ನಮ್ ಶ್ಯಾಮ್ ಸಿಕ್ಬಿಟೃ !

ಕನ್ನಡದ ಧಾರಾವಾಹಿ, ' ಮಾಯಾಮೃಗ ' ನಮ್ಮೆಲ್ಲರ ನೆಚ್ಚಿನ ಸೀರಿಯಲ್ ಆಗಿತ್ತು. ಕರ್ನಾಟಕದ ಪ್ರತಿಮನೆಯಲ್ಲೂ ಅದನ್ನು ನೋಡದೆ, ರಾತ್ರಿ ಎಷ್ಟೇ ಹೊತ್ತಾದ್ರೂ ಊಟಮಾಡಿ ಮಲಗಲು ಯಾರೂ ಇಷ್ಟಪಡುತ್ತಿರಲಿಲ್ಲ. ಒಮ್ಮೆ ಬೆಂಗಳೂರಿಗೆ ಹೋದಾಗ, ಆ ಅಡಿಕ್ಷನ್ ಗೆ ನಾನೂ ನನ್ನ ಹೆಂಡತಿ ಬಲಿಯಾದೆವು. ಸೀತಾರಾಂ ರವರ ಸಮರ್ಥ ದಿಗ್ದರ್ಶನದಲ್ಲಿ, ಬಹಳಕಾಲ ಕನ್ನಡಿಗರನ್ನೆಲ್ಲಾ ಒಟ್ಟುಗೂಡಿಸಿ, ಸಾಂಸ್ಕೃತಿಕ ಪರಿಸರದಲ್ಲಿ ಗಟ್ಟಿಯಾಗಿ ಹಿಡಿದಿಟ್ಟ ಧಾರಾವಾಹಿಯಲ್ಲಿ ಯುವಕ, ಶ್ಯಾಮ್ ನಮಗೆ ಮರೆಯಲಾರದ ವ್ಯಕ್ತಿಯಾಗಿದ್ದರು.

ಅವರನ್ನು ಹಟಾತ್ತನೆ, ದೂರದ ಅಮೆರಿಕದಲ್ಲಿ ನಮ್ಮ ಕಣ್ಣೆದುರಿಗೇ ಒಮ್ಮೆಲೇ ಕಂಡಾಗ, ನಮಗಾದ ಹರ್ಷ ವರ್ಣಿಸಲಸದಳವೆಂದರೆ ತಪ್ಪಲ್ಲ. ಆತ ಈಗ ಯುವಕನಾಗಿದ್ದಾನೆ. ಎತ್ತರಕ್ಕೆ ಬೇಳೆದಿದ್ದಾನೆ. ಪ್ರಬುದ್ಧನಾಗಿದ್ದಾನೆ. ತನ್ನ ಸಾಧನೆಯಲ್ಲೂ ಸಹಿತ. ಎಷ್ಟು ಸರಳ ವ್ಯಕ್ತಿತ್ವ, ಮಂದಹಾಸ, ಮೃದು ಮಾತು. ನಮಗೆ ಬಹಳ ಸಂತೋಷವಾಗಿತ್ತು.

-ಚಿತ್ರ ನಾನೇ ತೆಗೆದದ್ದು.