ಬೀತೋವೆನ್ ಎಂಬ ಸಂಗೀತ ಮಾಂತ್ರಿಕ
15 hours 12 minutes ago - ಬರಹಗಾರರ ಬಳಗಇಂದು ನಾವು ಬೀತೋವೆನ್ ಎಂಬ ಸಂಗೀತ ಸಾಧಕನ ಜೀವನದ ಒಂದು ಘಟನೆ ನೋಡೋಣ. ಬೀತೋವೆನ್ ಪಿಯಾನೋ ವಾದಕ. ಈತನ ಸಂಗೀತ ಕಚೇರಿಗೆ ಜನಸಾಗರವೇ ಸೇರುತ್ತಿತ್ತು. ಅಷ್ಟು ಜನರಿದ್ದರೂ ಸಹ ಮೌನ ತುಂಬಿರುತ್ತಿತ್ತು. ಜನ ಸಂಗೀತದಲ್ಲಿ ಮಗ್ನರಾಗಿ ಬಿಡುತ್ತಿದ್ದರು. ಒಮ್ಮೆ ಸಂಗೀತ ಕಚೇರಿ ನಡೆಯುತ್ತಿತ್ತು. ಯುವಕರು, ತರುಣರು, ತರುಣಿಯರು ಮತ್ತು ಮುದುಕರು ಎಲ್ಲರೂ ಸೇರಿದ್ದರು. ಎಲ್ಲರೂ ಸಂಗೀತದಲ್ಲಿ ಮಂತ್ರಮಗ್ನರಾಗಿದ್ದರು. ಸಂಗೀತ ಎಷ್ಟು ಹೊತ್ತು ನಡೆಯುತ್ತೋ ಅಷ್ಟು ಹೊತ್ತು ಹಾಗೆ ಮೌನವಾಗಿ ಎಲ್ಲರೂ ತಲ್ಲೀನರಾಗಿದ್ದರು. ಸಂಗೀತ ಕಾರ್ಯಕ್ರಮ ಮುಗಿಯಿತು. ಆಗ ಒಬ್ಬ ಸುಂದರ ತರುಣಿ ಬೀತೋವೆನ್ ನನ್ನು ಭೇಟಿ ಮಾಡಿ ಹೀಗೆ ಹೇಳಿದಳು. "ದೇವರು ನಿಮಗೆ ನೀಡಿರುವ ಸಂಗೀತವನ್ನು ನನಗೆ ನೀಡಿದ್ದರೆ ನಾನು ಹೀಗೆ ಆಗಬಹುದಿತ್ತೇನೋ" ಎಂದಳು. ಅದಕ್ಕೆ ಬೀತೋವೆನ್ ಬಹಳ ಸುಂದರವಾಗಿ ಹೇಳಿದ ಮಾತು ನನಗೆ, ನಿಮಗೆ ಎಲ್ಲರಿಗೂ ಸ್ಪೂರ್ತಿಯಾಗುತ್ತದೆ. "ದೇವರು ನನಗೆ ನಿಮಗೆ ಹತ್ತು ಬೆರಳು, ಎರಡು ಕಣ್ಣು, ಎರಡು ಕಿವಿ, ಒಂದು ಮೂಗು, ಒಂದು ಬಾಯಿ, ಎರಡು ಕಾಲು, ಎರಡು ಕೈ, ದೇಹ, ಸುಂದರ ಮನಸ್ಸು, ಬುದ್ಧಿ , ಭಾವ ಮತ್ತು ಜ್ಞಾನ ನೀಡಿದ್ದಾನೆ. ನಾನು ಇವುಗಳನ್ನು ಚೆನ್ನಾಗಿ ಬಳಸಿದೆ. ಹೇಗೆ ಬಳಸಿದೆ ಅಂದರೆ ದಿನಕ್ಕೆ ಹತ್ತು ಗಂಟೆಯಂತೆ 40 ವರ್ಷ ಬಳಸುತ್ತಲೇ ಇದ್ದೇನೆ. ಆದ್ದರಿಂದ ಸುಂದರರಾಗ ರಚಿಸಲು ಸಾಧ್ಯವಾಯಿತು. ನೀನು ಬಳಸಲಿಲ್ಲ ಹಾಗಾಗಿ ಹೀಗೆ ಇದ್ದೀಯೇ...!!" ಈ ಮಾತು ಎಷ್ಟು ಸುಂದರ ಅಲ್ಲವೇ. ಬೀತೋವೆನ್ ಗೆ ನೀಡಿದ ಎಲ್ಲಾ ಸಾಧನಗಳನ್ನು ನಿಸರ್ಗ ನಮಗೂ ಅಳವಡಿಸಿದೆ. ಜಗತ್ತನ್ನ ಶ್ರೀಮಂತ ಮಾಡಿ ನೀನು ಶ್ರೀಮಂತವಾಗಿ, ಸುಂದರವಾಗಿ, ಶಾಂತಿ ಸಮಾಧಾನದಿಂದ ಬಾಳು ಎಂದು ನಿಸರ್ಗ ಹೇಳಿದೆ. ಜೊತೆಗೆ ಈ ನಿಸರ್ಗ ಪ್ರತಿಯೊಬ್ಬರಿಗೂ ಒಂದೊಂದು ವಿ… ಮುಂದೆ ಓದಿ...