ಚಿಕಾಗೋ ನಗರದ, ಅದ್ಭುತ, ’ಸಿಯರ್ಸ್ ಟವರ್,’ !

”ಸಿಯರ್ಸ್ ಟವರ್ ’ಮೇಲೆಹೋಗಿ, ’ಸ್ಕೈಡೆಕ್” ಮೇಲೆ ನಿಂತ್ಕೊಂಡಾಗ, ಅದೇನೊ ಒಂದ್ತರ್ಹ ಶಾಂತಿ, ಸಮಾಧಾನ, ಹೆದರಿಕೆ, ಥ್ರಿಲ್, ಎಕ್ಸೈಟ್ಮೆಂಟ್, ಎಲ್ಲಾ ಒಮ್ಮೆಲೇ ಬಂದಂಗಾಗಿತ್ತು, ನೋಡಿ. ಅದನ್ನು ವಿವರಿಸಲು ಸಾಧ್ಯವಿಲ್ಲ ! ೧೯೭೦ ರಲ್ಲಿ ಶುರುವಾದ ’ಸಿಯರ್ಸ್,’ ಕಟ್ಟಡದ ಕೆಲಸ, ಮೂರುವರ್ಷಗಳ ನಂತರ, ೧೯೭೩ ರಲ್ಲಿ ಮುಗಿಯಿತು. ಸಿಯರ್ಸ್ ವಿಶ್ವದ ಅತಿಎತ್ತರದ ಕಟ್ಟಡವೆಂದು ಆಗ ಸುದ್ದಿಮಾಡಿತ್ತು. ಈಗಲೂ ಅದರ ವರ್ಚಸ್ಸು ಕಡಿಮೆಯಾಗಿಲ್ಲ. ವಿಶ್ವದ ಅತಿ ಎತ್ತರದ ಆಧುನಿಕ ಕಟ್ಟಡಗಳ ಸಾಲಿನಲ್ಲಿ ಇಂದಿಗೂ ಪ್ರಾಜ್ವಲ್ಯಮಾನವಾಗಿ ಶೋಭಿಸುತ್ತಿದೆ. ಚಿಕಾಗೋ ನಗರದ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಸಿಯರ್ಸ್ ನ, ಕೆಲವು ಅಂಕಿ ಅಂಶಗಳು ಈ ರೀತಿಯಿವೆ :

೧. ೨,೨೩೨ ಮೆಟ್ಟಿಲುಗಳಿದ್ದು, ಸಾಕಷ್ಟುಮಂದಿ ಹತ್ತಿ ನೋಡುವ ಆಸಕ್ತರಿದ್ದಾರೆ.

೨. ೧.೩ ಮಿಲಿಯನ್ ಜನ ಪ್ರತಿವರ್ಷ, ವಿಶ್ವದ ಎಲ್ಲಾಕಡೆಗಳಿಂದ ಸ್ಕೈಡೆಕ್ ನೋಡಲು ಬರುತ್ತಿದ್ದಾರೆ.

೩. ೧,೭೩೦ ಅಡಿ ಆಂಟೆನ್ನ [೫೨೫ ಮೀ] ೪. ೧೧೦ ಅಂತಸ್ತಿದೆಯೆಂದು ದಾಖಲಿಸಿದ್ದಾರೆ.

೫. ೪.೫ ಮಿಲಿಯನ್ ಒಟ್ಟು ಚದರ. ಗಜ, [೪೧೮,೦೬೪ ಚದರ. ಮೀ] ೬. ತೂಕ ೨೨೨,೫೪೦ ಟನ್ [೨೦೧,೮೮೫ ಮೆಟ್ರಿಕ್ ಟನ್ಸ್] ೭. ೪೩,೦೦೦ ಮೈಲಿಗಳಿಗಿಂತ [೬೯,೨೦೨ ಚದರ. ಕಿಮೀ] ಕ್ಕಿಂತಾ ಹೆಚ್ಚು ಟೆಲಿಫೋನ್ ಕೇಬಲ್ ಗಳಿವೆ.

೮. ೭೫,೦೦೦ ಮೈಲಿ ಎಲೆಕ್ಟ್ರಿಕ್ ವೈರ್ಸ್ [೧೨೦,೭೦೧ ಕಿ. ಮೀ] ಪ್ಲಮ್ಬಿಂಗ್ ಕೆಲಸ. ೯. ೧, ೪೩೧ ಅಡಿ [೪೩೬ ಮೀ] ನೆಲದಿಂದ ಮೇಲಕ್ಕೆ. ೧೦.೧,೪೫೦ ಅಡಿ [೪೩೬ ಮೀ] ಮೇಲ್ಛಾವಣಿಯ ವರೆಗಿನ ಎತ್ತರ.

೧೧. ಎಲಿವೇಟರ್ ೧,೬೦೦ ಅಡಿ [೪೮೮ ಮೀ]/ ಪ್ರತಿ ನಿಮಿಷದಲ್ಲಿ, ಹೋಗುವ ವೇಗ ! ’ಸಿಯರ್ಸ್ ’, ಆಧುನಿಕ ವಿಶ್ವದ ವಿಸ್ಮಯಗಳಲ್ಲೊಂದು.

ಆ ವಿಸ್ಮಯವನ್ನು ಕಣ್ಣಾರ ಕಂಡು ಆನಂದಿಸಲು ಎಲ್ಲರೂ ಸ್ಕೈಡೆಕ್ ಮುಖಾಂತರ ವೇಗವಾಗಿ ಮೇಲ್ಭಾಗಕ್ಕೆ ಹೋಗಿ, ಚಿಕಾಗೋ ನಗರದ ದಿಗಂತವನ್ನು ಹಾಗೂ ಅದರ ಅಕ್ಕ-ಪಕ್ಕ, ಮತ್ತು ಕೆಳಗಿನ ಪರಿಸರವನ್ನು ಕಣ್ಣಾರೆ ವೀಕ್ಷಿಸದಲ್ಲದೆ ತೃಪ್ತಿ ಸಿಗುವುದಿಲ್ಲ.

ಸುಮಾರು ೪೦-೫೦ ಮೈಲಿ ದೂರದ ವ್ಯಾಸವನ್ನು ಧಾರಾಳವಾಗಿ ವೀಕ್ಷಿಸಲು ಅಡ್ಡಿಯಿಲ್ಲ.

ಇಲ್ಲಿಗೆ ಬಂದಾಗ ನಮಗೆ ಅನ್ನಿಸುವುದು-ವಿಶ್ವದ ಹಲವು ಮುಖಗಳನ್ನು ನೋಡಬೇಕು. ಆನಂದಿಸಬೇಕು, ಎನ್ನುವ ವಿಚಾರ !

 

www.theskydeck.com -ಚಿತ್ರ-ವೆಂ.