ಉದಯವಾಣಿಯಲ್ಲಿ 'ಕನ್ನಡ ವಿಕಿಪೀಡಿಯ'

0
[kn:ಉದಯವಾಣಿ|ಉದಯವಾಣಿಯಲ್ಲಿಂದು] 'ಕರ್ನಾಟಕ ಸಂಪದ'ದಲ್ಲಿ ವಿಕಿಪೀಡಿಯಾದ ಬಗ್ಗೆ ಲೇಖನವೊಂದು ಮೂಡಿಬಂದಿದೆ. [:ktk1.pdf|ಲೇಖನದ ಪಿ ಡಿ ಎಫ್ ಇಲ್ಲಿದೆ (500 KB Download)]
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈಗಾಗಲೇ ಕನ್ನಡದ ಎರಡು ಪತ್ರಿಕೆಗಳಲ್ಲಿ ವಿಕಿಪೀಡಿಯ ಬಗ್ಗೆ ಪ್ರಕಟವಾಗಿದೆ. ಕನ್ನಡಿಗರಲ್ಲಿ ಇದರ ಬಗ್ಗೆ ಕುತೂಹಲ ಕೆರಳಿದ ಎನ್ನುವುದಕ್ಕೆ ಈ ತಾಣದಲ್ಲಿ ಸದಸ್ಯತ್ವ ೧೦೦ಕ್ಕೂ ಹೆಚ್ಚಾಗಿರುವುದೇ ದ್ಯೋತಕವಲ್ಲವೇ? ತವಿಶ್ರೀನಿವಾಸ

ನಾಡಿಗರೇ, ಮೊದಲನೆಯದಾಗಿ ಲೇಖಕರಾಗಿ ಅವತರಿಸಿರುವದಕ್ಕೆ ಅಭಿನಂದನೆಗಳು! ಬಹುಶಃ ನೀವೂ ನನ್ನಂತೆ ಭುಜಂಗಯ್ಯನ ದಶಾವತಾರಗಳಿಗೆ ಸಿದ್ಧತೆ ಮಾಡುತ್ತಿರುವಂತೆ ಕಾಣುತ್ತಿದೆ :) ನಿಮ್ಮ ಲೇಖನ ಚೆನ್ನಾಗಿ ಬಂದಿದೆ. ಎಲ್ಲ ವಿಷಯಗಳು ಅಡಕವಾಗಿವೆ. ವಿಕಿಪೀಡಿಯಾ ಬಗ್ಗೆ ಪ್ರಜಾವಾಣಿ ಮತ್ತು ಕನ್ನಡಪ್ರಭ ಪತ್ರಿಕೆಗಳಲ್ಲಿ ಬಂದ ಲೇಖನಗಳಿಗಿಂತ ಇದು ಪರಿಪೂರ್ಣವಾಗಿದೆ. ಬಹುಶಃ ನೀವು ವಿಕಿಪೀಡಿಯಾದ ಸಂಪಾದಕರಲ್ಲೊಬ್ಬರಾಗಿರುವುದು ಇದಕ್ಕೆ ಕಾರಣವಾಗಿದೆ. ಆದರೆ ನನ್ನದೊಂದು ಸಣ್ಣ ಆಕ್ಷೇಪ ಇದೆ. ನೀವು ಸ್ವಲ್ಪ ಜಾಸ್ತಿ ಕನ್ನಡ ಪದಗಳ ಬಳಕೆ ಮಾಡಬೇಕಿತ್ತು. ನಾವು ಕನ್ನಡದ ಪಾರಿಭಾಷಿಕ ಪದಗಳ ಸೃಷ್ಟಿ ಮಾಡಿ ನಾವೇ ಅವುಗಳನ್ನು ಬಳಸದಿದ್ದರೆ ಹೇಗೆ? ನಾನು ಹೀಗೆ ಬರೆದಿದ್ದೇನೆ ಎಂದು ಬೇಸರ ಪಟ್ಟುಕೊಳ್ಳಬೇಡಿ. ನಿಮ್ಮಿಂದ ಇನ್ನೂ ಹಲವಾರು ಲೇಖನಗಳು ಬರಲಿ. ಸಿಗೋಣ, ಪವನಜ

ಧನ್ಯವಾದಗಳು. ತೊಂದರೆ ಬಂದದ್ದು ಇಸ್ಮಾಯಿಲ್ ಮಾಡಿದ ಬದಲಾವಣೆಗಳಲ್ಲಿ. ನಾನು ಬರೆದ ಮೂಲ ಲೇಖನ ಇಸ್ಮಾಯಿಲ್ ರವರ ಕತ್ತರಿಯಿಂದ ಬಹಳಷ್ಟು ಬದಲಾಗಿಹೋಗಿದೆ. ಲೇಖನದ ಒಳ್ಳೆಯ ಕ್ವಾಲಿಟಿಗೆ ಬಹುಶಃ ಇಸ್ಮಾಯಿಲ್ ಕಾರಣ. ನಾನು ಇಸ್ಮಾಯಿಲ್ ಗೆ ಕಳುಹಿಸಿದ ಒರಿಜಿನಲ್ [:wiki-article.pdf|ಬರಹ ಇಲ್ಲಿದೆ] [1 MB Download], ನೋಡಿ. ಸ್ವಲ್ಪ ಇಂಗ್ಲಿಷ್ ಬಳಕೆಯಾದದ್ದು ನಿಜ... ಅಲ್ಲಲ್ಲಿ ಅವನ್ನು ಬರೆಯಲೇಬೇಕಾಗಿ ಬಂದದ್ದರಿಂದ ಸೇರಿಸಿದೆ.

HPN ಅವರೇ,

               ಈ ಲೇಖನವನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಈ ಪ್ರಯತ್ನದಿಂದ ಇನ್ನೂ ಬಹಳ ಮಂದಿ ಕನ್ನಡ ವಿಕಿಪಿಡಿಯಾವನ್ನು ಬೆಳೆಸುವಂತಾಗಲಿ ಎಂದು ಹಾರೈಸುತ್ತೇನೆ.

 

ಇತೀ ನಿಮ್ಮವ,

ಪ್ರದೀಪ ಅಡಿಗ