`ಡ'ಕಾರದ ಹೆಸರುಗಳಿದ್ದರೆ ಹೇಳಿ...

3.689655

ಸ್ನೇಹಿತರೆ, ಬರೀ ಮಗುವಿಗೆ ಹೆಸರು ಸೂಚಿಸಿ ಅಂತ ಕೇಳ್ತಿದ್ದೀನಿ ಎಂದು ಬೇಜಾರು ಮಾಡಿಕೊಳ್ಳಬೇಡಿ. ಈ ಪ್ರಕರಣ ಸ್ವಲ್ಪ ಕಾಂಪ್ಲೆಕ್ಸ್ ಆಗಿದೆ. ಏನೆಂದರೆ, ನನ್ನ ಸ್ನೇಹಿತರೊಬ್ಬರಿಗೆ ಮೊನ್ನೆ ತಾನೇ ಜನಿಸಿದ ಗಂಡು ಮಗುವಿಗೆ ಒಂದು ಹೆಸರು ಬೇಕಾಗಿದೆ. ಗಂಡು ಮಗುವಿಗೇನು, ಬೇಕಾದಷ್ಟು ಹೆಸರುಗಳು ಸಿಗುತ್ತವೆ ಎನ್ನುತ್ತೀರಾ? ಸಮಸ್ಯೆ ಇರುವುದೇ ಇಲ್ಲಿ. ತುಸು ಸಂಪ್ರದಾಯಸ್ಥರಾದ (ತುಸು ಏನು, ಬಹಳಾನೇ!) ಅವರಿಗೆ ಮಗು ಹುಟ್ಟಿದ ಗಳಿಗೆ, ರಾಶಿ, ನಕ್ಷತ್ರ ಇತ್ಯಾದಿ ಆಧಾರಗಳ ಮೇಲೆ ಇಡಬಹುದಾದ ಹೆಸರು ಬೇಕಂತೆ. ಅಂದರೆ, ಅವರ ಮಗನ ಹೆಸರು `ಡ'ಕಾರದಿಂದ ಆರಂಭವಾಗಬೇಕಂತೆ!!!

`ಡ'ಕಾರದಿಂದ ಆರಂಭವಾಗುವ ಹೆಸರುಗಳ ಬಗ್ಗೆ ಯೋಚಿಸಿ ಯೋಚಿಸಿ ತಲೆ ಕೆಟ್ಟುಹೋಗಿದೆ. ಡಮರೇಶ್, ಡಮರೇಂದ್ರ, ಡೋಗರ ಕಕ್ಕಯ್ಯ, ಡೊಂಬಯ್ಯಗಳಂಥ ಹೆಸರುಗಳೂ ಹಾದು ಹೋದವೆನ್ನಿ. ಆದರೂ `ಡ'ಕಾರದಿಂದ ಆರಂಭವಾಗುವ ಒಂದು ಮಾಡರ್ನ್ ಹೆಸರು ಇನ್ನೂ ತಲೆಗೆ ಹತ್ತಿಲ್ಲ. ಹಾಗಾಗಿ, ನಿಮ್ಮೆಲ್ಲರ ಬಳಿ ಕೇಳಿಕೊಳ್ಳುತ್ತಿದ್ದೇನೆ- `ಡ'ಕಾರದಿಂದ ಆರಂಭವಾಗುವ ಹೆಸರುಗಳಿದ್ದರೆ ಸೂಚಿಸಿ, `ಡಯವಿಟ್ಟು!'

ಈ `ಡ'ಕಾರಾದಿ ಮಗನ ಸಹೋದರಿಯೊಬ್ಬಳು ಈಗ ತಾತ್ಕಾಲಿಕವಾಗಿ ಒಂದು ಹೆಸರಿನಿಂದ ಅವನನ್ನು ಕೂಗುತ್ತಿದ್ದಾಳೆ. ಏನು ಗೊತ್ತೆ?

`ಡೊನಾಲ್ಡ್ ಡಕ್!'

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ,

ಧರಣೀಂದ್ರ ಹೆಸರು ಚೆನ್ನಾಗಿದೆ. ಆದರೆ ಅದು `ಡ'ಕಾರದಿಂದ ಆರಂಭವಾಗುವುದಿಲ್ಲವಲ್ಲ? ಇಂಗ್ಲಿಷ್ನಲ್ಲಿ `ಡಿ'ನಿಂದ ಆರಂಭವಾದರೂ ಕನ್ನಡದಲ್ಲಿ `ಧ' ಆಗುತ್ತದೆ. ಅವರಿಗೆ `ಡ'ಕಾರದಿಂದ ಆರಂಭವಾಗುವ ಹೆಸರುಗಳೇ ಬೇಕಂತೆ.

`ಡಾಂಬರು' ಅಂತ ಇಡಬಹುದಿತ್ತು; ಆದರೆ ಆ ಮಗರಾಯ ಅಷ್ಟು ಕಪ್ಪಗಿಲ್ಲ!!!

ಹುಟ್ಟಿರುವುದು ಗಂಡೋ ಹೆಣ್ಣೋ ? ಜಾತಕದ ಪ್ರಕಾರವೇ ಹೆಸರು ಇಡಬೇಕೆಂದಾದರೆ, ನಮ್ಮಲ್ಲಿ ಕೆಲವು ಅಡ್ಜಸ್ಟ್ಮೆಂಟ್ಸ್ ಇದೆ, ಡ ಬದಲು ದ ಉಪಯೋಗಿಸಬಹುದು ಅದರಲ್ಲಿ ಎನೂ ತೊಂದರೆಯಿಲ್ಲ, ನಿಮ್ಮ ಸ್ನೇಹಿತರಿಗೆ ಈ ವಿಚಾರವಾಗಿ ತಿಳಿಸಿನೋಡಿ.

’ಡಾಣಿ’ ಎಂದು ಇಡಬಹುದೆ? ಉತ್ತರ ಕರ್ನಾಟಕದ ಕಡೆ ಡಾಣಿ ಎಂದರೆ ಸೇವು, ಮಿಕ್ಸ್ಚರ್‌ mixture ಖಾರ ಪದಾರ್ಥ ಎಂದರ್ಥ. ಸಿಹಿ ಜೊತೆ ಒಂದಿಷ್ಟು ಖಾರವೂ ಇದ್ದರೆ ಚೆನ್ನ. ಅಷ್ಟಕ್ಕೂ ಹೆಣ್ಣು ಮಗು ಸಿಹಿ, ಗಂಡು ಖಾರ ಖಾರ. ಹಾಗಂತ ಅಂತಾರಪ್ಪ.

ಒಂದ್ವೇಳೆ ಮಗು ದಪ್ಪ ಇದ್ದರೆ ಡುಮ್ಮ ಎಂದೂ ಇಡಬಹುದು.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಶ್ರೀಮತಿ ಪಲ್ಲವಿ
’ಡುಮ್ಮ’ ಎಂದರೆ ಜೆರ್ಮನ್ ಭಾಷೆಯಲ್ಲಿ dumm = ಮಂಕ, ಮುರ್ಖ, ಗುಲ್ಡು, ಮೊದಲಾದ ಅರ್ಥಗಳುಂಟು.
ಅಂತಹ ಹೆಸರಿರುವ ಮಕ್ಕಳ ಬಾಳು ಶಾಲೆಯಲ್ಲಿ, ಆಟರಂಗಗಳಲ್ಲಿ, ’ಡುಮ್ಮ ಗುಮ್ಮ, ಡುಮ್ಮಣ್ಣ, ಮೊದಲಾಗಿ ಹೀಯಾಳಿಕೆಗೆ ಗುರಿಯಾಗಿ, ಆ ಮಗುವಿಗೆ ತೀರ ಅಹಿತ ಅನುಭವ ಆಗಬಹುದು.
’ಡ’ಯಿಂದ ಪ್ರಾರಂಭ ಆಗುವ ಮಾತುಗಳೇ ಬಹಳ ಕಡಿಮೆ. ಆ ಮಾತುಗಳ ಸಮುದಾಯದಲ್ಲಿ ಮಗುವೊಂದಕ್ಕೆ ಹೆಸರಿಡಲು ಸೂಕ್ತವಾದ ನುಡಿ ಕನ್ನಡ ಕೋಶದಲ್ಲಿ ಒಂದೂ ಕಾಣಲಿಲ್ಲ.
ವಿಶ್ವಾಸಕವಾದ (positive) ಕೆಲವು ಪದಗಳು: "ಡಾಳ = ಹೊಲಪು, ಕಾಂತಿ;/ ಡಿಂಬ = ಶರೀರ;/ ಡೇಗೆ = ಹದ್ದಿನಂತ ಒಂದು ಪಕ್ಷಿ."
ವಿಜಯಶೀಲ

ಡಿಂಡಿಮ???

ಡಿಕ್ಕಿ, ದಿಂಗ್ರಿನೂ ಸರಿಯೇ.

ಹಿಂದೂ ಹೆಸರಾರೆ ಕಷ್ಟ.

ಕ್ರಿಸ್ತರಾದ್ರೆ ಡ್ವೆಯನ್, ಡೇವಿಡ್, ಡಯಾನ, ಡಿಲ್ಬರ್ಟ್ ಅಂತ ಇಡಬಹುದು
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

ಸುರೇಶ್ ಅವರೇ, ಕೊನೆಗೆ ಏನು ಹೆಸರು ಇಟ್ಟರು ಅಂತ ಹೇಳಲೇ ಇಲ್ಲ?

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

ಮುಂದೆ ಡುಮ್ಮಡುಮ್ಮನಾಗಿ ಬೆಳೆದರೆ ಡಿನೋಸಾರಸ್‌ ಎಂದೋ, ಚುರುಕಾಗಿ ಓಡಾಡುವಾಗ ಡೈನಮೋ ಎಂದು ಅಡ್ಡ ಹೆಸರಿಡಬಹುದು ಬಿಡಿ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಅರವಿಂದಕ್ಕ :D

ಸವಿತೃಗೂ ........ ಸಾವಿತ್ರಕ್ಕಗೂ .. ...ಸವಿತಾ ಗೂ ಯತ್ವಾಸ ಐತೆ!

ಸವಿತೃ ಅನ್ನೋನು ಮೇಲು (male).

>ಅದೇನು ಹುಡುಗನ ಫೋಟೋ! ... ತಮ್ಮ ಪ್ರೊಫೈಲ್ ನಲ್ಲಿ?! :) ....ಆಶ್ಚರ್ಯ! ...

>ಅಂದಹಾಗೆ ಅರವಿಂದ ಅಂದ್ರೆ ಕಮಲ ಅಲ್ವ.... ಗಂಡಸರು ಹೂವಿನ ಹೆಸರು ಇತ್ಕಳ್ತಾರ?

ಸವಿತೃ

ಅಲ್ಲಿ ಮಗುವಿಗೆ ಹೆಸರಿಟ್ಟಾಯಿತು. ನೀವು ಇನ್ನೂ ಹೆಸರನ್ನು ಸೂಚಿಸುತ್ತಾ ಇದ್ದೀರಿ. ಮುಂದುವರಿಯಲಿ. ಮಗುವಿಗೆ ಈಗ ಡ ಕಾರದ ಹೆಸರಿಟ್ಟಾಗಿದೆ. ಮುಂದೆ ಆ ಮಗುವಿಗೆ ಮಗುವಾದರೆ ಡ ಕಾರದ ಹೆಸರೇ ಬೇಕಲ್ಲಾ? ಕೆಲವರು ಗಂಡನ ಹೆಸರು, ಹೆಂಡತಿಯ ಹೆಸರು, ಮಕ್ಕಳ ಹೆಸರು ಎಲ್ಲಾ ಒಂದೇ ಅಕ್ಷರದಿಂದ ಪ್ರಾರಂಭವಾಗುವುದನ್ನೇ ಇಡುತಾರಲ್ಲವೇ? ಮುಂದುವರಿಯಲಿ.