Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

0

ಬಿಝಿ.

ಯಾರಾದರೂ ಈ ಆಂಗ್ಲ ಪದಕ್ಕೊಂದು ಅಷ್ಟೇ ಚುಟುಕಾದ ಮತ್ತು ಅದೇ ಅರ್ಥ ಕೊಡುವ ಅಪ್ಪಟ ಕನ್ನಡ ಪದ ಹುಡುಕಿ ಕೊಡುತ್ತೀರಾ?
ವ್ಯಸ್ತ, ನಿರತ - ಇವೆಲ್ಲ ಸಂಸ್ಕೃತ ಮೂಲದ್ದು. ಅವು ಬೇಡ. ಕನ್ನಡದ್ದೇ ಪದ ಬೇಕಾಗಿದೆ. ತದ್ಭವವಾದರೂ ಆದೀತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಡಿಬಿಡಿ, ಬಿಡುವಿಲ್ಲ ಈ ಥರದ ಅಪ್ಪಟ ಕನ್ನಡ ಅರ್ಥಗಳು.
ನಮ್ಮ ಕಡೆ ಅಂತೂ ನಾವು ಮಾತಾಡುವಾಗ ’ನಾನು ಸ್ವಲ್ಪ ಗಡಿಬಿಡಿಯೊಳಗದೀನಿ ಆಮೇಲೆ ಸಿಗತೀನಿ’ ಅಂತ ಹೇಳತೀವಿ.
ಅಥವಾ ನನಗೀಗ ಬಿಡುವಿಲ್ಲ ಅಂತ ಹೇಳತೀವಿ.
ಇನ್ನೊಂದು ತಿಳಕೋರಿ ಏನಂದ್ರ ’ಆಂಗ್ಲ ಭಾಷೆ ಪದಗಳಿಗಷ್ಟೆ ಒಂದು ಶಬ್ದಕ್ಕೆ ಎರಡು ಅಥವಾ ಹೆಚ್ಚು ಅರ್ಥ ಅದಾವು ಅಂತ ತಿಳಕೊಂಡೀರಿ. ಅದೇಥರ ಕನ್ನಡದಾಗೂ ಅದಾವು’ ಅವುನ್ನ ನೀವು ಎಲ್ಲಿಯೂ ಬಳಸಂಗಿಲ್ಲ ಅಂತ ಕಾಣಿಸುತ್ತ.
ಅಂದಂಗ ’ಕ್ಯಾರೆಟ್’ಗೆ ಕನ್ನಡದಾಗ ಏನಂತೀರಿ..
ನಿಮ್ಮ ಕನ್ನಡ ಶಬ್ದ ಸಂಗ್ರಹ ಜಾಸ್ತಿ ಮಾಡಕೋರಿ.

ನಿಮ್ಮವ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.

ಸುನಿಲ.
’ಬಿಸಿ’ ಅನ್ನುವುದು ಇಷ್ಟವಾಯಿತು. ’ಬಿಜಿ’ ಕೂಡ ಪರವಾಗಿಲ್ಲ :)

"ಬಿಡುವಿಲ್ಲ" ಅನ್ನುವುದು busy ಇದರಷ್ಟು ಚುಟುಕಾಗಿಲ್ಲ, ಅಲ್ಲದೇ ಅದು ಒಂದೊರೆ (single word) ಅಲ್ಲ. ’ಅಬಿಡುವು’ ಅಂತ ಇದ್ದಿದ್ರೆ ಚೆನ್ನಾಗಿತ್ತೇನೋ :) ಇದನ್ನು ಇನ್ನೊಂದು ಸರಣಿಯಲ್ಲಿ ಚರ್ಚಿಸೋಣ.

"ಅಬಿಡುವು"
ಇದು ತೀರಾ ಕೆಟ್ಟ alternative. ಇದಕ್ಕಿಂತ ತತ್ಸಮ ಪದ ಬಳಸಿ 'ನಿರತ' ಅಥವಾ 'ವ್ಯಸ್ತ' ಅನ್ನುವುವೇ ವಾಸಿ ಅನ್ನಿಸುತ್ತದೆ.
ಕನ್ನಡ ಪದಗಳನ್ನು ಸ್ವಂತಿಕೆ ಮತ್ತು ಸ್ವತಂತ್ರವಾಗಿ ಬೆಳಿಸಹೊರಟವರು ಇಂಥ ಅತ್ತ ಸಂಸ್ಕೃತವೂ ಅಲ್ಲ ಇತ್ತ ಕನ್ನಡವೂ ಅಲ್ಲದ ಎಡಬಿಡಂಗಿ ಪದಗಳನ್ನು ಕಟ್ಟಬಾರದಲ್ಲವೆ!!

"ಏರಿದವನು ಚಿಕ್ಕವನಿರಬೇಕು"

ಹವುದು ಅಬಿಡುವು ಅಸರಿ ಮತ್ತು ಅಕನ್ನಡ ಅಪಪ್ರಯೋಗ :)

ಸರ್‍ ಪಾಪಾ ನನ್ ಹಾಗೆ ಚಿಕ್ಕ ಹುಡುಗ.. ತಿಳಿ ಹೇಳಿ.. ಸರಿಪಡಿಸಿದಕ್ಕೆ ನನ್ನಿ...

ನಿರತ ಒಪ್ಪಬೋದು.. ವ್ಯಸ್ತ ಸಲ್ಲದು...!ವ್ಯ ಕನ್ನಡ ಪ್ರಯೋಗವಲ್ಲ.. ಬರೀ ಸಂಸ್ಕೃತದ್ದು.. ಆದ್ರೂ ಇವೆರಡು ಕನ್ನಡಿಗರಿಗೆ ಗ್ರಾಹ್ಯದುರ್ಗಮ ಯಥಾಪ್ರಕಾರ ಸಂಸ್ಕೃತಪದಗಳ ಕ್ಲಿಷ್ಟಸ್ವಭಾವದಿಂದ :) ( ನನಗೆ ನಿಮಗೆ ಬಿಡಿ.. ಸಂಸ್ಕೃತ ಕಲಿತು ತಲೆಬಲಿತಿದೆ ಎಂಬ ಭ್ರಾಂತರು :) )

ರತ ಅಂದ್ರೂ ಬಿಜಿ, ನಿರತ ಅಲ್ಲಿ ’ನಿ’ ರತದ ಅರ್ಥ ಹೇಗೆ ಬದಲಿಸಿತು? ಯಾರಿಗೆ ಗೊತ್ತು.. ಉಪಸರ್ಗದ ಎಡವಟ್ಟು ಸಂಸ್ಕೃತಕ್ಕೆ ಭಾದೆ.
ಇಲ್ಲ ವ್ಯಸ್ತ = ವಿ + ಅಸ್ತ? ನನಗೆ ಉಪಸರ್ಗ ಇರೋ ಒರೆಗಳೇ ಹಿಡಿಸಲ್ಲ.. ಎಡವಟ್ಟೋ ಎಡವಟ್ಟು... ಆಹಾರಪ್ರಹಾರಪ್ರತ್ಯಾಹಾರ ಯಪ್ಪ!

ಬಿಜಿ ಇದೇ ಎಲ್ಲದಕ್ಕಿಂತ ಮೇಲು.. ನನಗೆ ನಾನು ’ಬಿಸಿ’(I am hot) ಅಂತ ಹೇಳಿಕೊಳ್ಳಕ್ಕೆ ಕುಶಿ ಆದ್ರೆ, ಸೊಲ್ಪ ಮುಜುಗರ! :)

ಬಿಡುವಿಲ್ಲ.. ಅನ್ನೋದೇ ಅಪಟ್ಟ ಕನ್ನಡ ಒರೆ. ಅದು ಪ್ರೀ ಇಲ್ಲ ಅನ್ನೊದಕ್ಕೆ ಸಮವಾಗಿ ಬಿಜಿ ಎಂದೇ ಅರ್ತಕೊಡುವುದು.....

ನಾನು ಬಿಡುವಿಲ್ಲ ಎಂದು ಹೇಳಕ್ಕೆ ಇಶ್ಟಪಡ್ತೀನಿ... ಇದು ಒಂದೇ ಒರೆ ಕೂಡ
=====================================
ಮಾಯ್ಸ!

"ನನಗೆ ನಿಮಗೆ ಬಿಡಿ.. ಸಂಸ್ಕೃತ ಕಲಿತು ತಲೆಬಲಿತಿದೆ ಎಂಬ ಭ್ರಾಂತರು "
ಆದ್ರೂ ಭಾಳ ಜಾಣ್ರು, ನಿಮ್ಮ ನೆಪ ಮಾಡ್ಕೊಂಡು ನನ್ನ ಸೋಟೆನೂ ತಿವಿದ್ರಿ.
ನೀವು ಗಮನಿಸಿದ್ರೋ ಇಲ್ವೋ ನಾನು ನಿರತ ಮತ್ತು ವ್ಯಸ್ತ ಅನ್ನೋ ಬದಲಿ ಪದಗಳನ್ನು ಕೊಟ್ಟಿದ್ದು ಅಬಿಡುವು ಅನ್ನುವುದು ಸರಿಯಲ್ಲ ಅನ್ನುವ ಸಂದರ್ಭದಲ್ಲಿ.

"ಏರಿದವನು ಚಿಕ್ಕವನಿರಬೇಕು"

'ಅ' 'ಅನ್' ಬಳಸಿ ನಿಶೇದಾರ್ತಕ ಪದ ಮಾಡುವುದು ಇಂಡೊ-ಯೂರೋಪಿಯನ್ ನುಡಿಗಳ ಗುಣ. ಕನ್ನಡಕ್ಕೆ ಹೊಂದುವುದಿಲ್ಲ.
ಸಕ್ಕದ :
ಧರ್ಮ x ಅಧರ್ಮ, ಸುರ x ಅಸುರ

ಇಂಗಲೀಸ್:
able x unable, interesting x unintereseting

ದಯವಿಟ್ಟು 'ಅಬಿಡುವು' ಎಂಬ ಪದಗಳನ್ನು ಮಾಡಬೇಡಿ. :(
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು