ಏಕೆ ಹೀಗೆ ಅನಿಸುತ್ತದೆಯೋ!

0

ಬೆಳ್ಳಂಬೆಳಿಗ್ಗೆ ವಾಕಿಂಗ್‌ ಹೋದಾಗ, ಸುತ್ತ ಮುತ್ತ ತುಂಬಿರುವ ಶಾಂತಿ, ನಿರಾಳತೆ, ಸೊಬಗನ್ನು ನೋಡಿ ನಿಮಗೆ ಏನು ಅನ್ನಿಸುತ್ತದೆ?

ಇದರ ಹಿಂದೆ ಯಾವುದೇ ಎಳೆ ಇದೆ. ಅದೇ ಇವೆಲ್ಲವನ್ನೂ ಬಂಧಿಸಿದೆ. ಒಂದಕ್ಕೆ ಇನ್ನೊಂದನ್ನು ಆಸರೆಯಾಗಿ ಮಾಡಿದೆ ಎಂದು ಅನಿಸುವುದಿಲ್ಲವಾ? ನಾನಂತೂ ಪ್ರತಿಯೊಂದು ಸೊಗಸಿನ ಹಿಂದೆ, ನೋವಿನ ಹಿಂದೆ ಇಂಥದೊಂದು ಎಳೆ ಹುಡುಕುತ್ತಲೇ ಡಿಗ್ರಿ ಮುಗಿಸಿದೆ. ಹಲವಾರು ಗೆಳತಿಯರೊಂದಿಗೆ ಈ ಬಗ್ಗೆ ಚರ್ಚಿಸಿ ಬೈಸಿಕೊಂಡೆ. ವಯಸ್ಸಿಗೆ ತಕ್ಕ ಹಾಕಿರಬೇಕು ಎಂದು ಬುದ್ಧಿ ಹೇಳಿಸಿಕೊಂಡೆ. ವಯಸ್ಸಿಗೆ ತಕ್ಕಂತೆ ಇರುವುದು ಅಂದರೆ ಏನು? ನಮ್ಮ ಯೋಚನೆಗಳನ್ನು ವಯಸ್ಸು ನಿರ್ಧರಿಸಬೇಕೆ ಅಥವಾ ನಮ್ಮ ನಮ್ಮ ವಿಚಾರಗಳೆ?

ಇಂತಹ ಪ್ರಶ್ನೆಗಳು ನಿಮ್ಮನ್ನೂ ಕಾಡಿವೆಯೆ? ಇವೆಲ್ಲ ಘಟನೆಗಳ ಹಿಂದೆ, ಪೋಣಿಸಿಟ್ಟಂತಹ ಬೆಳವಣಿಗೆಗಳ ಹಿಂದೆ ಯಾವುದೋ ಒಂದು ಶಕ್ತಿ ಇದೆ ಎಂದು ಅನಿಸುತ್ತಿಲ್ಲವೆ? ದೇವರೆನ್ನಿ, ಪ್ರಕೃತಿ ಎನ್ನಿ, ಅಥವಾ ಭೌತಶಾಸ್ತ್ರದ ನಿಯಮಗಳು ಎನ್ನಿ, ಒಂದು ವಿಶಿಷ್ಟ ಶಕ್ತಿ ಖಂಡಿತ ಇದೆ. ಅದನ್ನು ನೆನೆದರೆ ಅಚ್ಚರಿಯಾಗುತ್ತದೆ. ಅಲ್ಲವೆ?

ನನ್ನ ವಾದವನ್ನು ನೀವು ಖಂಡಿಸಬಹುದು. ಬೆಂಬಲಿಸಬಹುದು. ಒಂದು ಆರೋಗ್ಯಕರ ಚರ್ಚೆಗೆ ಕಾರಣವಾಗಬಹುದು. ಆದರೆ ನನ್ನ ಮನಸ್ಸು ಮಾತ್ರ ಆ ಎಳೆಯನ್ನೇ ಎಲ್ಲೆಡೆ ಕಾಣುತ್ತ ಹೊಸ ಅರ್ಥವನ್ನು ಕಂಡುಕೊಳ್ಳುತ್ತ ಇದೆ. ಅದೆಲ್ಲ ಹೋಗಲಿ, ಬಾಬು ಸಿಂಗ್‌ ಠಾಕೂರ್‌ ಪೇಢಾ ತಿಂದಾಗಾದರೂ ನಿಮಗೆ ಇಂತಹ ಅನುಭವ ಆಗಿರಲಿಲ್ಲವೆ? ಹೇಳಿ?

- ಪಲ್ಲವಿ ಎಸ್‌.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲರೂ ವಿಚಾರಗಳನ್ನು ತಿಳಿದುಕೊಳ್ಳುವ ದಿಟ್ಟಿಕೋನ ಅತವಾ perception ಬೇರೆ ಬೇರೆ ಇರುತ್ತದೆ. ನನ್ನ ಗೆಳೆಯನೊಬ್ಬ ಇದಾನೆ, ಏನೇ ಮಾತು ತೆಗೆದರೂ mind and conscience ಗಳಿಗೆ ಬಂದು ನಿಲ್‍ತಾನೆ. ಕೊಂಚ ವಿಚಾರ ಮಾಡಿದರೆ ಎಲ್ಲಾನೂ ಮೈಂಡ್ ಗೇಮ್ ಅಸ್ಟೇ. ಮನಸ್ಸು ನಲಿವಿನಲ್ಲಿದ್ದಾಗ ಎಂತ ಸಂತೆಯಲ್ಲಿದ್ದರೂ ಮನಸ್ಸು ಸಂತಸದಿಂದ ನಲಿಯುತ್ತಿರುತ್ತದೆ. ಮನಸ್ಸಿಗೇ ಏನೋ ಬೇಸರವಿದ್ದಾಗ, ಸಂತೆ ಗದ್ದಲ ಅನಿಸುತ್ತೆ, ಶಾಂತ, ನೀರವ ವಾತಾವರಣ irritating ಅನಿಸಿ, ಮಂದಿ ಇರುವ ಕಡೆ ಓಡಿ ಹೋಗೋಣ ಅನಿಸುತ್ತೆ.
ಅದು ಇರಲಿ, ಇಲ್ಲಿ ನೀವು ಹೇಳಬಯಸುತ್ತಿರುವದು, ಏನೇ ನಡೆದರೂ ಅದರ ಹಿಂದೇ ಕಾಣದ ಕೈಗಳ ಆಟವಿದೆ ಎಂದೇ? ಅಂತಾರಲ್ಲ, ಒಂದೊಂದು ಹುಲ್ಲಿನ ಕಡ್ಡಿಯೂ ದೇವರ ಬಯಕೆಯಿಂದಲೇ ಅಲುಗುವದು. ಮೊಟ್ಟಮೊದಲು ದೇವರು ಅಂದರೆ ಏನು? universal governing power(UGP) ಅದೇನಾ ದೇವರು? ದೇವರು ಅವರವರಿಗೆ ಅವರವರಂತೆ ತೋರುತ್ತಾನೆ. ದೇವರನ್ನು ನೆನೆಯಲು ಅವರವರಿಗೆ ಅವರದೇ ಕಾರಣಗಳಿರುತ್ತವೆ. ಕೆಲವರು ನೆನೆಯದಿದ್ದರೆ ಬವಣೆ, ತೊಂದರೆಗಳನ್ನು ಕೊಟ್ಟಾನೆಂದು ಅಂಜಿಕೆಯಿಂದ ನೆನೆಯುವರು. ಕೆಲವರು ಇಂತಿಂತ ಕಸ್ಟಗಳಿಂದ ದೇವರು ಪಾರು ಮಾಡಿದ, ಮುಂದೆಯೂ ಎಂತದೇ ತೊಂದರೆ, ತೊಡಕಿದ್ದಾಗ ಅಂವ ಪಾರು ಹಾಸುತ್ತಾನೆ ಅಂತ ಒಂದು ಉಪಕಾರ ನೆನೆಯುವ ತುಡಿತ(gratitude)ದಿಂದ ನೆನೆಯುತ್ತಾರೆ. ಆದರೆ ಆ ತೊಂದರೆ, ತೊಡಕು ಬಂದದ್ದಾದರೂ ಯಾರಿಂದ? ಅದಕ್ಕೂ ಹಲವು ಉತ್ತರಗಳನ್ನು ಮಂದಿ ಕಂಡುಕೊಂಡಿದ್ದಾರೆ, ಗ್ರಹಗತಿಗಳಿಂದ ಅಂತ ಕೆಲವರೆಂದರೆ, ಪಾಪ ಕರ್ಮದಿಂದ ಅಂತ ಕೆಲವರು, ಹುಟ್ಟಿನಿಂದ ಅವರು ಅವರಿಗಾದ ತೊಂದರೆಗೆ ಸರಿದೂಗಬಲ್ಲ ತಪ್ಪನ್ನೇ ಮಾಡಿಲ್ಲದವರಾಗಿದ್ದರೆ, ಹಿಂದಿನ ಹುಟ್ಟಿನಲ್ಲಿ ಮಾಡಿದ ಪಾಪ ಅಂತ ಮತ್ತೊಂದು ಉತ್ತರ. ಹಿಂದಿನ ಜನುಮ ಕಂಡವರಾರು?
ಅದು ಸರಿ, ದೇವರ ಬಯಕೆ ಇಲ್ಲದೇ ಹುಲ್ಲು ಕಡ್ಡಿಯೂ ಅಲುಗದೆಂದ ಮೇಲೆ, ನಮಗೊದಗುವ ಬವಣೆಗಳೂ ದೇವರ ಬಯಕೆಯಿಂದಲೇ ಅಂತ ಆಯ್ತಲ್ಲ. ಕೆಟ್ಟದ್ದನ್ನು ಬಯಸುವ ದೇವರು ಅದೆಂತ ದೇವರು? ಅನಿಸಬಹುದಲ್ಲ? ನಮ್ಮ ಬದುಕಿನಲ್ಲಿ ಹೀಗೀಗೇ ನಡೆಯಬೇಕೆಂಬುದನ್ನು ದೇವರು ಆಗಲೇ ತೀರ್ಮಾನಗೈದು, ಕಡತಗಳಲ್ಲಿ maintain ಮಾಡಿ ಇಟ್ಟಿರುವದಾದಲ್ಲಿ, ಏನನ್ನೇ ಆಗಲಿ, ತಲುಪಲು ನಾವು ಹೆಣಗುವದೇಕೆ? ಎಲ್ಲಾನೂ ನಮ್ಮ ಸೊಂತ ಜತನ(ಪ್ರಯತ್ನ)ದಿಂದ ಅಸ್ಟೇ ಸಿಗುವದೇ? ದೇವರ(ಅತವಾ ಬೇರೇ ಎನೇ ಅನ್ನಿ..) ಕೈವಾಡವೇನೂ ಇರುವದಿಲ್ಲವೇ? ಎಸ್ಟೋ ಸಲ, ನಮ್ಮ ಬಯಕೆಯ ಮೇಲ್ ಒಂದನ್ನು ದೇವರಿಗೆ ಕಳಿಸಿ ಸುಮ್ಮನಿರುತ್ತೇವೆ, ಅದೆಂಗೋ ನಮ್ಮ ಆ ಬಯಕೆ ಈಡೆರಿರುತ್ತದೆ, ಅದರ ಬಗ್ಗೆ ದಿಟವಾಗಿ ಬೆರಗು ಮೂಡುತ್ತದೆ. ನನ್ನ ಆಸೆ ಇಸ್ಟು ಲಗುನೇ(ಬೇಗನೆ) ಈಡೆರುತ್ತದೆ ಅಂತ ಅನಿಸೇ ಇರಲಿಲ್ಲ ಅಂತೀವಲ್ಲ, ಆಗ ಇದೆಲ್ಲ ದೇವರ ದಯೆ ಅನ್ನುವ ಮಾತು ತನ್ನಿಂತಾನೆ ಹೊರಬರುತ್ತದಲ್ಲವೇ?
[quote]ಇವೆಲ್ಲ ಘಟನೆಗಳ ಹಿಂದೆ, ಪೋಣಿಸಿಟ್ಟಂತಹ ಬೆಳವಣಿಗೆಗಳ ಹಿಂದೆ ಯಾವುದೋ ಒಂದು ಶಕ್ತಿ ಇದೆ ಎಂದು ಅನಿಸುತ್ತಿಲ್ಲವೆ? ದೇವರೆನ್ನಿ, ಪ್ರಕೃತಿ ಎನ್ನಿ, ಅಥವಾ ಭೌತಶಾಸ್ತ್ರದ ನಿಯಮಗಳು ಎನ್ನಿ, ಒಂದು ವಿಶಿಷ್ಟ ಶಕ್ತಿ ಖಂಡಿತ ಇದೆ. ಅದನ್ನು ನೆನೆದರೆ ಅಚ್ಚರಿಯಾಗುತ್ತದೆ.[/quote]
ಒಂದೊಂದು ನಡೆ(incident) ಹಿಂದೆ ಅದಕ್ಕೆ ಕಾರಣವಾದ ನಡೆಗಳ ಸರಪಳಿಯೇ ಇರುತ್ತದೆ. ಆದರೆ ಇವೆಲ್ಲ ಏಕೆ ನಡಿಯಿತೆಂದು ಕೇಳಿದಾಗ ಅದರ ಹಿಂದೆ ಯಾವುದೋ ಶಕುತಿಯ ಕೈವಾಡ ಇರಬೇಕು ಅನಿಸುತ್ತದೆ. ಅದನ್ನು ನೆನೆದಾಗ ದಿಟವಾಗಿ ಅಚ್ಚರಿಯಾಗುತ್ತದೆ. ಆ ಬೆರಗು ಎಸ್ಟು ಮೊಗೆದರೂ ಹೋಗದು.

ಸಂಗನಗೌಡರೇ,

ನಾನು ದೇವರ ಬಗ್ಗೆ ಚರ್ಚಿಸುತ್ತಿಲ್ಲ. ಅದು ತುಂಬ ದೊಡ್ಡ ವಿಷಯ. ನಾನು ಆಸ್ತಿಕಳಾದರೂ, ದೇವರ ಬಗ್ಗೆ ಚರ್ಚಿಸುವಷ್ಟು ಜ್ಞಾನವಿಲ್ಲ.

ಆದರೂ ಕೆಲವೊಮ್ಮೆ ಮನಸ್ಸು ಆನಂದದಿಂದ ತುಂಬಲು ದೇವರು ಎಂಬ ನೆಪವೇ ಬೇಕಾಗಿಲ್ಲ, ಅಲ್ಲವೆ? ಕಾರಣವಿಲ್ಲದೇ ಖುಷಿಯಾಗುವುದು ಬಹುಶಃ ಎಲ್ಲರ ಅನುಭವದಲ್ಲೂ ಇದ್ದೀತು. ಅಂಥದೇ ಅನುಭವ ನನಗೂ ಆಗಿದ್ದೀತು. ಏಕೆ ಹಾಗಾಗುತ್ತದೆ ಎಂಬುದು ಶುದ್ಧ ಕುತೂಹಲದ ಪ್ರಶ್ನೆಯೇ ಹೊರತು ಖಂಡಿತ ಜ್ಞಾನ ಆಧಾರಿತ ವಿಷಯವಲ್ಲ.

ನನಗೆ ಅನಿಸಿದಂತೆ ಎಲ್ಲರಿಗೂ ಅನಿಸುತ್ತಿರಬಹುದು. ಹಾಗೆ ಅನಿಸದಿದ್ದರೆ ತಪ್ಪು ನನ್ನಲ್ಲೇ ಇರಬಹುದು. ಅಥವಾ ನಾನು ಹಾಗಂದುಕೊಂಡಿರಬಹುದು. ಇರಲಿ ಬಿಡಿ. ಸುಂದರ ದೃಶ್ಯಗಳನ್ನು ನೋಡಿ ಮೆಚ್ಚುವುದಕ್ಕೆ ತರ್ಕದ ಬುನಾದಿ ಏಕೆ ಬೇಕು? ಶಾಲ್ಮಲಾ ಕಣಿವೆಯ ತಣ್ಣನೆ ಗಾಳಿ ಮುಖಕ್ಕೆ ತಾಕಿದರೆ ಕಲ್ಲು ಮನಸ್ಸಿನ ವ್ಯಕ್ತಿಯೂ ಬೇಂದ್ರೆಯಂತೆ ಹಾಡಿಯಾನು. ಕಣವಿಯವರಂತೆ ಮೆದುವಾದಾನು. ಫೇಡೆಯಂತೆ ಮನಸ್ಸನ್ನು ರುಚಿ ಮಾಡಿಕೊಂಡಾನು. ಹಾಗಂತ ನನಗೆ ಅನಿಸುತ್ತದೆ. ಅಥವಾ ಇದು ಧಾರವಾಡದೆಡೆಗಿನ ನನ್ನ ಮೋಹವೆ?

ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ನಿಜ, ಇಂತ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ. ಅನುಭವಿಸುವ ಮನಸ್ಸೊಂದಿದ್ದರೆ ಎಲ್ಲವನ್ನೂ ಕೂಡ ಅಚ್ಚರಿಯಿಂದ ನೋಡಿ ಸುಖಿಸಬಹುದು ಎನ್ನಿಸುತ್ತದೆ. ಅದು ಬರೀ ಬಾಬು ಸಿಂಗ್‌ ಠಾಕೂರ್‌ ಪೇಢಾ ತಿನ್ನುವಾಗಲಷ್ಟೇ ಅಲ್ಲ, ಅದನ್ನು ತಗೋಳಲು ಕ್ಯೂ ನಿಂತಾಗಲೂ ಕೂಡ ಅಷ್ಟೆ :)

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

ವಿಕಾಸ ಹೆಗಡೆಯವರೇ,

ನಿಮಗೂ ಇಂತಹ ಪ್ರಶ್ನೆಗಳು ಕಾಡುತ್ತಿರುವುದು ಓದಿ ಖುಷಿಯಾಯಿತು. ಜೊತೆಗೆ, ಗೆಳತಿಯರು ಹೇಳುವಂತೆ, ಜಗತ್ತಿನಲ್ಲಿರುವುದು ನಾನೊಬ್ಬಳೇ ಹುಚ್ಚಿಯಲ್ಲ ಎಂಬುದೂ ಖಚಿತವಾಯಿತು. ಪೇಢೆ ತಿನ್ನುವಾಗಲೂ ಅಲ್ಲ, ತಗೊಳ್ಳಲು ಸರದಿಯಲ್ಲಿ ನಿಂತಾಗಲೂ ಸುಖವಾಗುತ್ತದೆ ಎಂಬ ಸಾಲುಗಳು ಇಷ್ಟವಾದವು. ಬಹುಶಃ ಕ್ಯೂನಲ್ಲಿ ನಿಮ್ಮ ಮುಂದೆ ಹುಡುಗಿಯರು ನಿಂತಿದ್ದರೇನೋ.

ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಆತರಹ ಪ್ರಶ್ನೆಗಳು ಕಾಡುವವರು ಯಾರೂ ಹುಚ್ಚರಲ್ಲ ಬಿಡಿ. ನೀವು , ನಾನೂ... ಯಾರೂ ಅಲ್ಲ... ಗೆಳತಿಯರಿಗೆ ಹೇಳಿಬಿಡಿ...
ಜಗತ್ತಿನ ಕಣ್ಣಿಗೆ ಹೇಗಾದರೂ ಕಾಣಲಿ... ನಮ್ಮನುಭವ ನಮಗಿರಲಿ..

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

ಇಲ್ಲಿ ಎಲ್ರೂ ಭಾವ ಜೀವಿಗಳೇ...ಎಲ್ರ ಅನಿಸಿಕೆಗಳೂ ಬೊಂಬಾಟ್ ...

ನನ್ನ ಬಲಗಡೆ ಬ್ರೈನ್ ..ಕೆಲ್ಸ ಮಾಡ್ತಾ ಇಲ್ಲ ಅಂತ ನನ್ನ ಅನುಭವಕ್ಕೆ ಬರುತ್ತಾ ಇದೆ! .....ಅತ್ವ ಕಳೆದು ಹೋಗಿದೆ ಅಂತ ಕಾಣುತ್ತೆ. :(

ಸವಿತೃ

ನನಗೆ ಗೊತ್ತಿರುವಂತೆ ಎಡಗಡೆ ಮೆದುಳು ವಿಚಾರ ಮಾಡುತ್ತದೆ. ಬಲಗಡೆ ಮೆದುಳು ಭಾವನೆಗಳನ್ನು ಹಂಚಿಕೊಳ್ಳುತ್ತದೆ. ನಿಮ್ಮ ಬಲ ಮೆದುಳು ಕೆಲಸ ಮಾಡಿರುವುದನ್ನು ನಿಲ್ಲಿಸಿರುವುದು ನಿಮ್ಮ ಎಡ ಮೆದುಳಿಗೆ ತಿಳಿದಿದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಇಲ್ಲ ಬಿಡಿ... ಮೊನ್ನೆ ಮನೆಗೆ ಬಿಟ್ಟು ಬಂದಿದ್ದೆ! :)
ಕೆಲ್ಸ ಮಾಡಲ್ಲ ಅಂತ ಆಗಾಗ್ಗೆ ತುಂಬ ಹಟ ಹಿಡಿಯುತ್ತೆ ;)

ಆದರೂ...... ನಾನು ಬಲ ಮೆದುಳಿಗಿಂತ ಎಡ ಮೆದುಳು ಬಲವಾಗಿರುವ ಅಸಾಮಿನೆ !

ಸವಿತೃ

ಇದೊಂಥರಾ ಭಾವನಾತ್ಮಕ ವಿಚಾರ ಅಂದ್ಕೊತೀನಿ. ಈ ಗಿಡ ಮರಗಳು, ಪ್ರಕೃತಿ ಎಲ್ಲವೂ ಸುಂದರವಾಗಿಯೇ ಕಾಣುತ್ತವೆ..ಯಾವಾಗ? ಮನುಷ್ಯ ಅತಿಯಾಗಿ ಭಾವನಾತ್ಮಕ ಮನಸ್ಸುಳ್ಳವನಾದಾಗ. ಸ್ವಲ್ಪ ಈ ರಾಗ, ಮೋಹ ಗಳನ್ನು ಬಿಟ್ಟು ಹೊರಬಂದು ನೋಡಿ, ನೀವಿರುವ ಸ್ಥಳವೇ ಎಷ್ಟು ಸುಂದರ ಎನಿಸಲಾರಂಭಿಸುತ್ತದೆ. ಒಟ್ಟಿನಲ್ಲಿ ಮನಸ್ಸು ಪ್ರಫುಲ್ಲವಾಗಿದ್ದರೆ ಎಲ್ಲ ಸಮಯವೂ ಹಿತ.

ಪಾರ್ಕು ಹಿತ ಎನಿಸುತ್ತದೆ ಎಂದರೆ, ಅಲ್ಲಿಗೆ ಹೋಗುವ ಮುನ್ನ ಮನಸ್ಸು ಹಲವಾರು ಯೋಚನೆಗಳಲ್ಲಿ ಮುಳುಗಿರುವಾಗ, ರೆಸ್ಟ್ ಲೆಸ್ ಎನಿಸಿದಾಗ ಅಲ್ಲವೇ?

ಕೊನೆಯದಾಗಿ ಈ ಸುಖ, ದುಃಖ ಇವುಗಳು ರಿಲೇಟಿವ್ ಅಲ್ಲವೇ? ನಗರವಾಸಿಯಾದವಗೆ ಕೋಟಿ ದುಡ್ಡು ಸಂಪಾದಿಸಿದರೆ ಸಿಗುವ ಮನಸ್ಥಿತಿ ಸುಖ ಎನ್ನಿಸಿದರೆ, ಕಾಡಲ್ಲಿರುವ ಸನ್ಯಾಸಿಗೆ ಏನೂ ಇಲ್ಲದೆಯೂ ಸುಖ. ಇಲ್ಲಿ ಯಾವನ ಸುಖ ಹೆಚ್ಚು ಎಂಬ ಚರ್ಚೆಯೇ ಅಸಿಂಧು. ಎಲ್ಲಾ ಅವರವರ ಭಾವನೆ ಅಷ್ಟೆ.

ಹೌದು ಮಾಧವ, ಇದು ಖಂಡಿತ ಭಾವನಾತ್ಮಕ ವಿಚಾರವೇ.

ಮನಸ್ಸು ಶಬ್ದದಿಂದ ಮಾನವ ಎಂಬ ಅರ್ಥ ಹುಟ್ಟಿದ್ದು. ಅಂದರೆ, ಮನಸ್ಸು ಇರುವಂಥ ಜೀವ ಎಂದು. ಭಾವನೆಗಳು ಕೆಲವರಿಗೆ ಹಚ್ಚಿರಬಹುದು, ಇನ್ನು ಕೆಲವರಿಗೆ ಕಡಿಮೆ. ಒಟ್ಟಿನಲ್ಲಿ ಭಾವನೆಗಳು ಇದ್ದೇ ಇರುತ್ತವೆ. ಯಾವುದಾದರೂ ಸ್ಥಳ, ವೃತ್ತಿ, ಹವ್ಯಾಸ ಅದನ್ನು ಉದ್ದೀಪಿಸಬಹುದು. ಅದು ತಾತ್ಕಾಲಿಕವಾಗೇ ಇದ್ದರೂ, ಅದನ್ನು ಅನುಭವಿಸುವುದು ಖುಷಿಯ ಸಂಗತಿ.

ನೀವು ಹೇಳಿದ್ದು ನಿಜ: ಸುಖ, ದುಃಖ ಪರಸ್ಪರ ಪೂರಕ. ನಾನು ಯಾವುದು ಹೆಚ್ಚು ಸುಖ ಎಂಬ ಚರ್ಚೆಯನ್ನು ಖಂಡಿತ ಪ್ರಾರಂಭಿಸಿಲ್ಲ. ಒಬ್ಬರಿಗೆ ಹೆಚ್ಚು ಹಿತವೆನಿಸಿದ್ದು, ಇನ್ನೊಬ್ಬರಿಗೂ ಅನ್ನಿಸಬೇಕೆಂದೇನೂ ಇಲ್ಲ. ನನಗೆ ಹೀಗನ್ನಿಸಿತು. ನಿಮಗೂ ಅನ್ನಿಸುತ್ತಿದೆಯಾ? ಎಂದಷ್ಟೇ ಕೇಳಿದ್ದೆ. ಹಾಗೆ ನೋಡಿದರೆ ವಾದವೇ ಬೇರೆ, ಭಾವನೆಯೇ ಬೇರೆ. ’ಅವರವರ ಭಾವಕ್ಕೆ, ಅವರವರ ಭಕುತಿಗೆ, ಅವರವರ ತೆರನಾಗಿ ಇರುತಿಹನು ಶಿವಯೋಗಿ’ ಎಂಬ ಕವಿವಾಣಿ ಸತ್ಯ.

ಉಳಿದಿದ್ದು ಮಿಥ್ಯ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಇಳಿತಾ ಹೋದಂಗೆ ತಿಳಿತಾ ಹೋಗ್ತದಂತೆ.

ಅದಿರ್ಲಿ, ನಾನೇ ಸುಮ್ಮನಿದ್ದೇನೆ. ನೀವು ಸವಿತೃ ಏಕೆ ವಾಕ್ಸಮರ ಶುರು ಮಾಡಿದ್ದೀರಿ?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಪಲ್ಲವಿ ಅವ್ರೇ...

ಅರ್ಥ ಆಗ್ಲಿಲ್ಲ :) .

ಏನು ಇಳಿದಂತೆ ಏನು ತಿಳಿತಾ ಹೋಗುತ್ತೆ ಅಂತ ಬಿಡಿಸಿ ಬರೆದ್ರೆ .. (ಮತ್ತೆ ಎಲ್ಲಿ ವೇದಾಂತ ಕ್ಕೆ ಹೋಗ್ತೀರೋ ಅಂತ ಭಯ ಆಗ್ತ ಇದೆ! ). ನಮ್ಮನ್ತವ್ರು ಅಪಾರ್ಥ / ಅಪಾರ ಅರ್ಥ ಮಾಡಿಕೊಳ್ಳೋ ಚಾನ್ಸು ಬಾಲ ಇರುತ್ತೆ.

ಕೆಲವರಿಗೆ ರಾತ್ರಿ ಹೊತ್ತು ಏರಿದಂತೆ ಏನೇನೋ ತಿಳಿತಾ ಹೋಗುತ್ತೆ :) ...

ಸವಿತೃ

ಇದು ಜ್ಞಾನಪಿಪಾಸುವೊಬ್ಬನ ಪ್ರಶ್ನೆಗೆ ಗುರು ಕೊಟ್ಟ ಉತ್ತರ. ಎಲ್ಲದೂ ಒಮ್ಮೆಗೇ ಅರ್ಥ ಆಗೋಲ್ಲ, ಮನಸ್ಸಿನಾಳಕ್ಕೆ ಇಳಿದಂತೆ, ಒಂದೊಂದೇ ತಿಳಿತಾ ಹೋಗ್ತದೆ ಎಂದು ಗುರು ಉತ್ತರಿಸುತ್ತಾನೆ. ಯಾವುದೇ ಕ್ಷೇತ್ರವಾಗಲಿ, ಎಲ್ಲದೂ ಒಮ್ಮೆಗೇ ಅರ್ಥವಾಗದು.

ಉಳಿದಂತೆ ನಿಮಗೆ ಹೇಳುವಷ್ಟು ದೊಡ್ಡವಳು ನಾನಲ್ಲ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...