ಕನ್ನಡದಲ್ಲಿ ಗ್ರಾಹಕ ಸೇವೆ - Columbia Asia ಆಸ್ಪತ್ರೆಯಲ್ಲಿ

4.6
ಕೊಲಂಬಿಯಾ ಏಶಿಯಾ (ಹೆಬ್ಬಾಳ) ಆಸ್ಪತ್ರೆಗೆ ಹೋದಾಗ ಅಲ್ಲಿದ್ದವರು ನಾನು ಎಷ್ಟು ಕನ್ನಡದಲ್ಲಿ ಮಾತಾಡುತ್ತಿದ್ದರೂ ಆಂಗ್ಲದಲ್ಲೇ ಉತ್ತರ ನೀಡುತ್ತಿದ್ದರು. ನನ್ನ ತಾಯಿಯೊಡನೆ ಮಾತನಾಡುವಾಗ ಮಾತ್ರ ಕನ್ನಡ ಶುರು ಮಾಡಿದರು! ನನಗೆ ಆಶ್ಚರ್ಯವಾಗಿ ಕೇಳಿಯೇ ಬಿಟ್ಟೆ, "ಅವರ ಜೊತೆ ಅಷ್ಟು ಚೆನ್ನಾಗಿ ಕನ್ನಡ ಮಾತಾಡಿದವರು ನನ್ನೊಡನೆ ಏಕೆ ಆಂಗ್ಲ?" ಎಂದಾಗ ಅವರ ಬಳಿ ಉತ್ತರ ಇರಲಿಲ್ಲ!

ಅವರಿಂದಲೇ ಒಂದು feedback form ಇಸ್ಕೊಂಡು, ಅದರಲ್ಲಿ ಹೀಗೆ ಬರೆದಿದ್ದೆ:
"Some staff members do not respond in Kannada" ಎಂದು.

ಮುಂದಿನ ವಾರವೇ ನನಗೆ ದೂರವಾಣಿ ಕರೆ ಬಂತು ಆಸ್ಪತ್ರೆ ಇಂದ, ಮತ್ತು ಆಶ್ವಾಸನೆ ಕೊಟ್ಟರು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಾರೆಂದು. ಇದಾದ ಎರಡು ತಿಂಗಳ ನಂತರ ಅಲ್ಲಿಗೆ ಹೋದಾಗ ಹೆಚ್ಚು ಸಿಬ್ಬಂದಿ ವರ್ಗದವರು ಕನ್ನಡ ಮಾತನಾದುತ್ತಿದ್ದದು ಕಂಡು ಖುಷಿಯಾಯಿತು. ಕೂಡಲೇ ಮತ್ತೊಂದು feedback form ಇಸ್ಕೊಂಡು positive feedback ಬರೆದು ಕೊಟ್ಟೆ, ಮತ್ತೆ ನನಗೆ ಕರೆ ಮಾಡಿ ಅಭಿನಂದನೆಗಳು ತಿಳಿಸಿದರು.

ಏನೂ ಮಾಡದೆ ಸುಮ್ಮನೆ ಬೈಕೊಂಡು ಬರುವ ಬದಲು ನಿಮ್ಮ ಕೈಲಾದದ್ದು ಮಾಡಿ, ಅದರಿಂದ ಕಿಂಚಿತ್ತಾದರೂ ಉಪಯೋಗ ಆಗದೇ ಇರದು. :)
Forums: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.