ಅಂವ ಭಾರಿ ಛಂದ್ ಹಾಡ್ತಾನ್ರಿ !

ರಸ್ತೇನಾಗೇ ಚೌಕದಲ್ಲಿ ಮೂಲೆಗಳಲ್ಲಿ ಈಹುಡ್ಗ ಕುಣೀತಾನೆ, ಹಾಡ್ತಾನೆ, ಮೈತುಂಬಾ ಏನೇನೋ ವಾದ್ಯಗಳ್ನ ಕಟ್ಕೊಂಡು ಒಂದ್ ನಮೂನಿ ಹಾಡ್ ಹೇಳ್ತಾನ್ರಿ. ಕಾಲ್ ಹೊಡ್ದ್ರೆ, ಡಣ್ ಅಂತ ಶಬ್ದ ಬರ್ತದ್ರಿ. ಕೊಳ್ಲ್ ಬಾರ್ಸ್ತಾನೆ, ಡ್ರಮ್ ಹೊಡೀತಾನೆ, ಸಿಳ್ ಹೊಡೀತಾನ್ರಿ. ೧೫ ನಿಮ್ಷಾ ಅಂವ ಪದ ಹಾಡಿದ್ರೆ, ಅವ್ನ್ ಮೈಯೆಲ್ಲಾ ಕುಣೀತಾವ ! ಬೇಂದ್ರೆಯವರ, " ಕುಣ್ಯೋಣ ಬಾರ," ಪದ ಥಟ್ ಅಂತ ಜ್ಞಾಪ್ಕಕ್ ಬಂತು ನೋಡ್ರಿ ! ಕಳ್ ಸೂ.... ಪದ ಹೇಳಿ ಹಣದೋಚಂಡ್ ಹೊರ್ಟೇ ಹೋದ ಕಣ್ರಿ. ನಮ್ ಕಿಂದ್ರಿಜೋಗಿಗಳ್ಗೆಲ್ ಬರ್ಬೇಕ್ರಿ, ಈಚಾಲಾಕಿತನ !

ಹಾ, ಇದೆಲ್ಲಿ ಅಂತ ಹೇಳೋದೆ ಮರ್ತೆ ನೋಡ್ರಿ. ಅದೇ ಸ್ಯಾನ್ ಫ್ರಾನ್ಸಿಸ್ ಕೊ ಪಟ್ಣ ; ಸಿಲಿಕಾನ್ ವ್ಯಾಲಿ, ಅಂತಾರಲ್ರಿ, ಅದೇ ನೋಡ್ರಿ !

-ಚಿತ್ರ. ವೆಂ.