ಬಕವೈರಿ*ಯಂತೆ ಧ್ಯಾನವ ಮಾಡಲರಿಯೆ!

0

"ಕರುಣಿಸೋ ರಂಗ" ಕೃತಿಯ ಈ ಸಾಲನ್ನು ಹರಿದಾಸ  ಸಂಪುಟದಿಂದ  (ಕೃಪೆ  - ಶ್ರೀತ್ರಿ ) ಯಥಾವತ್ತಾಗಿ  ಆರಿಸಿದ್ದೇನೆ.
ನನಗೆ  ಬಂದ  ಸಂಶಯ  ಅವರಿಗೂ  ಬಂದಂತಿದೆ, ಹಾಗೆ ಬಕವೈರಿಗೊಂದು ನಕ್ಷತ್ರ ಸೇರಿಸಿದ್ದಾರೆ.
ಭೀಮಸೇನ ಜೋಷಿಯವರು ಹಾಡಿರುವಲ್ಲಿಯೂ ಬಕವೈರಿಯೆಂದೇ ಇದೆ.

ಇದರ ಸರಿಯಾದ ರೂಪವಂ ಬಲ್ಲಿಹರು ತಿಳುಹುವಿರೆ?

ಸ್ವಲ್ಪ ಹಿನ್ನೆಲೆ:
ಬಕವೈರಿ = ಬಕಾಸುರನನ್ನು ಕೊಂದ ಕೃಷ್ಣ. ಬಕವೈರಿಯಂತೆ ಧ್ಯಾನ ಎನ್ನುವುದು ಇಲ್ಲಿ ಸಂಗತವಲ್ಲ. "ಬಕಪಕ್ಷಿಯಂತೆ" ಎಂದಿರಬಹುದೋ?
ಹಾಡಿನ ಪೂರ್ತಿ ಸಾಹಿತ್ಯ ಇಲ್ಲಿದೆ -

http://haridasa.sampada.net/%E0%B2%A6%E0%B2%BE%E0%B2%B8%E0%B2%B8%E0%B2%B...೧೨

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸುರವರೆ, ಇರಬಹುದು. ಆದರೂ ಯಾಕೋ ಅಷ್ಟು ಸಮಂಜಸ ಪಾಠ ಅಂತ ಅನಿಸುತ್ತಿಲ್ಲ. ನನ್ನಿ. ಶ್ರೀನಿವಾಸರೆ, ಕೃಷ್ಣನೂ ಬಕನನ್ನು ಕೊಂದಿದ್ದಾನೆ. ಭೀಮನಿಗಿಂತ ಮೊದಲು!! ಕೊಕ್ಕರೆಗಳ ಕಾಟ ತುಂಬಾ ಇತ್ತೇನೋ ಆ ಕಾಲದಲ್ಲಿ :) http://www.kamat.com... http://www.krsnabook...

ಬಕಪಕ್ಷಿಯಂತೆ ಅನ್ನುವುದೇ ಸೂಕ್ತ ಅಂತನಿಸುತ್ತದೆ. ಏಕೆಂದರೆ ಧ್ಯಾನದ ಮಾತು ಬಂದಾಗೆಲ್ಲಾ ಬಕಧ್ಯಾನ ಅನ್ನುವುದು ಗೊತ್ತಿರುವ ವಿಚಾರವೇ ಆಗಿದೆಯಲ್ವೇ? - ಆಸು ಹೆಗ್ಡೆ

ಬಕವೈರಿಯಾದ ಭೀಮನಂತೆ ಧ್ಯಾನಿಸಲಾರೆ ಎಂಬರ್ಥದಲ್ಲಿ ಭೀಮನ ಉಲ್ಲೇಖ ಸರಿಯಾದೀತು ಮಾತ್ರವಲ್ಲ ಸ್ವಲ್ಪ ವಿಶೇಷವಾದ ಪ್ರಯೋಗವೂ ಹೌದು. ಬಕದ ಧ್ಯಾನವು ಸ್ವಾರ್ಥದ್ದು, ಬಕವೈರಿಯದ್ದೋ ಉದಾತ್ತವಾದ್ದು - ಎಂಬ ವ್ಯಂಗ್ಯಾರ್ಥ(=ವ್ಯಂಜನೆಗೊಂಡ ಅರ್ಥ) ಇದೆ ಎಂದುಕೊಳ್ಳಬಹುದು ( ಪುರಂದರದಾಸರು ಬಂದ ಮಾಧ್ವ ಪರಂಪರೆಯಲ್ಲಿ ಭೀಮನಿಗೆ ಪರಮಭಕ್ತನ ಸ್ಥಾನ ಇದೆ). ಆದರೆ ಇಂಥ ಬಳಕೆ ದಾಸರು ಬೇರೆಡೆ ಮಾಡಿದ್ದು ತಿಳಿದುಬಂದಿಲ್ಲ. ಯಾಕೋ ಆ ಇಡೀ ಸಾಲಿನ ಬಗ್ಗೆಯೇ ಸಂಶಯವಿದೆ - ಬೇರೆ ಉದಾಹರಣೆಗಳನ್ನೆಲ್ಲ ಪುರಾಣಗಳಿಂದ ಕೊಟ್ಟು ಧ್ಯಾನಕ್ಕೆ ಮಾತ್ರ ಬಕಪಕ್ಷಿಯನ್ನು ಎಳೆತಂದರೆ?