ಗೋಲ್ಡನ್ ಗೇಟ್ ಬ್ರಿಡ್ಜ್, ನಮ್ಮತಲೆಯಮೇಲೆ ಹಾದುಹೋದಾಗ !

ನಮ್ಮ ಸುಮಾರು ಒಂದು ಮುಕ್ಕಾಲು ಗಂಟೆ ಫೆರ್ರಿಯಾನದ ಕೊನೆಯ ಹಂತದಲ್ಲಿ, ಗೋಚರಿಸುವ ಗೋಲ್ಡನ್ ಗೇಟ್ ಬ್ರಿಡ್ಜ್, ನಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ ! ಮೇಲೆ ಬಿಸಿಲು, ಸಮುದ್ರದ ಭೋರ್ಗರೆತದ ನಡುವೆ, ಕಾವಳ ; ಮಸಕು-ಮಸಕಿನ ಮಧ್ಯೆ ದೈತ್ಯಾಕಾರದ, ಮನುಷ್ಯನಿರ್ಮಿತ ಭವ್ಯ ಇಂಜಿನಿಯರಿಂಗ್ ನ ಅದ್ಭುತವಿನ್ಯಾಸವನ್ನು ನೋಡಿದಾಗ ಆಗುವ ಅಪರಿಮಿತ ಆನಂದ, ವರ್ಣಿಸಲಸದಳ ! ನೋಡುತ್ತಿದ್ದಂತೆಯೇ ನಮ್ಮತಲೆಯಮೇಲೆ ನಿಧಾನವಾಗಿ ಸಾಗಿದ ಕನಸಿನ ಅನುಭವ !