’ಸಿಯರ್ಸ್ ಟವರ್,’ ನಿಂದ ಚಿಕಾಗೋ ನಗರದ ದೃಷ್ಯಗಳ್ನ್ ನೋಡೋದೇ ಚೆನ್ನ !

ಸಾಮಾನ್ಯವಾಗಿ ಅಮೆರಿಕದಲ್ಲಿ ರೆಸ್ತೆಗಳು ಬೆಕೋ ಅನ್ನತ್ವೆ. ಇದು ಸರ್ವೇಸಾಮಾನ್ಯ. ಜನ ಇಲ್ವೇ ಇಲ್ಲ. ಇದ್ದೋರ್ ಕಾರ್ ನಲ್ಲಿ ಹೋಗ್ತಾರೆ. ನಮ್ಮಂಥೋರು ವಾರದ ಬಿಡೀ ದಿನ್ದಲ್ಲಿ ಹಾಗೇ ರಸ್ತೆ ನಲ್ಲಿ ಅಡ್ಡಾಡ್ಕೊಂಡ್ತಾ ಹೋಗ್ತಿರ್ತೀವಿ. ರಸ್ತೆ ಕ್ರಾಸ್ ಮಾಡ್ಬೇಕಾದ್ರೆ, ’ಸದ್ಯ, ನೀವ್ ಹೋಗೀಪ್ಪ,’ ಅಂತ ಕೈನಲ್ಲಿ ಸನ್ನೆ ಮಾಡ್ತಾರೆ. ನಾವ್ ಕ್ರಾಸ್ ಮಾಡೋವರ್ಗೆ ಅವ್ರಿಗ್ ಸಮಾಧಾನ ಇಲ್ಲ ನೋಡಿ. ಮಕ್ಕಳಿಗೆ, ಹಾಗೂ ಹೆಣ್ಣುಮಕ್ಕಳಿಗೆ, ಅಲ್ಲಿ ಅತಿಯಾದ ಮರ್ಯಾದೆ, ಆದ್ಯತೆ- ನಾನ್ ಹೇಳಿದ್ದು ರೋಡ್ ಕ್ರಾಸ್ ಮಡೋ ಸಮ್ಯದಲ್ಲಿ ಅಂತ....!

ಇಲ್ಲಿ ಮಾತ್ರ, ಈ ಸ್ಕೈ ಡೆಕ್ ನ ಮೇಲೆ- ಜನ ಕಿಕ್ಕಿರ್ದಿರ್ತಾರೆ ನೋಡಿ. ಒಂದ್ ನಿಮ್ಷ್ ದಲ್ಲಿ ಕೆಳಗ್ಲಿಂದ ಮೇಲಕ್ಕೆ ಬರ್ತೀವಿ. ಫೋಟೋಮಾತ್ರ ಎಷ್ಟ್ ಬೇಕಾದ್ರೂ ತೆಗೆಬೋದು. ಯಾರೂ ಬೇಡ ಅನ್ನೊರೆ ಇಲ್ಲ, ಇಲ್ಲಿ. ಎಲ್ಲ್ ಹೋದೃ ಫೋಟೊ ಬಗ್ಗೆ ಯಾರೂ ತಲೆಕೆಡಸ್ಕೊಂಡಂಗ್ಕಾಣ್ಸಿಲ್ಲ.