ನಿಷ್ಪಾಪಿ ಸಸ್ಯಗಳು (ಭಾಗ ೪೫) - ಗೋರಂಟಿ ಸಸ್ಯ
20 hours 3 minutes ago - ಬರಹಗಾರರ ಬಳಗಈ ನಡುವೆ ಹಬ್ಬ, ಹರಿದಿನಗಳು, ಮದುವೆ, ಔತಣಗಳು ನಡೆಯುತ್ತಲೇ ಇವೆ. ಮನೆ ಅಥವಾ ಬಂಧು ಬಳಗದಲ್ಲಿ ಹಬ್ಬಗಳು ಬಂದಾಗ, ಮದುವೆಗಳು ನಡೆದಾಗ ಅಥವಾ ಊರ ಜಾತ್ರೆಯೇ ಬಂದರೂ ಹೆಣ್ಣು ಮಕ್ಕಳ ಸಂಭ್ರಮ ರಂಗೇರುವುದು ಮದರಂಗಿ ಯ ಬಣ್ಣದ ಮೂಲಕವೇ ಎಂದರೆ ತಪ್ಪಾಗದು. ತುಳು ಭಾಷೆಯಲ್ಲಿ ಮದ್ರೆಂಗಿ, ಕನ್ನಡದಲ್ಲಿ ಗೋರಂಟಿ, ಆಂಗ್ಲ ಭಾಷೆಯಲ್ಲಿ ಹೆನ್ನಾ ಎಂದೂ ಹೆಸರು ಪಡೆದ ಸಸ್ಯವು ಇಂದು ಮೆಹಂದಿ ಕಾರ್ಯಕ್ರಮದೊಳಗೆ ಮಿಂಚುತ್ತಿದೆ.
ಸಮಾರಂಭದ ಎರಡು ದಿನ ಮುಂಚಿತವಾಗಿಯೇ ಯಾವ ಗಿಡದಲ್ಲಿ ಉತ್ತಮ ಬಣ್ಣದ ಸೊಪ್ಪಿದೆ ? ಎಂದು ಆರಿಸಿಕೊಂಡು ಹಿಂದಿನ ದಿನ ಸೊಪ್ಪನ್ನು ಆರಿಸಿ ತಂದು ಅಮ್ಮನಲ್ಲೋ, ಅಜ್ಜಿಯಲ್ಲೋ ಕೊಟ್ಟು ನಯವಾಗಿ ರುಬ್ಬಿಸಿಕೊಳ್ಳುವಾಗ ಒಂದಿಷ್ಟು ಬೈಗಳು ಇದ್ದದ್ದೇ. ರುಬ್ಬುವಾಗ ಕೈಯೆಲ್ಲಾ ಕೆಂಪಾಗುವುದರಿಂದ ಆ ಕೆಲಸ ಬೈದಾದರೂ ಹಿರಿಯರೇ ಮಾಡಿಕೊಡಬೇಕೆಂದು ಕಾಯುವುದು ಏಕೆಂದರೆ ಈ ಮದರೆಂಗಿಯ ಮೇಲಿನ ಮೋಹದಿಂದಲೇ. ಕೈ ಕಾಲಿನ ಉಗುರುಗಳಿಗೆ ಈ ಗೋರಂಟಿ ಸೊಪ್ಪಿನ ಪೇಸ್ಟನ್ನು ಟೊಪ್ಪಿಯಂತೆ ಜೋಡಿಸಿ ಅದರ ಮೇಲೆ ವೀಳ್ಯದೆಲೆ ಇಟ್ಟು ಬಾಳೆನಾರಿನಲ್ಲಿ ಕಟ್ಟಿ ಮಲಗಿದರೆ ಮರುದಿನ ಬೆರಳ ತುದಿಗಳು ಕೇಪಳ ಹಣ್ಣಿನಂತೆ ಕೆಂಪು ಕೆಂಪಾಗಿ ಮಿಂಚುತ್ತಿದ್ದವು. ದಿನ ಕಳೆದಂತೆ ಉಗುರು ಬೆಳೆಯುತ್ತಾ ಉಗುರಿಗೆ ಅಂಟಿದ ಬಣ್ಣವೂ ಮುಂದಕ್ಕೆ ಸಾಗುವುದನ್ನು ನೋಡುವುದೇ ಒಂದು ಸೊಗಸು!
ಇಂದು ಸೊಪ್ಪು ಅರೆಯುವ ಕಲ್ಲು ಮಾಯವಾಗಿದೆ. ಬೇಲಿ, ಹಿತ್ತಲುಗದ್ದೆಯ ಬದುಗಳಲ್ಲಿ ಪೊದೆಗಳಾಗಿ ಬೆಳೆಯುತ್ತಿದ್ದ ಮದರೆಂಗಿ ಗಿಡಗಳೂ ಮಾಯವಾಗಿವೆ. ಹಿಂದೆ ಅಲ್ಪಸ್ವಲ್ಪ ನೀರಿಗೂ ಯಾವ ಮಣ್ಣಲ್ಲೂ ಸೊಂಪಾಗಿ ಬೆಳೆಯಬಲ್ಲ ಮದರೆಂಗಿ ಅಥವಾ ಗೋರಂಟಿ ಇರದ ಮನೆಗಳೇ ಇರಲಿಲ್ಲವೇನೊ. ಮದುಮಕ್ಕಳಿಂದ ಬಂಧುಗಳ ವರೆಗೆ ಎಲ್ಲರೂ ಇಷ್ಟಪಡುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಮ… ಮುಂದೆ ಓದಿ...