ಅಮೆರಿಕದ, ’ಫ್ಲಾಟ್ ಬ್ರಾಂಚ್ ಪಾರ್ಕ್,” ಕೊಲಂಬಿಯದಲ್ಲಿ ನಾವು ನೋಡಿದ ಆಕೃತಿ !

ಅಮೆರಿಕದಲ್ಲಿ ಪಾರ್ಕ್ ಗಳು, ಸರೋವರಗಳು, ಕೃತಕ ಕಾಡುಗಳು, ಟ್ರೇಲ್ಸ್ ಗಳು ಇತ್ಯಾದಿಗಳನ್ನು ಅತ್ಯಂತ ಶ್ರದ್ಧೆಯಿಂದ ರಚಿಸುತ್ತಾರೆ. ಜನರ ಸಹಕಾರಕೂಡ ಅಷ್ಟೇ ಜವಾಬ್ದಾರಿಯುತವಾಗಿದ್ದು ನಮಗೆ ಗೋಚರವಾಯಿತು. ಅವುಗಳ ವಿಶೇಷತೆಗಳನ್ನು ಪ್ರಸ್ತುತಪಡಿಸುವ ರೀತಿಗಳು ಅನನ್ಯ ! ಕೊಲಂಬಿಯದಲ್ಲಿ ನಾವು ಕಂಡ ಅಂತಹ ಪಾರ್ಕ್ ಕೂಡ ಅಂತಹ ಅಪರೂಪದ್ದು.

ಅದರ ಪಕ್ಕದಲ್ಲೇ ಕಲ್ಲಿದ್ದಲನ್ನು ಇಂಥನವನ್ನಾಗಿ ಬಳಸಿದ ಒಂದು ವಿದ್ಯುತ್ ತಯಾರಿಕಾ ಘಟಕವಿದೆ. ಅಲ್ಲಿ ತಯಾರಾದ ವಿದ್ಯುತ್ ’ ಮಿಸ್ಸೂರಿ ವಿಶ್ವವಿದ್ಯಾಲಯದ ಅಗತ್ಯಗಳನ್ನು ಪೂರೈಸುವಲ್ಲಿ ಸಹಾಯಕವಾಗಿದೆ. ಪಲ್ಯೂಶನ್ ಮಟ್ಟವನ್ನು ಅತಿಯಶಸ್ವಿಯಾಗಿ ನಿರ್ವಹಿಸುತ್ತಿರುವುದರಿಂದ ಅದು ನಗರದ ಮಧ್ಯಭಾಗದಲ್ಲೇ ಇದ್ದರೂ ಅಲ್ಲಿನ ಸರ್ಕಾರ ಅದಕ್ಕೆ ಯಾವ ಚ್ಯುತಿಯನ್ನೂ ಮಾಡಿಲ್ಲ. ಈ ಆಕೃತಿಯನ್ನು ನನ್ನ ಬ್ಲಾಗ್ ಗಳಲ್ಲಿ ಮುಖಚಿತ್ರ, ಲಾಂಛನವನ್ನಾಗಿ ಉಪಯೋಗಿಸಿಕೊಂಡಿದ್ದೇನೆ !

-ಚಿತ್ರನನ್ನದು.