ಸೆಂಟ್ರೆಲ್ ಪಾರ್ಕ್ ನ, ಸರೋವರದ ನೋಟ !

ಎಸ್. ಎಫ್ ನಿಂದ ೫೦ ಮೈಲಿ ದೂರದಲ್ಲಿ ಸ್ಯಾನ್ ಹೋಸೆ ಏರ್ಪೋರ್ಟ್ ಇದೆ. ಇದಕ್ಕೆ ಹತ್ತಿರದಲ್ಲೇ (ಸುಮಾರು ೨೦ ನಿಮಿಷದ ಡ್ರೈವ್ ನಂತರ) ನೀವು ಪ್ರಕೃತಿದೇವಿಯ ಶೃಂಗಾರವನ್ನು ನೋಡಿಸವಿಯುವ ಭಾಗ್ಯವಂತರೋ ಎನ್ನುವಂತೆ, ಸಾಂಟಾಕ್ಲಾರಾ ಎನ್ನುವ ಊರನ್ನು ತಲುಪುತ್ತೀರಿ. ಅಲ್ಲಿದೆ ನೋಡಿ, ಸೆಂಟ್ರಲ್ ಪಾರ್ಕ್. ಇಲ್ಲಿ ಆದಿತ್ಯವಾರದ ದಿನ ಮಕ್ಕಳ ಫುಟ್ಬಾಲ್ ಪಂದ್ಯಗಳನ್ನು ವೀಕ್ಷಿಸಲು ಅದೆಷ್ಟುಜನ ಬರುತ್ತಾರೊ, ನೀವೇ ಬಂದು ನೋಡಿ. ಅದರಷ್ಟೇ ಸಂಖ್ಯೆಯಲ್ಲಿ, ತಂದೆ-ತಾಯಂದಿರು, ಪೋಷಕರು ಕಿಕ್ಕಿರಿದು ನೆರೆದಿರುತ್ತಾರೆ. ಪುಟ್ಟಮಕ್ಕಳು, ತಮ್ಮ ಅಣ್ಣಂದಿರ ಆಟ ನೋಡಿ ಪ್ರೋತ್ಸಾಹಿಸುವ ನೋಟ, ನಿಜಕ್ಕೂ ಅನುಭವಿಸಿನೋಡಿದರೆ ಮಾತ್ರಾ ತಿಳಿಯಲು ಸಾಧ್ಯ !

ಪ್ರತಿಕ್ರಿಯೆಗಳು

ನಮಸ್ಕಾರ ವೆಂಕಟೇಶರೆ

ಸಾಮಾನ್ಯವಾದದ್ದರಲ್ಲಿ ಅಸಾಮಾನ್ಯವನ್ನು ಕಾಣುವ ನಿಮ್ಮ ದೃಷ್ಟಿ ನನಗೆ ತುಂಬ ಮೆಚ್ಚಿಗೆಯಾಗುತ್ತೆ. ಅಲ್ಲದೆ, ಹತ್ತಿರದಲ್ಲಿರುವುದಕ್ಕೆ ಬೆಲೆಕೊಡದಿರುವುದು (ಅತಿ ಪರಿಚಯಾದ್ ಅವಜ್ಞಾ ಎಂಬ ಕವಿನುಡಿಯೇ ಇದೆಯಲ್ಲ!) ಮನುಷ್ಯನಿಗೆ ಸಹಜ. ಹಾಗಾಗಿಯೇ ಇಂತಹ ನೋಟಗಳನ್ನು ನಾನು ನೋಡಬೇಕಾದಷ್ಟು ಆಸ್ಥೆಯಿಂದ ನೋಡದೇ ಹೋಗುತ್ತೇನೋ ಏನೋ ತಿಳಿಯದು :(

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಹಂಸನಂದಿಯವರೆ,

ನೀವು ಯುವಕರು. ಸಹಜವಾಗಿ ನಿಮ್ಮ ಆಸಕ್ತಿಗನುಗುಣವಾಗಿ ನೋಡಿದ್ದೀರಿ. ಅದೆಷ್ಟೋ ನಿಮಗೆ ಕಂಡ ದೃಷ್ಯಗಳನ್ನು ಸೆರೆಹಿಡಿಯಲು ಮರೆತಿರಬಹುದು. ಕಾರಣಗಳು ಹಲವಾರು. ನನ್ನ ಬಗ್ಗೆ ಒಂದು ಒಳ್ಳೆಯ ಪ್ರೋತ್ಸಹನೀಯ ವಾಕ್ಯ ಹೇಳಿ, ನನ್ನಮನೋಬಲವನ್ನು ಇನ್ನೂ ಹೆಚ್ಚಿಸಿದ್ದಕ್ಕಾಗಿ ನಾನು ತಮಗೆ ಚಿರಋಣಿ. ಧನ್ಯವಾದಗಳು.