ಜೇಡರ ಬಲಿ- ಅಮೆರಿಕದಾಗ ? ನಗ್ಯಾಡ್ ಬ್ಯಾಡ್ರಿ ಮತ್ತ !

ಯಾಕಿರ್ಬಾರ್ದು ? ಊರಿದ್ ಮೇಲೆ ಹೊಲ್ಗೇರಿ ಐತಲ್ಲೊ. ಹಂಗಿದೂಕೂಡ. ಹೌದಲ್ರಿ. ನಾವಿದ್ ಕಾಲೋನಿದಾಗ, ಮನಿ ಮಾಲೀಕ ಒಂದೆರ್ಡ್ ತಿಂಗ್ಳು ಊರಿಗ್ ಹೋಗ್ಯಾನೆ. ಹೆಣಮಕ್ಳು, ಕಸ-ಗಿಸ ತೆಗ್ದು, ಸ್ವಚ್ಛಮಾಡತಿದ್ರು. ಈಗ ಮನಿಒಳ್ಗೆ ಪಂಖಾದಮ್ಯಾಲೆಲ್ಲಾ ಧೂಳು ಆವರ್ಸ್ಕಂಡಿದೆರಿ. ಹಾಗೆ ಹೊರ್ಗೆ ವರಾಂಡ್ದಾಗೂ, ಜೇಡ್ರ ಬಲಿ, ನಮಗ್ ಕಾಣಿಸ್ಲಿಕ್ ಹತ್ತತು. ಅದೇಒಂದ್ ಅವ್ಕಾಶ ಪಡ್ಕೊಂಡ್ ನಮ್ಮ್ ಸಂಪದ್ದೋರ್ಗೆಲ್ಲಾ ಸ್ವಲ್ಪ ತಿಳ್ಸೋಣು ಅಂತನ್ಸ್ತ್ರಿ ಸಾಹೇಬ್ರೆ. ಸರಿ ಹೌದಲ್ಲೊ. ನೀವೇ ಹೇಳ್ರಿ ಮತ್ತ !

-ಚಿತ್ರ ನಂದೇ ಕ್ಯಾಮ್ರದ್ಐತ್ರಿ

ಪ್ರತಿಕ್ರಿಯೆಗಳು

ಖರೆ ರೀ ಸರssss...
ಆದ್ರೆ ಇನ್ನೂ ಒಸಿ ಹತ್ರದಿಂದ ತೋರಿಸ್ಬೇಕಿತ್ರೀ...
ಇನ್ನೂ ಪಸಂದಾಕಿರೋದು...
ಅಲ್ಲೋರಾ?

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

ಅಲ್ರಿ, ನಾವು ಬೆಳ್ಗಿನ್ ವಾಕಿಂಗ್ ಮುಗ್ಸಿ ವಾಪಸ್ ಬರೋರಿದ್ವಿ. ನನಗೆ ಪಕ್ಕ್ನೆ ಏನೋ ಕಂಡಂಗಾತು. ಏನಪಾ ತಿಳೀವಲ್ದಲಾ ಅಂತ ತಲಿಕೆರೀಲಿಕ್ ಹತ್ದಾಗ, ಅಲ್ಲಿ ಕಂಡಿದ್ದು ಜೇಡರ ಬಲಿ. ಏನ್ ಪಾಡಿತ್ರಿ ಅದ ! ವಾಚ್ ಮನ್ ಅಲ್ಲಿಂದ ದುರುಗುಟ್ಕೊಂಡು ನೋಡ್ಲಿಕ್ ಹತ್ದ. ’ಚಿತ್ರ ತೊಗೊರಿ. ನಿಮ್ಹತ್ರೇ ಇಟ್ಕೊಳ್ರಿ ಅಂದ ಅವ.” ನನಗೆ ಅಷ್ಟು ಗುಟ್ಟು ಇಟ್ಕೊಳ್ಳೋದು ತ್ರಾಸಾಗ್ತದ್ರಿ.