ಹುಡುಗರ ಗಮನ ಸೆಳೆಯುವುದು ಹೇಗೆ?

2

ಹುಡುಗಿಯರ ಗಮನ ಸೆಳೆಯಲು ಅಥವಾ ಕೆಣಕಲು ಹುಡುಗರು ಸಿಳ್ಳೆ ಹಾಕುವುದು ಸಾಮಾನ್ಯ. ಆದರೆ, ಹುಡುಗರ ಗಮನ ಸೆಳೆಯಲು ಹುಡುಗಿಯರು ಏನು ಮಾಡಬೇಕು?

ಸಭ್ಯ ಸಲಹೆಗಳಿಗೆ ಮಾತ್ರ ಸ್ವಾಗತ.

- ಪಲ್ಲವಿ ಎಸ್‌.

http://pallavi.dharwad.blogspot.com

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಡುಗರ ಗಮನ ಹುಡುಗಿಯರತ್ತ ಏನು ಮಾಡದಲೆ ಹರಿಯುವುದು ಸತ್ಯ
ಜೋರು ಮಾತಿನ , ವಿಪರೀತ ಅಲಂಕಾರದ ಹುಡುಗಿಯರು ಹುಡುಗರ ಗಮನ ಬೇಗ ಸೆಳೆಯುತ್ತಾರೆ ಅಷ್ಟೆ ಬೇಗ ಮರೆಯಾಗುತ್ತಾರೆ ಅವರ ಮನದಿಂದ
ಮೆದು ಮಾತು ಸರಳ ಅಲಂಕಾರ, ಬುದ್ದಿವಂತಿಕೆ ಇವುಗಳು ಹುಡುಗರನ್ನು ಸೆಳೆಯುವುದು ನಿಧಾನವಾದರೂ ಮನದಲ್ಲಿ ಸದಾ ಕಾಲ ನೆಲೆಸುತ್ತಾರೆ ನೆನಪಾಗಿ ಅವರ ಮನದಲ್ಲಿ

ಯಾರನ್ನು ಸೆಳೆಯುವ ಹೊಂಚು ಹಾಕಿದ್ದೀರಾ ಪಲ್ಲವಿಯವರೇ? :)

http://thereda-mana.blogspot.com/

ರೂಪ

ಹಾಗೇನೂ ಇಲ್ಲ ರೂಪಾ. ಶಾಲ್ಮಲಾ ಕಣಿವೆಯಲ್ಲಿ ಸುತ್ತುತ್ತಿದ್ದಾಗ, ಹಕ್ಕಿಗಳ ವರ್ತನೆ ಕುತೂಹಲ ಹುಟ್ಟಿಸಿತು. ಇಲ್ಲಿ ನವಿಲುಗಳೂ ತುಂಬಾ ಇವೆ. ಗಂಡು ನವಿಲು ನರ್ತಿಸುತ್ತ ಹೆಣ್ಣನ್ನು ಸೆಳೆಯುವುದನ್ನು ನೋಡಿದೆ. ಆಗ ಈ ಪ್ರಶ್ನೆ ಉದ್ಭವಿಸಿತು. ನೋಡೋಣ, ಗಮನ ಸೆಳೆಯುವ ಉತ್ತರ ಬಂದರೆ ಆ ಬಗ್ಗೆ ವಿಚಾರಿಸೋಣ. ಅಲ್ಲವೆ?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಫೊಟೊ ನಂದಂತೂ ಅಲ್ಲ. ಆದರೆ, ಅದಕ್ಕೆ ಹತ್ತಿರವಾಗಿ ಇದ್ದೇನೆ ಎಂದು ಗೆಳತಿಯರು ಹೇಳೋ ಕಾರಣಕ್ಕೆ ಹಾಕಿದ್ದೀನಿ. ಅಷ್ಟೇ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಅಯ್ಯೋ ಶಿವ್ನೇ.. ಮೋಸ ಹೋಗ ಬಿಟ್ನಲ್ಲಪ್ಪ!... ಈ ಫೋಟೋ ಈ ಪಲ್ಲವಿದೆಯಾ ಅಂತ ನಮ್ಬಿಕಂಡಿದ್ನಲ್ಲಪ್ಪ ... ;)

ಆದರೂ ಸೂಪರ್ ಸೆಲೆಕ್ಷನ್ !...

ಅಂದ ಹಾಗೆ ಶ್ರಿಯ ಅನ್ನೋ ಸುಂದರಿ ಯಾರು? .. ಇದು ನೀವೇನಾ?

ಸವಿತೃ

ಮೋಸ ಹೋದ್ರಾ? ಖಂಡಿತ ಇಲ್ಲ. ನೀವು ಮೋಸ ಹೋಗುವಷ್ಟು ಕೆಟ್ಟದಾಗೇನೂ ಇಲ್ಲ ನಾನು. ತಮ್ಮ ಅಸಲಿ ಫೋಟೊ ಹಾಕ್ದೇ ಇರೋದು ಹುಡುಗೀರು ತಗೊಳ್ಳೋ ಮುನ್ನೆಚ್ಚರಿಕೆಗಳಲ್ಲಿ ಒಂದು. ಅದು ಸಹಜವೂ ಹೌದು. ಊಹೆಗೆ ಒಂದಿಷ್ಟು ಅವಕಾಶ ಕೊಡದೇ ಇದ್ರೆ ಹೇಗೆ?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಯಾರನ್ನೂ ಇಲ್ಲ ರೂಪಾ. ಶಾಲ್ಮಲಾ ಕಣಿವೆಯಲ್ಲಿ ಸುತ್ತುತ್ತಿದ್ದಾಗ, ಹಕ್ಕಿಗಳ ನಡವಳಿಕೆ ಕಂಡು ಕುತೂಹಲವಾಯಿತು. ಇಲ್ಲಿ ನವಿಲುಗಳೂ ಇವೆ. ಗಂಡು ನವಿಲುಗಳೂ ನರ್ತಿಸುತ್ತ ಹೆಣ್ಣನ್ನು ಸೆಳೆಯುವ ಯತ್ನ ನೋಡಿದಾಗ ಈ ಪ್ರಶ್ನೆ ಹುಟ್ಟಿತು.

ನೋಡೋಣ, ತುಂಬ ಗಮನ ಸೆಳೆಯುವ ಉತ್ತರ ಬಂದರೆ, ಆ ಕುರಿತು ವಿಚಾರಿಸಿದರಾಯಿತು. ಅಲ್ಲವೆ?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಅದು ಸಹಜ ಪ್ರತಿಕ್ರಿಯೆ. ಆದರೆ, ಹತ್ತಿರ ಹೋಗದೇ ಸೆಳೆಯೋದು ಹೇಗೆ ಅಂತ ನಾನು ಕೇಳಿದ್ದೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಹುಡುಗಿಯ ಚೆಲುವೊಂದೇ ಸಾಕು, necessary ಮತ್ತು sufficient ಕಂಡೀಶನ್. ಆದರೆ ಲುಕ್ಸ್ ಹೊರತಾಗಿ ಹುಡುಗರು ಹುಡುಗಿಯರ ಗಮನ ಸೆಳೆಯಲು ಜತನಗೈಬೇಕಾಗುತ್ತೆ.
ಹುಡುಗರು ಮಾಡುವ ಜತನಗಳನ್ನು ಪಟ್ಟಿ ಮಾಡುವದಾದರೆ,

*ಕೂದಲು ಬಿಡುವದು, body ಬಿಲ್ಡ್ ಮಾಡಿಕೊಳ್ಳುವದು.
*ಮಾತಿನ ಚತುರತೆ
*ತುಟ್ಟಿ ಸರುಕುಗಳ ಬಳಕೆ, ಮೊಬೈಲ್, ಬೈಕ್,ಕಾರ್, ಬ್ರಾಂಡೆಡ್ ಅರಿವೆ, ಮುಂತಾದವು.
*caring ತೋರಿಸುವದು.

ಮುಂತಾದವು.
ಇಲ್ಲಿ ಬಂದಿರುವ ಮಾರುಲಿಗಳ ಉದ್ದ ಪಟ್ಟಿ ನೋಡಿದರೆ ತಿಳಿಯುತ್ತಲ್ಲ, ಹುಡುಗಿಯರು ಗಮನ ಸೆಳೆಯಲು ಹೆಚ್ಚಿಗೆ ಏನೂ ಮಾಡಬೇಕಿಲ್ಲ ಅಂಬುದು.. :)

ಏಕೆ ಇಷ್ಟೊಂದು ಸಿನಿಕತೆ ಸಂಗನಗೌಡರೇ?

ಹುಡುಗಿಯರ ಬಗ್ಗೆಯಷ್ಟೇ ಅಲ್ಲ, ಹುಡುಗರ ಬಗ್ಗೆಯೂ ನೀವು ತಿಳಿದುಕೊಳ್ಳಬೇಕಾಗಿದ್ದು ಸಾಕಷ್ಟಿದೆ. ಬೈಕ್‌, ಅಲಂಕಾರ, ಕೂದಲು ಶೈಲಿ ಕ್ಷಣಿಕ ಗೌಡ್ರೇ. ನಾಲ್ಕೇ ದಿನಗಳಲ್ಲಿ ಆಕರ್ಷಣೆ ನಶಿಸುತ್ತೆ. ತುಂಬ ಜನ ಹುಡುಗೀರು ಈ ಪ್ರಾರಂಭಿಕ ಆಕರ್ಷಣೆಗೆ ಮರುಳಾಗಬಹುದು. ಆದರೆ, ಮರುಳಾಗುವುದು ಬೇರೆ, ಇಷ್ಟಪಡುವುದು ಬೇರೆ. ಮರುಳಾಗುವುದಕ್ಕೆ ಮನಸ್ಸು ಕಾರಣ. ಆದರೆ, ಇಷ್ಟ ಅನ್ನೋದು ಹೃದಯದಿಂದಲೇ ಬರಬೇಕು. ಅದು ಬಹಳ ಕಷ್ಟ ಸರ್‌.

ಹುಡುಗರಾದರೂ ಸುಂದರಿಯರನ್ನೇ ಬಯಸುತ್ತಾರೆ ಅನ್ನೋದು ಸಹಜವಾದರೂ, ಅದು ಕೂಡ ತುಂಬ ದಿನ ನಿಲ್ಲುವುದಿಲ್ಲ. ಉತ್ತಮ ವ್ಯಕ್ತಿತ್ವದ ಸೊಬಗು ಎಲ್ಲ ದೈಹಿಕ ಸೌಂದರ್ಯ ಮೀರಿದ್ದು. ಆತ್ಮವಿಶ್ವಾಸ, ತಿಳಿವಳಿಕೆಗಿಂತ ಚೆಂದನೆಯದು ಯಾವುದಿದೆ?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

[quote]ಏಕೆ ಇಷ್ಟೊಂದು ಸಿನಿಕತೆ ಸಂಗನಗೌಡರೇ?[/quote]
ಸಿನಿಕತೆ ಅಂದರೆ ಏನು ಅಂತ ಬರಹ(http://baraha.com/nighantu) ಒರೆಗಂಟಲ್ಲಿ ಹುಡುಕಿದೆ, ಸಿಗಲಿಲ್ಲಾರೀ :( ಕಡೆಗೆ cynic ಅನ್ನುವ ಇಂಗಳೀಸ್ ಒರೆ ಜತನಗೈದಾಗ "ಎಲ್ಲವನ್ನೂ ಅಲ್ಲಗಳೆಯುವವ",.. "general ಆಗಿ ಮಂದಿ ಒಪ್ಪಿರುವದನ್ನು ಅಲ್ಲಗಳೆಯುವವ" ಅಂನುವ ಅರಿತ ಸಿಕ್ಕಿತು. :(
ನನಗೆ ಈ ಕನ್ನಡವಲ್ಲದ ಕನ್ನಡ ಒರೆಗಳ ಬಗ್ಗೆ ಅಸ್ಟಾಗಿ ತಿಳಿದಿಲ್ಲ, ಅದು ಬಿಡಿ.(ಈ ಸಾಲು ತಿಳಿಲಿಲ್ಲ ಅಂದರೆ ತೊಂದರೆಯಿಲ್ಲ, ಇದರ ಹಿಂದೆ ಸಂಪದದಲ್ಲಿ ವರುಸಗಳಿಂದ ತಿಳಿದು ತಿಂದು ಅರಗಿಸಿಕೊಂಡ ವಿಶಯ ಇದೆ.. :)..)
ನನ್ನ ಮಾತಿನಲ್ಲಿ ನಿಮಗೆ cynic ಅನಿಸುವಂತದು ಏನು ಕಂಡಿತೋ ಗೊತ್ತಿಲ್ಲ.
[quote]ಹುಡುಗಿಯರ ಬಗ್ಗೆಯಷ್ಟೇ ಅಲ್ಲ, ಹುಡುಗರ ಬಗ್ಗೆಯೂ ನೀವು ತಿಳಿದುಕೊಳ್ಳಬೇಕಾಗಿದ್ದು ಸಾಕಷ್ಟಿದೆ.[/quote]
ಇದರ ಬಗ್ಗೆ ಏನು ಮಾರುಲಿಬೇಕೆಂದೇ ತಿಳಿಯುತ್ತಿಲ್ಲ... :’( ಹುಡುಗ್‍ರಾ.. ಹೆಲ್ಪ್...
[quote]ಉತ್ತಮ ವ್ಯಕ್ತಿತ್ವದ ಸೊಬಗು ಎಲ್ಲ ದೈಹಿಕ ಸೌಂದರ್ಯ ಮೀರಿದ್ದು. ಆತ್ಮವಿಶ್ವಾಸ, ತಿಳಿವಳಿಕೆಗಿಂತ ಚೆಂದನೆಯದು ಯಾವುದಿದೆ?[/quote]
ಒಪ್ಪಿದೆ. ಆದರೆ ಅದು ಕೂಡಲೆ ತಿಳಿಯುವಂತದಲ್ಲ. ಒಡನಾಟದಿಂದ, ಗೆಳೆತನ ಬೆಳೆದಂತೆ ತಿಳಿಯುತ್ತ ಹೋಗುವಂತದು. ಆದರೆ ಮೊದಲು ಎಲ್ಲೋ ಒಂದು ಕಡೆ ಶುರು ಮಾಡಬೇಕು ತಾನೆ? ನೀವು ಕೇಳಿದ್ದೇನು? ಗಮನ ಸೆಳೆಯುವದು ಹೇಗೆ ಅಂತ ತಾನೆ? ಅಂದರೆ, ಹುಡುಗ ತನ್ನ ಪಾಡಿಗೆ ತಾ ಒಳ್ಳೆಯವನಾಗಿದ್ದು ಬಿಟ್ಟರೆ ಯಾವ ಹುಡುಗಿಯೂ ಬಂದು ಬಿಡಲ್ಲಾ ಮೇಡಮ್.
ನೇಚರ್ ನಲ್ಲಿ ಕೂಡ ನೋಡೀ, .. ಯಾವಾಗಲೂ ಗಂಡೇ ಹೆಣ್ಣಿನ ಗಮನ ಸೆಳೆಯಲು ಮೊದಲು ಮಾಡುವದು.
ex:
೧) ಗಂಡು ನವಿಲು ಕುಣಿಯುವದು, ಅದರ ಗರಿಗಳೂ ಹೆಣ್ಣವಿಲಿಗಿಂತ ಕಣ್‍ಸೆಳೆವಂತಿರುತ್ತವೆ.
೨) ಪುನಗು ಅನ್ನುವ ಜಾತಿಯ ಗಂಡು ಬೆಕ್ಕು, ಒಂದು ಬಗೆಯ ಸುವಾಸನೆ ಹೊರಡಿಸುತ್ತದೆ, ಹೆಣ್ಣನ್ನು ಸೆಳೆಯಲು.
೩) ಹುಂಜಕ್ಕೆ ಕಣ್ ಸೆಳೆಯುವ ತಲೆಗೆ ಗರಿ ಇರುತ್ತದೆ, ಹೆಣ್ಣು ಮಾಮೂಲಿ.
೪) ಗಂಡು ಸಿಂಹಕ್ಕೆ ಅದರ ಕೇಸರಿ ಒಂದು ಬಗಯ ಸೆಳೆತ, ಹೆಣ್ಣು ಸಿಂಹಕ್ಕೆ, again ಹೆಣ್ಣು ಸಿಂಹಕ್ಕೆ ಅಂತದಿಲ್ಲ.
೫) ಗಂಡಾನೆಗೆ ಉದ್ದನೇ ಕೋರೆ ಹಲ್ಲುಗಳು.

ಮುಂತಾದವು.

ಗೌಡ್ರೇ, ಗಂಡಾನೆಗೆ ಕೋರೆಗಳಲ್ಲ, ದಂತಗಳಿರುತ್ತವೆ. ನಮ್ಮ ದೇಶ ಬಿಡಿ, ಆಫ್ರಿಕಾದಲ್ಲಿ ಹೆಣ್ಣಾನೆಗೂ ದಂತಗಳಿರುತ್ತವೆ.

ಹೆಣ್ಣನ್ನು ಸೆಳೆಯಲು ಪ್ರಯತ್ನ ಪಡಬೇಕೆಂದು ಹೇಳ್ತಿದ್ದೀರಿ. ಏಕೆ ಸರ್‌? ಮೌನಕ್ಕಿಂತ ಸಮೃದ್ಧ ಭಾಷೆ ಯಾವುದಿದೆ? ಅದು ತಿಳಿಯುವುದು ತಡವಾಗಿ. ಆದರೆ, ನಿಜವಾದ ಆತ್ಮೀಯತೆ ತಕ್ಷಣ ಹುಟ್ಟುವುದಿಲ್ಲ. ತಡವಾಗಿಯೇ ಬರುತ್ತದೆ. ನಮ್ಮ ಕಡೆ ಹೇಳ್ತಾರೆ: ತಡವಾಗಿ ಬಂದಿದ್ದು ಜಡದು (ಜೋರಾಗಿ) ಬರುತ್ತ’ ಅಂತ. ಸೆಳೆಯುವ ಪ್ರಯತ್ನಕ್ಕಿಂತ, ಮೌನ ಸಂಭಾಷಣೆಯೇ ಸೂಕ್ತ. ಅದು ಕೊನೇವರೆಗೆ ಉಳಿಯುತ್ತದೆ. ನಾನಂತೂ ಹಾಗಂದುಕೊಂಡಿದ್ದೇನೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ದಂತ ಅಂದರೆ ’ಹಲ್ಲು’ ಅಂತ ಕೇಳಿದ್ದೆ!!! ಅಲ್ವಾ??? ಅಯ್ಯೋ ಬಿಡೀ.. ಈ ಕನ್ನಡ.. ಅದರಲ್ಲಿ ಕನ್ನಡ ಯಾವುದು, ಸಂಸ್ಕ್ರುತ ಯಾವುದೋ?? ದಿಗಿಲೋ ದಿಗಿಲು!!!

"ಸೆಳೆಯುವ ಪ್ರಯತ್ನಕ್ಕಿಂತ, ಮೌನ ಸಂಭಾಷಣೆಯೇ ಸೂಕ್ತ."

ಗುಮ್ಮನಂತೆ ಮೌನವಾಗಿರುವದೂ, ಒಂದು ಸೆಳೆಯಲು ಹುಡುಗರು ಬಳಸುವ strategy ... :D
ಹುಡುಗಿಯರನ್ನ ಸೆಳೆಯುವ ಸಂಗತಿನೇ ಬೇಡ ಅನ್ನುವ ಹುಡುಗ ಸನ್ಯಾಸಿ ಆಗ್ತಾನಸ್ಟೇ!!! :D

ಅದು ನನಗೆ ಗೊತ್ತಿದೆ ಪಲ್ಲವಿ,
ನಿನ್ನಂತಹ ಎಷ್ಟೋ ಹುಡುಗಿಯರಿಗೆ ಗೊತ್ತಿರಲ್ಲ...

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

ಸರಿ ಹಾಗಿದ್ದರೇ ಈಗ ಗಮನ ಸೆಳೆದಾಯ್ತಲ್ಲಾ...

"...ಬೆಳ್ಳಂಬೆಳಿಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ಕಣಿವೆಯಲ್ಲಿ ಸುತ್ತು ಹಾಕೋದು ಇಷ್ಟ. ಲೈನ್‌ ಬಜಾರ್‌ನಲ್ಲಿ ಅಡ್ಡಾಡುತ್ತ ಜನರನ್ನು ನೋಡ್ತಾ ಇರೋದು ಇಷ್ಟ. ಒಂಟಿ ಅನ್ನಿಸಿದಾಗ ಇಂಟರ್‌ನೆಟ್‌, ಕಂಪನಿ ಇದ್ದಾಗ ಸೋಮೇಶ್ವರ ದೇವಸ್ಥಾನ, ಕೆಲಗೇರಿ ಕೆರೆ......."

ಎಲ್ಲ ನೋಟ್ ಮಾಡಿ ಇಟ್ಕೋಂಡಿದಿನಿ... ಒಂದು ಸಾರಿ ನಾನೇ ಖುದ್ದಾಗಿ ನಿಮ್ಮನ್ನ ನೋಡೋಣಾ (ಕಂಡು ಹಿಡಿಯೋಣ) ಅಂತ...

ದಯವಿಟ್ಟು ಬನ್ನಿ. ಶಾಲ್ಮಲಾ ಕಣಿವೆಯಲ್ಲಿ ಒಮ್ಮೆ ಅಡ್ಡಾಡಿ ನೋಡಿದರೆ, ನಾನು ಬರೆದಿದ್ದನ್ನು ಖಂಡಿತ ಒಪ್ಕೋತೀರಿ. ಇನ್ಮುಂದೆ ಮಳೆ ಬರುತ್ತಲ್ಲ? ’ಆಗ ಮಸ್ತ ಹಸ್ರು ತುಂಬ್ಕಂಡು ಭಾಳ ಚಂದ ಕಾಣ್ತದ’

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಹುಂ ...
ನಿಮ್ಮ ಪ್ರತಿಕ್ರಿಯೆಗಳನ್ನ ಓದಿದರೆ "ಬೆಳದಿಂಗಳ ಬಾಲೆ" ಚಿತ್ರ ನೆನಪಿಗೆ ಬರುತ್ತಾ ಇದೆ..
ಶಾಲ್ಮಲಾ ಕಣಿವೆ ನೋಡಲೇ ಬೇಕು ಅನಿಸ್ತಿದೇ. ಖಂಡಿತವಾಗಿ ..

ಸಂಪದದಲ್ಲಿ ಹೀಗೇ ಆಕ್ಟಿವ ಆಗಿ ಇರಿ..

ಎಲ್ಲರನ್ನೂ ಜೋಡಿಸಿರುವ ಎಳೆ ಹುಡುಕೋದೇ ನನ್ನ ಕೆಲಸ. ಶಾಲ್ಮಲೆ ಅದನ್ನು ಪ್ರೇರೇಪಿಸಿದ್ದಾಳೆ. ನನ್ನ ಬ್ಲಾಗ್‌ ಗೆಳತಿ ಗೆಳೆಯರು ಅದನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದೊಂದು ಅರ್ಥಪೂರ್ಣ ವಿಷಯಗಳ ಚರ್ಚೆಗೆ, ಸಮಾನ ಆಸಕ್ತಿಯ ಅಭಿವ್ಯಕ್ತಿಗೆ ವೇದಿಕೆಯಾಗಲಿ. ಖಂಡಿತ ಸಕ್ರಿಯಳಾಗಿರುತ್ತೇನೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಅಬ್ಬಾ ಹುಡುಗೀಗೆ ಸಲಹೆ ಕೊಡಲು ನಾ ಮುಂದು ತಾ ಮುಂದು ಅಂತ ನಮ್ಮ ಸಂಪದದ ಹುಡುಗರು ಪೈಪೋಟಿ ಮೇಲೆ ಬರ್ತಾ ಇದ್ದಾರೆ . ಆದ್ರೆ ನಮ್ಮ ಸಂಪದದ ನಾರೀಮಣಿಗಳೆಲ್ಲಿ ಒಬ್ಬರೂ ಕಾಣಿಸ್ತಿಲ್ಲ (ನನ್ನ ಬಿಟ್ಟರೆ ) ಈ ಪೋಸ್ಟ್ಗೆ ಕಾಮೆಂಟಿಸೋಕೆ
ಎಲ್ರಿ ಇದೀರಾ ಕಲ್ಪನಾರವೆರೇ ?

http://thereda-mana.blogspot.com/

ರೂಪ

ರೂಪಾ,
ನಿಮ್ಮ ಕಾಮೆಂಟು ಈಗ ನೋಡಿದೆ. ಈ ಬ್ಲಾಗಿನ ಪ್ರಶ್ನೆಗೆ ಉತ್ತರ ಕೊಡೋಕೆ ಹುಡುಗರೇ ಸರಿ ಅಲ್ಲವೇ?

ಪಲ್ಲವಿ, ನನ್ನ ಇತ್ತೀಚಿನ research ಪ್ರಕಾರ - http://sampada.net/blog/kalpana/05/06/2008/9143 ನೋಡಿ - ಹುಡುಗರ ಗಮನ ಸೆಳೆಯಲು ಒನಪು, ವಯ್ಯಾರ, ತುಂಡು ಬಟ್ಟೆ ಧರಿಸುವುದು ಸಾಕು. ಆದ್ರೆ, ಈ ಗಮನ ಸೆಳೆಯುವ ಗುರಿಯೇನು? ಸ್ನೇಹವೇ, ಪ್ರೇಮವೇ, ಕಾಮವೇ ಅಥವಾ ಮದುವೆಯೇ? ನನಗನ್ನಿಸುವ ಹಾಗೆ, ಸುಮಾರು ಭಾರತೀಯ ಗಂಡಸರು, ಮದುವೆಯಾಗುವ ಹುಡುಗಿಯನ್ನು ಬೇರೆಯೇ ತಕ್ಕಡಿಯಲ್ಲಿಟ್ಟು ತೂಗುತ್ತಾರೆ. ಗಮನ ಸೆಳೆದ ಹುಡುಗಿ, ಬಿಕಿನಿ ಧರಿಸಿದವಳಾದರೆ, ನೋಡಲು, ಕೂಡಲು ಚೆನ್ನ, ಮದುವೆ-ಗೊತ್ತಿಲ್ಲ! ಹುಡುಗಿಯರೂ ಇದಕ್ಕೆ ಹೊರತೇನೂ ಅಲ್ಲ ಬಿಡಿ. ಅದು ಬೇರೇ ವಿಷ್ಯ.

ಕೊನೆಗೂ, ಪಲ್ಲವಿ, ನೀವ್ಯಾಕೆ ಈ ಪ್ರಶ್ನೆ ಕೇಳಿದ್ರಿ ಅಂತ ಗೊತ್ತಾಗ್ಲಿಲ್ಲ.

ಯುವಪ್ರೇಮಿ, ಧನ್ಯವಾದಗಳು, ಆದ್ರೆ ನಾನು ಅಜ್ಜಿ ಅಲ್ರಿ :-) ಒಂದಿನ ಅಜ್ಜಿಯಾದಾಗ ಈ ಫೋಟೋದಲ್ಲಿನ ಅಜ್ಜಿ ತರಹ ಆಗ್ಬೇಕಂತ ಮಾತ್ರ ಇಷ್ಟ!

ಪಲ್ಲವಿ, ಪ್ರತಿಕ್ರಿಯೆಗೆ ಧನ್ಯವಾದಗಳು.

ಕಂಪ್ಯೂಟರ್‌ ಬಳಕೆ ಬಗ್ಗೆ ಗೊತ್ತಿರುವುದು ತುಂಬ ಕಡಿಮೆ ಕಲ್ಪನಾ ಅವರೇ. ಯಾವ ಪ್ರಶ್ನೆ ಎಂಬುದನ್ನು ಹೇಳಿದ್ದರೆ ಸೂಕ್ತವಾಗುತ್ತಿತ್ತೇನೋ.

ಕೆಲ ದಿನಗಳಿಂದ ನಾನು ಸಕ್ರಿಯಳಾಗಿ ಬರೆಯುತ್ತಿಲ್ಲ, ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಾಗಿ, ಕೆಲವೊಂದು ಕಾಮೆಂಟ್‌ಗಳನ್ನು ಮರೆತಂತಾಗಿದೆ. ಗಮನ ಸೆಳೆಯುವ ಗುರಿಗೆ ಹಲವಾರು ಉತ್ತರಗಳಿವೆ. ಸ್ಪಷ್ಟವಾಗಿ ಪ್ರಶ್ನೆ ಯಾವುದೆಂಬುದು ತಿಳಿದರೆ, ಉತ್ತರವನ್ನು ಬರೆಯಬಹುದು.

ನಾನು ಕೇಳಿದ್ದೆ ಎಂಬ ಪ್ರಶ್ನೆಯನ್ನು quote ಮಾಡಲು ಸಾಧ್ಯವೆ ಕಲ್ಪನಾ?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಅದೇ ಈ ಪ್ರಶ್ನೆ - ಹುಡುಗರ ಗಮನ ಸೆಳೆಯುವುದು ಹೇಗೆ?

ಸುಮ್ನೆ ಟೈಂ ಪಾಸ್ಗೆ ತರಲೆ ಪ್ರಶ್ನೆ ಕೇಳಿದ್ರೋ ಅಥವಾ ಸೀರಿಯಸ್ಸಾಗಿ ಉತ್ತರ ಬೇಕಾಗಿತ್ತೋ ತಿಳಿಯಲಿಲ್ಲ. ಯಾಕೆಂದ್ರೆ, ಇನ್ಯಾರೋ ಪ್ರತಿಕ್ರಿಯಿಸಿದ ಹಾಗೆ, ನೀವು ಶ್ರಿಯಾ ಹಾಗೆ ನೋಡಲು ಇದ್ದಲ್ಲಿ ಹುಡುಗರ ಗಮನ ಸೆಳೆಯಲು ಯಾವ ತೊಂದರೆನೂ ತೊಗೋಬೇಕಾಗಿಲ್ಲ :-) In fact, ಸೆಳೆಯದಿರಲು ಏನು ಮಾಡ್ಬೇಕು ಅಂತ ಕೇಳ್ಬೇಕಾಗುತ್ತೆ!

ಪ್ರಶ್ನೆ ಕೇಳಿದ್ದು ತಮಾಷೆಗೆ. ಟೈಮ್‌ ಪಾಸ್‌ಗೆ.

ನನ್ನ ಬಗ್ಗೆ ತೋರಿದ ಮೆಚ್ಚುಗೆಗೆ ಥ್ಯಾಂಕ್ಸ್‌. ಸೌಂದರ್ಯ ನೋಡಿ ಮೆಚ್ಚೋರ ಬಗ್ಗೆ ಏಕೋ ಅನುಮಾನ. ಅದಕ್ಕೆಂದೇ, ಇತರ ಕಾರಣಗಳು ಇರಲು ಸಾದ್ಯವಾ ಎಂದು ಆ ಪ್ರಶ್ನೆ ಹಾಕಿದ್ದೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ನಾನಂತೂ ಏನೂ ಮಾಡಲಿಲ್ಲ ಮಾಡುವುದೂ ಇಲ್ಲ
ಯಾಕೆಂದರೆ ಸ್ವಭಾವತಹ ನಾವುಗಳು ಗಮನ ಸೆಳೆಯುವವರು.
ನನ್ನಂತಹವಳೇ ಹುಡುಗರ ಗಮನ ಸ್ವಲ್ಪ ಅತೀ ಎನ್ನಿಸುವಷ್ಟು ಸೆಳೆಯುವಾಗ ಶ್ರಿಯಾಳ ತದ್ರೂಪ ಅಂತ ಹೇಳ್ಕೋತಿರೊ ನಿಮಗೆ ಈ ಹುಡುಗರನ್ನು ಸೆಳೆಯುವ ತಲೆ ನೋವೇ ಇಲ್ಲ ಬಿಡಿ
ಅಂತೂ ಹುಡುಗರ ಗಮನ ಸೆಳೆಯಬೇಕೆಂಬ ನಿಮ್ಮ ಹಂಬಲ ಈಗ ಈಡೇರಿದೆ ಅಲ್ಲವಾ? :)
ನಿಮ್ಮ ಪ್ರೀತಿಯ
ಪ್ರೀತಿ

ಅದು ನನ್ನ ಉದ್ದೇಶವಂತೂ ಖಂಡಿತ ಅಲ್ಲ. ಎಲ್ಲರಿಗೂ ಉಪಯೋಗವಾಗುವ, ನಮ್ಮ ಬೌದ್ಧಿಕ ಬೆಳವಣಿಗೆಗೆ ಸಹಕರಿಸುವ ವಿಷಯಗಳ ಕುರಿತು ನಿಮ್ಮ ಗಮನ ಸೆಳೆಯಬೇಕಿತ್ತು. ಅದಕ್ಕೆ ಲಘು ಆರಂಭ ನೀಡಿದ್ದೀನಿ ಅಷ್ಟೇ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಏ..ಏ..ಏನಿದು..ಬಂದ್ ಮಾಡ್ರಿಲ..

ಇದೇನ್ ಡವ್ ಹೊಡಿಯೋ ಸೈಟ್ ಅಂನ್ಕೊಂಡಿದ್ದೀರೇನು?

ಬುದ್ದಿ ಇಲ್ಲ ನಿಮಗ? :-)

ಬರೀ..ಹೆಣ್ಮಕ್ಳನ್ನ ಹ್ಯಾಂಗ ಹಿಡಿಯೋದು..ಗಂಡ್ ಹೈಕ್ಳನ್ನ ಹ್ಯಾಂಗ್ ಹಿಡಿಯೋದು..

ನಿಮ್ಗೇನು ಬೇರೆ ಕೆಲ್ಸ ಇಲ್ಲೇನ್ರಪ? :-)

ಬೆಂಕಿ ಹಚ್ಚರೀ ನಿಮ್ಮ ಬುದ್ಧಿವಾದಕ್ಕ.....ಆ ಕಮೆಂಟಗಳ ಬ್ಯಾಲನ್ಸ ನೋಡ್ರಿ... ;)
ಸಂಪದದ ದಾಖಲೆ ಕಮೆಂಟುಗಳು....ಅದು ಇದೇ ಮೊದಲು..

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

ನಾನು ಒಬ್ಬ ಹುಡುಗನಾಗಿ ಒ೦ದೆರಡು ಮಾತು ಹೇಳುತ್ತೆನೆ.

ಸಾಮಾನ್ಯವಾಗಿ ಹುಡುಗರು ಹುಡುಗಿಯರನು ಪ್ರಥಮವಾಗಿ ಪ್ರೀತಿಸುವುದು ಹೆಚ್ಚು.

ಹುಡುಗರ ಮನಸ್ಸೆಳೆಯಬೆಕಾದರೆ,

ಆ ಹುಡುಗಿ ಅವನಲ್ಲಿ ಸ೦ತಸದಲ್ಲಿ ಮತ್ತು ದುಖದಲ್ಲಿಯು ಜೊತೆಯಗಿರಬೇಕು.
ಸಮಯ ಪ್ರಜ್ನ ಇರಬೇಕು. ಸ್ಪೂರ್ತಿ ಸೆಲೆ ಆಗಬೇಕು.

ಎನ್೦ತಿರಿ ಪಲ್ಲವಿ?

ಇನು ಇದೆ, ಆದರೆ ಈಗ ರಾತ್ರಿ ೩ ಗ೦ಟ್ ಮತ್ತೆ ಇದಕ್ಕೆ ಪ್ರತಿಕ್ರಿಯೆ ಬರೆಯುವೆ.

ಪೂರ್ತಿ ಬರೆಯಿರಿ. ಬರೆಯಲು ರಾತ್ರಿಯೇನು ಹಗಲೇನು. ಧರ್ಮೇಚ, ಅರ್ಥೇಚ, ಕಾಮೇಚ ಎಂದು ಹೇಳಿರುವುದು ಇದಕ್ಕೇ. ಎಲ್ಲ ಸಮಯದಲ್ಲೂ ಜೊತೆಗಿರಬೇಕು. ಸ್ಫೂರ್ತಿಯ ಸೆಲೆ ಆಗಬೇಕು. ನಿಜ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಬ್ಯಾಡ ಮಹೇಶ, ಸವಿತೃ,
ಮೊದಲ ಧಾರವಾಡದ ಗಿಡ್ಡ ಮೆಣಸಿನಕಾಯಿ...ಬಾಳ ಖಾರ...
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

ಹುಡುಗರ ಗಮನ ಸೆಳೆಯುವುದು ನಾವು ನಿಮಗ ಹೇಳಿ ಕೊಡಬೇಕಾ?????
ರೀ ಸುಮ್ಮನ ಇ‌ರ್‍ರೀಪ್ಪಾ ...ಇದು ಹರೆಯದ ಹುಡುಗಿಯರಿಗೇ ಅವಮಾನ.....
ಹಂಸಕ್ಕೆ ಬಳುಕುವುದನ್ನು ಹೇಳಿ ಕೊಟ್ಟಂತೆ...!!!!!!!

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

Pages