ಹಿಮಾಲಯದ ಶಿವಲಿಂಗ ಪರ್ವತ...!!!

ಹಿಮಾಲಯದ ಶಿವಲಿಂಗ ಪರ್ವತ...!!!

ಈ ಪರ್ವತಕ್ಕೆ ಮೂರು ಶಿಖರಗಳಿದ್ದು - ಅಪ್ಪ, ಅಮ್ಮ ಮತ್ತು ಹಸುಗೂಸು ಶಿವ ಲಿಂಗ ಶಿಖರಗಳೆಂದು ಹೆಸರಿಸಿದ್ದಾರೆ!
(father shivaling, mother shivaling, baby shivaling)

ಈ ಚಿತ್ರದಲ್ಲಿ ಕಾಣುವುದು, ಅಮ್ಮ ಶಿವಲಿಂಗ ಶಿಖರ...ಬಲಗಡೆ ಕಾಣುವ ಕಪ್ಪು ಶಿಖರವೇ ಹಸುಗೂಸು ಶಿವ ಶಿಖರ ...
ಫೋಟೋ ತೆಗೆದದ್ದು ತಪೋವನದಿಂದ...
ತಪೋವನ ಭಗೀರಥ ಇಲ್ಲಿ ಕುಳಿತು ಶಿವ ಧ್ಯಾನ ಮಾಡಿದ ಎಂದು ಪ್ರತೀತಿ...

ಹಸುಗೂಸೇ ೧೮೦೦೦ ಅಡಿಗಳಷ್ಟು ಎತ್ತರ... ಹಿಮ ಚಾರಣರಿಗೇ ಏರಲು ಒಂದು ವಾರ ಬೇಕಂತೆ...
ನಮ್ಮ ಕೈಲಾದದ್ದು ~೧೪೫೦೦ ಅಡಿಗಳ ವರೆಗೆ ಮಾತ್ರ....

--ಸಿರಿ

ಪ್ರತಿಕ್ರಿಯೆಗಳು

ಕೂಊಊಊಊಊಊಊಊಊಊಊಊಊಊಲ್... ಸಕ್ಕತ್ ಫೋಟೋ... ಮೇಲೆ ಸೂರ್ಯನ ಬಿಸಿಲು, ಕೆಳಗೆ ಮೋಡ, ಮಧ್ಯೆ ಪರ್ವತ... ಹಿಮಾಲಯ, ಪ್ರಕೃತಿಯ ಮುಂದೆ ನಾವು ಎಷ್ಟು ಸಣ್ಣವರು ಅಂತ ಮನದಟ್ಟು ಮಾಡ್ಕೊಡತ್ತೆ.
ಕೀರ್ತಿ ಕಿರಣ್ ಎಂ

ಊಹೂಂ ನೀವು ಹೇಳಿದ್ದು ಗೊತ್ತಾಗಲಿಲ್ಲ...

ಅಮ್ಮ ಶಿವಲಿಂಗದಲ್ಲಿ ಕಣ್ಣುಗಳಿವೆ ಎಂದೆ?

ಅಥವಾ ಅಮ್ಮ ಶಿವಲಿಂಗ ಹತ್ತಿದರೆ ನನಗೆ ಎರಡು ಕಣ್ಣು ಕಾಣುವುದೆಂದೆ? :D

ಸ್ವಾಮಿ,

ನೆಟ್ಟ ನೋಟದಲ್ಲಿ ಚಿತ್ರದಲ್ಲಿರುವ ಶಿಖರದ ತುದಿಯನ್ನು ನೋಡಿ,
ಹಾಗೇ ಕೆಳಗೆ ನೋಡುತ್ತಾ ಬನ್ನಿ,
ಮೋಡಗಳು ಕಾಣಿಸಿತಲ್ವಾ?
ಇನ್ನೂ ಸ್ವಲ್ಪಕೆಳಗೆ ಒಂದು ಸೆ.ಮೀ. ಅಂತರದಲ್ಲಿ ಎರಡು ಕಣ್ಣುಗಳು ಕಾಣಿಸುತ್ತಾ ಇಲ್ಲವೇ?
(ಬಾಬಾರಿಗೆ ಕಣ್ಣು ಬಂದ ಊರಲ್ಲಿದ್ದೂ,ಈ ಪವಾಡ ನಿಮಗ್ಯಾರಿಗೂ ಕಾಣಿಸಲಿಲ್ಲವೆ?)
ಗಮನಿಸಿ ನೋಡಿ- ಇಲ್ಲವಾದರೆ ಪುನಃ ಪ್ರಯತ್ನಿಸಿ.

ನಾನಾದರೆ ಈ ಫೋಟೋವನ್ನು ಎನ್ಲಾರ್ಜ್ ಮಾಡಿಸಿ,ಫ್ರೇಮ್ ಹಾಕಿ ಇಡುತ್ತಿದ್ದೆ.
ತಮಾಷೆಯಲ್ಲ,ಸೀರಿಯಸ್ಸಾಗಿ ಹೇಳುತ್ತಿದ್ದೇನೆ.

-ಗಣೇಶ.

ಏನೋ [:http://en.wikipedia.org/wiki/Blowup|ಮೈಕಲಾಂಜೆಲೋ ಆಂಟೋನಿಯೋನಿ ಚಿತ್ರ] ನೋಡಿ ಬಂದವರಂತೆ ಆಡ್ತಿದೀರಪ್ಪ :-)

ಚಿತ್ರ ಮಾತ್ರ ಅಲ್ಲ, ಕಲ್ಲು, ಟೈಲ್ಸು, ಕೊನೆಗೆ ಹುಲ್ಲು ಹಾಸಿನಲ್ಲೂ ನಮ್ಮ ಕಲ್ಪನೆಗೆ ತಕ್ಕಂತೆ ಚಿತ್ರಗಳನ್ನು ಕಂಡುಕೊಳ್ಳಬಹುದು. ಆದರೆ ಚಿತ್ರಗಳಿರೋದು ಮನಸ್ಸಿನಲ್ಲಿ ಮಾತ್ರ.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

:)
ಏನೋ ಹುಟ್ಟುಗುಣ ಸರ್,
ಚಂದ್ರನಲ್ಲಿ ಮೊಲದ ಚಿತ್ರ ..
ಬೆಟ್ಟಗಳಲ್ಲಿ ನಂದಿ,ಕುದುರೆಗಳನ್ನು..
ನಕ್ಶತ್ರಗಳಲ್ಲಿ ಆಡು,ಎತ್ತು,ಚೇಳುಗಳನ್ನು..
ಹಿಮಗಡ್ಡೆಯಲ್ಲಿ ದೇವರನ್ನು..
ಕಂಡ ಮನಸ್ಸು.
ಚಿತ್ರದಲ್ಲಿ ವಿಚಿತ್ರವೇನಾದರು ಕಂಡರೆ ಹೇಳುವ ಉತ್ಸಾಹ.
-ಗಣೇಶ.

ಈ ಮರುಲಿ ಕಂಡು ಯಾಕೋ ಖುಷಿ ಆಯ್ತು...

ಇಂತ ಚಿಕ್ಕ ಚಿಕ್ಕ , ಆಶ್ಚರ್ಯ-ಉತ್ಸಾಹಗಳೇ ನಮ್ಮನ್ನು ಸಹಜ ಮನುಷ್ಯರನ್ನಾಗಿ ಉಳಿಸೋದು.

ಗಣೇಶರೆ ಅದೃಷ್ಟವಂತರು ನೀವು!

ಸವಿತೃ

> ನಾನಾದರೆ ಈ ಫೋಟೋವನ್ನು ಎನ್ಲಾರ್ಜ್ ಮಾಡಿಸಿ,ಫ್ರೇಮ್ ಹಾಕಿ ಇಡುತ್ತಿದ್ದೆ.
> ತಮಾಷೆಯಲ್ಲ,ಸೀರಿಯಸ್ಸಾಗಿ ಹೇಳುತ್ತಿದ್ದೇನೆ.

ಇದನ್ನು ಕೇಳಿ ಮನಸ್ಸು ಹಿರಿ ಹಿಗ್ಗಿತು :)
ತುಂಬಾ ಥ್ಯಾಂಕ್ಸ್! :)

ಎನ್ಲಾರ್ಜ್ ಮಾಡ್ಸಿಲ್ಲ...ಇನ್ನು ಹಲವು ಚಿತ್ರಗಳಿವೆ ಹಿಮಾಲಯ ಹತ್ತಿದ್ದು...

-ಶ್ರೀ

ಥ್ಯಾಂಕ್ಸ್ ರೀ ! ಹೌದು ಅನುಭವ ತುಂಬಾ ಚೆನ್ನಾಗಿತ್ತು
ಒಂದು ವಾರ ...ಒಟ್ಟು ದೂರ ಕ್ರಮಿಸಿದ್ದು ಸುಮಾರು ೫೪ ಕಿ. ಮೀ..
ಸಾಧ್ಯವಾದರೆ ಒಂದು ಲೇಖನ ಬರೀತೀನಿ

ಫೋಟೋ ಸೂಪರ್!

ನಿಮ್ಮ ಈ ಫೋಟೋ / ಚರ್ಚೆಗಳು ನನಗೆ ನಮ್ಮ ಫೂಜಿ ಸಾನ್ ( ಫ್ಯುಜಿ ಪರ್ವತ) ಹತ್ತಿದ ಕ್ಷಣಗಳನ್ನು ನೆನಪಿಸುತು. ಆ ಪರಿಶ್ರಮ, ಆ ನಿಸರ್ಗ ಸೌಂದರ್ಯ .. ವಾವ್... ನಾನು ಯಾವತ್ತೂ ಮರೆಯದ ಕ್ಷಣಗಳು!

ನನ್ನ ಬಳಿ ಅಲ್ಲಿಯ ತುಂಬ (ಸಾವಿರ ದಾಟಬಹುದು!) ಫೋಟೋಗಳಿವೆ. ಸುಮ್ನೆ ಸಂಪದ ಕ್ಕೆ ಯಾಕೆ "ಹೊರೆ" ಅಂತ ಹಾಕಿಲ್ಲ! ;)

ಸವಿತೃ