’ಪಿಂಕಿ ಮೆಹ್ತಾ,’ ನನಗೆ ಬೇಗ ಬಳಕೆಯಾದಳು, ಹಾಗೂ ಸ್ನೇಹಿತೆಯಾದಳು ! !

ನಾನು ಮೊದಲೇ ತಿಳಿಸಿದಂತೆ, ಪೀಯೂಷ್ ಮೆಹ್ತಾ ದಂಪತಿಗಳು, ನಮ್ಮಜೊತೆಯಲ್ಲೇ, ’ಕಾಂಟಿನೆಂಟಲ್ ಏರ್ಲೈನ್ಸ್,’ ನಲ್ಲಿ ಪ್ರಯಾಣಿಸುತ್ತಿದ್ದರು. ೧೬ ವರೆಗಂಟೆ ಒಂದೇ ಸಮನೆ ಯಾನಮಾಡಿದಮೇಲೆ, ಸಹಜವಾಗಿ ಅವರ ಮಗು, ಪಿಂಕಿ, ತನ್ನ ವರ್ಚಸ್ಸನ್ನು ನಮ್ಮಮೇಲೆ ಬೀರಿದ್ದಳು. ನ್ಯೂವಾರ್ಕ್ ಏರ್ಪೋರ್ಟ್ ನಲ್ಲಿ ಪಿಂಕಿಯನ್ನು ಎತ್ತಿಕೊಂಡು ಮುದ್ದಿಸದೆ ಸಮಾಧಾನವಾಗಲಿಲ್ಲ !

ನಾವು ನಮ್ಮ ಕನೆಕ್ಟಿಂಗ್ ಫ್ಲೈಟ್ ನ್ನು ಮಿಸ್ ಮಾಡಿದ್ದೆವು. ಅಲ್ಲಿ ಇಲ್ಲಿ ಓಡಾಟ, ಲಗೇಜ್, ಚೆಕಿಂಗ್ ಇತ್ಯಾದಿಗಳಿಂದಾಗಿ. ನಮ್ಮಿಂದ ಅವರು ಬೇರೆಯಾದರು.

-ಚಿತ್ರವನ್ನು ಪಿಂಕಿಯ ಅಮ್ಮತೆಗೆದಿದ್ದರು.