ಪುರುಂದರದಾಸರ ಹಿಂದೆ- ಮೆರವಣಿಗೆಯಲ್ಲಿ, ಅಕ್ಕ ವಿಶ್ವಕನ್ನಡಸಮ್ಮೇಳನದ ಎರಡನೆಯದಿನದ ಪ್ರಾತಃಕಾಲದಂದು !

ಸಮಸ್ತ ೩,೦೦೦ ಜನ ಕನ್ನಡಿಗರೆಲ್ಲಾ ಸೇರಿ ಮೆರವಣಿಗೆಯಲ್ಲಿ ದೂರದ ಅಮೆರಿಕೆಯಲ್ಲಿ ಭಾಗವಹಿಸಿದಾಗ, ಮೈಚಳಿಬಿಟ್ಟು ಕನ್ನಡಿಗರೆಲ್ಲಾ ಭಜನೆಮಾಡಿದ್ದೂ ಮಾಡಿದ್ದೇ . ದೇವರನಾಮಗಳ ಹಾಡುಗಳನ್ನು ಹೇಳಿದ್ದೂ ಹೇಳಿದ್ದೆ. ಅದೊಂದು ಅವಿಸ್ಮರಣೀಯ ಘಟನೆಯಾಗಿತ್ತು !
ಕೆಲವರು, ಮೈಸೂರು ಕಚ್ಚೆಪಂಚೆ, ಧೋತ್ರಹೊದ್ದಿದ್ದರೆ, ಕೆಲವರು, ಮೈಸೂರು ಪೇಟ, ಹಾಗೂ ಶಲ್ಯ, ಅಂಗವಸ್ತ್ರಗಳನ್ನು ಹೊದ್ದು, ಹಣೆಯಮೇಲೆ, ನಾಮ, ವೀಭೂತಿ, ಗಂಧಗಳ ಚಿನ್ಹೆಗಳನ್ನೂ ಎದೆಯಮೇಲೆ ಶ್ರೀಗಂಧದ ಮುದ್ರೆಯನ್ನೂ ಲೇಪಿಸಿಕೊಂಡು ಠೀವಿಯಿಂದ ನಡೆಯುವ ದೃಷ್ಯ ಇನ್ನೂ ಕಣ್ಣಿಗೆಕಟ್ಟಿದಂತಿದೆ. ಮೆರವಣಿಗೆಯ ಮುಂದೆ, ಹದಿಹರೆಯದ ಯುವತಿಯರು, ರೇಷ್ಮೆ ಲಂಗ-ಧಾವಣಿ ಧರಿಸಿ, ಹಾಡುತ್ತಾ, ನರ್ತಿಸುತ್ತಾ, ಕೋಲಾಟವಾಡುತ್ತಾ ಧಾವಿಸುತ್ತಿದ್ದ ರೀತಿಯನ್ನು ಕಣ್ಣಾರೆ ನೋಡಿ ಆನಂದಿಸಿದವರಿಗೇ ಗೊತ್ತು ಅದರ ಸೊಬಗು !

ಚಿತ್ರ-ಪ್ರಕಾಶ್.