ಅಚ್ಚ ಕನ್ನಡದ ಹೆಸರುಗಳು

3.333335

ನಮ್ಸ್ಕಾರ ಎಲ್ಲರಿಗು,

ನನಗೆ ಒಂದು ಚಿಕ್ಕ ಸಹಾಯ ಬೇಕಾಗಿದೆ.

ಅಚ್ಚ ಕನ್ನಡದ ಹುಡುಗ ಹುಡುಗಿ ಹೆಸರುಗಳನ್ನ ಪಟ್ಟಿ ಮಾಡುವಲ್ಲಿ ನನಗೆ ಸಹಾಯ ಮಾಡುತ್ತೀರ? ಉದಾಹರಣೆಗೆ, ದೊರೆ, ಅರಸು ಅನ್ನೊ ಹೆಸರುಗಳು ಅಚ್ಚ ಕನ್ನಡದ್ದು ಎಂದು ನಾನು ಭಾವಿಸಿದ್ದೇನೆ. ಆದರೆ, ಸೂರ್ಯ, ಚಂದ್ರ, ಪವನ್ ಅನ್ನೊ ಹೆಸರುಗಳು ಸಂಸ್ಕೃತದಿಂದ ಬಂದಿರುವಂತದ್ದು.

ಹುಡುಗ:
ದೊರೆ
ಅರಸು

ಹುಡುಗಿ:

ಸಿಗುವ,
ದೀಪಕ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲಿ ವಸಿ ಹೆಸರುಗಳನ್ನು ಕೊಡಲಾಗಿದೆ. ನೋಡಿ. ಎಲ್ಲಾ ಕಾಮೇಂಟ್ ಗಳನ್ನು ಓದಿ.
http://sampada.net/article/716

ಅಲ್ಲಿ ಕೊಟ್ಟಿರುವ ಕೆಲವು ಹಸರುಗಳು( ಕನ್ನಡ/ಸಕ್ಕದ ಮಾದರಿಯಲ್ಲಿ ಕೊಡಲಾಗಿದೆ)
ಹೊಸತ್/ನವೀನ,
ಐಸಿರಿ/ಐಶ್ವರ್ಯ,
ಕದಿರ್ (ಮಿಂಚು)/ಪ್ರಕಾಶ
ನನ್ನಿಗ/ಸತ್ಯನಾಥ,
ತಿಂಗಳ/ಚಂದ್ರ,
ನೇಸರ/ಸೂರ್ಯ,
ಸಿರಿ ,
ಮೈಸಿರಿ/ಸುತನು,
ಐಸಿರಿ/ಐಶ್ವರ್ಯ,
ಉಲಿಗಾತಿ/ವಾಗ್ದೇವಿ,
ಪೆರಿಯಪ್ಪ/ಮಹೇಶ
ಮೆರೆಗಾರ/ವಯ್ಬವ
ಚನ್ನೀಲ/ಸುನೀಲ
ತುರುಕಾವ/ಗೋಪಾಲ ( ದನಕಾಯೋನು )
ಸಿರಿನೆಲೆಗಾರ/ಶ್ರೀನಿವಾಸ
ಮಾರ/ಮನ್ಮಥ
ಮೀನ್ಗಣ್ಣೆ/ಮಿನಾಕ್ಷಿ
ಬಯಕೆಗಣ್ಣೆ/ಕಾಮಾಕ್ಷಿ
ನಲ್ಗಾರ/ಶಂಕರ

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಇದೊಂದು ಒಳ್ಳೆ ಕೆಲಸ ಇಂತ ಪಟ್ಟಿ ಬೇಕು.

ನಂಜುಂಡ ಸ್ವಾಮಿಗಳು ಅವರ ಮಗಳಿಗೆ ಚುಕ್ಕಿ ಅಂತ ಹೆಸರು ಇಟ್ಟ್ರು.
ಬೆಳ್ಳಿ, ಮಲ್ಲಿ, ಜಾಜಿ, ಚೆನ್ನಿ, ಸಿಹಿ, ಗುಬ್ಬಿ, ಸುವ್ವಿ, ಮಂಜು, ಚಿಗುರು, ಸೆಮಂತಿ, ತುಂಗಾ, ಕಾವೇರಿ, ಗಂಗೆ,

ಒಬ್ಬವ್ವ, ಅಬ್ಬಕ್ಕ ಹೆಂಗೆ ಬಿಡಿಸೊದು? ಒಬಿ, ಅಬ್ಬಿ?

ಗಂಡುಗಲಿ, ಪೆರ್ಮಾಡಿ. ಯೂರೆಲ್ಲ ವೀರಬಂಟರು :)