"ಚಿತ್ರದುರ್ಗದ ಪಾಳಯಗಾರರು"

4.5

ಇವತ್ತು [:http://dli.iiit.ac.in/|ಡಿಜಿಟಲ್ ಲೈಬ್ರೆರಿಯಲ್ಲಿ] ನಾನು ಬಹಳ ದಿನಗಳಿಂದ ಓದಬೇಕು ಎಂದುಕೊಂಡಿದ್ದ "ಚಿತ್ರದುರ್ಗದ ಪಾಳಯಗಾರರು" ಎಂಬ ಪುಸ್ತಕ ದೊರೆಯಿತು. ಪುಸ್ತಕ ೧೯೨೪ರಲ್ಲಿ ಹೊರಬಂದದ್ದು. ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ಪರೀಕ್ಷೆಗೆಂದು ಓದಿದ ಗದ್ಯ ಸಂಗ್ರಹವಿರುವ ಪಠ್ಯದಲ್ಲಿ ಪಾಳಯಗಾರರ ಬಗ್ಗೆ ಇರುವ ಈ ಪುಸ್ತಕದಿಂದಲೂ ಒಂದು ಕತೆ ಇತ್ತು. ಹಲವು ವರ್ಷಗಳ ಹಿಂದೆ ಓದಿದ ಈ ಕತೆ ಇಂದಿಗೂ ಮರೆಯಲಾಗಿಲ್ಲ.

ಪುಸ್ತಕವನ್ನು PDFನಲ್ಲಿ [:http://sampada.net/Chitradurgada_PaLayagaararu.pdf|ಇಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು].

ಚಿತ್ರದುರ್ಗದ ಕತೆ ಓದುತ್ತ ಆಗಿನ ಕರ್ನಾಟಕದ ಕೆಲವು ಚಿತ್ರಣಗಳು ನಮ್ಮ ಮುಂದೆ ಹಾದುಹೋಗುತ್ತದೆ. ಎಷ್ಟೆಲ್ಲ ಸಂಸ್ಥಾನಗಳು, ಎಷ್ಟೆಲ್ಲ ಕದನಗಳು!
ಚಿತ್ರದುರ್ಗದ nostalgia ಇದ್ದವರಿಗೆ ಈ ಪುಸ್ತಕ ಓದಲೇಬೇಕಾದ ಸರಕು.

ದುರ್ಗದ ಪಾಳಯಗಾರರ ವೀರಗಾಥೆಯನ್ನು ಕೇಳಿಯೇ ಇರುತ್ತೀರಿ. ಪುಸ್ತಕದ ಈ ತುಣುಕು ಓದಿ:

ಶತ್ರುಗಳು ದುರ್ಗದ ಬೆಟ್ಟಕ್ಕೆ ಮುತ್ತಿಗೆ ಹಾಕಲು ಬಂದು ಕಾನಾಪುರದ ಬೈಲಿನಲ್ಲಿಳಿದಿರುವಾಗ ಒಂದು ದಿನ ಅರ್ಧರಾತ್ರೆಯಲ್ಲಿ ಸೇನೆಯವರು ಪಾಳಯದಲ್ಲಿ ಮಲಗಿಕೊಂಡು ನಿದ್ರೆಮಾಡುತಿರಲು, ತಿಮ್ಮಂಣನಾಯಕನು ಒಂಟಿಯಾಗಿ ಆ ಪಾಳಯಕ್ಕೆ ನುಗ್ಗಿ ಸೇನಾಪತಿಯಾದ ಸಾಳೋ ನರಸಿಂಗರಾಯನ ಖಾಸಾಕುದುರೆಯನ್ನು ಕಟ್ಟಿದ್ದ ಕಡೆಗೆ ಹೋಗಿ ಸ್ವಲ್ಪವೂ ಗದ್ದಲವಾಗದಂತೆ ಅದರ ಅಗಾಡಿಯನ್ನೂ ಪಿಚಾಡಿಯನ್ನೂ ಬಿಚ್ಚುತ್ತಾ ಇದ್ದನು. ಆಗ ಕುದುರೆಯು ಕುಣಿದು ಶಬ್ದ ಮಾಡಿತು. ಕಾಸದಾರನಿಗೆ ಎಚ್ಚರವಾಯಿತು. ಅವನು ಕಣ್ಣನ್ನು ಹೊಸಗಿಕೊಳ್ಳುತಾ ಎದ್ದನು. ಆಗ ತಿಮ್ಮಂಣನಾಯಕನು ಅವನಿಗೆ ಕಾಣದ ಹಾಗೆ ನೆಲದಮೇಲೆ ಮಲಗಿಕೊಂಡು ಅಲ್ಲಿದ್ದ ಹುಲ್ಲನ್ನು ತನ್ನ ಮೇಲೆ ಹಾಕಿ ಕವಿಚಿಕೊಂಡನು. ಕುದುರೆಯವನು ಕಿತ್ತು ಹೋಗಿದ್ದ ಕುದುರೆಯ ಗೂಟವನ್ನು ನೆಲದ ಮೇಲೆ ಇರಿಸಿ ಗಟ್ಟಿಯಾಗಿ ಪೆಟ್ಟಿದನು. ಆ ಗೂಟವು ಅಂಗೈಯನ್ನು ಅಗಲವಾಗಿ ಚಾಚಿಕೊಂಡು ಮಲಗಿದ್ದ ತಿಮ್ಮಂಣನಾಯಕನ ಬಲದ ಹಸ್ತದ ಮಧ್ಯೆ ಹಾದು ನೆಲಕ್ಕೆ ಬಲವಾಗಿ ಇಳಿಯಿತು. ತರುವಾಯ ಕುದುರೇ ಚಾಕರನು ಅದನ್ನು ಆ ಗೂಟಕ್ಕೆ ಕಟ್ಟಿ ಮಲಗಿಕೊಂಡನು. ಅವನಿಗೆ ನಿದ್ರೆ ಬಂದುದನ್ನು ಕಂಡು, ಪಾಳಯಗಾರನು ತನ್ನ ಎಡಗೈಯಿಂದ ಸೊಂಟದಲ್ಲಿದ್ದ ಬಾಕನ್ನು ಹಿರಿದುಕೊಂಡು ತನ್ನ ಬಲಗೈಮಣಿಕಟ್ಟನ್ನು ಕುಯಿದು ಮೇಲಕ್ಕೆ ಎದ್ದು ಮೋಟಕೈಗೆ ಬಟ್ಟೆಯನ್ನು ಸುತ್ತಿ ಅದೇ‌ ಕುದುರೆಯನ್ನು ಬಿಚ್ಚಿ ಅದರ ಮೇಲೆ ಏರಿಕೊಂಡು ಮೇಲು ದುರ್ಗಕ್ಕೆ ಹೋದನು.

ಈ ಸಾಹಸ ಇಲ್ಲಿಗೇ ನಿಲ್ಲಲಿಲ್ಲ. ಮಾರನೇ ದಿವಸ, ಸಾಳೋ ನರಸಿಂಗರಾಯನು ಕೂತುಕೊಳ್ಳುತ್ತಿದ್ದ ಖಾಸಾ ಆನೆಯನ್ನು ದುರ್ಗದ ತಪ್ಪಲಲ್ಲಿರುವ ತಿಮ್ಮಂಣನಾಯಕನ ಕೆರೆಗೆ ನೀರು ಕುಡಿಸಲು ಹಿಡತಂದರು. ಇದು ಪಾಳಯಗಾರನಿಗೆ ತಿಳಿಯಿತು. ಅವನು ಆಕ್ಷಣದಲ್ಲಿಯೇ ಎದ್ದು ತನ್ನ ಬಿಲ್ಲನ್ನು ತರಿಸಿ ಅದನ್ನು ಕಾಲಲ್ಲಿ ಮೆಟ್ಟಿ ಬಾಣವನ್ನು ಹೆದೆಗೆ ಏರಿಸಿ, ಅದನ್ನು ಆನೆಯ ಹಣೆಗೆ ಗುರಿಕಟ್ಟಿ ಎಡಗೈಯಲ್ಲಿ ತುಯಿದು ಬಿಟ್ಟನು. ಅಲಗು ಆನೆಯ ಭ್ರೂಮಧ್ಯಕ್ಕೆ ತಗಲಿ ಅದು ಕಿರ್ರನೆ ಅರಚಿಕೊಂಡು ಒಂದೇಟಿಗೆ ನೆಲಕ್ಕೆಬಿದ್ದು ಪ್ರಾಣವನ್ನು ಬಿಟ್ಟಿತು.

ನಾನು [:http://hpnadig.net/blog/index.php/archives/2007/02/22/download-all-that-...|ಡೌನ್ಲೋಡ್ ಮಾಡಿರುವ] ಹಲವು ಪುಸ್ತಕಗಳಲ್ಲಿ ಕೆಲವನ್ನು PDF ರೂಪದಲ್ಲಿ ಸಂಪದಕ್ಕೆ ಅಪ್ಲೋಡ್ ಮಾಡಿರುವೆ. ಆಸಕ್ತರು ಡೌನ್ಲೋಡ್ ಮಾಡಿಕೊಳ್ಳಿ:
* [:http://sampada.net/TamiLu_TalegaLa_Naduve.pdf|ತಮಿಳು ತಲೆಗಳ ನಡುವೆ]. (B G L Swamy)
* [:http://sampada.net/Antahapurageethe-DVG.pdf|ಅನ್ತಃಪುರಗೀತೆ] ಡಿ ವಿ ಜಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಡಿಗರೆ,

  ಚಿತ್ರದುರ್ಗದ ಪಾಳಯಗಾರರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

ಒಂದು ವಿಷಯ ಕೇಳಬೇಕಿತ್ತು ಸಾರ್. ನಿಮ್ಮ script linux ನಲ್ಲಿ ಬಳಸಿ ನೋಡಿದೆ. ಆದರೆ ಯಾಕೊ ನನಗೆ "wget" ಕೆಲಸ ಮಾಡ್ತ ಇಲ್ಲ ಅಥವ ಆ ಸರ್ವರ್ ಸಮಸ್ಯೆ ಇರಬಹುದಾ?

Resolving dli.iiit.ac.in... done.
Connecting to dli.iiit.ac.in[196.12.53.30]:80... failed: Connection timed out.
Retrying.

ಈ ತರಹ ಮರಳಿ ಯತ್ನವ ಮಾಡು ..ಮರಳಿ ಯತ್ನವ ಮಾಡು ಆಗ್ತಾನೆ ಇರುತ್ತೆ. ಡೌನ್ ಲೋಡ್ ಮಾತ್ರ ಅಗ್ತಾ ಇಲ್ಲ.

ಇದಕ್ಕೆ ಏನಾದರೂ ಪರಿಹಾರ ಇದಿಯಾ? ತಿಳಿಸಿ ( ನಾನು ಡೀಬಗ್ ಮಾಡ್ತ ಇದ್ದೀನಿ...ನೋಡೋಣ)

-----------

"ಕಾಡಿದ್ದರೆ ನಾಡು"

ನಿಮಗೆ ಬರುತ್ತಿರೋ ಎರರ್ ನೋಡಿದ್ರೆ ನೀವು ಬಹುಶಃ ಆಫೀಸಿನಲ್ಲಿ ಡೌನ್ಲೋಡ್ ಮಾಡೋಕ್ಕೆ ಪ್ರಯತ್ನಿಸುತ್ತಿದ್ದೀರ ಹಾಗೂ ಅಲ್ಲಿ ಪ್ರಾಕ್ಸಿ ಸರಿಯಾಗಿ ಕಾನ್ಫಿಗರ್ ಮಾಡಿಲ್ಲ ಅಂತ ಅನ್ಸತ್ತೆ.

ssh work ಆಗತ್ತ? ಕಮ್ಯಾಂಡ್ ಲೈನಿನಲ್ಲಿ $ping google.com ಎಂಬಂತೆ ಪ್ರಯತ್ನಿಸಿ ನೋಡಿ.

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ನಮಸ್ಕಾರ. ಚಿತ್ರದುರ್ಗದವನಾದ ನನಗೆ ಇದನ್ನು ಓದಿದಾಗ ಆದ ಸಂತೊಷ ಅಷ್ಟಿಷ್ಟಲ್ಲ ! ನಿಜವಾಗಿಯೂ ನಾನು ಡಿಜಿಟಲ್ ಲೈಬ್ರರಿಗೂ ಮತ್ತು ನಿಮಗೂ ಚಿರಋಣಿ. ನಮ್ಮ ಹೊಳಲ್ಕೆರೆಯ ಭವ್ಯ ಗಣೇಶನ ಮೂರ್ತಿಯನ್ನು ಸ್ಥಾಪಿಸಿದವರು ಮತ್ತಿ ತಿಮ್ಮಣ್ಣನಾಯಕರು.[೧೫೦೦-೧೫೭೦ ರ ಸಮಯ- ಇದನ್ನು ಖಚಿತಪಡಿಸಬೇಕು]

ಚಿತ್ರದುರ್ಗದ ನಿಮ್ಮ ಡಿಜಿಟಲ್ ಪುಸ್ತಕದ ಜೊತೆಗೆ, ನಮ್ಮೆಲ್ಲರ ಹೆಮ್ಮೆಯ ತ.ರಾ.ಸು.ರವರ 'ರಕ್ತ ತರ್ಪಣ', 'ಕಂಬನಿಯ ಕುಯಿಲು', 'ಹೊಸ ಹಗಲು' ಪುಸ್ತಕಗಳನ್ನು ಓದದಿದ್ದರೆ ಬಹುಶಃ ನೀರಸವಾಗಿ ಕಾಣುವ ಕ್ಷಣಗಳೇ ಹೆಚ್ಚು !

ತ ರಾ ಸು ರವರ ಪುಸ್ತಕಗಳಲ್ಲಿ ಇಷ್ಟು ಡಿಜಿಟಲ್ ಲೈಬ್ರೆರೀಲಿ ಇವೆ. 'ರಕ್ತ ತರ್ಪಣ' ಇದೆ, ಆದರೆ ನೀವು ತಿಳಿಸಿದ ಉಳಿದೆರಡುಪುಸ್ತಕಗಳು ಅಲ್ಲಿ ಇದ್ದಂತಿಲ್ಲ.

ರಕ್ತ ತರ್ಪಣದ PDF ನಿಮಗೆ ಮೇಯ್ಲ್ ಮಾಡುವೆ.
--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ನಮಸ್ಕಾರ.

ಥ್ಯಾಂಕ್ಸ್. ಆ ೨ ಪುಸ್ತಗಳನ್ನೂ ಒಂದಾದ ಮೇಲೆ ಒಂದರಂತೆ ಓದಬೇಕು. ಧಾರಾವಾಹಿಯ ತರಹ.

ಆ ಪುಸ್ತಕಗಳೂ "ಡಿಜಿಟಲ್ ಮೋಡ್" ನಲ್ಲಿ ಬರಲೆಂದು ಹಾರೈಸೋಣ. ಇದು ನಮ್ಮ ಶೇಖರ್ ಪೂರ್ಣರವರ ಕೃಪೆಯೇ ?

ಇಲ್ಲ. ಇದು ಶೇಖರ್ ಪೂರ್ಣರ ಕೃಪೆಯಲ್ಲ. ಇದು [:http://dli.iiit.ac.in|ಡಿಜಿಟಲ್ ಲೈಬ್ರರಿ] ಮತ್ತು [:http://hpnadig.net/blog/index.php/archives/2007/02/22/download-all-that-...|ನಾನು ಆತುರದಲ್ಲಿ (ಕೆಟ್ಟದಾಗಿ) ಬರೆದಿರುವ ಸ್ಕ್ರಿಪ್ಟ್ ಒಂದರ] ಕೃಪೆ. :)

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ಸಂಪದಕ್ಕೆ ಸ್ವಾಗತ! ಮೊದಲ ಬಾರಿ ನೋಡಿದ್ದು ನಿಮ್ಮನ್ನ ಇಲ್ಲಿ!

ಇನ್ನೂ ಒಂದು ನೂರಕ್ಕೂ ಹೆಚ್ಚು ಪುಸ್ತಕಗಳನ್ನು PDFಗಳಾಗಿ ಮಾಡಿರುವೆ (ಎಲ್ಲ ಚಿಕ್ಕದೊಂದು ಸ್ಕ್ರಿಪ್ಟಿನ ಕೃಪೆ). ಎಲ್ಲ ಪುಸ್ತಕಗಳನ್ನು ಒಂದು‌ ಟಾರೆಂಟ್ ಮಾಡಿ ಹಾಕೋಣವೆ? ಉಳಿದ ಎಲ್ಲರೂ ಡೌನ್ಲೋಡ್ ಮಾಡಿಕೊಳ್ಳಬಹುದು.
:)

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ನಾಡಿಗ್,

ಒಳ್ಳೆಯ ಪ್ರಯತ್ನ. ತುಂಬಾ ಉಪಯೋಗಕ್ಕೆ ಬರುತ್ತೆ. ಏನೇ ಆದರೂ ಅಂತರ್ಜಾಲದಲ್ಲಿ ನೇರವಾಗಿ ಓದುವುದಕ್ಕಿಂತ, ನಮ್ಮ ಬಳಿಯಲ್ಲೇ ಒಂದು PDF ಪ್ರತಿ ಇದ್ದರೆ ಓದಲಿಕ್ಕೆ ಬಹಳ ಸರಾಗ.

- ಶ್ಯಾಮ್ ಕಿಶೋರ್

>>ಇನ್ನೂ ಒಂದು ನೂರಕ್ಕೂ ಹೆಚ್ಚು ಪುಸ್ತಕಗಳನ್ನು PDFಗಳಾಗಿ ಮಾಡಿರುವೆ (ಎಲ್ಲ ಚಿಕ್ಕದೊಂದು ಸ್ಕ್ರಿಪ್ಟಿನ ಕೃಪೆ). ಎಲ್ಲ ಪುಸ್ತಕಗಳನ್ನು ಒಂದು‌ >>ಟಾರೆಂಟ್ ಮಾಡಿ ಹಾಕೋಣವೆ? ಉಳಿದ ಎಲ್ಲರೂ ಡೌನ್ಲೋಡ್ ಮಾಡಿಕೊಳ್ಳಬಹುದು.
>>Smiling

ಇದು ಕೇಳುವಂತಹ ಪ್ರಶ್ನೆಯೇ?Laughing ಖಂದಿತ ಕೊಂಡಿಗಳನ್ನು ಕೊಡಿ

ಅಂತಃಪುರಗೀತೆಗಾಗಿ ಧನ್ಯವಾದಗಳು

-ಹಂಸಾನಂದಿ

ನೂರಾರು ಪುಸ್ತಕಗಳಿರುವುದರಿಂದ ಪುಸ್ತಕಗಳನ್ನು ಬಿಡಿಯಾಗಿ ಹಾಕಿದರೆ ಸರ್ವರಿನ bandwidthಗೆ ಪೆಟ್ಟು ಬೀಳುವುದು. ಪ್ರತಿ MB bandwidth ಹೆಚ್ಚಾದ್ರೂ ತಿಂಗಳ ಕೊನೆಯ ಬಿಲ್ ನಲ್ಲಿ ಕಾಣಿಸಿಕೊಳ್ಳುತ್ತೆ :)

ಟಾರೆಂಟ್ಸ್ ಆದರೆ ನಾವು ಸರ್ವರಿನಲ್ಲಿ ಹೋಸ್ಟ್ ಮಾಡಬೇಕಿಲ್ಲ. ಪೀರ್ ಟು ಪೀರ್ (ಟಾರೆಂಟ್ಸ್) ಬಗ್ಗೆ ಹೆಚ್ಚಿನ ಮಾಹಿತಿಗೆ [:http://en.wikipedia.org/wiki/P2P|ಈ ಪುಟ ನೋಡಿ].
--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ನಾಡಿಗರೆ,

ಉಪಾಯ ತುಂಬಾ ಚೆನ್ನಾಗಿದೆ, torrent ಮಾಡಿದರೆ ಈ ಪುಸ್ತಕಗಳು ಎಲ್ಲರಿಗೂ ಸುಲಭವಾಗಿ ದೊರೆಯುತ್ತವೆ. ನಿಮ್ಮ torrentಗೆ ಕಾಯುತ್ತಿರುವೆ! :)

MS ಲೋಕದಲ್ಲಿರುವ ನನ್ನಂತವರಿಗೆ ನಿಮ್ಮ script ಬಳಸಲು ಅಸಾಧ್ಯವಲ್ಲದಿದ್ದರೂ ಸ್ವಲ್ಪ ಕಷ್ಟ.

Javaದಲ್ಲಿ ಬರೆದ ಸುನಿಲ್ ಜಯಪ್ರಕಾಷ್‍ರವರ ಕ್ರಮವಿಧಿ ಸಹಾಯಕರವಾಗುವುದೇನೊ, ನಾನು ಇಂದೇ ಪ್ರಯೋಗಿಸಿ ನೋಡುವೆ.

"ನೀರು ಕೇಳಿದರೆ ಪಾನಕ!" - ನಾನೇಕೆ ಬೇಡವೆನ್ನಲಿ? Laughing 

ಡಿಜಿಟಲ್ ಲೈಬ್ರರಿಯಿಂದ ಡೌನ್‍ಲೋಡ್ ಮಾಡಲು ಪ್ರಯತ್ನಿಸಿದೆ. ಸಾದ್ಯವಾಗಲಿಲ್ಲ. ನಿಧಾನವಾಗಿ ತೆರೆದುಕೊಳ್ಳುವ ಪುಟಗಳನ್ನು ಒಂದೊಂದಾಗಿ ಓದುವುದೂ ಪ್ರಯಾಸವೆನಿಸಿತ್ತು.  ಅಲ್ಲಿರುವ ಪುಸ್ತಕಗಳ ಪಟ್ಟಿ ಪ್ರಕಟಿಸಲು ಸಾಧ್ಯವಾದರೆ ಸಂತೋಷ.

[:http://sampada.net/Kannada-ebooks-torrent-1-and-2-Index]

ಮೇಲಿನ ಪುಟದಲ್ಲಿ ಎಲ್ಲ ಮಾಹಿತಿ ಉಂಟು.

ಮೊದಲ ಕಂತು - ಎರಡು ಟಾರೆಂಟುಗಳಲ್ಲಿದೆ.

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ಮೊನ್ನೆ ಗೆಳೆಯನಿಗೆ ಟೋರೆಂಟ್‍ನಿಂದ ಕನ್ನಡ ಪುಸ್ತಕಗಳನ್ನು ಡೌನ್‍ಲೋಡ್ ಮಾಡಿಲೊಳ್ಳಲು ಹೇಳೆದಾಗ ಕನ್ನಡಟಾರೆಂಟ್‍ನವರು ಹೊಸ ಸದಸ್ಯರಿಗೆ ಸೇರಲು ಅನುಮತಿ ನೀಡುತ್ತಿಲ್ಲ ಎಂದು ಗೊತ್ತಾಯಿತು. ಆದ್ದರಿಂದ ಎಲ್ಲಾ ಪುಸ್ತಕಗಳನ್ನೂ divshareಗೆ ಅಪ್ಲೋಡ್ ಮಾಡಿದ್ದೇನೆ.
ಆದರೆ ನನ್ನ ಕೆಲವು ವಿನಂತಿಗಳು

೧. ಇದು ಆತುರದ ದಾರಿ ಅಷ್ಟೆ. ಈಗಲೂ ಕನ್ನಡಟೋರೆಂಟ್ ಸದಸ್ಯರಿಗೆ ಟೋರೆಂಟೇ ಅನುಕೂಲ ಹಾಗೂ ವೇಗವಾದ ಡೌನ್ಲೋಡ್. ಅಲ್ಲಿ ೧೨ ಸೀಡ್‍ಗಳಿದ್ದಾರೆ. :)
೨. Divshare ನಲ್ಲಿ ಡೌನ್ಲೋಡ್ ಲಿಮಿಟ್ ಇದೆಯೇ ಇಲ್ಲವೇ ಎಂದು ತಿಳಿದಿಲ್ಲ. ಮೊದಲೇ ಹೇಳಿದಂತೆ ಇದು quick fix ಅಷ್ಟೆ. ದಯವಿಟ್ಟು ಸಹಕರಿಸಿ.
೩. ಅಕಸ್ಮಾತ್ ಲಿಂಕುಗಳಲ್ಲಿ ತಪ್ಪಿದ್ದರೆ ತಿಳಿಸಿ. ಸರಿಪಡಿಸುತ್ತೇನೆ.

೨೮ ಕತೆ - ೧೪ ಚಿತ್ರ, ಜಿ ಪಿ ರಾಜರತ್ನಂ
28kathe-14-chitra-GP-Raja-Ratnam.pdf
DivShare File - 28kathe-14-chitra-GP-Raja-Ratnam.pdf

ಆತ್ಮಾಹುತಿ - ಶಿವರಾಂ
Aatmahuti-shivaram.pdf
DivShare File - Aatmahuti-shivaram.pdf

ಆದರ್ಶದ ಆಡಂಬರ
AdarshadaAdambara.pdf
DivShare File - AdarshadaAdambara.pdf

ಆದಿಪರ್ವ
Adiparva.pdf
DivShare File - Adiparva.pdf

ಅಗ್ನಿಹಂಸ , ಕುವೆಂಪು -
agnihamsa.pdf
DivShare File - agnihamsa.pdf

ಆಕಾಶ ದೀಪ. ಗೋಪಾಲಕೃಷ್ಣ ಅಡಿಗ
Akaasha_Deepa-G-Adiga.pdf
DivShare File - Akaasha_Deepa-G-Adiga.pdf

ಆಕಸ್ಮಿಕ, ತರಾಸು -
Akasmika-ta-ra-su.pdf
DivShare File - Akasmika-ta-ra-su.pdf

ಅಖಂಡ ಕರ್ನಾಟಕ, ಅ ನ ಕೃ -
Akhanda-Karnataka-a-na-kru.pdf
DivShare File - Akhanda-Karnataka-a-na-kru.pdf

ಅನ್ತಃಪುರಗೀತೆ - ಡಿ ವಿ ಜಿ
Antahapurageethe-DVG.pdf
DivShare File - Antahapurageethe-DVG.pdf

ಅನುಭಾಷ್ಯಮ್
aNubhaashyam.pdf
DivShare File - aNubhaashyam.pdf

ಅನುರಕ್ತೆ - ವ್ಯಾಸರಾಯ ಬಲ್ಲಳ
anurakte-vyasaraaya-ballaLa.pdf
DivShare File - anurakte-vyasaraaya-ballaLa.pdf

ಅರಗಿನ ಮನೆ
aragina-mane.pdf
DivShare File - aragina-mane.pdf

ಮುಸ್ಲಿಮ್ ಶಾಸನಗಳ ಅಧ್ಯಯನ
A_Study_of_Muslim_Inscriptions.pdf
DivShare File - A_Study_of_Muslim_Inscriptions.pdf

ಅತ್ಯುತ್ತಮ ಸಣ್ಣ ಕಥೆಗಳು
atyuttama_saNNa_kathegaLu.pdf
DivShare File - atyuttama_saNNa_kathegaLu.pdf

ಬಡವರ ವೈದ್ಯ
badavara_vaidya.pdf
DivShare File - badavara_vaidya.pdf

ಬಹಿಷ್ಕಾರ - ಕೈಲಾಸಂ
bahishkaara.pdf
DivShare File - bahishkaara.pdf

ಬೆಟ್ಟದ ತೊರೆ - ಶಿವರಾಮ ಕಾರಂತ
battada_tore.pdf
DivShare File - battada_tore.pdf

ಜೇನು ಸಾಕಣೆ (ಸ್ವಾತಂತ್ರ್ಯ ಪೂರ್ವದ್ದು ಆದರೆ ಬಹಳ ಚೆಂದವಾಗಿದೆ ಈ ಪುಸ್ತಕ)
Bee-Keeping.pdf
DivShare File - Bee-Keeping.pdf

ಬೀಚಿ
BIchi.pdf
DivShare File - BIchi.pdf

ಚಂದನದ ಬೊಂಬೆ - ತ ರಾ ಸು
Chandanada_Bombe.pdf
DivShare File - Chandanada_Bombe.pdf

ಚಿಗುರಿದ ಕನಸು - ಶಿವರಾಮ ಕಾರಂತ
chigurida_kanasu.pdf
DivShare File - chigurida_kanasu.pdf

ಚಿತ್ರದುರ್ಗದ ಪಾಳಯಗಾರರು
Chitradurgada_PaLayagaararu.pdf
DivShare File - Chitradurgada_PaLayagaararu.pdf

ಹಳ್ಳಿಯ ಕತೆಗಳು
HaLLiya_KathegaLu.pdf
DivShare File - HaLLiya_KathegaLu.pdf

ಹಂಸಗೀತೆ - ತ ರಾ ಸು (ಅನಂತನಾಗ್ ನಟಿಸಿರುವ ಇದೇ ಹೆಸರಿನ ಚಿತ್ರ ನೋಡಿದ್ದೀರಾ?)
Hamsageethe.pdf
DivShare File - Hamsageethe.pdf

ಹನಿಗಳು - ಜಿ ಪಿ ರಾಜರತ್ನಂ
HanigaLu-GP-Rajaratnam.pdf
DivShare File - HanigaLu-GP-Rajaratnam.pdf

ಹಿಂದು ಮುಸ್ಲಿಂ ಮೈತ್ರಿಯನ್ನು ಬೆಳೆಸಿದ ರಾಜರು
Hindu-Muslim-Maitriya-BeLesida-Rajaru.pdf
DivShare File - Hindu-Muslim-Maitriya-BeLesida-Rajaru.pdf

ಹಿಂದುಸ್ತಾನದ ಪ್ರಾಚೀನ ಇತಿಹಾಸ
Hindustaanada-Praachina-itihaasa.pdf
DivShare File - Hindustaanada-Praachina-itihaasa.pdf

"ಹುಲಿರಾಯ"
huliraaya.pdf
DivShare File - huliraaya.pdf

ಹೈದರ್ ಅಲ್ಲಿಯೂ, ಟಿಪ್ಪು ಸುಲ್ತಾನನೂ
Hyder-Ali-and-Tippu-Sultan.pdf
DivShare File - Hyder-Ali-and-Tippu-Sultan.pdf

ಇಂದ್ರಜಾಲ
Indrajaala.pdf
DivShare File - Indrajaala.pdf

ಇಶೋಪನಿಶತ್
Ishopanishat.pdf
DivShare File - Ishopanishat.pdf

ಜಾರುವ ದಾರಿಯಲ್ಲಿ - ಶಿವರಾಮ ಕಾರಂತ
Jaaruva-Daariyalli-Shivarama-Karanth.pdf
DivShare File - Jaaruva-Daariyalli-Shivarama-Karanth.pdf

ಜನಪ್ರಿಯ ವಿಜ್ಞಾನ (ಸೆಂಟ್ರಲ್ ಕಾಲೇಜು)
Janpriya-Vignaana.pdf
DivShare File - Janpriya-Vignaana.pdf

ಜಾತಕ ಕತೆಗಳು (ಜಿ ಪಿ ರಾಜರತ್ನಂ)
Jataka-Stories-GP-Rajaratnam.pdf
DivShare File - Jataka-Stories-GP-Rajaratnam.pdf

ನೆಹ್ರು - ಬಯಾಗ್ರಫಿ
Jawaharlal-Nehru-Biography.pdf
DivShare File - Jawaharlal-Nehru-Biography.pdf

ಕಬ್ಬಿಗರ ಕಾವ
Kabbigara_Kaavam.pdf
DivShare File - Kabbigara_Kaavam.pdf

ಕಡ್ಲೇಪುರಿ - ಜಿ ಪಿ ರಾಜರತ್ನಂ
Kadlepuri.pdf
DivShare File - Kadlepuri.pdf

ಕಲಾವಿದನ ತ್ಯಾಗ ಮತ್ತಿತರ ಕತೆಗಳು
Kalavidana-Tyaaga-mattitara-kathegaLu.pdf
DivShare File - Kalavidana-Tyaaga-mattitara-kathegaLu.pdf

ಕರ್ನಾಟಕದ ಕರಾವಳಿ (ಶಿವರಾಮ ಕಾರಂತ)
karnatakada_karavaLi.pdf
DivShare File - karnatakada_karavaLi.pdf

ಕರ್ನಾಟಕದಲ್ಲಿ ಚಿತ್ರಕಲೆ
Karnatakadalli_Chitrakale.pdf
DivShare File - Karnatakadalli_Chitrakale.pdf

ಕರ್ನಾಟಕದಲ್ಲಿ ಹಣ್ಣಿನ ತೋಟಗಳು
Karntakadalli-HaNNina-TOTagaLu.pdf
DivShare File - Karntakadalli-HaNNina-TOTagaLu.pdf

ಕವಿರಾಜಮಾರ್ಗ ವಿವೇಕ
KavirajaMarga_Viveka.pdf
DivShare File - KavirajaMarga_Viveka.pdf

ಕೆಲವು ಕತೆಗಳು
Kelavu-KathegaLu.pdf
DivShare File - Kelavu-KathegaLu.pdf

ಕಿಟ್ಟೆಲ್ ಪದಕೋಶ - ಮರಿಯಪ್ಪಭಟ್ಟ
Kittel.pdf
DivShare File - Kittel.pdf

ವಾಲ್ಮೀಕಿ (ಮಾಸ್ತಿ )
Masti_Valmiki.pdf
DivShare File - Masti_Valmiki.pdf

ನೃಪತುಂಗ - ತ ರಾ ಸು
Nrupatunga-ta-ra-su.pdf
DivShare File - Nrupatunga-ta-ra-su.pdf

ಆಲಿವರ್ ಟ್ವಿಸ್ಟ್ - ಜಿ ಪಿ ರಾಜರತ್ನಂ
Oliver_Twist.pdf
DivShare File - Oliver_Twist.pdf

ಉಪನಿಷತ್ತು
Shankaracharya-Upanishat.pdf
DivShare File - Shankaracharya-Upanishat.pdf

ತಮಿಳು ತಲೆಗಳ ನಡುವೆ - ಬಿ ಜಿ ಎಲ್ ಸ್ವಾಮಿ
TamiLu_TalegaLa_Naduve.pdf
DivShare File - TamiLu_TalegaLa_Naduve.pdf

ವಿಷ್ಣುವರ್ಧನ
Vishnuvardhana.pdf
DivShare File - Vishnuvardhana.pdf

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

Thank you Srinidhi avare. Nimminda bahala upakaravaaythu.
Nimmalli innu hosa pusthakaviddare dayamaadi upload maadi.
Dhanyavadagalu