ದೋಣಿಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ..ಬೀಸುಗಾಳಿಗೆ, .......

ಈ ದೋಣಿ ಹೋಗುತ್ತಿರುವುದು, ಅಂತ-ಇಂತಾ ಸಾಗರದಲ್ಲಲ್ಲ ; ಪ್ರಶಾಂತ ಮಹಾಸಾಗರದಲ್ಲಿ. ಈ ಪೆಸಿಫಿಕ್ ಮಹಾಸಾಗರ, (ಇದರ ಮತ್ತೊಂದು ಹೆಸರು) ವಿಶ್ವದ ಅತ್ಯಂತ ವಿಶಾಲ, ಅತಿ ಆಳವಾದ ಸಾಗರ ! ದೋಣಿ ಇಂತಹ ಭಾರಿ ದೊಡ್ಡ ಕಡಲಿನ ನೀರಿನಮೇಲೆ ಹೋಗುತ್ತಿದೆ. ಆಕಡೆ ದಡವನ್ನು ಮುಟ್ಟುವುದೋ ಇಲ್ಲವೋ, ಹೇಳುವವರ್ಯಾರು ...?

-ಚಿತ್ರ, ಮನೆಯ ಆಲ್ಬಮ್ ನಿಂದ.

ಪ್ರತಿಕ್ರಿಯೆಗಳು

ಮಹಾಸಾಗರದಲ್ಲಿನ ದೋಣಿಯ ಚಿತ್ರ ಚೆನ್ನಾಗಿದೆ :)

ಹಾಗೇ ನಮ್ಮ ದೇಶದಿಂದ ಅಮೆರಿಕಾಕ್ಕೆ ಹೋಗಲು ಸಾಮಾನ್ಯರಿಗೆ ಹಡಗಿನ ಪ್ರಯಾಣ ಸೌಲಭ್ಯ ಇದೆಯೇ?
ಎಷ್ಟು ದಿನಗಳ ಪ್ರಯಾಣವಾಗಬಹುದು?
-ಸವಿತ

ಕೆಲವು ಪ್ಯಾಸೆಂಜರ್ ಶಿಪ್ ಗಳಿವೆ. ಇವುಗಳಲ್ಲಿ ಐಶಾರಾಮಗಳಿದ್ದರೂ ಸಹಿತ, ದೂರಜಾಸ್ತಿಯಾದ್ದರಿಂದ ತ್ರಾಸು ಹೆಚ್ಚು. ಕೆಲವು ಕ್ರೂಸರ್ ಗಳಲ್ಲಿ ಸಿಂಗಪುರ, ಮಲೇಶಿಯ ಮುಂತಾದ ಜಾಗಗಳಿಗೆ ಹೋಗುವ ಕಾರ್ಯಕ್ರಮದ ಬಗ್ಗೆ, ವೃತ್ತಪತ್ರಿಕೆಗಳಲ್ಲಿ ನೀವು ನೋಡಬಹುದು. ಆದರೆ ವೇಗದ ಜೀವನದ ರುವಾರಿಗಳಾದ ನಾವು, ಹಡಗಿನಲ್ಲಿ ಇಷ್ಟು ದೂರ, ಪ್ರಯಾಣಮಾಡುವ ವಿಚಾರವನ್ನು ನಿಮ್ಮನ್ನು ಬಿಟ್ಟರೆ ಯಾರೂ ಕೇಳಿದ್ದಿಲ್ಲ.

ಅಮೆರಿಕ, ೧೨,೦೦೦ ಮೈಲಿ ದೂರವಿದೆ. ನಾನ್ ಸ್ಟಾಪ್ ವಿಮಾನದಲ್ಲಿ ಪ್ರಯಾಣಿಸಿದರೂ ಹದಿನಾರೂವರೆ ಗಂಟೆ ಬೇಕು. (ಮುಂಬೈ ನಿಂದ ನೆವಾರ್ಕ ಗೆ) ಅಲ್ಲಿಂದ ಕ್ಯಾಲಿಫೋರ್ನಿಯಕ್ಕೆ, ೭ ಗಂಟೆ ಪ್ರಯಾಣ. ನೀವು ತಿಳಿಸಿದಂತೆ ಹಡಗಿನಲ್ಲಿ ಸುಮಾರು ಒಂದುವಾರಆಗಬಹುದೇನೋ. ನನಗೆ ತಿಳಿಯದು. ಈಗಿನ ಜನ, ಈ ಮಾನಸಿಕ ಆಘಾತವನ್ನು (ಅತಿನಿಧಾನದ ಗುಣವನ್ನು) ಹೇಗೆ ಸಹಿಸಿಯಾರು ?

ಗಲ್ಫ್ ಗೆ ಹೋಗಲು ನಮ್ಮ ದೇಶದ ಬಡ ಕಾರ್ಮಿಕರು, ಕೆಲವು ಚಿಕ್ಕ ಪುಟ್ಟ ದೋಣಿಗಳನ್ನು ಆಶ್ರಯಿಸುತ್ತಾರೆ ಎಂದು ಕೇಳಿದ್ದೇನೆ. ಇವೆಲ್ಲಾ ಬಹಳ ರಿಸ್ಕೀ, ಹಾಗು ಅವು ಒಳ್ಳೆಯ ಪ್ರಯಾಣದ ಅನುಭವಗಳನ್ನು ಖಂಡಿತಾ ಕೊಡಲಾರವು.

ಕನ್ನಡ ನನ್ನ ತಾಯ್ನುಡಿ; ನನ್ನುಸಿರು.

ಒಂದು ತಿಂಗಳಾದ್ರೂ ಹಡಗು ಪ್ರಯಾಣ ಮಾಡಬೇಕೆಂಬ ಇಚ್ಛೆ ಇದೆ ಅದಕ್ಕೇ ಕೇಳಿದೆ, ವಿಚಾರ ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಸಾರ್ :)
-ಸವಿತ

ಅಂಬಿಗನ ಮೇಲೆ ಅಚಲ ನಂಬಿಕೆ ಇದ್ದರೆ, ಆ ತೀರ ಸೇರಬಹುದೇನೋ .....
ಆ ಕಡೆ ದಡವನ್ನು ಮುಟ್ಟಬಹುದೋ ಇಲ್ಲವೋ ಎಂಬ ಪ್ರಶ್ನೆಗೆ, ಜಗದಂಬ ರಮಣನಾದ ಆ ಅಂಬಿಗನಲ್ಲದೇ,ಬೇರಾರೂ ಉತ್ತರಿಸಲಾಗದು.
- ಆಸು ಹೆಗ್ಡೆ