ವಿಧಾನಸೌಧದೆದ್ರಿಗೆ ಮತ್ತೊಂದು ಪ್ರತಿಮೆಯಂತೆ !!!

0
ಈಗಾಗ್ಲೇ, ವಿಧಾನಸೌಧವೇ ಕಾಣಿಸದಷ್ಟು ಪ್ರತಿಮೆಗಳು ಅದನ್ನು ಮುತ್ತಿಕೊಂಡಿರುವಾಗ, ಇನ್ನೊಂದು ಹೊಸ ಪ್ರತಿಮೆ ಸ್ಥಾಪಿಸ್ತಾರಂತೆ. ನಮ್ಮ ಕನ್ನಡಿಗರ ಪ್ರತಿಮೆಗಳಿಗೆ ವಿಧಾನಸೌಧದ ಹಿಂದೆ ಜಾಗ, ಕನ್ನಡೇತರ ನಾಯಕರುಗಳ ಮೂರ್ತಿಗಳಿಗೆ ವಿಧಾನ ಸೌಧದೆದುರಿನ ಜಾಗ!...ಈ ಸಾಲಿಗೆ ಹೊಸ ಸೇರ್ಪಡೆ 'ಬಾಬು ಜಗಜೀವನ ರಾಂ'. ಆಗ್ಲೇ ಕನ್ನಡನಾಡಿನ ರಾಜಧಾನಿಯಲ್ಲಿ ಕನ್ನಡದ ಸ್ಥಿತಿ ಪಾತಾಳ ಮುಟ್ಟಿರುವಾಗ ಇದು ಬೇಕಿತ್ತಾ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ರಾಜಕಾರಣಿಗಳಿಗೆ ಮಾಡುವುದಕ್ಕೆ ಬರೋದು ಇಷ್ಟೆ... ಪ್ರತಿಮೆ ಅನಾವರಣ ಮಾಡುವುದು, ದೊಡ್ಡ ದೊಡ್ಡ ಭಾಷಣ ಮಾಡೋದು, ಜಾತಿಗಳ ಮಧ್ಯೆ, ವರ್ಗಗಳ ಮಧ್ಯೆ ಜಗಳ ತಂದಿಡುವುದು! ಈಗಲೇ ನೋಡಿ, 'ನಾನು ಮುಸ್ಲಿಮ್, ನೀನು ಹಿಂದು' ಎಂದು ನಾವು ದಿನನಿತ್ಯದ ಜೀವನದಲ್ಲಿ ಮಾತನಾಡಿಕೊಳ್ತೇವ್ಯೆ? 'ಅಹಿಂದ, ಪರಿಶಿಷ್ಟ ಜಾತಿಗೆ ಸೇರಿದವನು ನೀನು/ನಾನು' ಅಂತ ಮಾತನಾಡಿಕೊಳ್ತೇವ್ಯೆ? ಇದನ್ನೆಲ್ಲಾ ಹುಟ್ಟುಹಾಕುವವರು ಅಧಿಕಾರದಾಹಿ ಕೆಲವರು ರಾಜಕಾರಣಿಗಳು... ಬ್ರಿಟಿಷರು ಆಗ ಇದೇ ಫಾರ್ಮುಲಾ ಉಪಯೋಗಿಸಿ ಭಾರತೀಯರನ್ನು ಆಳಿದರು, ಈಗ ಭಾರತೀಯರೇ ಆ ಫಾರ್ಮುಲಾ ಉಪಯೋಗಿಸಿ ಅಧಿಕಾರಕ್ಕೆ ಲಾಬಿ ಮಾಡುತ್ತಿದ್ದಾರೆ. ಆದರೆ ಜಗಜೀವನ ರಾಮ್ ದಲಿತ ಕುಟುಂಬದಿಂದ ಬಂದವರಂತೆ... ಸ್ವಾತಂತ್ರ ಹೋರಾಟಗಾರರು ಕೂಡ. ಆದ್ದರಿಂದ ಅವರ ಪ್ರತಿಮೆ ಇರಿಸಬಹುದು, ಬಿಡಿ. ಆದರೆ ಪ್ರತಿಮೆ ಸ್ಥಾಪನೆ ರಾಜಕೀಯ ಉದ್ದೇಶವುಳ್ಳದ್ದೆಂಬುದು ಹೌದು. ದಲಿತರಿಗೆ ಮೂಲಭೂತ ಸೌಲಭ್ಯಗಳನ್ನೊದಗಿಸುವ ಬದಲು, ನೆರೆ ಮುಂತಾದ ಸಮಯದಲ್ಲಿ ರಕ್ಷಣೆ, ಪರಿಹಾರ ಕೊಡುವ ಬದಲು ಪ್ರತಿಮೆಯೊಂದನ್ನು ಮಾತ್ರ ಸ್ಥಾಪಿಸಿ ದಲಿತರಿಗೆ 'ನಾವೇನೋ ಮಾಡಿದೆವು' ಎಂದು ಕೊಚ್ಚಿಕೊಳ್ಳುತ್ತಾರೆ. ಈ ಟ್ರೆಂಡಿಗೆ ಜನತೆ ಎಡೆ ಮಾಡಿಕೊಡಬಾರದು. ಈ ರಾಜಕೀಯ ಉದ್ದೇಶ 'ಎಮೋಶನಲ್' ಮೌಲ್ಯವುಳ್ಳಂತದ್ದು... ಆದ್ದರಿಂದ ಜನರ ಎಮೋಶನ್ ಬಳಸಿಕೊಂಡು ತಮ್ಮ ವೋಟ್ ಬ್ಯಾಂಕ್ ತುಂಬಿಸಿಕೊಳ್ಳಲು ನೋಡುತ್ತಾರೆ ನೋಡಿ, ರಾಜಕಾರಣಿಗಳು!

ನಮ್ಮ ನಾಡಿನಲ್ಲಿ ಅನೇಕ ನಾಯಕರುಗಳಿದ್ದಾರೆ. ಹಾಗಂತ ಎಲ್ಲರ ಹ್ರತಿಮೆಗಳನ್ನು ಮಾಡಿ ನಿಲ್ಲಿಸುತ್ತಾ ಹೋದರೆ ಏನಾಗಬಹುದು..ಅದಕ್ಕೇ ಈ ಹಂತದಲ್ಲೇ ಕಡಿವಾಣ ಹಾಕಿದ್ರೆ ಒಳ್ಳೇದಲ್ವೇ.