ಏನಿದು 'ಅದಿ'?

0

ಈ ಪದಬಳಕೆಗಳನ್ನು ಗಮನಿಸಿ

೧. ನಿನ್ನ ಪೂಜೆಗೆ ಬಂದೆ ಮಾದೇಸ್ವರ, ಎನ್ನ ಕರುಣದಿ ಕಾಯೋ ಮಾದೇಸ್ವರ (ಕರುಣದಿ =ಕರುಣೆಯಿಂದ)
೨. ಸಕ್ಕದ ಕಬ್ಬಿಣದ ಕಡಲೆ, ಕನ್ನಡ ಸುಲಿದಬಾಳೆಹಣ್ಣಿನಂದದಿ( ಬಾಳೆಹಣ್ಣಿನಂದದಿ = ಬಾಳೆಹಣ್ಣಿನತರ)


ಈ 'ಅದಿ' ಸಂದರ್ಬಕ್ಕೆ ತಕ್ಕಂತೆ ಅರಿತ ಯತ್ವಾಸ ಉಂಟಾಗುತ್ತಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ಗೊತ್ತಿರಬಹುದು ಅವಂ ಬಂದಂ ಎಂಬುದಱ ಕೊನೆಯ ’ನ್’(ಇಲ್ಲಿ ಅನುಸ್ವಾರ) ಕೆಲವು ಕಡೆ ಬೞಸುವುದಿಲ್ಲ. ಹೞಗನ್ನಡದಲ್ಲೂ ಕೂಡ.
ಕರುಣದಿಂ ಕಾಯೋ ಎನ್ನುವುದನ್ನು ಕರುಣದಿ ಕಾಯೋ ಎಂದೂ ಅನ್ನಬಹುದು. ಹಾಗೆಯೇ ಸುಲಿದ ಬಾೞೆಯ ಹಣ್ಣಿನಂದದಿಂ ಎಂಬುದನ್ನು ಸುಲಿದ ಬಾೞೆಯ ಹಣ್ಣಿನಂದದಿ ಎಂದೂ ಹೇೞಬಹುದು.

ನನ್ನಿ ಕನ್ನಡಕಂದ,

ಇದು ಹಳೆಗನ್ನಡದ ಪಳೆಯುಳಿಕೆ ಅಂತ ತಿಳಿದು ನಲಿವಾಯಿತು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು