ಜಯಂತ್ ಕಾಯ್ಕಿಣಿಯವರು, ಡಾ. ಚಂದ್ರಶೇಖರ್ ರವರಿಗೆ ಅಭಿನಂದನಾಪತ್ರವನ್ನು ಸಮರ್ಪಿಸಿದ ದೃ‍ಷ್ಯ ! (’ಅಕ್ಕಾ ವಿಶ್ವಕನ್ನಡ ಸಮ್ಮೇಳನ,’ ದಲ್ಲಿ )

ಈ ಕಾರ್ಯಕ್ರಮ ಮಧ್ಯಾನ್ಹ, ಊಟದ ತರುವಾಯ ನಡೆಯಿತು. ಮುಂಬೈನ ಪ್ರೊ. ಕುಲಕರ್ಣಿಯವರು, ಲಕ್ಷ್ಮೀವೆಂಕಟೇಶ್ ದಂಪತಿಗಳು, ವಾಷಿಂಗ್ಟನ್ ನಿಂದ ಬಂದ, * ಶ್ರೀವತ್ಸ ಜೋಷಿ, ಹಾಗೂ ಹೂಸ್ಟನ್ ನಗರವಾಸಿ, ಸುಬ್ಬಿಸುಬ್ರಹ್ಮಣ್ಯ ದಂಪತಿಗಳು, ಮುಂತಾದ ಸಾಹಿತ್ಯಾಸಕ್ತರು ಸಭಾಗೃಹದಲ್ಲಿ ಹಾಜರಿದ್ದರು. ಶ್ರೀ. ಜಯಂತ್ ಕಾಯ್ಕಿಣಿಯವರ ಪಕ್ಕದಲ್ಲಿ ಕಾರ್ಯಕ್ರಮದ ಸಂಚಾಲಕಿ, ಶ್ರೀಮತಿ. ನಳಿನಿಮಯ್ಯಾರವರಿದ್ದಾರೆ. ಡಾ. ಎಸ್. ಎಲ್. ಭೈರಪ್ಪನವರೂ ಸ್ವಲ್ಪ ಸಮಯ ಹಿಂದಿನ ಕುರ್ಚಿಯಲ್ಲಿ ಕುಳಿತು ಸಮಾರಂಭದ ಆಗುಹೋಗುಗಳನ್ನು ವೀಕ್ಷಿಸುತ್ತಿದ್ದರು.

* ಅಮೆರಿಕದ , ಐ. ಬಿ. ಎಮ್ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ದುಡಿಯುತ್ತಿರುವ ಜೋಷಿಯವರು, ಅಕ್ಕ ಸಮ್ಮೇಳನದ ಕಾರ್ಯಕ್ರಮಗಳೆಲ್ಲವನ್ನೂ ಅಚ್ಚುಕಟ್ಟಾಗಿ, " ದಟ್ಸ್ ಕನ್ನಡ, ಇ-ಪತ್ರಿಕೆಯಲ್ಲಿ ದಾಖಲಿಸಿದ್ದಾರೆ.

-ವೆಂ.