ಶುದ್ಧ ಕನ್ನಡ?

2.88889

ನ್ನಡದ ಆಡು ಮಾತು ಬೇರೆ ಭಾಷೆಯ ಅನೇಕ ಪದಗಳನ್ನು ಸಹಜವಾಗಿ ಒಳಗೊಳ್ಳುತ್ತದೆ. ಮಾತನಾಡುವಾಗ, ಕೇಳಿಸಿಕೊಳ್ಳುವಾಗ ಇದು ವಿಚಿತ್ರ ಅನ್ನಿಸುವುದಿಲ್ಲ. ಆದರೆ ಬರೆಯುವ ಕನ್ನಡ ಮಾತ್ರ ಅತ್ಯಂತ ಪ್ಯೂರ್ ಆಗಿರಬೇಕು ಅನ್ನುವ ಭ್ರಮೆ ನಮಗಿದೆ. ಹೌದೆ?
ಕನ್ನಡ ಬರವಣಿಗೆಯಲ್ಲಿ ಸಂಸ್ಕೃತಪದಗಳನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಇಂಗ್ಲಿಷ್ ಪದಗಳ ಬಗ್ಗೆ ಮಡಿವಂತಿಕೆ ತೋರುತ್ತೇವೆ. ಹೀಗೇಕೆ?
ಬರವಣಿಗೆಯ ಕನ್ನಡದಲ್ಲಿ ಇಂಗ್ಲಿಷ್ ಪದಗಳು ಬಂದರೆ ಅದು ಹಾಸ್ಯಕ್ಕಾಗಿ, ಅಥವ ತಾಂತ್ರಿಕ ವಿಷಯಗಳಲ್ಲಿ ಮಾತ್ರ ಎಂಬ ಮಡಿವಂತಿಕೆ ಏಕೆ?
ದಿನಬಳಕೆಯಲ್ಲಿ ಬಳಸುವ ವರ್ಡ್ಸ್ ಗಳನ್ನೆಲ್ಲ ನಮ್ಮ ರೈಟಿಂಗ್ ನಲ್ಲೂ ಯೂಸ್‌ಮಾಡಲು ಹೆಸಿಟೇಟ್ ಮಾಡುವುದೇಕೆ? ಆಡುಮಾತಿಗೆ ಇಲ್ಲದ ಮಡಿವಂತಿಕೆ ಬರವಣಿಗೆಗಷ್ಟೇ ಏಕೆ?
ಇಲ್ಲಿಟರೇಟ್ಸ್ ಎಂದು ಕರೆಯುತ್ತೇವಲ್ಲ ಅವರು ಕೂಡ ಇಂಗ್ಲಿಷ್ ಮಿಕ್ಸ್ ಮಾಡೇ ಮಾತಾಡುತ್ತಾರೆ. ಕನ್ನಡ ಬರವಣಿಗೆಗೆ ಯಾಕೆ ಈ ಅನ್‌ನೆಸೆಸರಿ ಕಟ್ಟುಪಾಡು?
ನಿಮಗೆ ಏನನ್ನಿಸುತ್ತದೆ? ಕಾರಣ ಏನಿರಬಹುದು? ಬರವಣಿಗೆ ಕೂಡ ಫ್ರೀಯಾಗಿ ಇರಬೇಕಲ್ಲವಾ?
ಓ.ಎಲ್.ಎನ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲದೇ ಮಾತಿಗೆ ಸಹಜವಾದದ್ದೆಲ್ಲಾ ಬರಹಕ್ಕೂ ಸಹಜವಾಗಲೇಬೇಕೆಂದೇನಿಲ್ಲ. ಬರಹಕ್ಕಿಂತ ಮಾತು ಹೆಚ್ಚು ಆಪ್ತ, ಸಹಜ, ಸಲೀಸು. ಆದ್ದರಿಂದ ಮಾತು ಬರಹಕ್ಕಿಂತ ಹೆಚ್ಚು ಅನೌಪಚಾರಿಕವಾದದ್ದು ಸಹಜವೇ. ಆದ್ದರಿಂದಲೇ ಮಾತನ್ನು ಬರಹ ಅನುಕರಿಸಿದರೆ, ಅಥವ ಬರಹವನ್ನು ಮಾತು ಅನುಕರಿಸಿದರೆ ಅದು ಅಸಹಜವೆನ್ನಿಸಿ ಅಲ್ಲಿ ’ಹಾಸ್ಯ’ ಹುಟ್ಟುತ್ತದೆ. ಅದು ಹಾಸ್ಯದ ಸನ್ನಿವೇಶವಲ್ಲದಿದ್ದರೆ ಅಲ್ಲಿ ಅದು ಹಾಸ್ಯಾಸ್ಪದವಾಗುತ್ತದೆ. ಇದನ್ನು ಹಾಸ್ಯಬರಹದಲ್ಲೇ ಹೆಚ್ಚಾಗಿ ಬಳಸುವ ಉದ್ದೇಶ ಇದು. ಕೈಲಾಸಂ ಈ ಪ್ರಯೋಗಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ. ಮತ್ತೆ, ಮಾತನ್ನು ಬಿಟ್ಟು ಬರಹಕ್ಕೇ ಬಂದರೂ ವಿವಿಧ ರೀತಿಯ ಬರಹಗಳಿಗೆ ವಿವಿಧ ರೀತಿಯ ಶೈಲಿಯನ್ನು ಬಳಸುತ್ತೇವೆ. ವರದಿಯಲ್ಲಿ ಬಳಸುವ ’ವಸ್ತು ನಿಷ್ಠ’ ಮಾದರಿಯನ್ನು ಕಾವ್ಯಕ್ಕೆ ಬಳಸಿದರೆ ಅದು ಸಪ್ಪೆಯಾಗುತ್ತದೆ. ಹಾಗೆಯೇ ಕಾವ್ಯದ ಅಮೂರ್ತ, ವಿವಿಧಾರ್ಥ ಹೊರಡಿಸುವ ಶೈಲಿಯನ್ನು ವರದಿಗೆ ಬಳಸಿದರೆ ದೇಶದಲ್ಲಿ ಕೋಲಾಹಲವುಂಟಾಗುತ್ತದೆ :) ಕೇವಲ ಮಾತಿನಲ್ಲೂ - ನಾಲ್ಕು ಗೆಳೆಯರ ಮಧ್ಯ ಕೂತು ಹರಟುವ ಶೈಲಿಯೇ ಬೇರೆ, ವೇದಿಕೆಯ ಮೇಲೆ ನಿಂತು ಮಾತಾಡುವ ಶೈಲಿಯೇ ಬೇರೆ, ವಿಧಾನಸಭೆಯಲ್ಲಿ ’ಚರ್ಚಿಸುವ’ ಶೈಲಿಯೇ ಬೇರೆ ;) ಎಲ್ಲದಕ್ಕೂ ಒಂದೇ ಮಂತ್ರವನ್ನು ಬಳಸುವುದಕ್ಕೆ ಹೊರಟರೆ ವಿಪರೀತ ಫಲವೇ ದೊರೆತೀತು

Pages