ರಾಜ್ಯದ ಪ್ರಮುಖ ರೈಲು ನಿಲ್ದಾಣಗಳ ನಾಮಕರಣ

0

ಈ ಕೆಳಗೆ ರಾಜ್ಯದ ಪ್ರಮುಖ ರೈಲು ನಿಲ್ದಾಣಗಳ ನಾಮಕರಣ ಪಟ್ಟಿ ತಯಾರಿಸಲಾಗುತ್ತಿದೆ. ಆಯಾ ಸ್ಥಳಗಳ ಪ್ರಮುಖ ಗಣ್ಯ ವ್ಯಕ್ತಿಗಳು, ಸ್ವತಂತ್ರ ಹೋರಾಟಗಾರರು,ಕವಿಗಳು,ಸಾಹಿತಿಗಳು ಹೆಸರನ್ನು ಆಧಾರವಾಗಿಸಿ ಇದನ್ನು ತಯಾರಿಸಿ ಲಾಗುತ್ತಿದೆ. ಇದನ್ನು ನಾನು ರಾಜ್ಯದ ಎಲ್ಲ ಪತ್ರಿಕೆಗಳಿಗೆ ಕಳಿಸಲು ಇಚ್ಚಿಸಿರುವೆ.ಕೆಲವು ಸ್ಥಳಗಳ ಮಾಹಿತಿ ಗೊತ್ತಿರುವವರು ಹೆಸರನ್ನು ತಾವು ಸೂಚಿಸಿ, ದಯವಿಟ್ಟು ತಮ್ಮ ಕಾಣಿಕೆ ನೀಡಿ.
 
ಕರ್ನಾಟಕ ರಾಜ್ಯದ ಪ್ರಮುಖ  ರೈಲು ನಿಲ್ದಾಣಗಳ ನಾಮಕರಣ ಪಟ್ಟಿ:
 ಬೆಂಗಳೂರು- ನಾಡಪ್ರಭು ಕೆಂಪೇಗೌಡ ,ಡಾ. ರಾಜಕುಮಾರ
ವಿಜಾಪುರ - ಜಗಜ್ಯೋತಿ ಬಸವೇಶ್ವರ  (ಬಸವೇಶ್ವರರು ಹುಟ್ಟಿದ ಸ್ಥಳ ವಿಜಾಪುರ ಜಿಲ್ಲೆಯಲ್ಲಿ ಅದಕ್ಕೆ)
ಬಳ್ಳಾರಿ - ವಿಜಯನಗರ
ಬೆಳಗಾವಿ -  ವೀರ ಸಂಗೊಳ್ಳಿ ರಾಯಣ್ಣ  ಅಥವಾ ಬೆಳವಾಡಿ ಮಲ್ಲಮ್ಮ  
ಧಾರವಾಡ - ಕನ್ನಡ ಕುಲ ತಿಲಕ ವರಕವಿ ಬೇಂದ್ರೆ
ಹುಬ್ಬಳ್ಳಿ -  ವೀರ ರಾಣಿ ಕಿತ್ತೂರು ಚೆನ್ನಮ್ಮ  ಅಥವಾ ಗಾನ ಕೋಗಿಲೆ ಗಂಗೂಬಾಯಿ ಹಾನಗಲ್
ಹೊಸಪೇಟೆ - ಶ್ರೀ ಕೃಷ್ಣ ದೇವರಾಯ
ಕಲ್ಬುರ್ಗಿ- 
ಬಾಗಲಕೋಟೆ -  ಕವಿ ಚಕ್ರವರ್ತಿ ರನ್ನ, ಬಿ.ಡಿ.ಜತ್ತಿ  
ಬೀದರ್ -
ರಾಯಚೂರು -
ಮಂಗಳೂರು -  ಕಯ್ಯಾರ ಕಿಞ್ಞಣ್ಣ ರೈ,ಎಂ.ಗೋವಿಂದ ಪೈ,ಪಂಜೆ ಮಂಗೇಶ್ ರಾಯರು
ಉಡುಪಿ -   ಕಡಲತೀರದ ಭಾರ್ಗವ ಶ್ರೀ ಶಿವರಾಂ ಕಾರಂತ
ಕೋಲಾರ್ - ಮಾಸ್ತಿ ವೆಂಕಟೇಶ್ ಅಯ್ಯಂಗಾರ 
ಮೈಸೂರು - ಜಯಚಾಮರಾಜ ಒಡೆಯರ್
ದಾವಣಗೆರೆ -
ಚಿತ್ರದುರ್ಗ - ವೀರ ವನಿತೆ ಒನಕೆ ಓಬವ್ವ
ಚಿಕ್ಕಮಗಳೂರು -
ಶಿವಮೊಗ್ಗ - ರಾಷ್ಟ್ರಕವಿ ಕುವೆಂಪು ,ಅಕ್ಕ ಮಹಾದೇವಿ
ತುಮಕೂರು - ಶ್ರೀ ಸಿದ್ಧಗಂಗ 
ಚಾಮರಾಜನಗರ -
ಹಾಸನ - ಹೊಯ್ಸಳ ,ಚನ್ನಕೇಶವ
ಮಂಡ್ಯ -
ಕಾರವಾರ -
ರಾಮನಗರ -
ಯಾದಗಿರಿ -
ಗದಗ -  ಗಾನಯೋಗಿ  ಪಂಡಿತ ಪಂಚಾಕ್ಷರಿ ಗವಾಯಿ , ಪಂಡಿತ ಭೀಮಸೇನ ಜೋಷಿ ,ಕುಮಾರವ್ಯಾಸ
ಮಡಿಕೇರಿ - ಫೀಲ್ದ ಮಾರ್ಷಲ್ ಕಾರ್ಯಪ್ಪ
ಹಾವೇರಿ - ಕನಕದಾಸ ಅಥವಾ ಸರ್ವಜ್ಞ ಅಥವಾ ಮೈಲಾರ ಮಹಾದೇವಪ್ಪ
ಕೊಪ್ಪಳ -
ಚಿಕ್ಕಬಳ್ಳಾಪುರ - ಸರ್. ಎಂ.ವಿಶ್ವೇಶ್ವರಯ್ಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆಂಗಳೂರು- ನಾಡಪ್ರಭು ಕೆಂಪೇಗೌಡ ,ಡಾ. ರಾಜಕುಮಾರ - ಬೇಡ ಡಿವಿಜಿ ಇರಲಿ. ಕೆಂಪೇಗೌಡ ನಾಡಪ್ರಭು ಹೆಂಗೆ? ಬೆಳಗಾವಿ - ವೀರ ಸಂಗೊಳ್ಳಿ ರಾಯಣ್ಣ ಅಥವಾ ಬೆಳವಾಡಿ ಮಲ್ಲಮ್ಮ ಬೆಳವಾಡಿ ಅಲ್ಲ, ಬೆಳವಡಿ ಹುಬ್ಬಳ್ಳಿ - ಗಾನ ಕೋಗಿಲೆ ಗಂಗೂಬಾಯಿ ಹಾನಗಲ್ , ಚೆನ್ನಮ್ಮ ಬೆಳಗಾವಿ ಕಲ್ಬುರ್ಗಿ- ವಿಕೃ ಗೋಕಾಕ. ದಾವಣಗೆರೆ - ಶ್ರೀಹರ್ಷ ಸಾಲಿಮಠ ;) ಚಿಕ್ಕಮಗಳೂರು - ದತ್ತಾತ್ರೇಯ. ಉಡುಪಿ- ಪಾವೆಂ ಆಚಾರ್ಯ. ಕೊಪ್ಪಳ - ಪಂ. ಗಳಗನಾಥರು. ಮೈಸೂರು - ಟಿ ಎಸ್ ವೆಂಕಣ್ಣಯ್ಯ. ಹಾವೇರಿ - ಸರ್ವಜ್ಞ.

ರೈಲ್ವೇ ನಿಲ್ದಾಗಳು ಊರಿನ ಹೆಸರನ್ನೇ ಹೊಂದಿದ್ದರೆ ಏನಾದೂ ತೊಂದರೆ ಇದೆಯೇ? ಅಲ್ಲದೆ, ರೈಲ್ವೇ ನಿಲ್ದಾಣಗಳ ಹೆಸರನ್ನು, ಊರಿನ ಹೆಸರಿನ ಜೊತೆಗಲ್ಲದೆ, ಬೇರೆ ರೀತಿ ಯಾರಾದರೂ ಹೇಳುವುದಿದೆಯೇ? ಕೆಂಪೇಗೌಡ ಬಸ್ ನಿಲ್ದಾಣವನ್ನು ಎಲ್ಲರೂ ಮೆಜಿಸ್ಟಿಕ್ ಅಂತಾನೇ ಕರೆಯುತ್ತಿರುವುದು. ಕರೆಯುವುದಿಲ್ಲ ಎಂದಾದ ಮೇಲೆ ಯಾವ ಗೌಡನ ಹೆಸರಿದ್ದರೇನು? ಅಲ್ಲದೇ ಯಾರು ಯಾರ ಹೆಸರು ಏಕಿರಬೇಕು? - ಆಸು ಹೆಗ್ಡೆ

ಹೆಗ್ಡೆ ಸಾಹೇಬ್ರೆ- ನಮ್ಮ ನಾಡು ನುಡಿ ಗೆ ಶ್ರೀಮಂತ ಕೊಡುಗೆ ನೀಡಿ ನಾಡಿನ ಕೀರ್ತಿ ಎತ್ತರಕ್ಕೆ ತೆಗೆದು ಕೊಂಡ ಹೋದ ಮಹನೀಯರ ಹೆಸರು ಇಂದಿನ ಪೀಳಿಗೆ ಜನಕ್ಕೆ ನೆನಪಿರ ಬೇಕಿಲ್ಲವೇ? ಭಾರತದ ಮೊದಲ ಸ್ವಾತಂತ್ರ ಸಂಗ್ರಾಮಕ್ಕೂ ಮುಂಚೆ ಬ್ರಿಟಿಷರ ವಿರುದ್ಧ ಹೋರಾಡಿದ ಚೆನ್ನಮ್ಮ ಗೆ ಭಾರತೀಯ ಇತಿಹಾಸದಲ್ಲಿ ಸ್ಥಾನವಿಲ್ಲ ಆದರೆ ಝಾನ್ಸಿ ರಾಣಿ ಮಾತ್ರ ದೇಶದ ವೀರ ಮಹಿಳೆ ಎಂದು ಎಲ್ಲ ಶಾಲಾ ಪುಸ್ತಕಗಳಲ್ಲಿ ದೊಡ್ಡದಾಗಿ ಹೇಳುತ್ತಾರೆ.ಕನಕದಾಸ,ಪುರಂದರ್ ದಾಸರ ಸಾಧನೆ ತಿರುವಳ್ಳುವರ,ಕಬೀರ್,ತುಳಸಿ ದಸರ ಮುಂದೆ ಅಡಗಿ ಹೋಗಿದೆಯೇ? ಸಂಗೊಳ್ಳಿ ರಾಯಣ್ಣನೆನು ಭಗತ ಸಿಂಗ್ ಗಿಂತ ಕಮ್ಮಿಯೇ? ಇಂದಿನ ಕ್ಷುಲ್ಲಕ ರಾಜಕೀಯ ದಿಂದ ನಮ್ಮ ಇತಿಹಾಸ ನಮ್ಮ ಮಕ್ಕಳು,ಮೊಮ್ಮಕ್ಕಳು ಇವರಿಗೆ ತಿಳಿಯದಾಗಿದೆ.

ಎಲ್ಲರೂ (ಬಹಳಷ್ಟು ಜನ) ಬಸ್ ನಿಲ್ದಾಣ, ರೈಲು ನಿಲ್ದಾಣ ಇತ್ಯಾದಿಗಳಿಗೆ ಮಹಾಪುರುಷರ ಹೆಸರಿಡುವ ಸಲಹೆ ಕೊಡ್ತಾರೆ ಆದರೆ ಆ ಕೆಲಸವನ್ನ ತಾವೇ ತಮ್ಮ ಮನೆಯಲ್ಲಿ ಮಾಡುವುದಿಲ್ಲ ಉದಾ: ಕೆಂಪೇಗೌಡ ನಿಲ್ದಾಣ, ಇಲ್ಲಿವರೆಗೂ ಯಾವನೊಬ್ಬನೂ ತನ್ನ ಮಗನಿಗೆ ಈ ಹೆಸರು ಇಟ್ಟಿಲ್ಲ್ಲ... ಮಹಾತ್ಮಾ ಗಾಂಧಿ ರಸ್ತೆ ಅಂತ ಹೆಸರಿಟ್ಟಮಾತ್ರಕ್ಕೆ ಅದೇನು ಉದ್ಧಾರ ಆಗಿಲ್ಲ ಅಲ್ಲವ? ಹೆಸರು ಇಡಲೇಬೇಕು ಅಂತಿದ್ದರೆ ಇಡಬಹುದು.. ಇದರಿಂದ ಏನು ವ್ಯತ್ಯಾಸ ಆಗುವುದಿಲ್ಲ ಅಂತ ನನ್ನ ಅನಿಸಿಕೆ :-)

ಸಾಧ್ಯವಿಲ್ಲ ನಾವಡರೇ.... ಹೊಱನಾಡಿಗೆ ರೈಲುನಿಲ್ದಾಣ ಬನ್ದಾದಮೇಲೆ ನಿಮ್ಮ ಹೆಸರನ್ನು ಪರಿಗಣಿಸುತ್ತೇವೆ..ಆಗದೇ ? ಏನು ಮಾಡೋಣ, ಎಲ್ಲರೂ ಕ್ಯೂ ನಿನ್ತಿದ್ದಾರೆ! ;)

ಮಂಜು ಅವರೇ- ನಮ್ಮ ಇತಿಹಾಸ, ನಮ್ಮ ಸಂಸ್ಕೃತಿಯನ್ನು ಬೆಳೆಸಲು ರಾಜ್ಯದ ಕಲೆ,ಸಂಸ್ಕೃತಿ ಗೆ ಕೊಡುಗೆ ನೀಡಿದ ಮಹನೀಯರು ಹೆಸರಿಟ್ಟರೆ ಚೆಂದ. ನಮ್ಮ ಮುಂದಿನ ಪೀಳಿಗೆ ಜನಕ್ಕೆ ಇದೆಲ್ಲ ಗೊತ್ತಾಗುವುದು ಹೇಗೆ? ಸ್ವಲ್ಪ ಯೋಚಿಸಿ...ನಾನು ಕೆಲಸವಿಲ್ಲದ ಬದಗಿಯೇ ಅಂದುಕೊಳ್ಳಿ ....... ನಿಮ್ಮದು ಆತುರದ ಪ್ರತಿಕ್ರಿಯೆ.

ಬೆಂಗಳೂರು- ಬೆಂಗಳೂರು ಜವಾಹರಲಾಲ್ ನೆಹರು ರೈಲು ನಿಲ್ದಾಣ ವಿಜಾಪುರ - ಜಗಜ್ಯೋತಿ ಮಹಾತ್ಮ ಗಾಂಧಿ ರೈಲು ನಿಲ್ದಾಣ ಬಳ್ಳಾರಿ - ಇಂದಿರಾಗಾಂಧಿ ಬೆಳಗಾವಿ - ವೀರ ರಾಜೀವ್ ಗಾಂಧಿ ಧಾರವಾಡ - ಕನ್ನಡ ಕುಲ ರಾಬರ್ಟ್ ವಡೇರಾ ಗಾಂಧಿ ಹುಬ್ಬಳ್ಳಿ - ವೀರ ರಾಣಿ ಕಿತ್ತೂರು ಸೋನಿಯಾಗಾಂಧಿ ಹೊಸಪೇಟೆ - ಬಿಯಾಂಕ ಗ್ಯಾಂಡಿ ಕಲ್ಬುರ್ಗಿ- ರೌಲ್ ಗ್ಯಾಂಡಿ ಬಾಗಲಕೋಟೆ - ಕವಿ ಚಕ್ರವರ್ತಿ ಜವಾಹರ ಲಾಲ್ ನೆಹರು ಬೀದರ್ - (ರಾಬರ್ಟ್ ಮತ್ತು ಬಿಯಾಂಕ ರ ಮಗುವಿನ ಹೆಸರಿಗೆ ಮೀಸಲಿರಿಸಲಾಗಿದೆ) (ಹೆಸರು ಗೊತ್ತಿದ್ರೆ ತಿಳಿಸಿ) ರಾಯಚೂರು - ರೌಲ್ ಗ್ಯಾಂಡಿ ಪ್ರಿಯತಮೆಯ ಹೆಸರಿಗೆ ಕಾಯಲಾಗುತ್ತಿದೆ. ಮಂಗಳೂರು - ಸಂಜೀವ್ ಗ್ಯಾಂಡಿ ಉಡುಪಿ - ಇಲ್ಲಿಂದ ಮುಂದಿನದಕ್ಕೆ ಮೇಲಿನ ಹೆಸರುಗಳು ಮರುಕಳಿಸಲಿ........... ಕೋಲಾರ್ - ಮೈಸೂರು - ದಾವಣಗೆರೆ - ಚಿತ್ರದುರ್ಗ - ಚಿಕ್ಕಮಗಳೂರು - ಶಿವಮೊಗ್ಗ - ತುಮಕೂರು - ಚಾಮರಾಜನಗರ - ಹಾಸನ - ಮಂಡ್ಯ - ಕಾರವಾರ - ರಾಮನಗರ - ಯಾದಗಿರಿ - ಗದಗ - ಮಡಿಕೇರಿ - ಹಾವೇರಿ - ಕೊಪ್ಪಳ - ಚಿಕ್ಕಬಳ್ಳಾಪುರ -