ಆ ನಾರ್ಥಿಗೆ ಇದು ಬೇಕಿತ್ತಾ

0

ನೆನ್ನೆ ಆತ ಬಂದಿದ್ದ ವಿನಯ ಅಂತೇನೊ ಅವನ ಹೆಸರು ನಾರ್ಥ್ ಇಂಡಿಯನ್ ಕೆಂಪಗೆ ಇದ್ದಾನೆ. ಅವನ್ನ ನೋಡಿದ ತಕ್ಷಣ ಮೈಯ್ಯೆಲ್ಲಾ ಉರಿದು ಹೋಯ್ತು.
ಅವನೂ ನನ್ನನ್ನು ಇಲ್ಲಿ expect ಮಾಡಿರ್ಲಿಲ್ಲ ಅನ್ನಿಸುತ್ತೆ. ಕಕ್ಕಾಬಿಕ್ಕಿಯಾಗಿ ಹೋದ . ನಾನು ಚಾನ್ಸ್ ಬಿಡ್ತೀನಾ . ಇಂತಹದೊಂದು ಅವಕಾಶಕ್ಕೆ ಕಾಯ್ತಾ ಇದ್ದೆ ನಾನು . ನಾನೇನು ಮಾಡಿದೆ ಅನ್ನೊದಿಕ್ಕೆ ಮುಂಚೆ ಯಾಕೆ ಹಾಗೆ ಮಾಡಿದೆ ಅಂತ ತಿಳ್ಕೊಳ್ಳೋಣ.

ಆಗ ತಾನೆ ಕೆಲ್ಸ ಕಳ್ಕೊಂಡು ಕೆಲ್ಸಕ್ಕಾಗಿ ಒದ್ದಾಡ್ತಾ ಇದ್ದೆ ನಾನು. ಹೀಗೆ ಒಮ್ಮೆ ಬಸ್‌ನಲ್ಲಿ ಇವನ ಪರಿಚಯವಾಯ್ತು. ಇನ್ಫೊಸಿಸ್‌ನಲ್ಲಿ ಅವನ ಕೆಲಸ
ಜೆ.ಸಿ ರೋಡ್ ನಲ್ಲಿ ಕನ್ಸಲ್ಟೆನ್ಸಿ ಒಂದಿದೆ ಅವರು ಕೆಲಸ ಕೊಡಿಸ್ತಾರೆ .ಅಲ್ಲಿಗೆ ಬಂದರೆ ಅವರನ್ನ ಪರಿಚಯ ಮಾಡಿಸ್ತೀನಿ ಎಂದು ಹೇಳಿ ಮರು ದಿನ ಅಲ್ಲಿ ಸಿಗುವಂತೆ ಹೇಳಿದ.
ಜೆ.ಸಿ ರೋಡ್‌ಗೆ ಹೋದೆ . ನಂತರ ಅವನೂ ಬಂದ . ಕನ್ಸಲ್ಟೆನ್ಚಿಯವರು ಇನ್ನೂ ಬಂದಿಲ್ಲ ಹೋಟೆಲಿಗೆ ತಿಂಡಿ ತಿನ್ನೋಣಾ ಬನ್ನಿ ಎಂದು ಬಲವಂತಿಸಿ ಕರೆದುಕೊಂಡು ಹೋದನಂತರ ಆತನ
ಒಂದೊಂದೇ ಮಾತಿನಲ್ಲಿ ನಾನು ಅವನ ಗರ್ಲ್ ಫ್ರೆಂಡ್ ಆದರೆ ಕೆಲಸ ಗ್ಯಾರೆಂಟಿ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ. ನಂಗೆ ಅವನಿಂದ ತಪ್ಪಿಸಿಕೊಂಡು ಬಂದರೆ ಸಾಕು ಅನ್ನಿಸುವಷ್ಟು ಬೇಸರವಾಗಿತ್ತು (ನಿಮಗೆ ಗೊತ್ತಿಲ್ಲ ಕೆಲಸ ಸಿಗುತ್ತದೆಂಬ ಆಸೆಯಲ್ಲಿ ಹೋಗಿ ಈ ರೀತಿಯ ಬೇಡಿಕೆ ಬಂದಾಗ ಹೆಂಗಳೆಯರ (ಹುಡುಗಿಯರ) ಮನದಲ್ಲಿ ಆಗುವ ನೋವು ).
ಬೈಯ್ಯಲು ಧೈರ್ಯ ಇರಲಿಲ್ಲ
"sorry i want to go home . " ಅಂದೆ
"then you dont want job?" ಒಂಥರ ಅಸಹ್ಯವಾಗಿ ನೋಡಿ ಹೇಳಿದ
"No I can find it on my self . I am already engaged"
" No problem . marry with whom you are engaged . be my girl friend for some time no commitment"

ನಂತರ ನಾನು ಅಲ್ಲಿರಲಿಲ್ಲ

ಆ ಕೊನೆಯ ಮಾತು ನನ್ನನ್ನು ಎಷ್ಟು ವಿಚಲಿತಗೊಳಿಸಿತೆಂದರೆ, ಅಲ್ಲಿಂದ ಮುಂದೆ ನಾನು ಯಾವ ಗಂಡಸಿನ ಹತ್ತಿರವೂ ನನಗೆ ಕೆಲಸ ಇಲ್ಲ ಅಂತ ಹೇಳಲೇ ಇಲ್ಲ.

_________________________***********************_______________________________
ಅಂತಹವನು ನೆನ್ನೆ ಬಂದಿದ್ದ ತನ್ನ ಹೆಂಡತಿಯ ಜೊತೆ
ಅವಳಿಗೆ ಇಂಗ್ಲೀಷ್ ಬರುವುದಿಲ್ಲ . ಕನ್ನಡವೂ ಬರುವುದಿಲ್ಲ

ಅವಳಿಗೆ ಇಂಗ್ಲೀಷ್ ಕಲಿಸಿ ಕೊಡಬೇಕೆಂದು ನಮ್ಮ ಕೌನ್ಸೆಲರ್ ಬಳಿ ಮಾತಾಡುತ್ತಿದ್ದ.
ನನ್ನನ್ನು ನೋಡಿದ ತಕ್ಷಣ
"ಚಲೋ ಚಲೊ ಇದರ್ ನಹಿ ಚಾಹಿಯೆ"
ಅಂತ ಹೇಳಿ ಹೆಂಡತಿಯನ್ನು ಕರೆದು ಕೊಂಡು ಹೋಗುತ್ತಿದ್ದ

ನಾನೆ
"ರುಕಿಯೇ ಆಪ್ ಆಯಿಯೆ " ಅಂತ ಅವನ ಹೆಂಡತಿಯನ್ನ ಕರೆದು ಆಫೀಸಿನ ಒಳಗೆ ಕೂರಿಸಿಕೊಂಡೆ
"ಆಪ್ ಇಂಗ್ಲೀಶ್ ಸೀಕನೆ ಸೆ ಪಹೆಲೆ ಆಪಕಾ ಪತೀಕೊ ತಮೀಜ್ ಸಿಕಾಯಿಯೆ. ನೈ ತೊ ಆಪ್ ಯಾ ಆಪ್ ಕಾ ಪತಿ ಇಸ್ ಏರಿಯಾಮೆ ರಹ್ ನಹಿ ಸಕ್ತೆ " ಎಂದೆ
(ನೀವು ಇಂಗ್ಲೀಶ್ ಕಲಿಯುವ ಮೊದಲು ನಿಮ್ಮ ಪತಿಗೆ ಹದ್ದುಬಸ್ತಿನಲ್ಲಿರುಲು ಕಲಿಸಿ. ಇಲ್ಲವಾದರೆ ನೀವು ಅಥವ ನಿಮ್ಮ ಗಂಡ ಈ ಏರಿಯಾದಲ್ಲಿರಲು ಸಾಧ್ಯವಿಲ್ಲ)
"ಕ್ಯೋ ಎ ಕೆಹ್ ರಹೇ ಹೈ ಆಪ್ " (ಇದನ್ನ ಯಾಕೆ ಹೇಳ್ತಾ ಇದೀರಾ ನೀವು)

"ಆಪ್ ಕಾ ಪತಿ ಸೆ ಪೂಚಿಯೆ" (ನಿಮ್ಮ ಗಂಡನ್ನ ಕೇಳಿ)

"ಕ್ಯೊ ಕ್ಯಾ ಪ್ರಾಬ್ಲ್ಮ್ ಹೈ" (ಯಾಕೆ ಏನಾದ್ರೂ ಪ್ರಾಬ್ಲಮ್ ಇದೆಯಾ)

" ಉನ್ ಸೆ ಪೂಚಿಯೆ " (ಅವರನ್ನೇ ಕೇಳಿ)

ಅವಳು ಬುಸುಗುಡುತ್ತಾ ಗಂಡನ ಹಿಂದೆ ಹೋಗಿ ಏನೋ ಬೈಯ್ಯುತ್ತಿದ್ದಳು.

ಸ್ವಲ್ಪ ಹೊತ್ತಿನ ನಂತರ ಆತ ಬಂದ

"what is this i don't even remember your name . How can you tell all these things to my wife ?" ಎಗರಾಡಿದ

"if you stand for some more time i will tell to every body in this area and even in your comnpany" ನಾನು ತಣ್ಣಗೇ ಹೇಳಿದೆ
ಆತ ಮಾತಾಡಲಿಲ್ಲ
ಸುಮ್ಮನೇ ಕ್ಯಾಬಿನ್‍ನಿಂದ ಹೊರಟು ಹೋದ

ನಾನು ಸೇಡು ತೀರಿಸಿಕೊಂಡ ನೆಮ್ಮದಿಯಿಂದ ಹಾಯಾಗಿ ಬಾದಾಮಿಹಾಲು ಕುಡಿದೆ.

ಆದ್ದರಿಂದ ಐಟಿ ಯಲ್ಲಿರುವ ಸಂಪದದ ಹುಡುಗರೇ . ದಯವಿಟ್ಟು ಹುಡುಗಿಯರ ಅಸಹಾಯಕತೆಯನ್ನ ಮುಂದಿಟ್ಟುಕೊಂಡು ಅವರಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ಬಲೆಗೆ ಹಾಕಿಕೊಳ್ಳುವ ಯೋಚನೆಯನ್ನು ಕನಸಿನಲ್ಲೂ ಮಾಡಬೇಡಿ.

ಇದು ನಿಮ್ಮೆಲ್ಲರ ರೂಪಕ್ಕನ ವಿನಂತಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದಕ್ಕಿಂತಾ ಮೊದಲು,
ಹುಡುಗಿಯರೇ... ಕೆಲಸಕ್ಕೋಸ್ಕರ ಯಾರಯಾರನ್ನೋ ನಂಬಿ ಎಲ್ಲೆಲ್ಲಿಗೋ ಅವರ ಹಿಂದೆ ಹೋಗಿಬಿಡಬೇಡಿ. ಸ್ವಲ್ಪ ಯೋಚಿಸಿ ಮುನ್ನಡೆಯುವುದನ್ನು ಕಲಿತುಕೊಳ್ಳಿ.

ಛೆ ಛೆ .. ಎಲ್ಲಾದರೂ ಉಂಟೆ.. ಕನಸು ಮನಸಲ್ಲೂ...... ಊಹೂಂ
ನಾವೆನಿದ್ರೂ(ಸಂಪದದ ಹುಡುಗರು) ಯಾವ್ದಾದ್ರೂ ಹುಡುಗಿ ಇಷ್ಟ ಆದ್ರೆ ಡೀಸೆಂಟಾಗಿ ಪ್ರೋಪೋಸ್ ಮಾಡಿ ಒಪ್ಕೊಂಡ್ರೆ ಡಿಸೆಂಟಾಗಿ ಲವ್ ಮಾಡಿ ಮದುವೆಯಾಗಿ ಡೀಸೆಂಟಾಗಿ ಸಂಸಾರ ಮಾಡ್ತೀವಿ :P

ರೂಪಕ್ಕನೋರೆ,
ಕನ್ನ್ಡಡದ ಹುಡ್ಗುರು(ಹೆಚ್ಚಾಗಿ) ಯಾರು ಇನ್ಂತ ಹಲ್ಕಾ ಕೆಲಸ ಮಾಡಲ್ಲ, ಯಾವನೋ-ಎಲ್ಲಿಯವನೋ ಒಬ್ಬ ಕೆಲ್ಸ ಕೊಡುಸ್ತಿನಿ ಅಂದ ಅಂತ, ಅವ್ನ ಹತ್ರ ಹೋಗಿರೋ(ಅದೂ ಒಬ್ಬರೇ) ನಿಮ್ಮ ಧೈರ್ಯಕ್ಕೆ(?) ಮೆಚ್ಚಲೇಬೇಕು. ಹೋಗ್ಲಿ ಬಿಡಿ, ಪರಿಸ್ಟಿತಿಗೆ ತಕ್ಕಂತೆ react ಮಾಡಿದೀರಾ ಅಂನ್ಕೋತಿನಿ.
ಅದೇನೋ ಹೇಳ್ತಾರಲ್ಲ, "ನಾವು ಮೈ-ಮರತರೇನೆ, ಅವ್ನು ಕಳ್ಳ ಆಗೋದು" ಅಂತ. ಇದು ನಿಜಾನೇ ಆದ್ರೆ, ಅವ್ನನ್ನ ಅಷ್ಟು ಸುಲಭವಾಗಿ ಬಿಡಬಾರದಿತ್ತು.

ಅಪ್ಪ ಹರ್ಷ
ನಾನೇನು ಕಾಡಿಗೋ ಇಲ್ಲ ಪಿಕ್ನಿಕ್ಕಿಗೋ ಹೋಗ್ಲಿಲ್ಲ
ಎಲ್ರನ್ನ ಕರ್ಕೊಂಡು ಹೋಗೋಕೆ
ಅದರಲ್ಲೂ ಜೆಸಿ ರೋಡ್‌ಗೆ ಹೋಗೋಕೆ ಅಂತಹ್ಸ್ ದೈರ್ಯ ಬೇಕಿಲ್ಲ ಅನ್ಕೋತೀನಿ

"ಎಲ್ಲಿಯವನೋ ಒಬ್ಬ ಕೆಲ್ಸ ಕೊಡುಸ್ತಿನಿ ಅಂದ ಅಂತ, ಅವ್ನ ಹತ್ರ ಹೋಗಿರೋ"
ಅನ್ನೊ ಮಾತು ಸ್ವಲ್ಪ ಅತೀ ಅನ್ನಿಸಲಿಲ್ಲವಾ ?

http://thereda-mana.blogspot.com/

ರೂಪ

ರೂಪಾರವರೆ,
ದಯವಿಟ್ಟು ತಪ್ಪಾಗಿ ಅರ್ಥೈಸಿಕೊಳ್ಳ್ಬೇಡಿ. ಯಾವನೋ ಅನಾಮಿಕನ ಮಾತು ನಂಬಿ, ಅವ್ನು ಹೇಳಿದ್ದ ಜಾಗಕ್ಕೆ ನೀವು(?) ಹೋಗಿರೋದು ನಿಮ್ಮ ಮುಗ್ದತನಾನೋ, ಇಲ್ಲಾ ನಾನು ಆಗ್ಲೇ ಹೇಳ್ದಂಗೆ ನೀವಿಟ್ಟ ದಿಟ್ಟ ಹೆಜ್ಜೆ ಅಂತ ನಾನು ಹೇಳಿದ್ದು., ಅಸ್ತ್ಟೆ...,
ಅದ್ರಲಿ ಎನೂ ಹುದುಗಿಹುದಿಲ್ಲಾ...... :-)

ಗುಱುಱಾಜ
www.kannadaguru.blogspot.com

ಸರಿಯಾಗಿ ಮಾಡಿದ್ದೀರಿ ರೂಪಕ್ಕ. ಆದರೂ ಅವನು ನಿಮಗೆ ಹಾಗೆ ಕೇಳಿದ್ದು ನೋಡಿ ಮೈ ಊರಿತಾ ಇದೆ.ಇವರೆಲ್ಲಾ ಏನ೦ದ್ಕೊ೦ಡಿರುತ್ತಾರೂ ಹೆಣ್ಣು ಅ೦ದರೇ? ಸ೦ಪದಿಗರು ಅ೦ಥವರಲ್ಲ ಬಿಡಿ.ಚೆನ್ನಾಗಿ ರೋಪ್ ಹಾಕಿದ್ದೀರಿ.........."ರೋಪ್ ಕ್ಕ :-p

ನೀವು ಐ.ಟಿಯಲ್ಲಿರುವ ಸಂಪದ ಹುಡುಗರು ಅಂತ ಯಾಕೆ ಅಂತಿದಿರಾ? ಬೇರೆ ಕೆಲಸಗಳಲ್ಲಿರುವವರು ಇಂತದನ್ನು ಮಾಡುವದಿಲ್ಲ ಅಂತಲೋ??

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

ಬರೇ ಐ.ಟಿ ಹುಡ್ರು ದುಡ್ಡು-ಕಾಸು ಮಾಡಾಕತ್ಯಾರಾ ಅನ್ನೋ ಕಾಲ ಮುಗ್ದು-ಹೋಗೆತಿ ಯಕ್ಕಾ. ಪಿತ್ತ ಏರಾಕ ಬರೇ ದುಡ್ಡು ಆಬಕಂತಿಲ್ಲಾ. ಏರಿದ್ರೂನು ಐ.ಟಿ ’ಹುಡ್ಗೀ’ರಿಗೆ ಏರದಷ್ಟು(ಯಪ್ಪಾ ಶಿವ್-ಶಿವಾ.....ನಾ ನೋಡಾಕೊಲ್ಯಪಾ...), ಹುಡ್ಗುರಿಗೆ ಏರಂಗಿಲ್ಲಾ ಬಿಡು..,

ಯಕ್ಕಾ, ನಮ್ಮ ಗೌಡ್ರ(ಸಂಗಣ್ಣ) ಹೇಳ್ದಂಗ, ಬರೇ ಐ.ಟಿ ಹುಡ್ರ ಯಾಕ ಇಂತಾದು ಮಾಡ್ತಾರಾ, ಅಂತ ನಿಂಗ ಅನುಮಾನ ಬಂದೇತಿ...?

ಮತ್ತ ಬರೀ ನೀ ನಮ್ಮಂತ ಅಮಾಯಕ ಹುಡ್ರುನ್ನ ಸುಮ್ಮ-ಸುಮ್ಮ ಬೈಬ್ಯಾಡ ನೋಡ ಮತ್ತ, ಫುಕ್ಕಟ್ ಸಿಕ್ಕೇವಿ ಅಂತ. ನಮ್ಗ ಭಾಳ ಬ್ಯಾಜಾರು ಆಕೆತಿ.

ಹರ್ಷ,
ನಾನು ಸೂಪರ್ ಅಂದಿದ್ದು, ರೂಪ ಆ ನಾರ್ತಿಗೆ ಒಳ್ಳೆ ಏಟು ಕೊಟ್ಟಿದ್ದಕ್ಕೆ. ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದಾರೆ..

-ವರುಣ ಭಟ್

ಬರೇ ಐ.ಟಿ ಹುಡ್ರು ದುಡ್ಡು-ಕಾಸು ಮಾಡಾಕತ್ಯಾರಾ ಅನ್ನೋ ಕಾಲ ಮುಗ್ದು-ಹೋಗೆತಿ ಯಕ್ಕಾ. ಪಿತ್ತ ಏರಾಕ ಬರೇ ದುಡ್ಡು ಆಬಕಂತಿಲ್ಲಾ. ಏರಿದ್ರೂನು ಐ.ಟಿ ’ಹುಡ್ಗೀ’ರಿಗೆ ಏರದಷ್ಟು(ಯಪ್ಪಾ ಶಿವ್-ಶಿವಾ.....ನಾ ನೋಡಾಕೊಲ್ಯಪಾ...), ಹುಡ್ಗುರಿಗೆ ಏರಂಗಿಲ್ಲಾ ಬಿಡು..,

ಯಕ್ಕಾ, ನಮ್ಮ ಗೌಡ್ರ(ಸಂಗಣ್ಣ) ಹೇಳ್ದಂಗ, ಬರೇ ಐ.ಟಿ ಹುಡ್ರ ಯಾಕ ಇಂತಾದು ಮಾಡ್ತಾರಾ, ಅಂತ ನಿಂಗ ಅನುಮಾನ ಬಂದೇತಿ...?

ಮತ್ತ ಬರೀ ನೀ ನಮ್ಮಂತ ಅಮಾಯಕ ಹುಡ್ರುನ್ನ ಸುಮ್ಮ-ಸುಮ್ಮ ಬೈಬ್ಯಾಡ ನೋಡ ಮತ್ತ, ಫುಕ್ಕಟ್ ಸಿಕ್ಕೇವಿ ಅಂತ. ನಮ್ಗ ಭಾಳ ಬ್ಯಾಜಾರು ಆಕೆತಿ.

ಯಾಕ್ಲಾ ತಮ್ಮ ಹಂಗ್ ವಟಗುಟ್ತಿ ?
ನಾ ಯೇನ ಅನ್ಬಾರದ ಅಂದಂತ ಇಂಗೆ ಎಗರಾಡ್ತಿ
ನಾ ಎಲ್ಲಾ ನೋಡಿದ್ ಮ್ಯಾಕೆ ಯೋಳಿರೋದು ಎಲ್ಲಾ

ಅಟಕೂ
ನೀ ಯಾಕ್ಲಾ ತಮ್ಮಾ
ಸುಮ್ಕೆ ಕುಂಬ್ಲ್ಕಾಯಿ ಕಳ್ಳಾ ಅಂದ್ರ ಎಗಲು ಮುಟ್ಕೊಂಡು ನೋಡ್ಕೊಂತೀಯಾ

ಸಾರಿ ಹರ್ಷ ಸ್ವಲ್ಪ ಈ ಥರಹ ಕನ್ನಡ ಮಾತಾಡಿ ನೋಡೋಣ ಅನ್ನಿಸಿತು
ಹಾಗಾಗಿ ಏಕವಚನ ಜಾಸ್ತಿ ಇದೆ

http://thereda-mana.blogspot.com/

ರೂಪ

ಯಕ್ಕಾ,
ಮತ್ತ ನೀ ಪಿತ್ತ ಏರಿಸ್ಕ್ಯಾಬ್ಯಾಡ, ನೀ ದೊಡ್ಡೇಕಿದೀ..., ನೀ ಏನರ ಅನ್ನು ನಡೀತತಿ,
ಅದು ಬ್ಯಾರೇ ನೀ ಒಬ್ಬೇಕೆ ಪೂರಾ ದುನಿಯಾ ನೋಡ್ಬಿಟ್ಟಿದೀ.....
ಮತ್ತ ನೀ ಕುಂಭ್ಳ ಕಾಯಿ ಕಳ್ಳ ಅಂದ ಕೂಡ್ಲೆ, ಯಾವನೇನು(ಐ.ಟಿ ಹುಡ್ಗಾ) ಕಳ್ಳ ಆಗಂಗಿಲ್ಲಾ, ಅದು ಮಾತ್ರ ತಿಳ್ಕ.
ಆದ್ರೂ ನಿನಗ್ಯಾಕ ಐ.ಟಿ ಹುಡ್ರ ಹಿಂಗ ಮಾಡ್ತಾರಾ ಅಂತ ಅನ್ಯುಸ್ತೋ ಗೊತ್ತಾಲಿಲ್ಲಾ....., ಹೋಗ್ಲಿ ಬಿಡು..,
ಏನ ಹೇಳ್ಬಕಂತ್ತಿದ್ದೀ, ಹೇಳಿದಿ.......ನಾ ಹೋಗಿಬತ್ತನಿ..

ಹರ್ಷ
ಆಯ್ತು ಬಿಡಪ್ಪ
ಅಧಿಕಾರದಲ್ಲಿರುವ, ದುಡ್ಡಿರುವ ಎಲ್ರ್ರೊ ಹೆಣ್ಣಿನ ಅಸಹಾಯಕತೆಯನ್ನು ದುರುಪುಯೋಗಪಡಿಸಿಕೊಳ್ಳಬೇಡಿ
ನಿಮ್ಮಗಳ ಜೊತೆ ಜಗಳ ಯಾಕೆ ನಂಗೆ

http://thereda-mana.blogspot.com/

ರೂಪ