ಕವಿತೆ ಬರೆಯೋಣ್ವಾ?

2.5

ಇದು ಒಂದು ಪುಟ್ಟ ಸವಾಲು.

ಒಂದಿಷ್ಟು ಹಯಕು ಅಥವಾ ಚುಟುಕು ಮಾದರಿಯ ಬರಹಗಳನ್ನು ಬರೆಯೋಣ್ವೆ? ಒಂದೇ ನಿಬಂಧನೆ ಎಂದರೆ, ಸೂಕ್ತವಲ್ಲದಿದ್ದರೂ ಹಿಂದೆ ಬರೆದ ಚುಟುಕುಗಳನ್ನು ಸುಮ್ಮನೇ ಪೋಸ್ಟ್‌ ಮಾಡಬಾರದು. ಕವಿತೆಯಲ್ಲಿ ’ಪಂಚ್‌’ ಇರಲಿ. ಧಾರವಾಡದ ಭಾಷೆಯಲ್ಲಿ ಹೇಳುವುದಾದರೆ, ’ಧಾಡಸಿ’ ಇರಲಿ.

ಒಂದು ಚುಟುಕದ ಮೂಲಕ ನಾನು ಪ್ರಾರಂಭಿಸುತ್ತೇನೆ.

ಎಲ್ಲಾ ಎಲ್ಲೋ ಇದ್ದೀರಿ
ಹೇಗಿದ್ದೀರಿ?
’ಸಂಪದ’ ತೆರೆದರೆ
ನಿಮ್ದೇ ಸುದ್ದೀರೀ

ಶುರು ಮಾಡೋಣ್ವಾ?

- ಪಲ್ಲವಿ ಎಸ್‌.
ಎಲ್ಲರ ಬಂಧಿಸುವ ಎಳೆ ಹುಡುಕುತ್ತಾ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇರಲಿಲ್ಲವೆಂದು ಗೋಳಿಡುತ್ತಿದ್ದರು ಹುಡುಗರು
ಇಷ್ಟು ದಿನ ಹೆಣ್ಣುಗಳ someಪದ
ಶುರು ಮಾಡಿಕೊಂಡರು ಹುಡುಗಿಯರು ಗದ್ಯ/ಪದ್ಯ
ಲೋಡು ಜಾಸ್ತಿಯಾಯಿತೆಂದು ಗೋಳಿಟ್ಟರು ನಿರ್ವಾಹಕರು

ಸೂಪರ್‌ ಅಂದ್ರೆ ಏನು?
ಅದು ಚುಟುಕೂ ಅಲ್ಲ ಹೈಕೂ ಅಲ್ಲ
ಇಷ್ಟಕ್ಕೇ ಸುಮ್ಮನಾದರೆ ನೀವು
ಕವಿತೆ ಬರೆಯೋಕೆ ಆಗಲ್ಲ

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಹೈಕು ಚುಟುಕು ಎಲ್ಲಾ ಗೊತ್ತಾಗಲ್ಲ
ಸೂಪರ್ ಅಂದ್ರೆ ಸೂಪರ್ ಅಷ್ಟೆ
ಅದೆಲ್ಲ ನಂಗೆ ಬರಿಯೊಕೆ ಬರಲ್ಲ

ಮೊದಲು ’ಪಲ್ಲವಿ’ಯಿಂದ್ಲೇ ಶುರು
ಆಮೇಲೆ ಅನುಪಲ್ಲವಿ
ಆಮೇಲೆ ಸಾಲು
ಸಾಲುಸಾಲು .

ಸಾಲು ಸಾಲು ಕವಿತೆ
ಆಗಾಗ ಸಾಲುಸಾಲೂ ಕವಿತೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನೀವು ಹುಡುಕ್ತಿರೋದು ಸಾಲುಗಳಲ್ಲಿ ಹೈಕು/ಚುಟುಕ/ಪಂಚ್. ಹೈಕು/ಚುಟುಕ ಬರಿಯೋಕ್ಕಂತು ಬರಲ್ವೆ! ಸರಿ ಒಂಚೂರು "ಧಾಡಿಸೋಣ' ಅಂತ.

ಧಾಡಸಿ ಪ್ರತ್ಯೇಕ ಶಬ್ದ. ಅದನ್ನು ಕ್ರಿಯಾಪದದಂತೆ ಬಳಸಲು ಆಗದು.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಹಾಗೇನೂ ಇಲ್ಲ ಕರಿಹೈದ
ಸಂಪದದಲ್ಲಿ ಇದ್ದರಲ್ಲ ಹೆಣ್ಗಳು
ಆದರೆ ನೀವದನ್ನು ಗಮನಿಸಲಿಲ್ಲ
ಎಲ್ಲೋ ಇದ್ದವು ನಿಮ್ಮ ಕಣ್ಗಳು

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಕಾವ್ಯವು ಎಲ್ಲರಿಗಲ್ಲ ಪಲ್ಲವಿ

ಬಲ್ಲವರೂ ಚೆಲು ಮೌನವಾಂತಿಹರು

"Those unheard are sweet" ಅಲ್ಲವೆ?

ಕೇಳದ ಕಾವ್ಯದ ಸೊಲ್ಲ ಸವಿವರು

"ಏರಿದವನು ಚಿಕ್ಕವನಿರಬೇಕು"

"ವಿನಂತಿ"
ರಾಶಿಬಿದ್ದಿರುವ ಕೆಲಸವ ಬಿಟ್ಟು
ಕಾವ್ಯವ ಕೊರೆದರೆ ಬಡಿಗೆಯ ಪೆಟ್ಟು
ಎಂಬರು ನಮ್ಮವರಾದರೂ ಕದ್ದು
ಬರೆದಿಹೆ ನಗದಿರಿ ಎದ್ದೂ ಬಿದ್ದು

"ಏರಿದವನು ಚಿಕ್ಕವನಿರಬೇಕು"

ಕದ್ದ ಹೋಳಿಗೆಗೆ ರುಚಿ ಹೆಚ್ಚು
ಇಂಥ ಚುಟುಕವೇ ಅಚ್ಚುಮೆಚ್ಚು
ಕದ್ದಾದರೂ ಬರೆಯಿರಿ, ಬರೆಸಿರಿ
ಹಾಗಾದಾಗ ಯಾರೂ ನಗದಿರಿ

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಮನಸ್ಸಲ್ಲಿ ಮಂಡಿಗೆ ತಿಂದರೆ
ರುಚಿ ದಕ್ಕೀತೆ ರಮೇಶ
ಭಾವ ಇದ್ದರೆ ಕಾವ್ಯ
ಇದುವೇ ಅಕ್ಷರ ವಿಶೇಷ

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

"ಭಾವ ಇದ್ದರೆ ಕಾವ್ಯ"

ಸಾಲಂಕೃತಕನ್ಯೆ ಬಯಸಿದಂತೆ ಶೆಟ್ಟರ ಹುಡುಗ
ಭಾವಕಾವ್ಯ ಬಯಸಿದರು ಪಲ್ಲವಿ
ಸಿಕ್ಕಳು ನಿರಾಭರಣ ಸುಂದರಿ
ಹುಡುಗನಿಗೆ ದಕ್ಕಿದಂತೆ ವರದಕ್ಷಿಣೆ (ವಂದರಿ)

*ವಂದರಿ = ಜರಡಿ

"ಏರಿದವನು ಚಿಕ್ಕವನಿರಬೇಕು"

ಅಂತು ಬಂತು ಬಿಜೆಪಿ ಸರಕಾರ
ಪಕ್ಷಾಂತರಿಗಳದೇ ಕಾರುಬಾರ
ಗಣಿದೊರೆಗಳ ರಾಯಭಾರ
ಕೈಬಿಟ್ಟರು ಜಗದೀಶ ಶೆಟ್ಟರ
*ಅಶೋಕ್

ಅಂತೂ ಇಂತು
ಸರ್ಕಾರ ಬಂತು
ಒಂದು ಸವಿಯಾದ ಫೇಡೆಯಂತೆ

ಗಣಿ ದೊರೆಯೋ
ಪಕ್ಷಾಂತರಿಯೋ
ಸರ್ಕಾರ ಸ್ಥಿರವಾದಂತೆ

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಮಂತ್ರಿಗಿರಿ ಬೆಕಂತವರೆ
ಸಾಮಿ, ಗೌಡ, ಶೆಟ್ಟರ
ಬಸ್ಸಿಗೆಲ್ಲ ಕಲ್ಲು ಹೊಡಿತಾರೆ
ಬೆಂಬಲಿಗರು ಅನ್ನಿಸಿಕೊಂಡವರ
ಅರ್ಜೆಂಟಾಗಿ ಬೇಕಾಗಿದೆ
ಬಿಜೆಪಿಗೇ ಪರಿಹಾರ

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

ಚುನಾವಣೇಲಿ ಎಲ್ಲರಿಗೂ ಟಿಕೆಟ್‌ ಬೇಕು
ಅದಕ್ಕಾಗಿ ಪಕ್ಷಕ್ಕೆ ಫಂಡ್‌ ಕಟ್ಟಬೇಕು
ಕೋಟ್ಯಂತರ ಖರ್ಚು ಮಾಡಿದರೆ ಜಯ
ಇಲ್ಲದಿರೆ ಠೇವಣಿಯೇ ಮಾಯ
ಇಷ್ಟೆಲ್ಲ ಕಷ್ಟಪಟ್ಟ ನಂತರ
ಮಂತ್ರಿ ಮಾಡದಿರೆ ಸಹಿಸ್ತಾರ?
ಅದಕ್ಕೇ ಹೊಡೆಸಿದ್ದಾರೆ ಬಸ್ಸಿಗೆ ಕಲ್ಲು
ಏಕೆಂದರೆ ಜನ ಮುರಿಯುವುದಿಲ್ಲ ಇವರ ಹಲ್ಲು
ಇಲ್ಲು ಕೂಡಾ ಬಿಜೆಪಿಯೇ ಪರಿಹಾರ
ಕೆಎಸ್ಸಾರ್ಟಿಸಿಗೆ ಅವರೇ ಕೊಡಬೇಕು ಪರಿಹಾರ
- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಯಾವ ಚರಣ ಏನು ಪಲ್ಲವಿ
ಧಾರ್ವಾಡ, ಪೇಡ, ಶೀಖಂಡ?
ಕೋಟಿ ಕೋಟಿ ಮಿಶ್ರ ಅನೂಹ್ಯದಲ್ಲು
ಪರಿಚಯದೆಳೆ ಹೊಳೆಹೊಳೆವ ಸಾಲು, ಸೊಲ್ಲು!

ವಾಹ್‌ ಅನಿವಾಸಿಯವರೇ
ಏನು ನಿಮ್ಮ ಕವಿತೆಯ ಧಾರೆ !
ಫೇಡೆ, ಶ್ರೀಖಂಡ ಒಂದೇ ಸಾಲಲ್ಲಿ
ನೀರೂರಿತು ಬಾಯಲ್ಲಿ

ಚರಣ-ಪಲ್ಲವಿ ಬೇಕು ಗೀತೆಗೆ
ಇದೆಲ್ಲ ಮೀಸಲು ಸಹೃದಯನಿಗೆ
ಪರಿಚಯದ ಹೊಳೆಗೆ ಸಾಲುಗಳೇ ಅಲೆ
ಸೊಲ್ಲು ಸೊಲ್ಲಿಗೆ ಮೆಚ್ಚುಗೆಯ ಓಲೆ

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಚಿಮ್ಮುತಿರಲಿ ಚಿಲುಮೆಗಳು, ಒಸರುತಿರಲಿ ಒರತೆಗಳು..
ಒಸೆಯುತಿರಲಿ ಹೊಸ ಎಳೆಗಳು .. ಒಂದಾಗಿಸುವ ಬಂಧಗಳು ..

ಸವಿತೃ

ಚಿಲುಮೆಯಾಗಲಿ ಒಲವು
ಕೊರತೆಯಾಗದಿರಲಿ ಒರತೆ
ಹೊಸ ಎಳೆಗಳಿಂದ ಹೊಸ ಉಡುಪು
ಬಂಧ ಬೆಳೆಸಲು ಸಂಪದ ಮುಡಿಪು

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಒಮ್ಮೆ ಮುನಿಸು ಒಮ್ಮೆ ಸರಸ
ಒಮ್ಮೆ ದುಗುಡ ಒಮ್ಮೆ ಹಾಸ್ಯ
ಒಮ್ಮೆ ಕದನ ಒಮ್ಮೆ ಲಾಸ್ಯ
ಇದು ನಮ್ಮೊಲವಿನ ಸ್ವಾರಸ್ಯ

ಏನೂ ಗೊತ್ತಿಲ್ಲಪ್ಪ ಲಾಸ್ಟ್ ಲೈನ್ ಸರಿ ಇಲ್ಲ

http://thereda-mana.blogspot.com/

ರೂಪ

ಒಮ್ಮೆ ಚುಟುಕು, ಒಮ್ಮೆ ಕುಟುಕು
ಒಮ್ಮೆ ಸರಸ, ಒಮ್ಮೆ ವಿರಸ
ಒಮ್ಮೆ ನಲಿವು, ಒಮ್ಮೆ ನೋವು
ಚುಟಕು ಎಂದರೆ ನಗುವ ಹೂವು

ಅಂದ್ಹಾಗೆ, ಚೆನ್ನಾಗಿಯೇ ಬರೆದಿದ್ದೀರಿ ರೂಪಾ. ನಿಮ್ಮ ಕೊನೇ ಸಾಲನ್ನು ’ಇದುವೇ ಒಲವಿನ ಸ್ವಾರಸ್ಯ’ ಎಂದು ಬದಲಾಯಿಸಿದರೆ ಹೇಗೆ?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಏನೊ ಪಲ್ಲವಿ ಕವಿತೆ ಕಥೆ ಎಲ್ಲಾ ಮುಗಿದ ಕತೆ ಅಂತನ್ನಿಸುತ್ತಿದೆ
ನೀವೇನೊ ಇನ್ನೂ ಫ್ರೀ ಬರ್ಡ್
ಹಾಯಾಗಿ ಇದ್ದೀರಾ
ಇನ್ನೂ ಸಂಸಾರದ ನೊಗ ಹೊತ್ತಿಲ್ಲ
ಅಸೂಯೆ ಆಗ್ತಿದೆ ನಂಗೆ ನಿಮ್ಮನ್ನ ನೋಡಿದರೆ

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

ಏನೊ ಪಲ್ಲವಿ ಕವಿತೆ ಕಥೆ ಎಲ್ಲಾ ಮುಗಿದ ಕತೆ ಅಂತನ್ನಿಸುತ್ತಿದೆ
ನೀವೇನೊ ಇನ್ನೂ ಫ್ರೀ ಬರ್ಡ್
ಹಾಯಾಗಿ ಇದ್ದೀರಾ
ಇನ್ನೂ ಸಂಸಾರದ ನೊಗ ಹೊತ್ತಿಲ್ಲ
ಅಸೂಯೆ ಆಗ್ತಿದೆ ನಂಗೆ ನಿಮ್ಮನ್ನ ನೋಡಿದರೆ :)

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

ಪಲ್ಲವಿಗೆ ಚರಣವಾಗುವ
ತವಕವದು ಎಲ್ಲರಿಗೆ
ಪಲ್ಲವಿಯ ’ಪಲ್ಲು’
ಚೆಲ್ವಾಗಿ ಕೆಲರನದು
ಕಾಡುತಿದೆ ಮತ್ತೆ
ಕೆಲರನು ಕಾಡಿಸಿದೆ
ಅದುವೇ ಬಿಗಿವ
ಉರುಳಾಗಿ!!

ಪಲ್ಲು - ಹೆಣ್ ಮಕ್ಕಳು ಉಡುವ ಚುಡಿಯ ಮೇಲಿನ ವೇಲ್.
-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

ಸಂಗನಗೌಡರಿಗೆ ಏಕೋ ಹೆದರಿಕೆ
ನಾನಂತೂ ಹಾಗಿಲ್ಲ ಎಂಬುದಕೆ ಸಾಕ್ಷಿ ಬೇಕೆ?
ನಗಿಸಿದರೆ ನಕ್ಕೇನು ಅಳಿಸಿದರೆ ಅತ್ತೇನು
ಇದಕಿಂತ ಹೆಚ್ಚು ಹೇಳುವುದೇನು?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಹೂವು ನಗುತಿದ್ದರೆ ಚೆನ್ನ
ಹೆಣ್ಣಿಗೆ ಮುಗುಳ್‍ನಗು ಚೆನ್ನ
ಇರಲಿ ಬದಿಗೆ ಜಗದ ಬವಣೆ
ಎಂದಿಗೂ ನೀ ನಗುತಿರು ಜಾಣೆ!!

:~)

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

ಕೊಡೆಯ ಹಾಗೆ ಮನಸ್ಸಂತೆ
ತೆರೆದುಕೊಂಡಾಗ ಮಾತ್ರ ಚೆನ್ನಂತೆ
ಏನು ಮಾಡಲಿ, ಮುಗುಚಿಕೊಂಡಿದೆ ಮನಸು
ಅಕ್ಷರಗಳಾಗುತ್ತಿಲ್ಲ ಕನಸು

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಗೆಳೆಯರ ಹಿಂಡಿದು, ಗಿಳಿವಿಂಡು,
ಹೇಳಿರಿ ಮನದ ದುಗುಡ!!
ಬಿಚ್ಚುಮನದ ಸಂಪದಿಗರಿಗಿಲ್ಲ
ಇಬ್ಬಗೆ ನೋಡ!!

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

ಗುಱುಱಾಜ
www.kannadaguru.blogspot.com

ಪಲ್ಲವಿ ನಿಮಗಾಗಿ ಒ೦ದು ಡಬ್ಬಾ ಕವಿತೆ,

ನಿಮ್ಮನ್ನ ಕರೆಯೋಣ ಅನ್ಕೊ೦ಡೆ "ಪಲ್ಲೂ ..." ಅ೦ತಾ
ಗೊತ್ತಿರಲಿಲ್ಲ ನಿಮ್ಮಣ್ಣ ಬಾಕ್ಸರ್ ಮಲ್ಲು ಅ೦ತಾ
ದೂರದಿ೦ದಲೇ ಕೂಗಿದೆ ನಿಮ್ಮನ್ನ,"ಪಲ್ಲೂ... "
ನಿಮ್ಮಣ್ನ ಉದುರಿಸಿದ ನನ್ನ ೩೨ ಹಲ್ಲು.

ಹಾಕಿಸಿಕೊಳ್ಳಿ ಒಳ್ಳೆಯ ಸೆಟ್ಟು
ಆದೀತು ಹೊಸ ಹುಡುಗಿ ’ಸೆಟ್ಟು’

ಹೊಡೆಯ ಬಂದರೆ ಮತ್ತೊಬ್ಬ ಮಲ್ಲು
ತೆಗೆದು ಕೈಗಿಡಿ ನಿಮ್ಮಯ ಹಲ್ಲು

:)

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

ಪಲ್ಲೂ ಅಂತ ಕರೆಯೋರು ಇನ್ನೂ ಬಂದಿಲ್ಲ
ಉಳಿದವರಿಗೆ ಆ ಹಕ್ಕು ನಾ ಕೊಟ್ಟೇ ಇಲ್ಲ
ಆದ್ರೂ ಕರಿತೀರಿ ಉಮ್ಮೇದು ತಡೆಯದೇ
ಹೀಗಿರುವಾಗ ಹೇಳುವುದು ಏನಿದೆ?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಗುಱುಱಾಜ
www.kannadaguru.blogspot.com

ಸಾಕು ಬಿಡಿ ಸ೦ಗಣ್ಣ .
ಈ ಹುಡ್ಗೀರ ಸಹವಾಸವೇ ಬೇಡಣ್ನ.

ನನ್ನ ನಗುತ್ತ ನೋಡಿದಳು ಪಲ್ಲು
ಒದೆಗಳ ಕೊಡುವಾಗ ಅವರಣ್ಣ ಮಲ್ಲು
ಹಾಗಾಗಿ ಚೂರುಚೂರಾಗಿದೆ ಈ ನನ್ನ ದಿಲ್ಲು

ಅಯ್ಯೋ, ಹುಡುಗೀರೇ ಹಂಗೆ.
ಜಾರುವ ಬೆಣ್ಣೆ ಹಂಗೆ.
ಮಾಡುತ್ತಾರೆ ಬೆಪ್ಪ
ಆದರೆ ಅವರು ಕರಗಿದರೆ, ತುಪ್ಪ!!

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

ನಿಮ್ಮನ್ನು ನಗುತ್ತ ನೋಡಿದಳಾ ಪಲ್ಲು?
ಈಗೊಂದು ವಾರ ಆಕೆ ನಕ್ಕೇ ಇಲ್ಲವಲ್ಲೋ
ಇನ್ನು ಏಟು ಕೊಡೋಕೆ ನನಗೆ ಅಣ್ಣನೇ ಇಲ್ಲ
ಹೀಗಾಗಿ ನಿಮ್ಮ ಹಲ್ಲು ಉದುರುವ ಚಿಂತೆ ಇಲ್ಲ

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಸಾವರಿಸಿಕೊಳ್ಳಿ ಗುರಪ್ಪ,
ಇಂತವೆಲ್ಲ ಆಗುತ್ತಪ್ಪ
ಸಾಕು ಬಿಡಿ ಹುಡುಗಿ ಚಿಂತೆ
ಏನಾಗಿದೆ ನೋಡಿ ಕನ್ನಡದ ಕತೆ
ಕನ್ನಡದ ವಿಚಾರ ಮಾಡಿ ಶುರು
ಯಾಕಂದರೆ ನೀವು kannadaguru

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

ಮಾತುಗಳೇ ಇಲ್ಲದ

ಇಲ್ಲಿ ಎಲ್ಲವು ಬರಿ ಪದ

ಸಂಪರ್ಕದಲ್ಲಿರುವೆವು ಸದಾ

ಮಾಡುವುದು ಮನಸನ್ನು ಹದ

ಅದುವೇ ಸಂಪದ

ಮಾತುಗಳೇ ಇಲ್ಲದ

ಇಲ್ಲಿ ಎಲ್ಲವು ಬರಿ ಪದ

ಸಂಪರ್ಕದಲ್ಲಿರುವೆವು ಸದಾ

ಮಾಡುವುದು ಮನಸನ್ನು ಹದ

ಅದುವೇ "ಸಂಪದ"

ಉಕ್ಕಿದ ಭಾವನೆಗಳೇ ಈ ಸಂಪದ
ಎಲ್ಲವೂ ಇದೆ ಎಂದೇ ಈ ಹದ
ಯಾರೇ ಬರಲಿ, ತೆರೆದಿದೆ ಕದ
ಒಳ ಹೊಕ್ಕರೆ ಮನಸ್ಸಿಗೆ ಮುದ

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಮುಡಿದ ಹೂವು ಬಾಡದಿರದು

ಕೆನೆಯ ಹಾಲು ಕೆಡದೆ ಇರದು

ಹುಟ್ಟಿದ ಜೀವಿ ಸಾಯದಿರದು...

ನದಿಯ ನೀರು ಹರಿಯದೆ ಇರದು

ಆದರೆ ನೊಂದ ಮನಸಿಗೆ ಸದಾ ಮುದ ನೀಡಲು "ಸಂಪದ" ವಿರುವುದು.....

ವ್ಯಾಖ್ಯೆ ಕವಿತೆ ಬೇಕಾ ಧನು
ಪಿಯುಸಿಗೇ ಅದು ಮುಗೀಲಿ
ಅದರಾಚೆಯ ಬದುಕಿದೆ ನೋಡು
ಸಂಪದದಲ್ಲಿ ಅದು ಬರಲಿ

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ನಾನೂ ಇದ್ದೀನಿ ಸಂಪದದಲ್ಲಿ
ಈಗ ಸೊಲ್ಪ ತೆರೆಯ ಹಿಂದೆ
ಹಾಕ್ತೀನಿ ಹಣಿಕಿ ಆಗಾಗ
ತೆರೆಯ ಸರಿಸಿ !

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಸಕ್ರಿಯವಾಗೇ ಇದ್ದೀರಲ್ಲ ಮಿಶ್ರಿಕೋಟಿಯವರೇ
ತೆರೆಯ ಹಿಂದೇಕೆ, ಮುಂದೆಯೇ ಇದ್ದೀರಿ
ಹಣಿಕುವುದೂ ಬೇಡ, ಕೆಣಕುವುದೂ ಬೇಡ
ಆಗಾಗ ಏನಾದರು ಬರೆಯುತ್ತಿರಿ ಹೀಗೇ

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...