ಈ ಹೂವು ಯಾವುದು ಹೇಳಿ ನೋಡೋಣ?

4

(ಕನ್ನಡದ ಹೆಸರು ತಿಳಿಸಬೇಕು)

ಪೂರ್ಣ ಚಿತ್ರವನ್ನು ನೋಡೋದಕ್ಕೆ thumbnail ಮೇಲೆ ಕ್ಲಿಕ್ ಮಾಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರುಳಿ ಹೂವು.
ಸುವಾಸನೆಯಿಂದಕೂಡಿದೆ.
ಕರಾವಳಿ ಕಡೆ ಜಾಸ್ತಿ ಇದೆ.
ದೇವರ ಪೂಜೆಗೂ,ಹೆಂಗಸರ ತಲೆಗೂ ಚಂದ.
ಮೊಗ್ಗಿನಲ್ಲಿ ಸುರುಳಿಸುತ್ತಿದ್ದು ನಂತರ ಅರಳುವುದಕ್ಕೆ ಈ ಹೆಸರು ಬಂದಿದೆ.

ಸುಗಂಧಿ ಹೂವು ಅಂತ ನಮ್ಮೂರಲ್ಲಿ ಕರೀತಾರಪ್ಪ. ಸ್ವಲ್ಪ ಲೋಳೆ ಜಾತಿಯ ಗಿಡ. ತಂಪಿನ ಜಾಗ ಬೇಕು. ಭೀಮ ದ್ರೌಪದಿಗೆ ಸ್ವರ್ಗದಿಂದ ಈ ಹೂವನ್ನು ತಂದು ಮುಡಿಸಲು ಹೊರಟಾಗ ದಾರಿಯಲ್ಲಿ ಹನುಮಂತನ ಪರಿಚಯವಾಯಿತೆಂಬ ಕತೆ ಕೇಳಿದ್ದೇನೆ (ಯಕ್ಷಗಾನ ಪ್ರಸಂಗವೂ ಇದೆ).

ಇದಕ್ಕೆ ಇಂಗ್ಲಿಷ್ನಲ್ಲಿ Butterfly White Ginger Lily or Garland Flower ಅಂತ ಹೆಸರು. ಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಇಲ್ಲಿ ಕನ್ನಡದ ಹೆಸರಿನ ಜೊತೆಗೆ ಬೇರೆ ಭಾಷೆಯ ಹೆಸರನ್ನು ಕೊಟ್ಟಿದ್ದಾರೆ. http://www.flowersof...

ನಾಡಿಗರೇ, ಅದನ್ನು ನ೦ಜುಬಟ್ಟಲು ಅ೦ಥ ನಮ್ಮ ಶಿವಮೊಗ್ಗದ ಕಡೆ ಹೇಳೋಲ್ಲ! ನ೦ಜಬಟ್ಟಲು ಹೂವು ಆಕಾರದಲ್ಲಿ ಸಣ್ಣದು ಹಾಗೂ ನಾನು ಕ೦ಡಿದ್ದು ಎರಡು ಜಾತಿಯ ನ೦ಜು ಬಟ್ಟಲು ಹೂವುಗಳನ್ನು. ಒ೦ದು ಜಾತಿಯ ಹೂವು ತೆಳ್ಳಗಾಗಿ ಒ೦ದೇ ಪದರವನ್ನು ಹೊ೦ದಿರುತ್ತದೆ. ಇನ್ನೊ೦ದು ಸ್ವಲ್ಪ ದಪ್ಪದಾಗಿದ್ದು ಎರಡು ಮೂರು ಪದರಗಳನ್ನು ಹೊ೦ದಿರುತ್ತದೆ. ( ಉತ್ತರ ಕರ್ನಾಟಕದಲ್ಲಿ ಅದೂ ಹೊನ್ನಾವರ, ಗೋಕರ್ಣಗಳ ಕಡೆ ಹೆಚ್ಚು ನಾನು ಕ೦ಡಿರೋದು.)