ವಾಹ್ ! ಇಲಿನಾಯ್ ನ, ಒಂದು ಸೊಗಸಿನ ಸುಂದರ-ಸಂಜೆ !

ಇಲಿನಾಯ್ ರಾಜ್ಯದಲ್ಲಿ ಕಣ್ಣು ಹಾಯಿಸಿದಷ್ಟು ದೂರ ಕಾಣುವ ಹಚ್ಚಹಸುರಿನ ಮೆಕ್ಕೆಜೋಳದ ಹೊಲಗಳು, ವಿಂಡ್ ಮಿಲ್ ಗಳು, ನಮಗೆ ಒಂದು ಅಲೌಕಿಕ ಮಧುರ ಸ್ಮೃತಿಯನ್ನು ಒದಗಿಸಿದವು ! ಇವುಗಳ ಸೌಂದರ್ಯವನ್ನು ನಮಗೆ ತೊರಿಸಲು ಅಜಿತ ಕಳ್ಳಂಬೆಳ್ಳಾ ದಂಪತಿಗಳು ತೋರಿಸಿದ, ಪರಿಶ್ರಮ, ಆಸ್ತೆ, ನಮಗೆ ಒಂದು ಹೊಸ ಅನುಭವವನ್ನು ತಂದವು. ಅಮೆರಿಕದಲ್ಲಿ, ರೈತರು, ಹೊಲಗಳು, ಉಳುವ ಸಾಮಗ್ರಿಗಳು, ಬಳಸುವ ಬೇಸಾಯದ ಸಾಮಗ್ರಿ, ಪರಿಕರಗಳನ್ನು ಕಾಣುವ ತವಕ ನಮ್ಮದು. ಎಲ್ಲಾ ಮಾಹಿತಿಗಳನ್ನೂ ಸಂಗ್ರಹಿಸಲು ಸಾಧ್ಯವಾಗದಿದ್ದರೂ, ಕೆಲವೊಂದು ಮುಖ್ಯ ವಿಷಯಗಳು ನಮಗೆ ಸಮಾಧಾನವನ್ನು ತಂದವು. ಕಾಳು ಸಂಗ್ರಹಿಸುವ ಎತ್ತರದಲ್ಲಿ ನಿರ್ಮಿಸಿದ ಧಾನ್ಯಸಂಗ್ರಹದ ಕಣಜವನ್ನು ನಾವು ನಮ್ಮ ಹಗೇವುಗಳಿಗೆ ಹೋಲಿಸಿದಾಗ, ಚೆನ್ನಾಗಿವೆಯೆಂದು ಹೇಳಬಹುದು. ಅದೆಷ್ಟು ಕಾಳುಧಾನ್ಯವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಸರಿಯಾದ ಸಂಗ್ರಹಣಾ ವ್ಯವಸ್ಥೆಯಿಲ್ಲದೆ.

ರೈತರ ಪರಿವಾರಗಳು, ಅವರ ಮನೆಯ ಹೆಣ್ಣುಮಕ್ಕಳು, ಬೇಸಾಯದಲ್ಲಿ ಅವರ ಕೊಡುಗೆ, ಇತ್ಯಾದಿಗಳನ್ನು ಇನ್ನೂ ಹತ್ತಿರದಿಂದ, ಅಂದರೆ ಅವರ ಮನೆಗಳಿಗೆ ಹೋಗಿ, ಅವರ ಪರಿವಾರದ ಸದಸ್ಯರೊಡನೆ ಬೆರೆತು, ಚಿರ್ಚಿಸುವ ಆಸೆ ನೆರವೇರಲಿಲ್ಲವೆಂಬ ಕೊರಗು ಇನ್ನೂ ಇದ್ದೇ ಇದೆ.

-ಚಿತ್ರ. ವೆಂ.