’ ಲಾಸ್ ಎಂಜಲೀಸ್, ” ವಾಯುನಿಲ್ದಾಣದಲ್ಲಿನ ಪ್ರಯಾಣಿಕರಿಗೆ ಕುಳಿತುಕೊಳ್ಳುವ ಸುವ್ಯವಸ್ಥಿತ ವ್ಯವಸ್ಥೆ !

ನಮ್ಮದೇಶದ ಮುಂಬೈನಗರದ ’ಸಹಾರ ಇಂಟರ್ನ್ಯಾಶನಲ್ ವಿಮಾನನಿಲ್ದಾಣ,’ ಕ್ಕೆ ಇದನ್ನು ಹೋಲಿಸಲು ಸಾಧ್ಯವೇ ? ಅಸಾಧ್ಯ. ಏಕೆ ಹೀಗೆ ? ಯಾವಾಗಲೂ ನಮ್ಮನ್ನು, ನಮ್ಮ ಜನರನ್ನು ಹೀಗೆ ಕಡೆಗಾಣಿಸುವ ಅಭಿಪ್ರಾಯಗಳು ಎಷ್ಟು ಸತ್ಯ ? ನೂರಕ್ಕೆ ನೂರುಪಾಲು ಎಂದು ಅತಿ ನಮ್ರತೆಯಿಂದ, ಬೇಸರದಿಂದ , ಹೇಳಬೇಕಾಗಿದೆ. ಪ್ರಮುಖವಾಗಿ, ಇಲ್ಲಿನ ಎಲ್ಲಾರೀತಿಯ ಅವ್ಯವಸ್ಥೆಗಳಿಗೆ ನಾವೇ, ನಮ್ಮ ಜನರೇ ಕಾರಣವೆಂದು ಹೇಳಿ ನಮ್ಮಮನಸ್ಸಿಗೆ ಬೇಸರಮಾಡಿಕೊಳ್ಳಬೇಕಾಗಿದೆ. ಕೊಳಕು, ಎಲಡಿಕೆಯಕೆಂಪು-ರಸಾವೃತವಾದ ನೆಲ, ಅಥವಾ ಆಸನ, ಸರಿಯಾಗಿ ಕಾಣಿಸದ, ಕೇಳಿಸದ ವಿಮಾನಗಳ ಆಗಮನ, ನಿರ್ಗಮನದ ವಿವರಗಳು, ವೃಥಾಕಾಲಹರಣಮಾಡುವ ಪೋಲಿಸ್ ಪೇದೆಗಳು, ನೆಲಗುಡಿಸಿ ಶುದ್ಧಿಮಾಡಲೆಂದು ನಿಯಮಿಸಿದ ಬಾಯಿಗಳು ಕುಳಿತುಗಪ್ಪಹೊಡೆದು, ಒಂದು ಕಾಗದದ ಚೂರನ್ನು ಪಕ್ಕದ ಪ್ಲಾಸ್ಟಿಕ್ ಬಕೆಟ್ ಗೆ ಬೇಕೋಬೇಡವೋ ಎಂದು ಹಿಂದುಮುಂದು ನೋಡಿ, ವಿಧಿಯಿಲ್ಲದೆ ಗೊಣಗಿಕೊಂಡು, ತಮ್ಮ ಸೀರೆಯನ್ನು ಸರಿಪಡಿಸಿಕೊಳ್ಳುತ್ತಾ ತಮ್ಮ ಗೆಳತಿಯರ ಜೊತೆ ಮಾತುಕತೆಯಾಡುವ ದೃಷ್ಯವನ್ನು ಕಂಡು ರೇಗಿಹೋಗುವ ಪರಿಸ್ಥಿತಿಗಳೇ ಹೆಚ್ಚು. ಆಸನಗಳಕೊರತೆ, ಅತಿಜನಸಂಖ್ಯೆ; ಮನಸ್ಸಿಲ್ಲದಮನಸ್ಸಿನಲ್ಲಿನ ಕಾರ್ಯವೈಖರಿಗಳು. ಇತ್ಯಾದಿ. ಒಂದುವೇಳೆ ಯಂತ್ರಗಳ ಮೊರೆಹೊಕ್ಕರೆ ಹೇಗೆ. ಅದು ಒಳ್ಳೆ ಉಪಾಯ. ಆದರೆ ಅದು ಕೆಲಸಮಾಡಬೇಕಲ್ಲ. ಅದರ ರಿಪೇರಿಗಾದರೂ ಪುನಃ ನಮ್ಮ ಜನ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಾರೆ ಎಂಬುದು ಎಷ್ಟರಮಟ್ಟಿಗೆ ಸತ್ಯ !

ಹಾಗಾದರೆ, ಬೆಂಗಳೂರಿನ ಪರಿಸ್ಥಿತಿ ಹೇಗೆ ? ಈಗೇನೋ ಪರವಾಗಿಲ್ಲ. ಆದರೆ, ಊರಿನಿಂದ ಸುಮಾರು ದೂರವಿದೆ. ಟ್ಯಾಕ್ಸಿ, ಸಿಗುವುದು ಸುಲಭವೇ ? ಗೊತ್ತಿಲ್ಲ.

ಏಕೆ ಹೀಗೆ ? ಭಾರತೀಯರಾದ ನಾವುಗಳು ನಮ್ಮ ಮನಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳದಿದ್ದರೆ, ನಾವುನಾವೇ ಒಬ್ಬರನ್ನೊಬ್ಬರು ಹಳಿದುಕೊಂಡು, ಬೈದಾಡಿ, ಗುದ್ದಾಡಿ ಒಂದು ಸೀನ್ ಮಾಡಬಹುದೇ ಹೊರತು, ಹೆಚ್ಚಿನ ಉಪಯೋಗುವ ಸಾಧ್ಯತೆಗಳು ಅತಿ ಕಡಿಮೆ. ಪ್ರತಿಯೊಬ್ಬರೂ ತಮ್ಮನ್ನು ತಾವೇ ಪ್ರಶ್ನಿಸಿಕೊಂಡು ಸರಿಯಾಗಿ ವರ್ತಿಸಬೇಕಾದ ಅನಿವಾರ್ಯತೆ ಬಂದಿದೆ.
ಕಾಂಪಿಟಿಷನ್ ಯುಗವಾದ ಇಂದು, ಮಾಡಿದತಪ್ಪುಗಳನ್ನು ಪುನರಾವರ್ತಿಸುವುದು ತರವಲ್ಲ !

ಎಂದೋ ಒಮ್ಮೆ ಪ್ರಯಾಣಮಾಡಿದನಾನೇ ಇಷ್ಟು ಕಾಮೆಂಟ್ ಮಾಡಿದ್ದೇನೆ. ಪ್ರತಿದಿನ ಪ್ರಯಾಣಿಸುವವರ ಪಾಡು ದೇವರೇ ಬಲ್ಲ !