ಕ್ಯೂನಲ್ಲಿ, ಸುಮಾರು ಒಂದುಗಂಟೆ ಕಾದಬಳಿಕ, ನಮ್ಮ ಸರದಿ !

ಡಿಸ್ನಿ ಲ್ಯಾಂಡ್ ನಲ್ಲಿ ಪ್ರತಿ ಐಟಂ ವೀಕ್ಷಿಸಲೂ ಕ್ಯೂ ನಲ್ಲಿ ಕಾಯಬೇಕು. ಅತ್ಯಂತ ಸುವ್ಯವಸ್ಥಿತ ಕ್ಯೂ ಯೆಂದು ಹೇಳಬೇಕು. ಯಾರೂ ಅಪ್ಪಿತಪ್ಪಿ, ಕ್ಯುನಿಯಮವನ್ನು ಮುರಿಯುವುದಿಲ್ಲ. ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಕೂಡುವ ಆಸನಗಳಿವೆ. ಅಂಗವಿಕಲರಿಗೆ ವಿಶೇಷ ವ್ಹೀಲ್ ಚೇರ್ ವ್ಯವಸ್ಥೆಯಿದೆ. ಅವರು ಕಾಯುವ ಅಗತ್ಯವಿಲ್ಲ. ಶೋ ಆರಂಭವಾದಕೂಡಲೇ ಅವರನ್ನು ಪ್ರತ್ಯೇಕವಾದ ಸ್ಥಳಕ್ಕೆ ಕರೆದೊಯ್ಯುತ್ತಾರೆ. ಎಲ್ಲರೂ ನಗುಮುಖದಿಂದ ಕಾಯುತ್ತಾರೆ. ’ಶೋ” ನ ಸಮಯದಲ್ಲಿ ಸ್ವಲ್ಪ ವ್ಯತ್ಯಾಸಗಳಾದರೂ ಅಲ್ಲಿನ ವ್ಯವಸ್ಥಾಪಕರು ತಡಮಾಡದೆ, ’ಸಾರಿ,’ ಹೇಳುವುದಲ್ಲದೆ, ತಕ್ಷಣ ಬೇರೆ ಮತ್ತೊಂದು ವ್ಯವಸ್ಥೆಯನ್ನು ಮಾಡಿಮುಗಿಸುತ್ತಾರೆ.

-ಚಿತ್ರ. ವೆಂ.