ಕನ್ನಡ ಸಾಹಿತ್ಯ ಪರಿಷತ್ತು ಹಾಗು ೬೦೦೦ ಕನ್ನಡ ಬ್ಲಾಗುಗಳು !!!!

3

ಕೇಳ್ರಪ್ಪೋ ಕೇಳ್ರೀ ನಾಳೆಯಿಂದ ಗಂಗಾವತಿಯಲ್ಲಿ ಕನ್ನಡ ಸಾಹಿತ್ಯ ಜಾತ್ರೆ !!!!!!ಕನ್ನಡ ಸಾಹಿತ್ಯ ಹಬ್ಬಕ್ಕೆ ಜೈ ಎನ್ನೋಣ. ಆದ್ರೆ ವಿಚಿತ್ರ ಗೊತ್ತಾ ಕನ್ನಡ ಸಾಹಿತ್ಯ ಪರಿಷತ್ ಗೆ ಆಧುನಿಕ ಯುಗದಲ್ಲಿ ಕನ್ನಡ ಭಾಷೆ ಬಗ್ಗೆ ಸುಮಾರು ೬೦೦೦ ಬ್ಲಾಗ್ ಗಳು ಕಾರ್ಯ ನಿರ್ವಹಣೆ ಮಾಡ್ತಾ ಇರೋದು, ಹಾಗು ಹೊರ ದೇಶದಲ್ಲಿರೋ ಕನ್ನಡ ಪ್ರತಿಭೆಗಳು ಹಾಗು ರಾಜ್ಯ ಹಾಗು ದೇಶದ ವಿವಿದೆಡೆ ಇದ್ದು ಕನ್ನಡ ಸೇವೆ ಮಾಡುತ್ತಿರುವ ಬ್ಲಾಗ್ ಕನ್ನಡ ಪ್ರತಿಭೆಗಳ ಬಗ್ಗೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಗೆ ಅರಿವಿಲ್ಲ ಅಥವಾ ಅರಿವಿಲ್ಲದಂತೆ ನಟಿಸುತ್ತಿದೆ. ಕನ್ನಡ ಬ್ಲಾಗ್ ತಾಣಗಳಲ್ಲಿ ಉತ್ತಮ ಕನ್ನಡ ಕೆಲಸ ಆಗುತ್ತಿರುವುದು, ಹೊಸ ತಂತ್ರಜ್ಞಾನ ಬಳಸಿ ಕನ್ನಡ ಭಾಷೆ ಅಭಿವೃದ್ದಿ ಪಡಿಸುವ ಬಗ್ಗೆ , ವೈಜ್ಞಾನಿಕ ತಳಹದಿಯಲ್ಲಿ ಹಲವಾರು ಕನ್ನಡ ಬ್ಲಾಗ್ ಮಿತ್ರರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ , ಕೆಂಡ ಸಂಪಿಗೆ,ಸಂಪದ ,ಕನ್ನಡ ಬ್ಲಾಗ್ ಸ್ಪಾಟ್ ,ಕನ್ನಡ ಬ್ಲಾಗರ್ಸ್ ,ಫೇಸ್ ಬುಕ್ ಹಾಗು ಇನ್ನೂ ಹಲವಾರು ಕನ್ನಡ ತಾಣಗಳಲ್ಲಿ ಯಾವುದೇ ಯಾವುದೇ ಪತ್ರಿಕೆ, ಪುಸ್ತಕ, ಗಳಿಗಿಂತ ಹೆಚ್ಹಾಗಿ ಕನ್ನಡ ಲೇಖಕರು ತಮ್ಮ ಉತ್ಕೃಷ್ಟ ಪ್ರತಿಭೆ ತೋರುತ್ತಿದ್ದಾರೆ.ಇವತ್ತು ಕನ್ನಡ ಬ್ಲಾಗ್ ಲೋಕ ಹಳ್ಳಿ ಹಳ್ಳಿ ಗೂ ತಲುಪುವತ್ತ ದಾಪುಗಾಲು ಇಡುತ್ತಿದೆ . ಇದ್ಯಾವುದೂ ಕನ್ನಡ ಸಾಹಿತ್ಯ ಪರಿಷತ್ ಗಮನಕ್ಕೆ ಬಂದಿಲ್ಲದಿರುವುದು ಸೋಜಿಗವೇ ಸರಿ . ಬ್ಲಾಗ್ ಮಿತ್ರರೇ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಬ್ಲಾಗ್ ಲೋಕವನ್ನು ಒಪ್ಪಿಕೊಂಡು ಕನ್ನಡ ಬ್ಲಾಗ್ಗಳನ್ನು ಪ್ರೋತ್ಸಾಹಿಸಬೇಕಾದ ಅನಿವಾರ್ಯತೆ ಇದೆ ಎನ್ನುವ ಬಗ್ಗೆ ನಿಮ್ಮ ಅನಿಸಿಕೆ ಏನು , ಬನ್ನಿ ಒಂದು ಆರೋಗ್ಯಕರ ಚರ್ಚೆಯಾಗಲಿ. ಪೂರ್ವಾಗ್ರಹ ಟೀಕೆ, ಯಾರ ವಯಕ್ತಿಕ ನಿಂದನೆ ಬೇಡ, ನಿಮ್ಮ ಉತ್ತಮ ವಿಚಾರವನ್ನು ಹೇಳಿ ಬನ್ನಿ .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಾಲ ಸುಬ್ರಹ್ಮಣ್ಯ ಕೆ.ಎಸ್. ರವರಿಗೆ ವಂದನೆಗಳು. ನಿಮ್ಮ ಲೇಖನ ಓದಿದೆ ಕನ್ನಡದಲ್ಲಿ 6000 ಬ್ಲಾಗ್ ಗಳು ಇರುವುದನ್ನುಓದಿ ಸಂತಸವಾಯಿತು. ಈ ಸಂಖ್ಯಾಬಲ ನನ್ನನ್ನು ಆಶ್ವರ್ಯ ಗೊಳಿಸಿತು.ನಾನೊಬ್ಬ ಆಸಕ್ತ ಓದುಗ ಮತ್ತು ಬರೆಯುವ ಹವ್ಯಾಸ ಹೊಂದಿರುವವನು. ನಮ್ಮಂತಹವರಿಗೆ ವೇದಿಕೆಗಳೆ ಸಿಗುವುದಿಲ್ಲ. ಹೀಗಾಗಿ ನಮ್ಮ ಕೃತಿಗಳ ಕುರಿತು ಸರಿಯಾದ ವಿಮರ್ಶೆ ದೊರೆಯುವುದಿಲ್ಲ. ಕಳೆದ ವರ್ಷ ನಾನೊಂದು ಕವನ ಸಂಕಲನ ಹೊರತಂದೆ,ಅನೇಕ ಸ್ನೇಹಿತರಿಗೆ ಮತ್ತು ಆಸಕ್ತರಿಗೆ ಕೊಟ್ಟೆ.ಬೆರಳೆಣಿಕೆಯ ಕೆಲವರನ್ನು ಬೇರೆ ಯಾರೂ ಪ್ರತಿಕ್ರಿಯಿಸಲಿಲ್ಲ. ನಾನು ನನ್ನ ಸ್ನೇಹಿತರ ಮೂಲಕ ಸಂಪದದ ಪರಿಚಯ ನನಗಾಯಿತು. ಪ್ರತಿಕ್ರಿಯಿಸಲು ಬರೆಯಲು ಪ್ರಾರಂಬಿಸಿದೆ, ಸಂಪದಿಗರಿಂದ ದೊರೆತ ಪ್ರೋತ್ಸಾಹ ಅದ್ಭುತ, ಈ ಕನ್ನಡ ಬ್ಲಾಗ್ ನನ್ನನ್ನು ಜೀವನೋತ್ಸಾಹಿಯನ್ನಾಗಿ ಮಾಡಿದೆ. ಪ್ರತಿದಿನ ಈ ಬ್ಲಾಗ್ ನೋಡದೆ ಹೋದರೆ ಏನನ್ನೊ ಕಳೆದುಕೊಂಡಂತೆ. ಅನೇಕ ಉತ್ಸಾಹಿಗಳು ವಯೋಬೇಧ ಮರೆತು ಪ್ರತಿಕ್ರಿಯಿಸುತ್ತಾರೆ. ಈ ಬೆಳವಣಿಗೆಯನ್ನು ಖಂಡಿತ ಕನ್ನಡ ಸಾಹಿತ್ಯ ಪರಿಷತ್ತು ಗಮನಿಸ ಬೇಕು. ಈ ಬಗ್ಗೆ ಜನಾಭಿಪ್ರಾಯ ರೂಢಿಸದೆ ಹೋದರೆ ಇಂತಹ ಸಂಸ್ಥೆಗಳು ಯಾವುದೆ ಕನ್ನಡ ಚಟುವಟಿಕೆಯನ್ನು ಗಮನಿಸುವುದಿಲ್ಲ. ಎಲ್ಲ ಕನ್ನಡ ಬ್ಲಾಗ್ ಬರಹಗಾರರಿಗೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ದೊರೆತರೆ ಮಾತ್ರ ಅದು ಬ್ಲಾಗ್ ಗಳನ್ನು ಗಮನಿಸುತ್ತದೆ ಎಂದು ನನ್ನ ಅನಿಸಿಕೆ.ಆಗ ಕನ್ನಡ ಬ್ಲಾಗ್ ಗಳಿಗೆ ಬಲ ಬರುತ್ತದೆಂದು ಕಾಣುತ್ತದೆ.ಒಳ್ಳೆಯ ವಿಚಾರ ವೊಂದಕ್ಕೆ ಚಾಲನೆ ನೀಡಸಿದ್ದೀರಿ, ಧನ್ಯವಾದಗಳು.

ಬಾಲುರವರೆ, ಒಂದು ಒಳ್ಳೆಯ ಮತ್ತು ಆಶ್ಚರ್ಯಕರ ಸುದ್ದಿಯನ್ನು ತಿಳಿಸಿದ್ದೀರ ಅದು ಕನ್ನಡದಲ್ಲಿ ೬೦೦೦ ಬ್ಲಾಗುಗಳಿವೆಯೆನ್ನುವುದು. (ನನಗೆ ಗೊತ್ತಿದ್ದ ಮಾಹಿತಿ ಪ್ರಕಾರ ಅವು ೬೦೦ಕ್ಕಿಂತ ಸ್ವಲ್ಪ ಹೆಚ್ಚೆಂದು ತಿಳಿದಿದ್ದೆ). ಬ್ಲಾಗುಗಳಲ್ಲಿ ತೊಡಗಿಸಿಕೊಂಡವರೆಲ್ಲರೂ ಕನ್ನಡದ ಬಗ್ಗೆ ಅಭಿಮಾನದಿಂದ ಆ ಕಾರ್ಯಕ್ಕೆ ಕೈ ಹಾಕಿರುವವರು ಅವರು ಯಾವುದೇ ರೀತಿಯ ಲಾಭಕ್ಕಾಗಿ ಆ ಕೆಲಸ ಮಾಡುತ್ತಿಲ್ಲ. ಒಂದು ಕಾಲದಲ್ಲಿ ಕ.ಸಾ.ಪ. ಕೂಡ ಹಾಗೆಯೇ ಇತ್ತು; ಇಂದು ಅದು ರಾಜಕೀಯ ಮಾಡುವವರ ಚದುರಂಗವಾಗಿದೆ. ಆದ್ದರಿಂದ ಆ ಗಾಳಿ ಬ್ಲಾಗಿಗರಿಗೂ ಸೋಕಿ ಕನ್ನಡಮ್ಮನ ಸೇವೆಯೆನ್ನುವುದು ಸೋಗು ಅಥವಾ ಶೋಕಿಯಾಗುವ ಅಪಾಯವಿದೆ. ಆದ್ದರಿಂದ ಕ.ಸಾ.ಪ. ಬ್ಲಾಗಿಗರ ಸುದ್ದಿಗೆ ಬರದೇ ಇರುವುದೇ ಒಳಿತೇನೋ ಅನಿಸುತ್ತಿದೆ.