ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ

ಸ್ವಾಮಿ ವಿವೇಕಾನಂದರ ಈ ವಿಗ್ರಹ ಇರುವುದು "ಹಿಂದು ಟೆಂಪಲ್ ಆಫ್ ಗ್ರೇಟರ್ ಶಿಕಾಗೋ".

ಪ್ರತಿಕ್ರಿಯೆಗಳು

ಶಿಕಾಗೋ ನಲ್ಲಿ ಎಂಬೆಸಿ ಹೋಟೆಲ್ ನಲ್ಲಿ ಇಳ್ಕೊಂಡಿದ್ವಿ. ಇವ್ರೆ. ಅಕ್ಕ ಕನ್ನಡ ಕಾನ್ಫರೆನ್ಸ್ ಪೂರ್ತಿ ನೋಡಿದ್ವಿ. ಯಾಕೋ ವಿವೇಕಾನಂದ ಸ್ಮಾರಕಕ್ಕೆ ಹೋಗಕ್ಕೆ ಟೈಮ್ ಸಿಗಲಿಲ್ಲ. ನನಗೆ ಯಾವಾಗ್ಲೂ ಅವ್ರ್ ಮಾಡಿದ್ ಭಾಷ್ಣ, " ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕಾ " ಹಾಗೇ ಕಿವೀಲಿ ಮೊಳ್ಗಾಇರುತ್ತೆ. ಅದೊಂದ್ ಮಿಸ್ ಮಾಡ್ಕೊಂಡ್ವಿ ಅಂತ, ಸದಾ ನನ್ ಮನಸ್ನಲ್ಲಿ ಕಡ್ತಾಇದೆ !

ಮೊದಲನೆಯ ದಿನ ಡೌನ್ ಟೌನ್ ಟೂರ್ ಮಾಡಿಕೊಂಡು ಡೇವಾನ್ ಸ್ಟ್ರೀಟ್ಗೆ ಹೋಗಿ ಹೋಟೆಲ್ಗೆ ಮರಳುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಪೂರ್ವ ಯೋಜನೆಯಂತೆ ೨ನೇ ದಿನ ಶಿಕಾಗೋದಲ್ಲಿರುವ ಎಲ್ಲಾ ದೇವಸ್ಥಾನಗಳಿಗೆ ಹೋದೆವು. ನಮ್ಮ ಕಸಿನ್ ಹತ್ರ ಕಾರ್ ಇದ್ದುದ್ದರಿಂದ ದೇವಸ್ಥಾನ ಬೇರೆ ಬೇರೆ ದಿಕ್ಕುಗಳಲ್ಲಿದ್ದರೂ ನೋಡುವ ಅವಕಾಶವಾಯ್ತು. ಮಾರನೆ ದಿನ ನಾವು ಬಸ್ನಲ್ಲಿ ಹೈಡ್ ಪಾರ್ಕ್ ಬುಲೆವಾರ್ಡ್ನಲ್ಲಿರುವ ಶ್ರೀ ಸ್ವಾಮಿ ವಿವೇಕಾನಂದ ಹಿಂದು ಸೊಸೈಟಿಗೆ ಹೋಗಿದ್ದೆವು ,ಅದು ಕೂಡ ಚೆನ್ನಾಗಿತ್ತು. ಆ ಹಿಂದು ಸೊಸೈಟಿ ಈಗ (ಶ್ರೀ ರಾಮಕೃಷ್ಣ ಯೂನಿವರ್ಸಲ್ ಟೆಂಪಲ್ ಅಂತ ಬೇರೆ ಹೆಸರನ್ನಿಟ್ಟಿದ್ದಾರೆ) ಮತ್ತೊಂದು ಕಡೆಗೆ ಪ್ರತಿಷ್ಟಾಪನೆ ಮಾಡಿದ್ದಾರೆ .ಇದು ತುಂಬಾನೇ ಚೆನ್ನಾಗಿದೆಯಂತೆ.

ಅದಕ್ಕೇಗೆ ಬೇಜಾರು ಮಾಡಿಕೊಳ್ಳುತ್ತೀರಾ ಸರ್ , ಮತ್ತೊಮ್ಮೆ ಅವಕಾಶ ಸಿಕ್ಕಾಗ ಹೋಗಿ ನೋಡಿಕೊಂಡು ಬನ್ನಿ :smile:. ನಾವು ಅಕ್ಕ ಸಮ್ಮೇಳನಕ್ಕೆ ಹೋಗಲ್ಲಿಲ್ಲ ಆದ್ದರಿಂದ ನಮಗೆ ಸಮಯ ಸಿಕ್ಕಿತು. ಶ್ರೀ ವಿವೇಕಾನಂದರ ಭಾಷಣವು ಯೂ ಟ್ಯೂಬ್ನಲ್ಲಿದೆ ನೋಡಿ ಸರ್ , ಕೇಳಿ ಆನಂದಿಸಿ :smile:

ನಿಮ್ಮ ಪ್ರತ್ಯುತ್ತರಕ್ಕೆ ಧನ್ಯವಾದಗಳು. ಈಗಾಗಲೇ ೬೫ ವರ್ಷವಾಗಿದೆ. ಸ್ವಲ್ಪ ಮೊಳಕಾಲುನೋವಿನ ಸಮಸ್ಯೆ ಬೇರೆ. ಮತ್ತೊಮ್ಮೆ ಹೋಗಿಬರುವ ಸಾಹಸ ನನ್ನಲ್ಲಿ ಉಳಿದಿದೆಯೇ ಗೊತ್ತಿಲ್ಲ. ಒಂದುವೇಳೆ ಹೋದರೆ, ನನ್ನ ಪ್ರಥಮ ಆದ್ಯತೆಗಳಲ್ಲೊಂದು-ವಿವೇಕಾನಂದರ ಸ್ಮಾರಕದ ಭೇಟಿ !