ಕಡಲಬಳಿಯ ಆಟಗಳು, ಎಷ್ಟು ಸೊಗಸು !

ಬೀಚಿನಬಳಿ ನಡೆಸುವ ’ಶೋ”, ಗಳನ್ನು ನಮ್ಮ ಮುಂಬೈನ ಜುಹುಬೀಚಿನ ಆಟಕ್ಕೆ, ಖಂಡಿತ ಹೋಲಿಸಬಹುದು. ಓಹ್, ಬೀಚ್ ಎಷ್ಟು ಚೆನ್ನಾಗಿದೆ ; ಅಲ್ಲಿನ ಸ್ವಚ್ಛತೆ, ಪರಿಸರ, ಇಲ್ಲಿಗೆ ಬರುವ ನಾಗರೀಕರು ನಡೆದುಕೊಳ್ಳುವ ರೀತಿ, ದೊರಕಿಸಿದ ನಾಗರೀಕ ಸೌಲಭ್ಯಗಳು, ಎಲ್ಲರಮುಖದಲ್ಲಿ ಕಾಣುವ ಮಂದಹಾಸ, ಜನರ ಜೀವನೋಲ್ಲಾಸ, ಮಕ್ಕಳಿಗಾಗಿ, ಮನೆಯವರಿಂದಹಿಡಿದು ಸರ್ಕಾರ, ಹಾಗೂ ಸಾರ್ವಜನಿಕರು, ಮತ್ತೆಲ್ಲರಿಂದ ಸಿಗುವ ಆದ್ಯತೆ, ಇವೆಲ್ಲಾ ನೋಡಿದಮೇಲೆ ನಮ್ಮಲ್ಲೇಕೆ ಇದು ಸಾಧ್ಯವಿಲ್ಲ, ಎಂದು ಮನಸ್ಸಿಗೆ ವ್ಯಥೆಯಾಗುತ್ತದೆ.