ಅರಣ್ಯದೊಳಗೆ ಹತ್ತಿ ಮೇಲೇರಲು, ಮರದ ದಿಮ್ಮಿಗಳ ಅಟ್ಟಳಿಕೆ !

ಕಾಡು ಮಣ್ಣಿನ ಬದಿಯಲ್ಲಿ, ಯಾವ ಗೆದ್ದಲುಹುಳುಗಳಿಗೂ ಸೊಪ್ಪುಹಾಕದೆ, ಕಲ್ಲಿನ ತರಹ, ಅಥವಾ ಕಬ್ಬಿಣದ ತರಹ, ಬೀಗುತ್ತಿರುವ ಮರದ ದಿಮ್ಮಿಗಳಿಂದ ಮಾಡಿ ಕಟ್ಟಿದ ಮೆಟ್ಟಿಲುಗಳು, ಹಿಡಿದುಕೊಳ್ಳಲು ಭದ್ರವಾಗಿರುವ ಮರದ ಫ್ರೇಮ್ ಗಳು, ಮುದನೀಡುತ್ತವೆ. ಇವು ಅಲ್ಲಿನ ವನಸಿರಿಯನ್ನು ತೋರಿಸುವ ಅಂಗಗಳಾಗಿವೆ !

ನಮ್ಮದೇಶದಲ್ಲಿ ವಸತಿಗೆ ಮರಮುಟ್ಟುಗಳನ್ನು ಒದಗಿಸುವುದೇ ಹರಸಾಹಸದ ಕೆಲಸ. ಅಮೆರಿಕದಲ್ಲಿ ಪ್ರತಿಮನೆಯ ಪ್ಲೋರಿಂಗ್ ಗೂ, ಮರದ ಹಲಿಗೆಗಳನ್ನು ಬಳಸುತ್ತಾರೆ. ದೊಡ್ಡದೊಡ್ಡ ಬಾಗಿಲುಗಳು, ಕಿಟಕಿಗಳು, ಬಾಲ್ಕನಿ, ಪೋರ್ಟಿಕೋ, ಗಳಿಗೆ ಉಪಯೋಗಿಸಿರುವ ಮರಮುಟ್ಟುಗಳು ಅದೆಷ್ಟು ಗಟ್ಟಿಮುಟ್ಟಾದವುಗಳು !

ಬಾಲ್ಕನಿಯ ಕಟಾಂಜನಕ್ಕೆ ಬಳಸಿದ ಮರವನ್ನು ಬಡಿದರೆ, ’ ಠಣ್ ” ಎನ್ನುವ ಶಬ್ದ ಬರುತ್ತದೆ. ಮಳೆಯಲ್ಲಿ ವರ್ಷಗಟ್ಟಲೆ ನೆಂದು, ಹಾಗೆಯೇ ನಳ-ನಳಿಸುತ್ತಿರುವ ದೃಷ್ಯ, ನಿಜಕ್ಕೂ ಅನುಕರಣೀಯ.