜನಸ೦ಖ್ಯಾ ಬೆಳವಣಿಗೆ ಹಾಗೂ ಹಿ೦ದೂಗಳು ಅನುಸರಿಸುತ್ತಿರುವ ಜನಸ೦ಖ್ಯಾ ನಿಯ೦ತ್ರಣ ನೀತಿಯೂ ಇದಕ್ಕೆ ಬಹುಮಟ್ಟಿಗೆ ಕಾರಣ. ನಾವು ಮುಸ್ಲಿ೦ ಹುಡುಗಿರನ್ನು ಮದುವೆಯಾಗಿ ಮುಸ್ಲಿ೦ ಗಳಾಗಲು ತುದಿಗಾಲಲ್ಲಿ ನಿ೦ತಿರುತ್ತೇವೆ. ಅವರು ಅವರ ಧರ್ಮವನ್ನು ಕಾಪಾಡಿಕೊಳ್ಳುವ ನೀತಿಯನ್ನು ನಾವು ನೋಡಿ ಕಲಿಯಬೇಕು! ಅವರ ಧರ್ಮ ಪ್ರಚಾರದ ರೀತಿಯು ನಮ್ಮ ಧರ್ಮ ಪ್ರಚಾರದ ರೀತಿಗಿ೦ತ ಎಷ್ಟೋ ಮೈಲಿ ದೂರದಲ್ಲಿದೆ ಹಾಗೂ ಅತಿ ವೇಗದಲ್ಲಿದೆ. ಮೂಡನ೦ಬಿಕೆಗಳಿ೦ದ ನಾವುಗಳು ಕೈಗೊ೦ಡ ಹೆಣ್ಣು ಭ್ರೂಣ ಹತ್ಯೆಯ ಸಮಸ್ಯೆಯೂ ಇದಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಎಲ್ಲರ ಧರ್ಮಗಳೂ ಬೇರೆ ಬೇರೆ ಆಚರಣೆಗಳನ್ನು ಹೊ೦ದಿದೆ. ಜೀವನಕ್ಕೆ ಧರ್ಮ ಬೇಕೇ ವಿನ: ಧರ್ಮವೇ ಜೀವನವಾಗಬಾರದು. ನಮ್ಮಲ್ಲಿನ ಆ೦ತರಿಕ ಭಿನ್ನಮತಗಳು ಅವರ ಧರ್ಮ ಪ್ರಚಾರದ ವೇಗಕ್ಕೆ ಸಹಕಾರಿಯಾಗುತ್ತಿದೆ ಎ೦ಬುದು ಸುಳ್ಳಲ್ಲ. ಹಿ೦ದೂಗಳು ಹತ್ತು ಜನ ಹತ್ತು ಕಡೆ! ಏನಾದರೂ ಆದರೆ ಅವನಿಗ್ಗಲ್ಲವೇ? ನಮಗೇನು ಬಿಡು! ಎ೦ಬ ಮನೋಭಾವ ಅವರಲ್ಲಿನ ಒಗ್ಗಟ್ಟು ಭಾವನೆಯನ್ನು ಹೆಚ್ಚಿಸುತ್ತಿದೆ. ಕಲಿಕಾರ೦ಭದಲ್ಲಿ ಮಕ್ಕಳಿಗೆ ಅವರು ಅವರ ಧರ್ಮದ ಬಗ್ಗೆ ಮಾತ್ರವೇ ತಿಳುವಳಿಕೆ ನೀಡುತ್ತಾರೆ. ಲವ್ ಜೆಹಾದ್ ಅವರ ಧರ್ಮ ಪ್ರಚಾರದ ಮತ್ತೊ೦ದು ರೂಪ. ಮಾನಸಿಕವಾಗಿ ಆಕಷಿ೯ಸಿ, ನಮ್ಮನ್ನು ಅವರ೦ತೆ ಮಾಡಿಕೊಳ್ಳುವುದು! ನಮ್ಮಲ್ಲಿ ಆ ಥರ ಏನಾದರೂ ಇದೆಯಾ? ಅತ್ಯ೦ತ ಆಳವಾದ ಚರ್ಚೆ ಈ ವಿಷಯದ ಬಗ್ಗೆ ನಡೆಯುವುದೊಳ್ಳೆಯದು. ಹಾದಿ ತಪ್ಪದಿರಲಿ. ನನ್ನ ಅಭಿಮತ ತಪ್ಪು ಎ೦ದಾದಲ್ಲಿ ಬಲ್ಲವರು ತಿಳಿಸಲಿ.

ನಾವಡರೆ ಕಾಸರುಗೋಡಿನ ಬಗ್ಗೆ ನನಗೆ ಅಷ್ಟಾಗಿ ತಿಳಿದಿಲ್ಲ. ಆದರೆ ಮಂಗಳೂರು ಭಾಗದ ಹಿಂದೂ ಸಂಘಟನೆಗಳಿಗೆ ಪ್ರೋತ್ಸಾಹಿಸುವಂತಹ ಕಾರ್ಯವಾಗಬೇಕು ಅನ್ನುತ್ತೇನೆ. ಆ ನಿಟ್ಟಿನಲ್ಲಿ ಸರ್ಕಾರ ಪರೋಕ್ಷವಾಗಿ ಬೆಂಬಲಿಸಿದೆ ಎಂದರೆ ತಪ್ಪಾಗಲಾರದು. ರಾಮಸೇನೆ ಪಬ್ ದಾಳಿ ನಡೆಸಿದಾಗ ಇದನ್ನು ದೊಡ್ಡ ತಪ್ಪು ಎಂದು ಎಲ್ಲರೂ ವಿರೋಧಿಸಲು ಆರಂಭಿಸಿದ್ದರೆ ಸಂಘಟನೆಗೆ ಎಲ್ಲೋ ಒಂದು ಕಡೆ ಹಿನ್ನಡೆಯಾಗುತ್ತಿತ್ತು. ನಡೆದಾಡುವನು ಎಡವಲೇಬೇಕು ಎನ್ನುವಂತೆ ಇದೊಂದು ತಪ್ಪಿರಬಹುದು. ಇವತ್ತು ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳು ಶಕ್ತಿಯುತವಾಗಿ ಇರದೇ ಹೋಗಿದ್ದರೆ ಅಲ್ಲಿ ಮತ್ತೊಂದು ಅಕ್ಬರ್ ಸಾಮ್ರಾಜ್ಯ ನಿರ್ಮಾಣವಾಗುತ್ತಿತ್ತು. ಅಲ್ಲಿ ನಡೆದ ಭಜರಂಗದಳದ ರ್ಯಾಲಿ ನೋಡಬೇಕಾಗಿತ್ತು. ತುಂಬಾ ಚೆನ್ನಾಗಿ ನಡೆಯಿತು. ಇದು ಸಾಮಾನ್ಯವಾಗಿ ಇತರೆ ಧರ್ಮೀಯರಲ್ಲಿ ಆತಂಕ ಹುಟ್ಟಿಸುವುದು ಸಹಜ. ಹಾಗಾಗಿ ಎಲ್ಲಿ ಅವರ ಪ್ರಾಬಲ್ಯವಿದೆಯೋ ಅಂತಹ ಭಾಗದಲ್ಲಿ ಹಿಂದೂ ಸಂಘಟನೆಗಳಿಗೆ ಒತ್ತು ನೀಡುವಂತಹ ಕಾರ್ಯವಾಗಬೇಕು. ಅವರಲ್ಲಿ ಒಂದು ಮದರಸಾ ನಿರ್ಮಿಸಿದರೆ ಹೇಗೆ ಎಲ್ಲೆಲ್ಲಿಂದ ಹಣ ಬಂದು ಸೇರುತ್ತದೋ ಹಾಗೇ ನಾವು ಕೂಡ ಆರ್ಥಿಕ ಸಹಾಯಕ್ಕೆ ಮುಂದಾದರೆ ಹಿಂದು ಬಲವರ್ಧನೆ ನಿಶ್ಚಿತ.

ಹಿಂದು ಸಂಘಟನೆಗಳು ಅಖಂಡ ಭಾರತದ ಬಗ್ಗೆ ಕಾಣುವ ಕನಸುಗಳನ್ನು ಮೊದಲು ಬಿಡಬೇಕು ಎಂದು ನನ್ನ ಅನಿಸಿಕೆ. ಹಿಂದುಗಳನ್ನು ಕಾನೂನಿನ ಮೂಲಕ ರಕ್ಷಿಸಬೇಕೆಂದಿದ್ದರೆ ಪ್ರತ್ಯೇಕ ರಾಷ್ಟ್ರವೊಂದೆ ದಾರಿ. ಇಲ್ಲದಿದ್ದರೆ ವೋಟಿಗಾಗಿ ಅಲ್ಪಸಂಖ್ಯಾತರನ್ನು ಓಲೈಸುವುದು ನಡೆದೇ ಇರುತ್ತದೆ. ಇದರ ಬಗ್ಗೆ ಯಾರು ಯೋಚಿಸದಿರುವುದು ನಮ್ಮ ದುರದೃಷ್ಟ. ನನ್ನ ಅನಿಸಿಕೆ ಬಹಳ ಜನರಿಗೆ ಹಿಡಿಸದೆ ಇರಬಹುದು ಆದರೆ ಪ್ರಾಕ್ಟಿಕಲ್ ಅದ ಬೇರೆ ಪರಿಹಾರ ನನಗಂತೂ ಕಾಣಿಸುತ್ತಿಲ್ಲ.

ಅಲ್ಲಿ ಮತ್ತೊಂದು ಅಕ್ಬರ್ ಸಾಮ್ರಾಜ್ಯ ನಿರ್ಮಾಣವಾಗುತ್ತಿತ್ತು.>> ಅಕ್ಬರ್ ಸೆಕ್ಯುಲರ್ ಅಲ್ವ ಸಾರ್? ಪಬ್ ದಾಳಿ ಸಮಯದಲ್ಲಿ ಸಂಪದದಲ್ಲಿ ಹಿಂದೂ ವಿರೋಧಿಗಳ ದಾಳಿ ಜೋರಾಗಿತ್ತು. ಹುಡ್ಕಿ ಸಿಗ್ಬಹುದು.