ಅನುಕರಣೆಯೇ ಜಗತ್ತು ಈಗಿರುವ ಸ್ಥಿತಿಗೆ ಕಾರಣ !

ಅನುಕರಣೆಯೇ ಜಗತ್ತು ಈಗಿರುವ ಸ್ಥಿತಿಗೆ ಕಾರಣ ! ಸ್ವಂತಿಕೆಗೆ ಬಲಬರಲು, ಅನುಕರಣೆಯ ಮೂಲಕ್ಕೆ ಹೋಗದೆ, ಸಾಧ್ಯವೇ ? ಈ ಫೋಟೋ ತೆಗೆದದ್ದೆಲ್ಲಿ, ಜ್ಞಾಪಕ ಬರುತ್ತಿಲ್ಲ. ಬಹುಶಃ, ವಾಶಿಂಟನ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ, ಅಂತಾ ಕಾಣ್ಸತ್ತೆ ! ಹುಟ್ಟಿದಾಗಿನಿಂದ ನಾವು ಬೇರೊಬ್ಬರ ಹಾದಿಯಲ್ಲಿ ನಡೆದು, ಮತ್ತೆ ಸವೆದ ದಾರಿಯನ್ನು ಸುಗಮಗೊಳಿಸಿ, ನಂತರ ಅದರಲ್ಲಿ ಸ್ವಲ್ಪ ಮಾರ್ಪಾಡುಮಾಡುತ್ತಾ ಹೋಗುತ್ತೇವೆ. ಆದರೆ ಮೂಲತಃ ಅದೂ ಒಂದುವಿಧದ ಅನುಕರಣೆಯೇ ಆಗಿರುತ್ತದೆ. ಎಲ್ಲೋ ನೋಡಿದ, ಕೇಳಿದ ಹೊಳಹುಗಳು ನಮಗರಿವಿಲ್ಲದೇ ಅವನ್ನು ನಮ್ಮ ಚಿತ್ತಭಿತ್ತಿಯಲ್ಲಿ ಮನೆಮಾಡಿ ಪೋಶಿಸುತ್ತಾ ಹೋಗುತ್ತೇವೆ. ಅವೇ ಅಲ್ಪ-ಸ್ವಲ್ಪ ಬದಲಾವಣೆಹೊಂದಿ, ಈಗಿನ ರೂಪಧಾರಣೆಮಾಡುತ್ತವೆ.
-ವೆಂ.