" ದ ಸೌತ್ ವೆಸ್ಟ್ ಕಂಪೆನಿ, " ಪ್ರಾಯೋಜಿತ , ಏರ್ಲೈನ್ಸ್ ಟಾರ್ಚ್ ಲೈಟ್ ಪೆರೇಡ್ ಅದ್ಭುತವಾಗಿತ್ತು !

" ದ ಸೌತ್ ವೆಸ್ಟ್ ಕಂಪೆನಿ, " ಪ್ರಾಯೋಜಿತ , ಏರ್ಲೈನ್ಸ್ ಟಾರ್ಚ್ ಲೈಟ್ ಪೆರೇಡ್ ! ವಾರ್ಷಿಕ ಸಮಾರಂಭ. ಇದು, ಸಿಯಾಟಲ್ ನಗರದ ಡೌನ್ ಟೌನ್, ನ ೪ ನೆ ಅವೆನ್ಯು ಕಡೆಯಿಂದ ಶುರುವಾಗಿ ಕ್ವೆಸ್ಟ್ ಫೀಲ್ಡ್ಸ್ ವರೆಗೆ ಸಾಗುವ ಅತಿ-ಪ್ರಖ್ಯಾತ ಪೆರೇಡ್ ಆಗಿದೆ. ಇದು ಜುಲೈ, ೨೬ ನೆ ತಾರೀಖು, ಸಾಯಂಕಾಲ ಸೀಟಲ್ ಸೆಂಟರ್ ನಿಂದ ೭-೩೦ ಕ್ಕೆ ಪ್ರಾರಂಭವಾಯಿತು. ರಸ್ತೆಯ ಎರಡೂಕಡೆಯಲ್ಲಿ ಮಕ್ಕಳು, ಸ್ತ್ರೀಯರು, ಗಂಡಸರು, ಹಾಗೂ ಅನೇಕಕಡೆಗಳಿಂದ ಇದನ್ನು ನೋಡಲು ಬಂದ ಪರ್ಯಟಕರ ತಂಡ ಕಿಕ್ಕಿರಿದು ನೆರೆದಿತ್ತು. ಸ್ಕೂಲ್, ಕಾಲೇಜ್ ಹಾಗೂ ಖಾಸಗೀ ಸಂಸ್ಥೆಗಳು ಜಮ್ಕರ್ ಪ್ರದರ್ಶನ ಕೊಟ್ಟವು. ಏನ್ ಸಂಭ್ರಮ, ಆಸಕ್ತಿ, ಪ್ರೀತಿ, ಆತ್ಮವಿಶ್ವಾಸ, ನಾವ್ ಕಂಡಿದ್ ಅಲ್ಲಿ ! ಎಲ್ರೂ ಮೈಮರೆತು ಕುಣ್ದ್ ಕುಪ್ಪಳ್ಸಿದ್ರು. ಕಪ್ಪು ಅಮೆರಿಕನ್ರು, ಜಪಾನ್ಅಮೆರಿಕನ್ರು, ಚೈನಅಮೆರಿಕನ್ರು, ಕೊರಿಯಅಮೆರಿಕನ್ರು, ಯೂರೋಪಿಯನ್ ಅಮೆರಿಕನ್ರು ಗಳ ಜನಸಮುದಾಯ, ತುಂಬ್ ತುಳಕ್ತಿತ್ತು. ಸಿಖ್ ಸಮುದಾಯ ಅತ್ಯಂತ ಸೊಗಸಾಗಿ ತಮ್ಮ ಕತ್ತಿ-ವರಸೆ, ಹಾಗೂ ಅವರದೇ ಆದ ವಿಶೇಷ ಐಟಂ ಗಳನ್ನು ಹೃದಯಂಗಮವಾಗಿ ತೋರಿಸಿ, ನೆರೆದಿದ್ದ ಅಮೆರಿಕನ್ ಜನರ ಮನಸ್ಸನ್ನು ಸೂರೆಗೊಂಡಿತು ! ಸುಮಾರು ೪ ಗಂಟೆಗಳ ಕಾಲವನ್ನು ಹೇಗೆ ಕಳೆದೆವೋ ನಮಗೆ ಗೊತ್ತಾಗಲೇ ಇಲ್ಲ.

-ನನ್ನಆಲ್ಬಮ್