ಎಸ್. ಎಫ್. ನ ಗೋಲ್ಡನ್ ಬ್ರಿಡ್ಜ್ ಸೇತುವೆಯ ಕೆಳಗೆ, ಹುಡುಗಿಯರು, ಬೋಟ್ ಯಾನಕ್ಕೆ ಹವಣಿಸುತ್ತಿದ್ದಾರೆ !

ಸ್ಯಾನ್ ಪ್ರಾನ್ಸಿಸ್ಕೊ ನಗರದ ಗೋಲ್ಡನ್ ಬ್ರಿಡ್ಜ್ ನೋಡಿದಮೇಲೆ, ನಮಗೆ ಕಾಣಿಸಿದ್ದು, ಅಲ್ಲಿನ ಹುಡುಗಿಯರು, ದೋಣಿಗಳಲ್ಲಿ ಪ್ರಶಾಂತಸಾಗರದಲ್ಲಿ ಯಾನ ಮಾಡುತ್ತಿರುವ ದೃಷ್ಯ ! ಗೋಲ್ಡನ್ ಸೇತುವೆಯಮೇಲೆ ಸೈಕಲ್ ಸವಾರರು ಅದೆಷ್ಟೋ ! ಗೋಲ್ಡನ್ ಬ್ರಿಡ್ಜ್ ವಿಶ್ವದ ವಿಸ್ಮಯಗಳಲ್ಲೊಂದು. ಈ ಪ್ರದೇಶದಲ್ಲಿ ಭೂಕಂಪಗಳು ಸರ್ವೇಸಾಮಾನ್ಯ. ಆದರೂ ಅವೆಲ್ಲವನ್ನೂ ಪರಿಗಣಿಸಿ ಅತ್ಯುತ್ತಮ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ನಿರ್ಮಿಸಿರುವ ಈ ಕಾರ್ಯ ಸ್ತುತ್ಯಾರ್ಹವಾಗಿದೆ ! ಈಗ ಚೀನದಲ್ಲಿ ವಿಶ್ವದಲ್ಲೇ ಅತಿದೊಡ್ಡ ಕಡಲ್ಸೇತುವುವೆಯನ್ನು ಇತ್ತೀಚೆಗಷ್ಟೇ ನಾಗರಿಕ ಯಾನಕ್ಕೆ ಬಿಡುಗಡೆಮಾಡಿದ್ದಾರೆ. ಇವೆಲ್ಲಾ ಇಂಜಿನಿಯರಿಂಗ್ ಶಾಸ್ತ್ರದ ಅದ್ಭುತಗಳನ್ನು ನಾವು ಮತ್ತೆ -ಮತ್ತೆ ನೆನೆಯಬೇಕು !

-ನನ್ನ ಫೋಟೋ ಸಂಗ್ರಹದಿಂದ.