ಕನ್ನಡದಲ್ಲಿ ಪ್ರಶ್ನೋತ್ತರ

0

’ಪ್ರಶ್ನೆ’ ಮತ್ತು ’ಉತ್ತರ’ ಇವುಗಳಿಗೆ ಅಪ್ಪಟ ಕನ್ನಡ ಪದಗಳೇನು?

ಉತ್ತರಕ್ಕೆ ಬಹುಶ ’ಬದಲು’ ಎಂಬುದು ಸರಿಯಾಗುವುದೇನೋ. ಆದರೆ ’ಪ್ರಶ್ನೆ’ಗೆ ಏನೂ ಹೊಳೆಯುತ್ತಿಲ್ಲ. ಗೊತ್ತಿದ್ದವರು ದಯವಿಟ್ಟು ತಿಳಿಸಿ.

ಜೊತೆಗೆ, ಈ ಎರಡು ಪದಗಳಿಗೆ ತದ್ಭವಗಳು ಏನಾದರೂ ಇವೆಯೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

'ಪ್ರಶ್ನೆ ' ಗೆ ಕನ್ನಡದಲ್ಲಿ 'ಕೇಳ್ಮೆ', 'ಉತ್ತರ'ಕ್ಕೆ 'ಮರುಲಿ'(ಮರು+ಉಲಿ) ಅತ್ವ 'ಉಲಿ' ಬಳಸಬಹುದು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಪ್ರಶ್ನೆಯ ತದ್ಭವ ... ? ಗೊತ್ತಿಲ್ಲ.

ತಮಿಳಿನಲ್ಲಿ, ಪ್ರಶ್ನೆಯನ್ನು ಪ್ರಚ್ಹನೈ ಎಂದು ತದ್ಭವೀಕರಿಸಿದ್ದಾರೆ, ಹಾಗೇ ಅದರ ಅರ್ಥವೂ question ಅನ್ನುವುದಕ್ಕೆ ಬದಲು, ಇನ್ನೂ ವಿಶಾಲವಾದ ಹರಹಿನ issue ಅನ್ನುವ ಅರ್ಥ ದಲ್ಲಿ ಬಳಸುತ್ತಾರೆ.

ಅಲ್ಲಿ, ಪ್ರಶ್ನೆ, ಉತ್ತರಕ್ಕೆ ಕೇಳ್ವಿ, ಬದಿಲ್ ಅನ್ನುವ ಪದಗಳ ಬಳಕೆ ಇದೆ.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

'ಹೇಳು-ಕೇಳು' , 'ಹೇಳಿಕೆ-ಕೇಳಿಕೆ' , 'ಹೇಳಿ-ಕೇಳಿ' ಎಂಬ ನುಡಿಗಟ್ಟುಗಳು ಕನ್ನಡದಲ್ಲಿ ಬಳಕೆಯಲ್ಲಿವೆ. 'ಪ್ರಶ್ನೆ-ಉತ್ತರ' ಕ್ಕೆ ಸರಿಸಮಾನವಾಗಿ ಬಳಸುತ್ತೀವಿ.

ಹಾಗಾಗಿ ...
ಪ್ರಶ್ನೆ = ಕೇಳಿಕೆ, ಕೇಳ್ಮೆ ಇತ್ಯಾದಿ.
ಉತ್ತರ = ಹೇಳಿಕೆ, ಮತ್ತು ಇದರಿಂದ ಉಂಟಾಗಬಲ್ಲ ಪದ.

ಸವಿತೃ